Fact Check: ಕೊರೋನಾಗೆ ತತ್ತರಿಸಿದ ಇಟಲಿಯಲ್ಲಿ ರಸ್ತೆ ಬದಿಯಲ್ಲೇ ಐಸಿಯು!

First Published | Mar 25, 2020, 5:48 PM IST

ಕೊರೋನಾ ವೈರಸ್‌ ಅಟ್ಟಹಾಸಕ್ಕೆ ಬಳಲಿ ಬೆಂಡಾಗಿರುವ ಇಟಲಿಯಲ್ಲಿ ಆಸ್ಪತ್ರೆಗಳು ತುಂಬಿ, ರಸ್ತೆ ಬದಿಯಲ್ಲೇ  ಚಿಕಿತ್ಸೆ ಆರಂಭಿಸಿದ್ದಾರಾ? ಸೋಶಿಯಲ್ ಮೀಡಿಯಾದಲ್ಲಿ ಇಂತಹುದ್ದೊಂದು ಪೋಸ್ಟ್ ಹರಿದಾಡಲಾರಂಭಿಸಿದೆ. ಹಾಗಾದ್ರೆ ಈ ಸುದ್ದಿ ಹಿಂದಿನ ಸತ್ಯವೇನು? ಇಲ್ಲಿದೆ ವಿವರ

ಕೊರೋನಾ ತಾಂಡವಕ್ಕೆ ಸದ್ಯ ಇಟಲಿ ಸಾವಿನ ಮನೆಯಂತಾಗಿದೆ. ಮಂಗಳವಾರ ಒಂದೇ ದಿನ ಇಲ್ಲಿ 743 ಮಂದಿ ಸಾವನ್ನಪ್ಪಿದ್ದು, ಒಟ್ಟಾರೆಯಾಗಿ ಮೃತರ ಸಂಖ್ಯೆ ಆರು ಸಾವಿರ ದಾಟಿದೆ.
ಕೊರೋನಾ ಮೊಟ್ಟ ಮೊದಲು ಕಾಣಿಸಿಕೊಂಡಿದ್ದ ಚೀನಾಗಿಂತಲೂ ಹೆಚ್ಚು ಇಟಲಿ ಸ್ಥಿತಿ ಗಂಭೀರವಾಗಿದೆ.
Tap to resize

ಇಟಲಿ ಕೊರೋನಾ ಸಂಬಂಧಿತ ಮುನ್ನೆಚ್ಚರಿಕೆ ಕ್ರಮ ವಹಿಸದಿರುವುದೇ ಇಷ್ಟು ದೊಡ್ಡ ಪ್ರಮಾಣದ ಸಾವು ನೋವು ಸಂಭವಿಸಲು ಕಾರಣ ಎನ್ನಲಾಗಿದೆ.
ಹೀಗಿರುವಾಗ ಇಲ್ಲಿ ಆಸ್ಪತ್ರೆಗಳು ಕೊರೋನಾ ಸೋಂಕಿತರಿಂದ ತುಂಬಿದ್ದು, ಪೀಡಿತರಿಗಾಗಿ ರಸ್ತೆ ಬದಿಯಲ್ಲೇ ಐಸಿಯು ನಿರ್ಮಿಸಲಾಗಿದೆ ಎಂಬ ಸುದ್ದಿಯೊಂದು ಹರಿದಾಡಿದೆ.
ಸೋಶಿಯಲ್ ಮಿಡಿಯಾದಲ್ಲಿ ಈ ಸಂಬಂಧ ಹಲವಾರು ವಿಡಿಯೋ ಹಾಗೂ ಫೋಟೋಗಳು ವೈರಲ್ ಆಗಿವೆ.
ವೈರಲ್ ಆದ ಫೋಟೋಗಳಲ್ಲಿ ಕೊರೋನಾ ಪೀಡಿತರಿಗೆ ರಸ್ತೆ ಬದಿಯಲ್ಲೇ ಚಿಕಿತ್ಸೆ ನೀಡುತ್ತಿರುವುದನ್ನು ಗಮನಿಸಬಹುದಾಗಿದೆ.
ಅಲ್ಲದೇ ವೆಂಟಿಲೇಟರ್‌ಗಳಲ್ಲಿರುವ ರೋಗಿಗಳಿಗೆ ಇಲ್ಲೇ ಚಿಕಿತ್ಸೆ ನೀಡಲಾಗುತ್ತಿದೆ.
ಆದರೆ ವೈರಲ್ ಆದ ಈ ಸುದ್ದಿ ನಿಜಾನಾ? ಎಂದು ಪರಿಶೀಲಿಸಿದಾಗ ಬೇರೆಯೇ ವಿಚಾರ ಬಯಲಿಗೆ ಬಂದಿದೆ.
ಹೌದು ವೈರಲ್ ಆದ ಈ ಫೋಟೋಗಳು ಆಗ್ನೇಯ ಯೂರೋಪ್‌ನ ಕ್ರುಯೇಷಿಯಾದಲ್ಲಿ ಕಳೆದೆರಡು ದಿನದ ಹಿಂದೆ ಸಂಭವಿಸಿದ ಭೂಕಂಪದ ದೃಶ್ಯಗಳೆಂಬುವುದು ಖಚಿತವಾಗಿದೆ.
ಹೌದು ಕೊರೋನಾ ಮಹಾಮಾರಿಯಿಂದ ನಲುಗುತ್ತಿರುವ ಕ್ರುಯೇಷಿಯಾದಲ್ಲಿ ಕಳೆದೆರಡು ದಿನದ ಹಿಂದೆ ಭಾರೀ ಪ್ರಮಾಣದ ಭೂಕಂಪ ಸಂಭವಿಸಿದೆ.
ಬ್ಯಾಡ್ ಬ್ಲೂ ಬಾಯ್ಸ್ ಎಂಬ ಸಂಸ್ಥೆ ಕೊರೋನಾ ಪೀಡಿತರಿಗೆ ಪುರಾತನ ಕಟ್ಟಡದಲ್ಲಿ ಚಿಕಿತ್ಸೆ ವ್ಯವಸ್ಥೆ ಮಾಡಿದ್ದರು.
ಈ ಭೂಕಂಪದಲ್ಲಿ ಕೊರೋನಾ ಪೀಡಿತರಿಗೆ ಚಿಕಿತ್ಸೆ ಆದರೆ ಹಾನಿಗೊಳಗಾಗಿದ್ದು, ಐಸಿಯುಗಳನ್ನು ಹೊರಗಿಡಲಾಗಿದೆ.
ಅಲ್ಲೇ ಚಿಕಿತ್ಸೆ ಮುಂದುವರೆಸಿದ್ದಾರೆ. ಹೀಗಾಗೇ ರೋಗಿಗಳೆಲ್ಲರೂ ರಸ್ತೆ ಬದಿಯಲ್ಲಿ ಕಂಡು ಬಂದಿದ್ದಾರೆ.
ನಿಸರ್ಗದ ಮುನಿಸು ತಣಿಯುವುದು ಯಾವಾಗ? ಒಂದಾದ ಮೇಲೆ ಮತ್ತೊಂದು ಆಘಾತ ಕೊಟ್ಟರು ಬಡ ಮನುಷ್ಯ ಸಹಿಸಿಕೊಳ್ಳುವುದು ಹೇಗೆ?

Latest Videos

click me!