ವಿಶ್ವದಲ್ಲಿ ಲಭ್ಯವಿರುವ ಎಲೆಕ್ಟ್ರಿಕ್ ಕಾರುಗಳು ಪೈಕಿ ಟೆಸ್ಲಾ ಅಗ್ರಸ್ಥಾನದಲ್ಲಿದೆ. ಹಲವು ದೇಶಗಳಲ್ಲಿ ಟೆಸ್ಲಾ ಕಾರು ಲಭ್ಯವಿದೆ. ಭಾರತದಲ್ಲಿ ಟೆಸ್ಲಾ ಕಾರು ಲಭ್ಯವಿಲ್ಲದಿದ್ದರೂ, ಕೆಲ ಉದ್ಯಮಿಗಳು, ಸೆಲೆಬ್ರೆಟಿಗಳು ವಿದೇಶದಿಂ ಆಮದು ಮಾಡಿಕೊಂಡಿದ್ದಾರೆ. ಇದೀಗ ಪ್ರಶ್ನೆ ಟಸ್ಲಾ ಕಾರಿನ ಚಾರ್ಚಿಂಗ್‌ಗೆ ಎಷ್ಟು ವಿದ್ಯುತ್ ಖರ್ಚಾಗಲಿದೆ? ಬಿಲ್ ಎಷ್ಟು ಬರಲಿದೆ ಅನ್ನೋ ಪ್ರಶ್ನೆಗೆ ಉತ್ತರ ಸಿಕ್ಕಿದೆ.
ಅಮೆರಿಕದ ಟೆಸ್ಲಾ ಕಂಪನಿಯ ಎಲೆಕ್ಟ್ರಿಕ್ ಕಾರುಗಳು ಭಾರಿ ಬೇಡಿಕೆ ಕಾರಾಗಿದೆ. ಈ ಕುರಿತು ಟೆಸ್ಲಾ ಕಾರು ಖರೀದಿಸಿದ ವ್ಯಕ್ತಿಯೊಬ್ಬ 12 ತಿಂಗಳ ಕಾರು ಚಾರ್ಜ್ ಮಾಡಿದ ವಿದ್ಯುತ್ ಬಿಲ್ ಬಹಿರಂಗಪಡಿಸಿದ್ದಾನೆ. ಈತನ 12 ತಿಂಗಳ ಟೆಸ್ಲಾ ಕಾರಿನ ಎಲೆಕ್ಟ್ರಿಕ್ ಬಿಲ್ 2.37 ಅಮೆರಿಕನ್ ಡಾಲರ್.
ಭಾರತೀಯ ರೂಪಾಯಿಗಳಲ್ಲಿ 197.01 ರೂಪಾಯಿ ಮಾತ್ರ. 12 ತಿಂಗಳ ಟೆಸ್ಲಾ ಕಾರಿನ ಎಲೆಕ್ಟ್ರಿಕ್ ಬಿಲ್ ಫೆಬ್ರವರಿ 1 ರಂದು ಪಾವತಿ ಮಾಡಬೇಕಿದೆ ಎಂದು ಚಾಲಕ ಹೇಳಿಕೊಂಡಿದ್ದಾನೆ.
ಇಷ್ಟು ಕಡಿಮೆಯಲ್ಲಿ ಟೆಸ್ಲಾ ಕಾರು ಚಾರ್ಜ್ ಮಾಡಿ ಒಂದು ವರ್ಷ ಚಲಾಯಿಸಲು ಸಾಧ್ಯವೇ? ಎಂದು ಹಲವರು ಪ್ರಶ್ನಿಸಿದ್ದಾರೆ. ಹೀಗಾದರೆ ಎಷ್ಟಾದರೂ ಸರಿ ನಾನು ಟೆಸ್ಲಾ ಕಾರನ್ನೇ ಖರೀದಿಸುತ್ತೇನೆ ಎಂದು ಮತ್ತೆ ಕೆಲವರು ಕಮೆಂಟ್ ಮಾಡಿದ್ದಾರೆ.
ಆದರೆ ಈತ ಟೆಸ್ಲಾ ಕಾರು ಚಾರ್ಜ್ ಮಾಡಿರುವುದು ಮನೆಯಲ್ಲಿ ಅಳವಡಿಸಿರುವ ಟೆಸ್ಲಾ ಚಾರ್ಜಿಂಗ್ ಪಾಯಿಂಟ್‌ನಲ್ಲಿ. ಆದರೆ ಮನೆಯಲ್ಲಿನ ವಿದ್ಯುತ್ ಬಳಕೆ ಮಾಡಿ ಚಾರ್ಜ್ ಮಾಡಿದರೆ ಎಷ್ಟಾಗುತ್ತೆ ಅನ್ನೋ ಕುರಿತ ಮಾಹಿತಿ ಇಲ್ಲ.
ಮನೆಯಲ್ಲಿ ಟೆಸ್ಲಾ ಚಾರ್ಜಿಂಗ್ ಪಾಯಿಂಟ್ ಅಳವಡಿಕೆ ಮಾಡುದು ದುಬಾರಿಯಾಗಲಿದೆ. ಕಾರಣ 11,500 ಅಮೆರಿಕನ್ ಡಾಲರ್ ಮೊತ್ತದಿಂದ ಚಾರ್ಜಿಂಗ್ ಪಾಯಿಂಟ್ ಬೆಲೆ ಆರಂಭಗೊಳ್ಳಲಿದೆ. ಭಾರತೀಯ ರೂಪಾಯಿಗಳಲ್ಲಿ 9.55 ಲಕ್ಷ ರೂಪಾಯಿ.
ಕಾರಿನ ಬಳಿಕ ಚಾರ್ಜಿಂಗ್ ಪಾಯಿಂಟ್ ಹಾಕಿಸಿಕೊಳ್ಳಲು ಇಷ್ಟು ಹಣ ಖರ್ಚು ಮಾಡುವುದಾದರೆ ಇಂಧನ ಕಾರು ಎಷ್ಟು ವರ್ಷ ಬಳಸಬಹುದು ಎಂದು ಹಲವರು ಪ್ರಶ್ನಿಸಿದ್ದಾರೆ.
ಒಟ್ನಲ್ಲಿ ಟೆಸ್ಲಾ ಕಾರಿನ ಎಲೆಕ್ಟ್ರಿಕ್ ಬಿಲ್ ಅತೀ ಕಡಿಮೆ ಅನ್ನೋದರಲ್ಲಿ ಎರಡು ಮಾತಿಲ್ಲ. ಆದರೆ ಟೆಸ್ಲಾ ಕಾರಿನ ಬೆಲೆ ದುಬಾರಿಯಾಗಿದೆ. ಸದ್ಯ ಭಾರತಕ್ಕೆ ಆಮದುಮಾಡಿಕೊಳ್ಳುವಾಗ ಈ ಕಾರಿನ ಬೆಲೆ ಸರಿಸುಮಾರು 2 ಕೋಟಿ ರೂಪಾಯಿ ಆಗಲಿದೆ.