ರೋಲ್ಸ್ ರಾಯ್ಸ್ ವಿಶ್ವದ ಅತ್ಯಂತ ದುಬಾರಿ ಕಾರುಗಳನ್ನು ಬಿಡುಗಡೆ ಮಾಡುತ್ತದೆ. ಶ್ರೀಮಂತರು, ಉದ್ಯಮಿಗಳು, ಸೆಲೆಬ್ರೆಟಿಗಳು ರೋಲ್ಸ್ ರಾಯ್ಸ್ ಕಾರು ಹೆಚ್ಚಾಗಿ ಬಳಸುತ್ತಾರೆ. ಇದೀಗ ಇದೇ ರೋಲ್ಸ್ ರಾಯ್ಸ್ ಭಾರತದಲ್ಲಿ ಅತೀ ದುಬಾರಿ ಎಲೆಕ್ಟ್ರಿಕ್ ಕಾರು ಬಿಡುಗಡೆ ಮಾಡಿದೆ.
ರೋಲ್ಸ್ ರಾಯ್ಸ್ ತನ್ನ SPECTRE ಎಲೆಕ್ಟ್ರಿಕ್ ಕಾರನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಇದು ಭಾರತದಲ್ಲಿ ಬಿಡುಗಡೆಯಾಗಿರುವ ಎಲೆಕ್ಟ್ರಿಕ್ ಕಾರುಗಳ ಪೈಕಿ ಅತಿ ದುಬಾರಿ ಕಾರು.
ಹೌದು, ರೋಲ್ಸ್ ರಾಯ್ಸ್ SPECTRE ಕಾರಿನ ಬೆಲೆ ಬರೋಬ್ಬರಿ7.5 ಕೋಟಿ ರೂಪಾಯಿ(ಎಕ್ಸ್ ಶೋ ರೂಂ). ಇದು ಎಲೆಕ್ಟ್ರಿಕ್ ಕಾರುಗಳ ಪೈಕಿ ಅತ್ಯಂತ ಐಷಾರಾಮಿ ಕಾರಾಗಿದೆ.
ಹೊಚ್ಚ ಹೊಸ ರೋಲ್ಸ್ ರಾಯ್ಸ್ SPECTRE ಎಲೆಕ್ಟ್ರಿಕ್ ಕಾರನ್ನು ಒಂದು ಬಾರಿ ಸಂಪೂರ್ಣ ಚಾರ್ಜ್ ಮಾಡಿದರೆ 530 ಕಿಲೋಮೀಟರ್ ದೂರ ಮೈಲೇಜ್ ರೇಂಜ್ ನೀಡಲಿದೆ.
ಶೇಕಡಾ 10 ರಿಂದ ಶೇಕಡಾ 80 ರಷ್ಟು ಬ್ಯಾಟರಿ ಚಾರ್ಜ್ ಆಗಲು 34 ನಿಮಿಷ ಸಮಯ ತೆಗೆದುಕೊಳ್ಳಲಿದೆ. ಹೀಗಾಗಿ ರೋಲ್ಸ್ ರಾಯ್ಸ್ SPECTRE ಕಾರಿನ ಚಾರ್ಜಿಂಗ್ ಸುಲಭವಾಗಿದೆ.
ಈ ಕಾರಿನಲ್ಲಿ 102 kWh ಬ್ಯಾಟರಿ ಪ್ಯಾಕ್ ಬಳಸಲಾಗಿದೆ. 575 bhp ಪವರ್ ಹಾಗೂ 900 Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. ಹೀಗಾಗಿ ಇಂಧನ ಕಾರಿಗಿಂತಲೂ ಹೆಚ್ಚಿನ ಪವರ್ ಸಿಗಲಿದೆ.
ರೋಲ್ಸ್ ರಾಯ್ಸ್ SPECTRE ಕಾರು 5 ಮೀಟರ್ ಉದ್ದವಿದೆ. ಸಾಮಾನ್ಯವಾಗಿ ರೋಲ್ಸ್ ರಾಯ್ಸ್ ಕಾರುಗಳು ಅತೀ ಉದ್ದನೇ ಡಿಸೈನ್ ಹೊಂದಿದೆ. 23 ಇಂಚಿನ ಅಲೋಯ್ ವ್ಹೀಲ್ ಬಳಸಲಾಗಿದೆ.
ಅತ್ಯಂತ ಆಕರ್ಷಕ ವಿನ್ಯಾಸ ಹೊಂದಿರುವ ರೋಲ್ಸ್ ರಾಯ್ಸ್ SPECTRE, ಅತ್ಯಾಧುನಿಕ ಫೀಚರ್ಸ್ ಹೊಂದಿದೆ. ಡ್ಯಾಶ್‌ಬೋರ್ಡ್‌ನಲ್ಲಿ ಎಲ್‌ಇಡಿ ಫೀಚರ್ಸ್ ನೀಡಲಾಗಿದೆ.