ಟಾಟಾ ನೆಕ್ಸಾನ್ ಪೆಟ್ರೋಲ್ / ಸಿಎನ್‌ಜಿ ಮತ್ತು ಡೀಸೆಲ್ ಕಾರುಗಳಿಗೆ 45,000 ರೂ. ಡಿಸ್ಕೌಂಟ್ ಆಫರ್‌ಗಳು ಲಭ್ಯವಿದೆ. ಇದರಲ್ಲಿ 35,000 ರೂ. ಗ್ರಾಹಕ ಡಿಸ್ಕೌಂಟ್ ಮತ್ತು 10,000 ರೂ. ಎಕ್ಸ್‌ಚೇಂಜ್ ಆಫರ್ ಸೇರಿದೆ. ಮಧ್ಯಮ ಗಾತ್ರದ ಎಸ್‌ಯುವಿ ಮಾದರಿಗಳಾದ ಟಾಟಾ ಹ್ಯಾರಿಯರ್ ಮತ್ತು ಸಫಾರಿ ಕಾರುಗಳಿಗೆ 75,000 ರೂ. ವರೆಗೆ ಡಿಸ್ಕೌಂಟ್ ಆಫರ್‌ಗಳನ್ನು ನೀಡಲಾಗುತ್ತಿದೆ. ಇದರಲ್ಲಿ 50,000 ರೂ. ಗ್ರಾಹಕ ಡಿಸ್ಕೌಂಟ್, 25,000 ರೂ. ಎಕ್ಸ್‌ಚೇಂಜ್ ಆಫರ್.