ಆ್ಯಪಲ್ ಉತ್ಪನ್ನಗಳ ತಂತ್ರಜ್ಞಾನ ಅತ್ಯಾಧುನಿಕ ಅನ್ನೋದರಲ್ಲಿ ಎರಡು ಮಾತಿಲ್ಲ. ಐಫೋನ್‌ನಿಂದ ಹಿಡಿದು ಮ್ಯಾಕ್ ಸೇರಿದ ಎಲ್ಲಾ ಉತ್ಪನ್ನಗಳಿಗೆ ವಿಶ್ವದೆಲ್ಲೆಡೆ ಭಾರಿ ಬೇಡಿಕೆ ಇದೆ. 2024ರಲ್ಲಿ ಆ್ಯಪಲ್ ಅತ್ಯಾಧುನಿಕ ಎಲೆಕ್ಟ್ರಿಕ್ ಕಾರು ಬಿಡುಗಡೆ ಮಾಡುವುದಾಗಿ ಘೋಷಿಸಿದೆ. ಆದರೆ ಬಿಡುಗಡೆ ಕುರಿತು ಕೆಲ ಮಾಹಿತಿ ಹೊರಬಿದ್ದಿದೆ.
ಆ್ಯಪಲ್ ಎಲೆಕ್ಟ್ರಿಕ್ ಕಾರನ್ನು ಸ್ವಯಂ ಚಾಲಿತ , ಚಾಲಕ ರಹಿತ ಕಾರಾಗಿ ಬಿಡುಗಡೆ ಮಾಡುವುದಾಗಿ ಘೋಷಿಸಿದೆ. ಸ್ವಯಂ ಚಾಲಿತ ಕಾರು(SAE ಲೆವಲ್ 5) ತಂತ್ರಜ್ಞಾನ ಬಳಸಿ ಕಾರು ಬಿಡುಗಡೆಗೆ ತಯಾರಿ ಮಾಡಿಕೊಂಡಿತ್ತು. ಆದರೆ ಈ ತಂತ್ರಜ್ಞಾವನ್ನು ಇದೀಗ SAE 2ಗೆ ಇಳಿಸಲು ನಿರ್ಧರಿಸಿದೆ.
ಹಂತ ಹಂತವವಾಗಿ ಫುಲ್ ಆಟೋಮೇಟೆಡ್ ಕಾರಿನ ತಂತ್ರಜ್ಞಾನ ಅಳವಡಿಸಲಾಗುತ್ತದೆ ಎಂದು ಆ್ಯಪಲ್ ಹೇಳಿದೆ. ಹೀಗಾಗಿ ಬಿಡುಗಡೆಗೆ ಉದ್ದೇಶಿಸಿರುವ ಆ್ಯಪಲ್ ಕಾರು ಫುಲ್ ಆಟೋಮೇಟೆಡ್ ಲೆವೆಲ್ 5 ತಂತ್ರಜ್ಞಾನ ಇರುವುದಿಲ್ಲ.
2024ರಲ್ಲಿ ಬಿಡುಗಡೆಯಾಗಲಿದೆ ಎಂದು ಘೋಷಿಸಿದ್ದ ಆ್ಯಪಲ್ ಕಾರು ಇದೀಗ ಮತ್ತಷ್ಟು ವಿಳಂಬವಾಗಲಿದೆ ಎಂದು ಬ್ಲೂಮ್‌ಬರ್ಗ್ ವರದಿ ಮಾಡಿದೆ. ಈ ವರದಿ ಪ್ರರಕಾರಣ 2028ರಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ ಎಂದಿದೆ.
ಸ್ವಯಂ ಚಾಲಿತ ಕಾರುಗಳಲ್ಲಿ ಕನಿಷ್ಠ SAE ಲೆವಲ್ 4 ತಂತ್ರಜ್ಞಾನದ ಅವಶ್ಯಕತೆ ಇದೆ. ಆದರೆ ಸದ್ಯ ವರದಿ ಪ್ರಕಾರ ಆ್ಯಪಲ್ ಕಾರಿನಲ್ಲಿರುವ ಲೆವೆಲ್ 2 ಪ್ಲಸ್ ತಂತ್ರಜ್ಞಾನ SAE ಪ್ರಮಾಣೀಕೃತ ಮಟ್ಟವಲ್ಲ.
SAE ಲೆವಲ್ 4 ತಂತ್ರಜ್ಞಾನದ ಕಾರುಗಳು ರಸ್ತೆಯಲ್ಲಿ ಸ್ವಯಂ ಚಾಲಿತವಾಗಿ ಸಂಚರಿಸಲು ಸಾಧ್ಯ. ಆದರೆ ಲೆವೆಲ್ 2 ಪ್ಲಸ್ ತಂತ್ರಜ್ಞಾನ ಲೇನ್ ಡಿಸಿಪ್ಲೀನ್ ಸೇರಿದಂತೆ ಇತರ ಕೆಲ ಪ್ರಯೋಜನಗಳನ್ನು ಚಾಲಕನಿಗೆ ಒದಗಿಸಲಿದೆ.
ಲೆವೆಲ್ 2 ಪ್ಲಸ್ ತಂತ್ರಜ್ಞಾನದ ಕಾರಿನಲ್ಲಿ ಟೆಸ್ಲಾದಲ್ಲಿರುವ ಫೀಚರ್ಸ್‌ಗಳು ಇರಲಿದೆ. ಅತ್ಯುತ್ತಮ ವಿನ್ಯಾಸ, ಸುರಕ್ಷತೆ, ಬಳಕೆದಾರರ ಇಂಟರ್‌ಫೇಸ್ ಸೇರಿದಂತೆ ಹಲವು ಪ್ರಯಾಣಿಕ ಸ್ನೇಹಿ ಫೀಚರ್ಸ್ ಈ ಕಾರಿನಲ್ಲಿರಲಿದೆ.
ಆ್ಯಪಲ್ ಲೆವೆಲ್ 2 ಪ್ಲಸ್ ತಂತ್ರಜ್ಞಾನದ ಕಾರು ಬಿಡುಗಡೆಯಾದ ಬಳಿಕ ಆ್ಯಪಲ್ ಲೆವಲ್ 4 ಪ್ಲಸ್ ತಂತ್ರಜ್ಞಾನಕ್ಕೆ ಅಪ್‌ಗ್ರೇಡ್ ಮಾಡಲು ಮುಂದಾಗಿದೆ.