ಕೇವಲ 5.99 ಲಕ್ಷ ರೂಗೆ ಕಾರು ಕನಸು ನನಸಾಗಿಸಿ, ಹೊಸ ಟಾಟಾ ಟಿಗೋರ್ ಫೇಸ್‌ಲಿಫ್ಟ್ ಬಿಡುಗಡೆ

First Published | Jan 11, 2025, 12:35 PM IST

ಕಾರು ಕೊಳ್ಳೋದು ಅನೇಕರ ಕನಸು. ದುಡ್ಡಿದ್ದವ್ರಿಗೆ ಮಾತ್ರ ಇದ್ದ ಈ ಆಸೆ ಈಗ ಮಧ್ಯಮ ವರ್ಗದವ್ರಲ್ಲೂ ಹುಟ್ಟಿದೆ.  ಇದಕ್ಕೆ ಪೂರಕವಾಗಿ ಟಾಟಾ ಟಿಗೋರ್ ಹೊಸ ಫೇಸ್‌ಲಿಫ್ಟ್ ಕಾರು ಬಿಡುಗಡೆ ಮಾಡಿದೆ.ಇದರ ಬೆಲೆ ಕೇವಲ 5.99 ಲಕ್ಷ ರೂಪಾಯಿ.  

2025ರ ಟಾಟಾ ಟಿಗೊರ್ ಫೇಸ್‌ಲಿಫ್ಟ್

2025ರ ಆರಂಭದಲ್ಲಿ ಟಾಟಾ ಮೋಟಾರ್ಸ್ ಟಿಗೋರ್ ಫೇಸ್‌ಲಿಫ್ಟ್ ಕಾರು ಬಿಡುಗಡೆ ಮಾಡಿದೆ. ಕೈಗೆಟುಕವ ಬೆಲೆ, ಗರಿಷ್ಠ 5 ಸ್ಟಾರ್ ಸುರಕ್ಷತೆ, ಉತ್ತಮ ಮೈಲೇಜ್,ಅತ್ಯಾಧುನಿಕ ಫೀಚರ್ಸ್ ಸೇರಿದಂತೆ ಹಲವು ವಿಶೇಷತೆಗಳು ಈ ಕಾರಿನಲ್ಲಿದೆ. ಟಿಗೊರ್‌ನಲ್ಲಿ ಸೂಕ್ಷ್ಮ ಮತ್ತು ಪರಿಣಾಮಕಾರಿ ವಿನ್ಯಾಸ ಬದಲಾವಣೆಗಳಿವೆ. ಮುಂಭಾಗದ ಗ್ರಿಲ್ ಮತ್ತು ಬಂಪರ್‌  ಮರು ವಿನ್ಯಾಸಗೊಳಿಸಲಾಗಿದ್ದು, ಕಾರಿಗೆ ಹೊಸ ಲುಕ್ ನೀಡುತ್ತದೆ. ಹಿಂಭಾಗದ ಬಂಪರ್ ಕೂಡ ಹೊಸ ಲುಕ್ ಪಡೆದಿದೆ. 15 ಇಂಚಿನ ಅಲಾಯ್ ವೀಲ್ಸ್ ಕೂಪ್ ತರಹದ ವಿನ್ಯಾಸವನ್ನು ಉಳಿಸಿಕೊಂಡಿದೆ.

ಟಿಗೊರ್ ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ ಜೊತೆಗೆ 10.25 -ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಹೊಂದಿದೆ. ಟಾಪ್ ಮಾಡೆಲ್ ಎಕ್ಸ್‌ಝಡ್ ಪ್ಲಸ್ ಲಕ್ಸ್‌ನಲ್ಲಿ 360 ಡಿಗ್ರಿ ಕ್ಯಾಮೆರಾ, ಆಟೋಮ್ಯಾಟಿಕ್ ಟೆಂಪರೇಚರ್ ಕಂಟ್ರೋಲ್, ಲೆದರ್ ಸ್ಟೀರಿಂಗ್, ರೈನ್ ಸೆನ್ಸಿಂಗ್ ವೈಪರ್‌ಗಳು ಮತ್ತು ಕ್ರೂಸ್ ಕಂಟ್ರೋಲ್ ಇದೆ.

Tap to resize

ಪವರ್‌ಟ್ರೈನ್ ಮತ್ತು ಸುರಕ್ಷತೆ? 2025ರ ಟಿಗೊರ್ ತನ್ನ 1.2 ಲೀಟರ್, 3ಸಿಲಿಂಡರ್ ಪೆಟ್ರೋಲ್ ಎಂಜಿನ್ ಅನ್ನು ಉಳಿಸಿಕೊಂಡಿದ್ದು, 85 bhp ಮತ್ತು 113 Nm ಟಾರ್ಕ್ ಉತ್ಪಾದಿಸುತ್ತದೆ. ಎಂಜಿನ್ 5-ಸ್ಪೀಡ್ ಮ್ಯಾನುವಲ್ ಅಥವಾ AMT ಟ್ರಾನ್ಸ್‌ಮಿಷನ್‌ನೊಂದಿಗೆ ಬರುತ್ತದೆ. CNG ಮಾಡೆಲ್‌ಗಳು 79 bhp ಮತ್ತು 95 Nm ಟಾರ್ಕ್ ನೀಡುತ್ತವೆ. ಹೀಗಾಗಿ ಯಾವುದೇ ಆಯ್ಕೆಯಲ್ಲೂ ಉತ್ತಮ ಪರ್ಪಾಮೆನ್ಸ್ ನೀಡಬಲ್ಲದು. 

ಟಾಟಾ ಟಿಗೊರ್

ಹೊಸ ಟಿಗೊರ್ ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್‌ನೊಂದಿಗೆ ಬರುತ್ತದೆ. ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಮತ್ತು ಹೊಸ ಟ್ವಿನ್-ಸ್ಪೋಕ್ ಸ್ಟೀರಿಂಗ್ ವೀಲ್ ಮತ್ತು ಲೈಟ್ ಇರುವ ಟಾಟಾ ಲೋಗೋ ಕಾರಿನ ಆಧುನಿಕ ಲುಕ್ ಹೆಚ್ಚಿಸುತ್ತದೆ. XM ಮಾಡೆಲ್‌ನಲ್ಲಿ ಲೈಟ್ ಇರುವ ಸ್ಮಾರ್ಟ್ ಸ್ಟೀರಿಂಗ್ ವೀಲ್, ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಹೊಸ ಸೀಟ್‌ಗಳು, ISOFIX ಚೈಲ್ಡ್ ಸೀಟ್ ಆಂಕರ್‌ಗಳು, ಪಾರ್ಕಿಂಗ್ ಸೆನ್ಸರ್‌ಗಳು ಮತ್ತು LED ಟೈಲ್ ಲೈಟ್‌ಗಳಿವೆ.

ಬೆಲೆ ಮತ್ತು ಲಭ್ಯತೆ

2025 ಟಿಗೊರ್ ಪೆಟ್ರೋಲ್ ಮತ್ತು CNG ಮಾಡೆಲ್‌ಗಳಲ್ಲಿ ಲಭ್ಯವಿದೆ. XM ಮಾಡೆಲ್ ₹5.99 ಲಕ್ಷದಿಂದ ಆರಂಭವಾಗುತ್ತದೆ. XZ ಪ್ಲಸ್ ಲಕ್ಸ್ ₹8.50 ಲಕ್ಷ. XZ ಪ್ಲಸ್ ₹7.90 ಲಕ್ಷ. CNG ಮಾಡೆಲ್‌ಗಳಲ್ಲಿ XT ₹7.70 ಲಕ್ಷ ಮತ್ತು XZ Plus Lux ₹9.50 ಲಕ್ಷ. ಟಾಟಾ ಮೋಟಾರ್ಸ್ ವೆಬ್‌ಸೈಟ್‌ನಲ್ಲಿ ಬುಕ್ ಮಾಡಬಹುದು. ಜನವರಿ 2025 ರಿಂದ ಪೆಟ್ರೋಲ್ ಮತ್ತು ಫೆಬ್ರವರಿ 2025ರಿಂದ CNG ಮಾಡೆಲ್‌ಗಳ ಡೆಲಿವರಿ ಆರಂಭವಾಗಲಿದೆ.

Latest Videos

click me!