UPSC ಟಾಪರ್‌ ಆಗಿ 'ನಿನ್ನಿಂದಾಗಲ್ಲ' ಎಂದವರ ಬಾಯಿ ಮುಚ್ಚಿಸಿದ ಭಾನು ಪ್ರತಾಪ್!

First Published | Oct 7, 2021, 5:45 PM IST

ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್(UPSC 2020) ಪರೀಕ್ಷೆಯ ಫಲಿತಾಂಶ ಸೆಪ್ಟೆಂಬರ್ 24 ರಂದು ಹೊರಬಿದ್ದಿದೆ. ಅಂತಿಮ ಫಲಿತಾಂಶದಲ್ಲಿ ಒಟ್ಟು 761 ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದೆ. ಏಷ್ಯಾನೆಟ್‌ ನ್ಯೂಸ್‌(Asianet News) UPSC ಆಯ್ಕೆ ಮಾಡಿದ 100 ಅಭ್ಯರ್ಥಿಗಳೊಂದಿಗೆ ಸಂವಾದ ನಡೆಸಿದೆ. ಈ ಸರಣಿ ಮೊದಲ ಸಂದರ್ಶನದ(UPSC Interview) ಮೂಲಕ ಅಭ್ಯರ್ಥಿಗಳ ಯಶಸ್ಸಿನ ಗುಟ್ಟು ಅನಾವರಣಗೊಳಿಸಿದೆ. ಈ  ಸರಣಿಯ 3ನೇ ಸಂಚಿಕೆಯಲ್ಲಿ, 372 ನೇ Rank ಪಡೆದ ಆಗ್ರಾದ ಫತೇಪುರ್ ಸಿಕ್ರಿ ಪ್ರದೇಶದ ಕರಾಹಿ ಹಳ್ಳಿಯ ನಿವಾಸಿ ಭಾನು ಪ್ರತಾಪ್ ಸಿಂಗ್ ಜೊತೆ ಸಂವಾದ ನಡೆಸಲಾಗಿದೆ. ಭಾರತೀಯ ಆಡಳಿತ ಸೇವೆಯ ಭಾಗವಾಗಬೇಕೆಂಬ ಕನಸು ಕಾಣುತ್ತಿರುವ ಯುವಕರಿಗೆ ಹಿಂದಿ ವಿಷಯದೊಂದಿಗೆ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದು ಕಷ್ಟ ಎಂಬುದು ಸಾಮಾನ್ಯ ನಂಬಿಕೆ. ಆದರೆ ದೇಶದ ಹಿಂದುಳಿದ ಪ್ರದೇಶಗಳಿಂದ ಬರುವ ಹೆಚ್ಚಿನ ಅಭ್ಯರ್ಥಿಗಳು ಹಿಂದಿ ಮಾಧ್ಯವನ್ನಷ್ಟೇ ತಿಳಿದಿರುತ್ತಾರೆ. ಆಗ್ರಾದ ಫತೇಪುರ್ ಸಿಕ್ರಿ ಪ್ರದೇಶದ ಕರಹಿ ಗ್ರಾಮದ ನಿವಾಸಿ ಭಾನು ಪ್ರತಾಪ್ ಸಿಂಗ್(Bhanu Pratap Singh) ಹಿಂದಿ ಮಾಧ್ಯಮದಲ್ಲೇ ಪರೀಕ್ಷೆ ಬರೆದು ಯಶಸ್ಸು ತಮ್ಮದಾಗಿಸಿಕೊಂಡಿದ್ದಾರೆ.

ತರಬೇತಿ ಇಲ್ಲದೆ ಸ್ವಯಂ ಅಧ್ಯಯನದತ್ತ ಗಮನಹರಿಸಿ

ಭಾನು ಪ್ರತಾಪ್ ಕೆಳ ಮಧ್ಯಮ ವರ್ಗದ ಕುಟುಂಬಕ್ಕೆ ಸೇರಿದವರು. ಅವರ ತಂದೆ ಉತ್ತಮ್ ಸಿಂಗ್ ಓರ್ವ ರೈತ ಮತ್ತು ತಾಯಿ ಗಂಗಾ ದೇವಿ ಗೃಹಿಣಿ. ಅವಿಭಕ್ತ ಕುಟುಂಬ ಮತ್ತು ಸಣ್ಣ ಬಂಡವಾಳ, ಆದ್ದರಿಂದ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ತಯಾರಿ ಮಾಡುವುದು ಒಂದು ಸವಾಲಿಗಿಂತ ಕಡಿಮೆಯಾಗಿರಲಿಲ್ಲ. ಇಷ್ಟು ಸಮಸ್ಯೆಗಳಿದ್ದರೂ ಐಎಎಸ್/ಐಪಿಎಸ್ ಆಗಬೇಕೆಂಬುದು ಅವರ ಕನಸಾಗಿತ್ತು. ಅವನು ತನ್ನ ಕನಸನ್ನು ಈಡೇರಿಸಲು ಕಠಿಣ ಪರಿಶ್ರಮ ಪಟ್ಟಿದ್ದಾರೆ. ತರಬೇತಿ ಇಲ್ಲದೆ ಸ್ವಯಂ ಅಧ್ಯಯನ ಆರಂಭಿಸಿದ, ಭಾನು ಪ್ರತಾಪ್ ಪ್ರತಿದಿನ 8 ರಿಂದ 10 ಗಂಟೆಗಳ ಕಾಲ ಅಧ್ಯಯನ ಮಾಡುತ್ತಿದ್ದರು. 2016 ಮತ್ತು 2017 ರಲ್ಲಿ  ಅವರ ಪ್ರಯತ್ನ ವಿಫಲವಾದರೂ 2018 ಮತ್ತು 2019 ರಲ್ಲಿ ಯಶಸ್ಸು ಮುಂದುವರೆಯಿತು. 2020 ರಲ್ಲಿ, ಅವರು ಮತ್ತೊಮ್ಮೆ UPSC ಪರೀಕ್ಷೆಯಲ್ಲಿ ಉತ್ತೀರ್ಣರಾದರು.

ತರಬೇತಿ ಸಮಯದಲ್ಲಿ ಪರೀಕ್ಷೆ ನೀಡಲಾಗಿದೆ

ಭಾನು ಪ್ರತಾಪ್ ಸಿಂಗ್ 2016 ರಿಂದ ಪರೀಕ್ಷೆಗೆ ತಯಾರಿ ಆರಂಭಿಸಿದರು. 2018 ರಲ್ಲಿ, ಅವರು ಐಆರ್‌ಪಿಎಸ್ ಕೇಡರ್‌ನಲ್ಲಿ ಆಯ್ಕೆಯಾದರು. 2019 ರಲ್ಲಿ, ಅವರು ಮತ್ತೊಮ್ಮೆ ಯಶಸಸ್ಸು ಗಳಿಸಿದರು ಮತ್ತು ಭಾರತೀಯ ಲೆಕ್ಕ ಪರಿಶೋಧನೆ ಮತ್ತು ಖಾತೆಗಳ ಸೇವೆಯನ್ನು ಪಡೆದರು. ಭಾನುಪ್ರತಾಪ್ ಪ್ರಸ್ತುತ ನ್ಯಾಷನಲ್ ಅಕಾಡೆಮಿ ಆಫ್ ಆಡಿಟ್ ಮತ್ತು ಅಕೌಂಟ್ಸ್  ಶಿಮ್ಲಾದಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಈ ಸಮಯದಲ್ಲಿ ಅವರು UPSC ಮುಖ್ಯ ಪರೀಕ್ಷೆ ಮತ್ತು ಸಂದರ್ಶನವನ್ನು ನೀಡಿದ್ದಾರೆ.

Tap to resize

ಸಮಾಜದಲ್ಲಿ ಬದಲಾವಣೆ ತರಬಹುದು

ತಾನು ದೊಡ್ಡ ಸಾಧನೆ ಮಾಡಬೇಕೆನ್ನುವುದು ಅವರ ಕನಸಾಗಿತ್ತು. ಇದಕ್ಕಾಗಿ ನಾಗರಿಕ ಸೇವೆ ಉತ್ತಮ ವೇದಿಕೆಯಾಗಿದೆ. ಈ ಮೂಲಕ ನೀವು ಸಮಾಜಕ್ಕಾಗಿ ಏನಾದರೂ ಕೊಡುಗೆ ನೀಡಬಹುದು ಎಂಬುವುದು ಭಾನು ಪ್ರತಾಪ್ ಅಭಿಪ್ರಾಯ. ಈ ಸೇವೆಗೆ ಸೇರಿದ ನಂತರ ನೀವು ಬದಲಾವಣೆಗಳನ್ನು ತರಬಹುದು ಎಂದಿದ್ದಾರೆ. ಭಾನು ಪ್ರತಾಪ್ ತಾನು ಬಂದ ಹಿನ್ನೆಲೆಯಲ್ಲಿ ಯಾರೊಬ್ಬರೂ ನಾಗರಿಕ ಸೇವಾ ಅಧಿಕಾರಿಗಳಿಲ್ಲ. ಈ ವಿಷಯ ಮನಸ್ಸಿನಲ್ಲಿತ್ತು, ಅದಕ್ಕಾಗಿಯೇ ನಾನು ಯುಪಿಎಸ್‌ಸಿ ಪರೀಕ್ಷೆಯತ್ತ ಗಮನ ಹರಿಸಿದೆ ಎಂದಿದ್ದಾರೆ.

ಹತಾಶೆಯಿಂದ UPPSC ಪರೀಕ್ಷೆಯನ್ನು ಬರೆದಿದ್ದೆ

ಭಾನು ಪ್ರತಾಪ್ ಸಿಂಹ ಹೇಳುವಂತೆ ತಯಾರಿ ಸಮಯದಲ್ಲಿ ಹತಾಶೆ ಆವರಿಸುತ್ತಿತ್ತು. ನಿಮಗೆ ಸಾಧ್ಯವಿಲ್ಲ ಎಂದು ಸಮಾಜದಲ್ಲಿರುವ ಜನರು ಹೇಳುತ್ತಿದ್ದರು. ಒಮ್ಮೆ ನಾನು ತುಂಬಾ ಹತಾಶನಾಗಿದ್ದೆ, ನಾನು ಉತ್ತರ ಪ್ರದೇಶ ಸಾರ್ವಜನಿಕ ಸೇವಾ ಆಯೋಗದ ಪರೀಕ್ಷೆಯನ್ನು ತೆಗೆದುಕೊಂಡೆ ಹಾಗೂ ಆಯ್ಕೆಯಾದೆ. ನಂತರ ಸಮಾಜದ ಜನರು ಹೇಳಿದ ವಿಷಯಗಳು ನಿಮ್ಮ ಸಾಮರ್ಥ್ಯವನ್ನು ವ್ಯಾಖ್ಯಾನಿಸಲು ಸಾಧ್ಯವಿಲ್ಲ ಎಂದು ಯೋಚಿಸಿದೆ. ಏನು ಮಾಡಬೇಕೆಂದು ನೀವು ನಿರ್ಧರಿಸುತ್ತೀರಿ. ಯುಪಿಎಸ್‌ಸಿಯನ್ನು ಭೇದಿಸುವ ಸಾಮರ್ಥ್ಯವಿದ್ದರೆ ಪರೀಕ್ಷೆಯನ್ನು ನೀಡಿ. ಅದೇ ವರ್ಷ 2018 ರಲ್ಲಿ, ಯುಪಿಎಸ್‌ಸಿ ಐಆರ್‌ಪಿಎಸ್ ಕೇಡರ್ ಅನ್ನು ಸಹ ಪಡೆದೆ. ಅಲ್ಲಿಂದ ಒಂದು ವರ್ಷದ ರಜೆ ಪಡೆದು ಮತ್ತೆ ತಯಾರಿ ನಡೆಸಿದ ನಂತರ, 2019 ರಲ್ಲಿ ನಾನು ಭಾರತೀಯ ಲೆಕ್ಕ ಪರಿಶೋಧನೆ ಮತ್ತು ಖಾತೆ ಸೇವೆಗಳ ಕೇಡರ್ ಪಡೆದುಕೊಂಡೆ ಎಂದಿದ್ದಾರೆ.
 

ಕುಟುಂಬ ಮತ್ತು ಸ್ನೇಹಿತರಿಗೆ ಯಶಸ್ಸಿನ ಕ್ರೆಡಿಟ್ ನೀಡಿ

ಭಾನು ಪ್ರತಾಪ್ ತನ್ನ ಯಶಸ್ಸಿಗೆ ಕುಟುಂಬ ಮತ್ತು ಸ್ನೇಹಿತರೇ ಕಾರಣವೆಂದು ಹೇಳಿದ್ದಾರೆ, ಅವನು ಕುಗ್ಗಿದಾಗ ಹೆಂಡತಿ ಮತ್ತು ಸ್ನೇಹಿತರು ಪ್ರೋತ್ಸಾಹಿಸಿದರು. ಯಾವಾಗಲೂ ಪ್ರಯತ್ನ ಮುಖ್ಯ ಎಂದು ಹುರುದುಂಬಿಸುತ್ತಿದ್ದರು. ಈಗ ಫಲಿತಾಂಶವು ಉತ್ತಮವಾಗಿದೆ ಎಂದಿದ್ದಾರೆ.
 

ಸಂದರ್ಶನವೂ ಹಿಂದಿಯಲ್ಲಿ

ಭಾನು ಪ್ರತಾಪ್ ಸಿಂಗ್‌ರನ್ನು ಹಿಂದಿಯಲ್ಲಿ ಸಂದರ್ಶಿಸಲಾಯಿತು. ನೀವು ಸಂದರ್ಶನ ಮಂಡಳಿಯ ಮುಂದೆ ಹೋದಾಗ ಅವರು ನಿಮ್ಮ ವ್ಯಕ್ತಿತ್ವವನ್ನು ಪರೀಕ್ಷಿಸುತ್ತಾರೆ ಎಂದು ಅವರು ಹೇಳಿದ್ದಾರೆ. ನಿಮಗೆ ಕಲ್ಯಾಣ ರಾಜ್ಯದ ಪರಿಕಲ್ಪನೆ ಇದೆಯೋ ಇಲ್ಲವೋ ಎಂದು ಅವರು ನೋಡುತ್ತಾನೆ. ನೀವು ಲಿಂಗ ಆಧಾರಿತ, ಜನಾಂಗೀಯ ವ್ಯಕ್ತಿಯೇ ಎಂದೂ ಪರೀಕ್ಷಿಸುತ್ತಾರೆ? 20 ನಿಮಿಷಗಳ ಸಂದರ್ಶನದಲ್ಲಿ ಅವರಿಗೆ ಆಸಕ್ತಿದಾಯಕ ಪ್ರಶ್ನೆಗಳನ್ನು ಕೇಳಲಾಗಿತ್ತಂತೆ

Latest Videos

click me!