ಬೆಂಗಳೂರಿನಲ್ಲಿ ‘ಲಾ ಮಿಸಾನ್ ಸಿಟ್ರೊಯನ್’ ಫಿಜಿಟಲ್ ಷೋರೂಂ ಆರಂಭಿಸುವುದರೊಂದಿಗೆ ಭಾರತದ ವಾಹನ ಮಾರುಕಟ್ಟೆಗೆ ಪ್ರವೇಶಿಸಲು ಸಿಟ್ರೊಯನ್ ಸಜ್ಜಾಗಿದೆ. ಬೆಂಗಳೂರಿನಲ್ಲಿ ವಾಹನಗಳ ಮಾರಾಟಕ್ಕೆ ಅತ್ಯಂತ ಸೂಕ್ತವಾದ ತಾಣದಲ್ಲಿ ಆರಂಭಗೊಂಡಿರುವ ಈ ಷೋರೂಂ, ಭಾರತದಲ್ಲಿನ ಮೊದಲ ‘ಲಾ ಮಿಸಾನ್ ಸಿಟ್ರೊಯನ್’ ಷೋರೂಂ ಆಗಿದೆ. 2021ರ ಮಾರ್ಚ್ 1ರಿಂದ ಮುಂಗಡ ಬುಕಿಂಗ್ ಆರಂಭಗೊಳ್ಳುವ ಮುಂಚೆಯೇ ಈ ಷೋರೂಂ ಕಾರ್ಯಾರಂಭ ಮಾಡಲಿದೆ. ಗ್ರಾಹಕರಿಗೆ ಪರೀಕ್ಷಾರ್ಥ ಚಾಲನಾ ಅನುಭವ ಒದಗಿಸಲಿರುವ ಈ ಷೋರೂಂ, ಮಾರಾಟ ನಂತರದ ಸರ್ವಿಸ್ ಒದಗಿಸುವುದಕ್ಕೂ ಸಂಪೂರ್ಣವಾಗಿ ಸುಸಜ್ಜಿತವಾಗಿದೆ.
undefined
ಸಂಪೂರ್ಣ ಡಿಜಿಟಲ್‍ಮಯವಾಗಿರುವ ಇಲ್ಲಿನ ಪರಿಸರವು ಗ್ರಾಹಕರಿಗೆ ಸರಿಸಾಟಿಯಿಲ್ಲದ ಬಗೆಯಲ್ಲಿ ಡಿಜಿಟಲ್ ಅನುಭವ ಒದಗಿಸಲಿದೆ. ‘ಎಟಿಎಡಬ್ಲ್ಯುಎಡಿಎಸಿ’, ರಿಸೆಪ್ಶನ್ ಬಾರ್, ಹೈಡೆಫಿನಿಷನ್ 3ಡಿ ಸಂಯೋಜನೆ, ಸಿಟ್ರೊಯನ್ ಒರಿಜಿನ್ಸ್ ಟಚ್‍ಸ್ಕ್ರೀನ್‍ನೊಂದಿಗೆ ಷೋರೂಂನಲ್ಲಿನ ಗ್ರಾಹಕರ ಅನುಭವ ಹೆಚ್ಚಲಿದೆ.
undefined
ಭಾರತಕ್ಕೆಂದು ರೂಪಿಸಿರುವ 360 ಡಿಗ್ರಿಯ ಆರಾಮದಾಯಕ ಕಾರ್ಯತಂತ್ರದ ಭಾಗವಾಗಿ ಸಿಟ್ರೊಯನ್, ಗ್ರಾಹಕರಿಗೆ ಸರಿಸಾಟಿಯಿಲ್ಲದ ಹಲವಾರು ಕೊಡುಗೆಗಳನ್ನು ಒದಗಿಸಲಿದೆ. ಗ್ರಾಹಕರ ಜತೆಗಿನ ವಿಶ್ವಾಸ ವೃದ್ಧಿಸುವ ಉದ್ದೇಶದ ಈ ಮೊದಲೆಂದೂ ಅನುಭವಿಸದ ಆರಾಮದಾಯಕ ಸೇವೆಗಳನ್ನು ನೀಡಲಿದೆ. ಈ ಸೇವೆಗಳಲ್ಲಿ ಆಕರ್ಷಕ ಹಣಕಾಸು ನೆರವು, ಲೀಸಿಂಗ್ ಸೌಲಭ್ಯಗಳನ್ನು ಸಿಟ್ರೊಯನ್ ಹಣಕಾಸು, ವಿಮೆ ಸೇವೆ ಮತ್ತು 30 ನಿಮಿಷಗಳ ಖಾತರಿಪಡಿಸಿದ ಟ್ರೇಡ್ ಇನ್ ಸೌಲಭ್ಯ ಒದಗಿಸಲಿದೆ.
undefined
ಮಾರಾಟ ನಂತರದ ವರ್ಕ್‍ಶಾಪ್ ಆಗಿರುವ ಎಲ್’ ಅಟೆಲಿಯರ್ ಸಿಟ್ರೊಯನ್, ಗ್ರಾಹಕರ ಬೆರಳತುದಿಯಲ್ಲಿ ಅನನ್ಯ ಬಗೆಯ ಸೇವೆಗಳನ್ನು ಒದಗಿಸಲಿದೆ. ಯಾವುದೇ ಸಮಯದಲ್ಲಿ ಎಲ್ಲಿದ್ದರೂ ಪಡೆಯಬಹುದು. ದೂರದಿಂದಲೇ ವರ್ಚುವಲ್ ರೂಪದಲ್ಲಿ ದೋಷ ಪತ್ತೆ 180 ನಿಮಿಷಗಳಲ್ಲಿ ರಸ್ತೆ ಬದಿ ನೆರವಿನ (ಆರ್‍ಎಸ್‍ಎ) ಖಾತರಿ, ಪಿಕ್‍ಅಪ್ ಮತ್ತು ಡ್ರಾಪ್‍ನೊಂದಿಗೆ ನಿಯಮಿತವಾಗಿ ಸರ್ವಿಸ್ ಮತ್ತು ನಿರ್ವಹಣೆ, ಅಸಲಿ ಬಿಡಿಭಾಗಗಳು 24 ಗಂಟೆಗಳಲ್ಲಿ ಲಭ್ಯ, ಸಂಚಾರಿ ಸರ್ವಿಸ್ ಸೇವೆಯು , ಗ್ರಾಹಕರನ್ನು ಶೀಘ್ರವಾಗಿ ತಲುಪಲಿದ್ದು, ಗ್ರಾಹಕರ ಮನೆಬಾಗಿಲಲ್ಲಿ ಸರ್ವಿಸ್ ಮತ್ತು ದುರಸ್ತಿ ಕೆಲಸ ಮಾಡಿಕೊಡಲಿದೆ.
undefined
ಭಾರತದಲ್ಲಿ ಹೊಸ ಆವಿಷ್ಕಾರ ಮತ್ತು ‘ಲಾ ಮಿಸಾನ್ ಸಿಟ್ರೊಯನ್’ ಪರಿಚಯಿಸುವುದರ ಕುರಿತು ನಾವು ತುಂಬ ಉತ್ಸುಕರಾಗಿದ್ದೇವೆ. ಬೆಂಗಳೂರಿನಲ್ಲಿ ನಾವು ನಮ್ಮ ಮೊದಲ ಕಾರ್ ಸಿ5 ಏರ್‍ಕ್ರಾಸ್ ಸ್ಪೋಟ್ಸ್ ಯುಟಿಲಿಟಿ ವೆಹಿಕಲ್ (ಎಸ್‍ಯುವಿ) ಪರಿಚಯಿಸುವುದಕ್ಕೆ ಫಿಜಿಟಲ್ ಷೋರೂಂ ಮಹತ್ವದ ಮೈಲುಗಲ್ಲು ಆಗಿದೆ. ಈ ಷೋರೂಂ ಹಲವಾರು ಪರದೆಗಳನ್ನು ಒಳಗೊಂಡಿದ್ದು, ಯಾವುದೇ ಸಮಯ, ಎಲ್ಲಿದ್ದರೂ, ಯಾವುದೇ ಸಾಧನ, ಯಾವುದೇ ಮಾಹಿತಿಯ (ಎಟಿಎಡಬ್ಲ್ಯುಎಡಿಎಸಿ) ಅನುಭವ ಒದಗಿಸಲಿವೆ. ವಿಶಿಷ್ಟ ಬಗೆಯ ಹೈಡೆಫಿನಿಷನ್ 3ಡಿ ಸಂಯೋಜಕವು, ಕಾರ್‍ನ ಬಗ್ಗೆ 360 ಡಿಗ್ರಿ ಮಾಹಿತಿ ಪಡೆಯಲು ಮತ್ತು ಉತ್ಪನ್ನ ಹಾಗೂ ಸೇವೆಗಳನ್ನು ವ್ಯಕ್ತಿಗತವಾಗಿ ಪಡೆದುಕೊಳ್ಳಲು ನೆರವಾಗಲಿದೆ ಎಂದು ಸಿಟ್ರೊಯನ್ ಇಂಡಿಯಾದ ಮಾರಾಟ ಮತ್ತು ಮಾರುಕಟ್ಟೆ ವಿಭಾಗದ ಹಿರಿಯ ಉಪಾಧ್ಯಕ್ಷ ರೋನಾಲ್ಡ್ ಬೌಚರ ಹೇಳಿದರು.
undefined
‘ಸಿಟ್ರೊಯನ್ – ಇದು ಆರಾಮ ಮತ್ತು ಡಿಜಿಟಲ್ ಆವಿಷ್ಕಾರವಾಗಿದೆ. ಈ ಲಾ ಮಿಸಾನ್ ಸಿಟ್ರೊಯನ್ ಫಿಜಿಟಲ್ ಷೋರೂಂ ಮೂಲಕ, ಭಾರತದಲ್ಲಿ ಕಾರ್ ಖರೀದಿಸುವ ಗ್ರಾಹಕರಿಗೆ ಅವರ ಕಾರ್ ಖರೀದಿ ಪಯಣದಲ್ಲಿ ಕ್ರಾಂತಿಕಾರಿ ಬದಲಾವಣೆಗಳನ್ನು ತರಲು ನಾವು ಸಮರ್ಥರಿದ್ದೇವೆ ಎನ್ನುವ ವಿಶ್ವಾಸ ಹೊಂದಿದ್ದೇವೆ. ಸಿ5 ಏರ್‍ಕ್ರಾಸ್ ಎಸ್‍ಯುವಿ ಅನ್ನು ಭಾರತದ ಮಾರುಕಟ್ಟೆಗೆ ಪರಿಚಯಿಸುವ ಸಂದರ್ಭದಲ್ಲಿ, ಲಾ ಮಿಸಾನ್ ಸಿಟ್ರೊಯನ್, ಭಾರತದಲ್ಲಿನ 10 ಪ್ರಮುಖ ನಗರಗಳಲ್ಲಿ ಗ್ರಾಹಕರನ್ನು ಸ್ವಾಗತಿಸಲಿವೆ’ ಎಂದು ಸಿಟ್ರೊಯನ್ ಇಂಡಿಯಾದ ಮಾರಾಟ ಮತ್ತು ಮಾರಾಟ ಜಾಲದ ಉಪಾಧ್ಯಕ್ಷ ಜೊಯೆಲ್ ವೆರನಿ ಹೇಳಿದರು.
undefined
ಲಾ ಮಿಸಾನ್ ಸಿಟ್ರೊಯನ್’ ಫಿಜಿಟಲ್ ಷೋರೂಂ, ಸಾಂಪ್ರದಾಯಿಕ ವಾಹನ ವಿತರಣೆಯ ಸಂಹಿತೆಗಳನ್ನು ಬದಲಿಸಲಿದೆ. ಇಲ್ಲಿರುವ ಬೆಚ್ಚನೆಯ, ಸ್ನೇಹಪೂರ್ವಕ ಮತ್ತು ಮನಸ್ಸಿಗೆ ಮುದ ನೀಡುವ ವರ್ಣಮಯ ವಾತಾವರಣವು ಗ್ರಾಹಕರಿಗೆ ‘ಮನೆಯಲ್ಲಿ ಆರಾಮವಾಗಿ ಇರುವಂತಹ’ ವಿಶಿಷ್ಟ ಅನುಭವ ಒದಗಿಸಲಿದೆ. ಷೋರೂಂ ಮುಂಭಾಗದಲ್ಲಿ ಅಳವಡಿಸಿರುವ ದೈತ್ಯ ಪರದೆಯು ದಾರಿ ಹೋಕರ ಗಮನ ಸೆಳೆದು ಷೋರೂಂ ಒಳಗೆ ಪ್ರವೇಶಿಸಲು ಅವರಿಗೆ ಪ್ರೇರಣೆ ನೀಡಲಿದೆ. ಷೋರೂಂನ ಒಳಾಂಗಣವು ನೈಸರ್ಗಿಕ ವುಡ್ ಫಿನಿಷ್ ಮತ್ತು ವರ್ಣಮಯವಾಗಿ ಕೆತ್ತಿರುವ ನುಡಿಗಟ್ಟುಗಳು, ಸಿಟ್ರೊಯನ್ ಬ್ರ್ಯಂಡ್ ಮತ್ತು ಅದರ ಶತಮಾನದಷ್ಟು ಹಳೆಯ ಪರಂಪರೆಯ ಅನುಭವ ಪಡೆಯಲು ಗ್ರಾಹಕರನ್ನು ಆಹ್ವಾನಿಸುತ್ತವೆ. ಭೌತಿಕ ಜಗತ್ತಿನ ಜತೆ ಡಿಜಿಟಲ್ ಜಗತ್ತಿನ ಮಧ್ಯೆ ಸಂಪರ್ಕ ಸೇತುವೆ ಕಲ್ಪಿಸುವ ತಂತ್ರಜ್ಞಾನದ ಪರಿಕಲ್ಪನೆಗೆ ‘ಫಿಜಿಟಲ್’ ಎನ್ನುತ್ತಾರೆ.
undefined