2018ರ ಕಡೂರು ವಿಧಾಸಭೆ ಕ್ಷೇತ್ರದಿಂದ ಜೆಡಿಎಸ್ ನಾಯಕ ವೈ.ಎಸ್.ವಿ. ದತ್ತಾ ಸೋತರೂ ಧೃತಿಗೆಡದೆ, ಕ್ಷೇತ್ರದ ಸಂಪರ್ಕದಲ್ಲಿದ್ದಾರೆ. ಮಾಹಾಮಾರಿ ಕೊರೋನಾ ವೈರಸ್ ಮಧ್ಯೆ ಸಿಲುಕು ಸಂಕಷ್ಟದಲ್ಲಿರುವ ಬಡ, ನಿರ್ಗತಿಕರ ನೆರವಿಗೆ ದತ್ತಾ ಟೊಂಕ ಕಟ್ಟಿ ನಿಂತಿದ್ದಾರೆ. ಕಳೆದ ವಿಧಾನಸಭೆಯಲ್ಲಿ ಜನರು ಸೋಲಿಸಿದ್ರೂ ಅದ್ಯಾವುದನ್ನು ಲೆಕ್ಕಿಸದೇ ತಮ್ಮ ಕ್ಷೇತ್ರದ ಮತದಾರನ ಸೇವೆಗೆ ಪಂಚೆ ಕಟ್ಟಿ ನಿಂತ ದತ್ತಣ್ಣನ ದೊಡ್ಡ ಗುಣಕ್ಕೆ ಚಿತ್ರಗಳೇ ಸಾಕ್ಷಿ