5.99 ಲಕ್ಷ ರೂ ಬೆಲೆಯಲ್ಲಿ ಟಾಟಾ ಟಿಯಾಗೋ XTA ಕಾರು ಬಿಡುಗಡೆ!

First Published Mar 4, 2021, 2:14 PM IST

ಹೊಚ್ಚ ಹೊಸ ಟಿಯಾಗೋ ಕಾರು ಬಿಡುಗಡೆಯಾಗಿದೆ. ಹೊಸ ವಿನ್ಯಾಸ, ಹೆಚ್ಚುವರಿ ಫೀಚರ್ಸ್ ಸೇರಿದಂತೆ ಹಲವು ಬದಲಾವಣೆಗಳೊಂದಿಗೆ ನೂತನ ಟಿಯಾಗೋ XTA ಕಾರು ಬಿಡುಗಡೆಯಾಗಿದೆ. ನೂತನ ಕಾರಿನ ವಿವರ ಇಲ್ಲಿದೆ.

ಟಾಟಾ ಮೋಟಾರ್ಸ್ ತನ್ನ ಯಶಸ್ವಿ ಹ್ಯಾಚ್‍ಬ್ಯಾಕ್ ಟಿಯಾಗೋವನ್ನು ಹೊಸ ರೂಪದಲ್ಲಿ ಬಿಡುಗಡೆ ಮಾಡಿದೆ. ಟಿಯಾಗೋ XTA ಕಾರು ಬಿಡುಗಡೆಯಾಗಿದೆ. ನೂತನ ಕಾರಿನ ಬೆಲೆ 5.99 ಲಕ್ಷ ರೂ. (ಎಕ್ಸ್ ಶೋರೂಂ ದೆಹಲಿ) ಆರಂಭಿಕ ಬೆಲೆಯಲ್ಲಿ ಲಭ್ಯವಿದೆ..
undefined
ಟಾಟಾ ಟಿಯಾಗೊದ XTA ಟ್ರಿಮ್‍ಗೆ AMT ರೂಪಾಂತರವನ್ನು ಸೇರಿಸುವ ಮುಖಾಂತರ ಕಂಪನಿಯು ತನ್ನ ಸ್ವಯಂಚಾಲಿತ ಶ್ರೇಣಿಯನ್ನು 4 AMT ಆಯ್ಕೆಗಳೊಂದಿಗೆ ಬಲಪಡಿಸುತ್ತಿದೆ. ಈಗ ಟಿಯಾಗೊ ಶ್ರೇಣಿಯಲ್ಲಿ ಆಯ್ಕೆ ಮಾಡಲು ಗ್ರಾಹಕರು ಹಲವಾರು ಆಯ್ಕೆಗಳನ್ನು ಹೊಂದಿದ್ದಾರೆ.
undefined
2016 ರಲ್ಲಿ ಪ್ರಾರಂಭವಾದ ಟಿಯಾಗೊ ತನ್ನ ವಿಭಾಗದಲ್ಲಿ ಬಹಳ ಯಶಸ್ವಿಯಾಗಿದೆ ಮತ್ತು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಟಿಯಾಗೋ BS6 ಆವೃತ್ತಿಯನ್ನು 2020 ರಲ್ಲಿ ಪರಿಚಯಿಸಲಾಗಿದೆ. 4-ಸ್ಟಾರ್ ಸುರಕ್ಷತಾ ರೇಟಿಂಗ್ ಪಡೆದುಕೊಂಡಿರುವ ಟಿಯಾಗೋ ಸಣ್ಣ ಕಾರಿನಲ್ಲಿ ಗರಿಷ್ಠ ಸೇಫ್ಟಿ ಕಾರು ಅನ್ನೋ ಹೆಗ್ಗಳಿಕೆಗೂ ಪಾತ್ರವಾಗಿದೆ.
undefined
ಹರ್ಮನ್‍ನಿಂದ 7 ಇಂಚಿನ ಇನ್ಫೋಟೈನ್‍ಮೆಂಟ್ ಟಚ್‍ಸ್ಕ್ರೀನ್, 15-ಇಂಚಿನ ಅಲಾಯ್ ವೀಲ್ಸ್, ಸ್ವಯಂಚಾಲಿತ ಹವಾಮಾನ ನಿಯಂತ್ರಣ ಮತ್ತು ಡಿಜಿಟಲ್ ಇನ್ಸ್ಟ್ರುಮೆಂಟ್ ಕಸ್ಟರ್ ನಂತಹ ಇತರ ವಿವಿಧ ರೋಮಾಂಚಕಾರಿ ವೈಶಿಷ್ಟ್ಯಗಳೊಂದಿಗೆ ಬರುವುದರಿಂದ ಇದು 3.25 ಲಕ್ಷ ಸಂತೃಪ್ತ ಗ್ರಾಹಕರ ಸೂಕ್ತ ಆಯ್ಕೆಯಾಗಿದೆ.
undefined
‘ಸದಾ ಹೊಸದು’ ಆಗಿ ಉಳಿಯುವ ನಮ್ಮ ಬ್ರಾಂಡ್ ಭರವಸೆಯನ್ನು ಈಡೇರಿಸುತ್ತಾ ನಾವು ನಿರಂತರವಾಗಿ ಮಾರುಕಟ್ಟೆಯಿಂದ ಪ್ರತಿಕ್ರಿಯೆಯನ್ನು ಕೇಳಿಸಿಕೊಳ್ಳುತ್ತಿದ್ದೇವೆ ಮತ್ತು ಸಂಗ್ರಹಿಸುತ್ತಿದ್ದೇವೆ. ಟಿಯಾಗೊ ವಲಯಗಳಾದ್ಯಂತ ಅಪಾರವಾದ ಮಾರುಕಟ್ಟೆ ಪ್ರತಿಕ್ರಿಯೆಯನ್ನು ಪಡೆದಿದೆ ಎಂದು ಟಾಟಾ ಮೋಟಾರ್ಸ್‍ನ ಪ್ಯಾಸೆಂಜರ್ ವೆಹಿಕಲ್ ಬಿಸಿನೆಸ್ ಯುನಿಟ್ ನ ಮಾರ್ಕೆಟಿಂಗ್ ಮುಖ್ಯಸ್ಥರಾದ ವಿವೇಕ್ ಶ್ರೀವತ್ಸ ಹೇಳಿದ್ದಾರೆ.
undefined
ಭಾರತದಲ್ಲಿ ಸ್ವಯಂಚಾಲಿತ ಪ್ರಸರಣ (ಎಟಿ) ವಿಭಾಗವು ಪ್ರವರ್ಧಮಾನಕ್ಕೆ ಬರುತ್ತಿದೆ ಮತ್ತು ಟಿಯಾಗೊ ಮಾರಾಟದಲ್ಲೂ ಇದು ಸಾಬೀತಾಗಿದೆ. ಎಟಿಗಳಿಗೆ ಹೆಚ್ಚುತ್ತಿರುವ ಆದ್ಯತೆಯನ್ನು ಗುರುತಿಸಿ ನಾವು ಎಕ್ಸ್‍ಟಿಎ ಆವೃತ್ತಿಯನ್ನು ಶ್ರೇಣಿಗೆ ಪರಿಚಯಿಸಲು ಉತ್ಸುಕರಾಗಿದ್ದೇವೆ ಎಂದರು.
undefined
ಹೊಸ ರೂಪಾಂತರವು ಮಿಡ್-ಹ್ಯಾಚ್ ವಿಭಾಗದಲ್ಲಿ ನಮಗೆ ಸ್ಪರ್ಧಾತ್ಮಕ ಪ್ರಯೋಜನವನ್ನು ನೀಡುವುದಲ್ಲದೆ ಪ್ರತಿ ಸೂಚಿತ ಬೆಲೆಯಲ್ಲಿಯೂ ಗ್ರಾಹಕರಿಗೆ ಆಯ್ಕೆ ಮಾಡಲು ದೊರೆಯಬಹುದಾದ ಆಯ್ಕೆಗಳನ್ನು ಸಹ ಒದಗಿಸುತ್ತದೆ ಎಂಬ ವಿಶ್ವಾಸವಿದೆ ಎಂದು ಶ್ರೀವತ್ಸ ಹೇಳಿದ್ದಾರೆ.
undefined
click me!