ಟೊಯೋಟಾ ಫಾರ್ಚೂನರ್ ಯಾರಿಗೆ ತಾನೇ ಇಷ್ಟ ಆಗಲ್ಲ? ಬಹಳಷ್ಟು ಜನ ಈ ಕಾರು ಖರೀದಿಸಲು ಹಾತೊರೆಯುುತ್ತಾರೆ. ಈಗ ಆ ಕನಸು ನನಸಾಗುವ ಸಮಯ ಬಂದಿದೆ. ಇದೀಗ ಕೇವಲ 50,000 ರೂಪಾಯಿ ಡೌನ್ ಪೇಮೆಂಟ್ ಮಾಡಿದರೆ ಫಾರ್ಚುನರ್ ಮನೆ ಬಾಗಿಲಿಗೆ ಬರಲಿದೆ. ಐಷಾರಾಮಿ ಫೀಚರ್ಸ್ ಮತ್ತು ಪವರ್‌ಫುಲ್ ಎಂಜಿನ್‌ಗೆ ಹೆಸರುವಾಸಿಯಾದ ಫಾರ್ಚೂನರ್, ಪೆಟ್ರೋಲ್ ಮತ್ತು ಡೀಸೆಲ್ ವೇರಿಯೆಂಟ್‌ಗಳಲ್ಲಿ ಲಭ್ಯವಿದೆ. ಇದು 2694 cc, DOHC, ಡ್ಯುಯಲ್ VVT-i ಎಂಜಿನ್ ಹೊಂದಿದೆ. ಇದು 166 PS ಪವರ್ ಮತ್ತು 245 Nm ಟಾರ್ಕ್ ಉತ್ಪಾದಿಸುತ್ತದೆ. 7 ಜನ ಕೂರಬಹುದಾದ ವಿಶಾಲವಾದ ಸ್ಪೇಸ್ ಇದೆ.