Fact Check: ಸನ್ನಿ ನಂ. 1, ಕೊರೋನಾ ಔಷಧಿಗೆ ಲಿಯೋನ್ 650 ಕೋಟಿ ಕೊಟ್ರಂತೆ!

First Published | Apr 1, 2020, 5:12 PM IST

ಹಿಂದೆ ಕೇರಳಲ್ಲಿ ಪ್ರವಾಹ ಉಂಟಾದಾಗಲೂ, ಕರ್ನಾಟಕದಲ್ಲಿ ಪ್ರವಾಹ ಬಂದಾಗಲೂ ಒಂದು ಕಾಲದ ನೀಲಿ ಚಿತ್ರತಾರೆ, ಬಾಳಿವುಡ್ ನಾಯಕಿ ಸನ್ನಿ ಲಿಯೋನ್ ಕೋಟಿ ಕೋಟಿ ರೂ. ದೇಣಿಗೆ ನೀಡಿದ್ದಾರೆ ಎಂದು ಸುದ್ದಿಯಾಗಿತ್ತು. ಈಗ ಕೊರೋನಾ ಮಾರಿ ಹೋಗಲಾಡಿಸಲು  ಬರೋಬ್ಬರಿ 650 ಕೋಟಿ ರೂ. ದೇಣಿಗೆ ಕೊಟ್ಟಿದ್ದಾರೆ ಎಂಬ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ವೈರಸ್ ಗಿಂತ ವೇಗವಾಗಿ ಹರಡುತ್ತಿದೆ.

ಬಾಲಿವುಡ್ ನಟರು ಸಹ ಕೊರೋನಾ ವಿರುದ್ಧದ ಹೋರಾಟಕ್ಕೆ ತಮ್ಮ ಬಳಿ ಸಾಧ್ಯವಾದ ದೇಣಿಗೆ ನೀಡಿದ್ದಾರೆ.
ನಟ ಅಕ್ಷಯ್‌ ಕುಮಾರ್‌ 25 ಕೋಟಿ ನೀಡಿದ್ದಾರೆ.
Tap to resize

ಕೊರೋನಾಗೆ ಔಷಧ ಕಂಡುಹಿಡಿಯಲು ಸನ್ನಿ 650 ಕೋಟಿ ನೀಡಿದ್ದಾರೆ ಎಂದು ಅಭಿಮಾನಿಗಳು ಕೊಂಡಾಡುತ್ತಿದ್ದಾರೆ.
ಆದರೆ ಈ ಬಗ್ಗೆ ಸನ್ನಿ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ.
ಇನ್ನೊಂದು ಕಡೆ ಸನ್ನಿ ಲಿಯೋನ್ ನೇರವಾಗಿ ವಿಶ್ವ ಆರೋಗ್ಯ ಸಂಸ್ಥೆಗೆ ನೆರವು ನೀಡಲು ಮುಂದಾಗಿದ್ದಾರೆ.
ವೆಬ್‌ಸೈಟ್‌ ಮೂಲಕ ಹಣ ಸಂಗ್ರಹಿಸುತ್ತಿದ್ದು ಅದನ್ನು ಜನರ ಒಳಿತಿಗೆ ಬಳಸಿಕೊಳ್ಳಬೇಕು ಎಂದು ತಿಳಿಸಿದ್ದಾರೆ.
ನೀಲಿ ಚಿತ್ರತಾರೆಯಾಗಿ ಗುರುತಿಸಿಕೊಂಡಿದ್ದ ಸನ್ನಿ ನಂತರ ಬಾಲಿವುಡ್ ಗೆ ಪದಾರ್ಪಣೆ ಮಾಡಿದರು.
ಕನ್ನಡದಲ್ಲಿಯೂ ಸನ್ನಿ ಆಗಮಿಸಿ ಹೆಜ್ಜೆ ಹಾಕಿ ಹೋಗಿದ್ದಾರೆ.
ಅನಾಥ ಮಕ್ಕಳನ್ನು ಸನ್ನಿ ಲಿಯೋನ್ ಸಾಕಿ ಸಲಹುತ್ತಿದ್ದಾರೆ.
ಯಾವಾಗಲೂ ಸನ್ನಿ ಹಾಟ್ ಫೆವರೇಟ್

Latest Videos

click me!