ದೇಶದ ಹೆಮ್ಮೆಯ ಮಹೀಂದ್ರ ಕಾರುಗಳಿಗೆ ಮನಸೋತ ಜನ, ಊಹೆಗೂ ನಿಲುಕದ ಟೆಕ್

Published : Aug 20, 2025, 04:04 PM IST

ಮಹೀಂದ್ರ ಕಾರುಗಳು ಇದೀಗ ಭಾರಿ ಗ್ರಾಹಕರನ್ನು ಸೆಳೆಯುತ್ತಿದೆ. ಇದರ ವಿನ್ಯಾಸದಿಂದ ಪರ್ಫಾಮೆನ್ಸ್ ಎಲ್ಲವೂ ಗ್ರಾಹಕರಿಗೆ ಇಷ್ಟವಾಗಿದೆ. ಸೇಫ್ಟಿ, ತಂತ್ರಜ್ಞಾನದಲ್ಲೂ ಮಹೀಂದ್ರ ಮುಂದಿದೆ. ಇದೀಗ ಮಹೀಂದ್ರ ಹೊಸ ಕಾರುಗಳು ದೇಶದಲ್ಲಿ ಹೊಸ ಸಂಚಲನ ಸೃಷ್ಟಿಸಿದೆ.

PREV
17

ಮಹೀಂದ್ರ ಈಗಾಗಲೇ ಹೊಸ ನಾಲ್ಕು ಕಾನ್ಸೆಪ್ಟ್ ಕಾರು ಅನಾವರಣ ಮಾಡಿದೆ. ಇದಕ್ಕೂ ಮೊದಲು ಬಿಇ6 ಸೇರಿದಂತೆ ಹೊಸ ವಿನ್ಯಾಸದ ಎಲೆಕ್ಟ್ರಿಕ್ ಕಾರು ಬಿಡುಗಡೆ ಮಾಡಿ ದೇಶದ ಕಾರು ಪ್ರಿಯರ ಗಮನಸೆಳೆದಿದೆ. ಮಹೀಂದ್ರ ಭಾರತದ ಉತ್ಪನ್ನ. ಭಾರತೀಯ ಕಂಪನಿ. ಗ್ರಾಹಕರಿಗೆ 5 ಸ್ಟಾರ್ ಸೇಫ್ಟಿ, ಅತ್ಯಾಕರ್ಷಕ ವಿನ್ಯಾಸ, ತಂತ್ರಜ್ಞಾನಗಳ ಮೂಲಕ ಕೈಗೆಟುಕುವ ಬೆಲೆಯಲ್ಲಿ ಕಾರುಗಳನ್ನು ನೀಡುತ್ತಿದೆ. ಇದೀಗ ಮಹೀಂದ್ರ ಹೊಸ ಕಾರುಗಳಿಗೆ ಪ್ರತಿ ದಿನ ಭಾರಿ ಸ್ಪಂದನೆ ವ್ಯಕ್ತವಾಗುತ್ತಿದೆ.

27

ಮಹೀಂದ್ರಾ & ಮಹೀಂದ್ರಾ ಲಿಮಿಟೆಡ್ ಕಂಪನಿಯು ಇಂದು ಹೊಸ ರೀತಿಯ ಅತ್ಯಾಧುನಿಕ ಎಸ್‌ಯುವಿಗಳಿಗೆ ಜನ್ಮ ನೀಡಲಿರುವ ತನ್ನ ಹೊಸ ಮಾಡ್ಯುಲರ್, ಮಲ್ಟಿ-ಎನರ್ಜಿ ಎನ್‌ಯು_ಐಕ್ಯೂ ಪ್ಲಾಟ್‌ಫಾರ್ಮ್‌ ಅನ್ನು ಅನಾವರಣಗೊಳಿಸಿದೆ. ಜೊತೆಗೆ ಕಂಪನಿಯು ಈ ಹೊಸ ಪ್ಲಾಟ್‌ಫಾರ್ಮ್‌ ನ ಆಧಾರದ ಮೇಲೆ ರೂಪುಗೊಂಡಿರುವ ನಾಲ್ಕು ವಿಶ್ವ ದರ್ಜೆಯ ಎಸ್‌ಯುವಿ ಪರಿಕಲ್ಪನೆಗಳನ್ನು ಪ್ರದರ್ಶಿಸಿದೆ.

37

ಅತ್ಯಾಧುನಿಕ ಎನ್‌ಯು_ಐಕ್ಯೂ ಪ್ಲಾಟ್‌ಫಾರ್ಮ್ ಆಟೋಮೋಟಿವ್ ಕ್ಷೇತ್ರದ ಕುರಿತು ಮಹೀಂದ್ರಾ ಹೊಂದಿರುವ ಹೊಸತನದ ಆವಿಷ್ಕಾರದ ಫಲಿತಾಂಶವಾಗಿದ್ದು, ಈ ಪ್ಲಾಟ್ ಫಾರ್ಮ್ ಸಾರಿಗೆ ವ್ಯವಸ್ಥೆಯ ನಿಯಮಗಳನ್ನು ಮರುರೂಪಿಸುವ ಮತ್ತು ಗ್ರಾಹಕರನ್ನು ಅಚ್ಚರಿಗೊಳಿಸುವ ಅತ್ಯಾಧುನಿಕ ಉತ್ಪನ್ನಗಳನ್ನು ಸೃಷ್ಟಿಸುತ್ತದೆ. ವಿಷನ್.ಎಸ್, ವಿಷನ್.ಟಿ, ವಿಷನ್.ಎಸ್ಎಕ್ಸ್ ಟಿ ಮತ್ತು ವಿಷನ್.ಎಕ್ಸ್ ಎಂಬ ನಾಲ್ಕು ವಿಶ್ವ ದರ್ಜೆಯ ಎಸ್‌ಯುವಿ ಪರಿಕಲ್ಪನೆಗಳ ಮೂಲಕ ಮಹೀಂದ್ರಾದ ಹೊಸ ದೃಷ್ಟಿಕೋನವನ್ನು ಪ್ರದರ್ಶಿಸಲಾಗಿದೆ. ಈ ಹೊಸ ವಿನ್ಯಾಸಗಳು ಖಾಲಿ ಇರುವ ಅವಕಾಶಗಳನ್ನು ತಮ್ಮದಾಗಿಸಿಕೊಳ್ಳುವ ಉದ್ದೇಶದಿಂದ ರೂಪುಗೊಂಡಿವೆ ಮತ್ತು ಮಹೀಂದ್ರಾದ ಮೂಲ ಗುಣಲಕ್ಷಣಗಳಾದ ಆಕರ್ಷಕ ವಿನ್ಯಾಸ, ಆಕರ್ಷಕ ಉಪಸ್ಥಿತಿ, ಅತ್ಯುತ್ಕೃಷ್ಟ ಕಾರ್ಯಕ್ಷಮತೆ, ವಿಶ್ವ ದರ್ಜೆಯ ಸುರಕ್ಷತೆ, ಇಂದಿನ ಸೈ-ಫೈ ತಂತ್ರಜ್ಞಾನ ಮತ್ತು ಕಠಿಣ ಆದರೆ ಸೊಗಸಾದ ಗುಣಗಳಿಗೆ ನಿಷ್ಠವಾಗಿವೆ.

47

ಹಾರ್ಟ್‌ಕೋರ್ ವಿನ್ಯಾಸ ತತ್ವದ ಮುಂದಿನ ಹಂತ:

ವಿಷನ್.ಎಸ್, ವಿಷನ್.ಟಿ, ವಿಷನ್.ಎಸ್ಎಕ್ಸ್ ಟಿ ಮತ್ತು ವಿಷನ್.ಎಕ್ಸ್ ಪರಿಕಲ್ಪನೆಗಳಲ್ಲಿ ಪ್ರತಿಯೊಂದೂ ಮಹೀಂದ್ರಾದ ಭವಿಷ್ಯ ಸಿದ್ಧ ಎನ್‌ಯು_ಐಕ್ಯೂ ಪ್ಲಾಟ್‌ಫಾರ್ಮ್‌ ನ ವಿಶಿಷ್ಟ ಗುಣವನ್ನು ಪ್ರತಿನಿಧಿಸುತ್ತವೆ. ಈ ಪರಿಕಲ್ಪನೆಗಳು ಜಾಗತಿಕ ಪ್ರೇಕ್ಷಕರಿಗೆ ಅತ್ಯುತ್ಕೃಷ್ಟ, ಎಲ್ಲಾ ಭೂಪ್ರದೇಶಕ್ಕೂ ಸಲ್ಲುವ ಸಾರಿಗೆ ವ್ಯವಸ್ಥೆಯನ್ನು ಮರು ರೂಪಿಸುವ ಮಹೀಂದ್ರಾದ ಬದ್ಧತೆಯನ್ನು ಸಾರುತ್ತದೆ. ಬಲವಾದ ಬ್ರಾಂಡ್ ಪರಂಪರೆಯನ್ನು ಅತ್ಯಾಧುನಿಕ, ವಿಶಿಷ್ಟ ವಿನ್ಯಾಸದೊಂದಿಗೆ ಸಂಯೋಜಿಸುತ್ತವೆ. ವಿಷನ್.ಟಿ ಮತ್ತು ವಿಷನ್.ಎಸ್ಎಕ್ಸ್ ಟಿ ಬಾರ್ನ್ ಐಕಾನಿಕ್ ಗುಣ, ವಿಷನ್.ಎಸ್ ಸ್ಪೋರ್ಟಿ ಸಾಲಿಡಿಟಿ ಗುಣ, ಮತ್ತು ವಿಷನ್.ಎಕ್ಸ್ ನ ಸ್ಕ್ಲಪ್ಚರಲ್ ಅಥ್ಲೆಟಿಸಮ್‌ ಗುಣವನ್ನು ಹೊಂದಿದ್ದು, ಪ್ರತಿಯೊಂದು ಮಾದರಿಯನ್ನು ಸ್ಪಷ್ಟವಾದ, ವಿಶಿಷ್ಟ ವ್ಯಕ್ತಿತ್ವದೊಂದಿಗೆ ರೂಪಿಸಲಾಗಿದೆ. ಮುಂಬೈನ ಮಹೀಂದ್ರಾ ಇಂಡಿಯಾ ಡಿಸೈನ್ ಸ್ಟುಡಿಯೋ (ಎಂಐಡಿಎಸ್) ಮತ್ತು ಯುಕೆಯ ಬ್ಯಾನ್‌ಬರಿಯ ಮಹೀಂದ್ರಾ ಅಡ್ವಾನ್ಸ್‌ ಡ್ ಡಿಸೈನ್ ಯೂರೋಪ್ (ಎಂಎಡಿಇ) ಸಹಯೋಗದೊಂದಿಗೆ ಅಭಿವೃದ್ಧಿಪಡಿಸಲಾದ ಈ ನಾಲ್ಕು ಪರಿಕಲ್ಪನೆಗಳು, ಕಾಲಾತೀತ ಬ್ರಾಂಡ್ ಕ್ಯೂಗಳನ್ನು ಆಧುನಿಕ, ಭವಿಷ್ಯ-ಕೇಂದ್ರಿತ ಹೊಸತನದೊಂದಿಗೆ ಸಮತೋಲನಗೊಳಿಸುವ ಬ್ರಾಂಡ್‌ ನ ಅಭಿವೃದ್ಧಿ ಹೊಂದುತ್ತಿರುವ ವಿನ್ಯಾಸ ಭಾಷೆಗೆ ಸಾಕ್ಷಿಯಾಗಿವೆ.

57

ಮಹೀಂದ್ರಾ ರಿಸರ್ಚ್ ವ್ಯಾಲಿಯಲ್ಲಿ ಎಂಜಿನಿಯರಿಂಗ್ ಮಾಡಲಾದ ಈ ಪರಿಕಲ್ಪನೆಗಳನ್ನು 2027ರಿಂದ ಉತ್ಪಾದನೆ ಮಾಡಲಾಗುತ್ತದೆ. ಈ ಧೈರ್ಯಶಾಲಿ ತಂತ್ರದ ಮೂಲಕ ಭಾರತದಲ್ಲಿ ದೊಡ್ಡ ಪ್ರಮಾಣದ ಗ್ರಾಹಕರಿಗೆ ಉನ್ನತ ದರ್ಜೆಯ, ಐಷಾರಾಮಿ ಎಸ್‌ಯುವಿಗಳನ್ನು ತಲುಪಿಸುವ ಉದ್ದೇಶವನ್ನು ಮಹೀಂದ್ರಾ ಸಾಕಾರಗೊಳಿಸಿಕೊಳ್ಳಲಿದೆ. ಜೊತೆಗೆ ಲೆಫ್ಟ್- ಹ್ಯಾಂಡ್ ಡ್ರೈವ್ ಪ್ರದೇಶಗಳನ್ನು ಒಳಗೊಂಡಂತೆ ಜಾಗತಿಕ ಮಾರುಕಟ್ಟೆಗಳಲ್ಲಿ ಪ್ರೀಮಿಯಂ ಎಸ್‌ಯುವಿ ವಿಭಾಗದಲ್ಲಿ ಸಂಚಲನ ಮೂಡಿಸಲಿದೆ.

67

ಎನ್‌ಯು_ಐಕ್ಯೂ ಪ್ಲಾಟ್ ಫಾರ್ಮ್ ಜಾಗತಿಕ ಮಟ್ಟದ ಮಹೀಂದ್ರಾ ಎಸ್‌ಯುವಿಗಳ ಭವಿಷ್ಯವನ್ನು ರೂಪಿಸುವ ಒಂದು ಕಾರ್ಯತಂತ್ರದ ರೂಪುರೇಷೆಯಾಗಿದೆ ಎಂದು ಮಹೀಂದ್ರ ವ್ಯವಸ್ಥಾಪಕ ನಿರ್ದೇಶಕ ವೇಲುಸಾಮಿ ಹೇಳಿದ್ದಾರೆ. ಮಾಡ್ಯುಲರ್, ಮಲ್ಟಿ-ಎನರ್ಜಿ ಆರ್ಕಿಟೆಕ್ಚರ್‌ ನಮ್ಮ ಎಸ್‌ಯುವಿ ಡಿಎನ್ಎಗೆ ನಿಷ್ಠವಾಗಿರಲಿದೆ ಮತ್ತು ವಿವಿಧ ರೀತಿಯ ವಿನ್ಯಾಸ ಮತ್ತು ಪವರ್‌ ಟ್ರೇನ್‌ ಗಳಾದ್ಯಂತ ಹೊಸತನವನ್ನು ಒದಗಿಸುವ ಸಾಮರ್ಥ್ಯವನ್ನು ನೀಡುತ್ತದೆ. ಹೊಸ ರೀತಿಯ ಮಾರ್ಗಗಳನ್ನು ಹಾಕಿಕೊಡಲು ವಿನ್ಯಾಸಗೊಳಿಸಲಾದ ಎನ್‌ಯು_ಐಕ್ಯೂ, ನಮ್ಮ ಮುಂದಿನ ತಲೆಮಾರಿನ ಎಸ್‌ಯುವಿಗಳಿಗೆ ಆಧಾರವಾಗಿರಲಿದೆ. ಇದು ಗ್ರಾಹಕರನ್ನು ಕಾಂಪ್ರೊಮೈಸ್‌ ಮಾಡಿಕೊಳ್ಳುವ ತೊಂದರೆಯಿಂದ ಮುಕ್ತಗೊಳಿಸುವ ಮತ್ತು ನಿಜವಾಗಿಯೂ ಆಕರ್ಷಕ, ಪ್ರೀಮಿಯಂ ಕೋರ್ ಎಸ್‌ಯುವಿಗಳನ್ನು ಮುಖ್ಯವಾಹಿನಿಯಲ್ಲಿ ಒದಗಿಸುವ ಹೊಸ ಕಾಲದ ಆರಂಭವನ್ನು ಸೂಚಿಸುತ್ತದೆ ಎಂದಿದ್ದಾರೆ.

77

ಮುಂಬೈ ಮತ್ತು ಬ್ಯಾನ್‌ಬರಿಯಲ್ಲಿರುವ ನಮ್ಮ ಜಾಗತಿಕ ಡಿಸೈನ್ ಸ್ಟುಡಿಯೋಗಳಲ್ಲಿ ವಿನ್ಯಾಸಗೊಳಿಸಲಾದ ಎನ್‌ಯು_ಐಕ್ಯೂ ಎಸ್‌ಯುವಿಗಳು, ನಮ್ಮ ಹಾರ್ಟ್‌ಕೋರ್ ವಿನ್ಯಾಸ ತತ್ವದ ಹೊಸ ಅಧ್ಯಾಯದ ಆರಂಭವನ್ನು ತೋರಿಸುತ್ತದೆ ಎಂದು ಮಹೀಂದ್ರ ಡಿಸೈನರ್ ಪ್ರತಾಪ್ ಬೋಸ್ ಹೇಳಿದ್ದಾರೆ. ಉತ್ತಮ ವಿನ್ಯಾಸವು ಜನರ ಮತ್ತು ಅವರ ವಾಹನಗಳ ನಡುವೆ ಭಾವನಾತ್ಮಕ ಬಂಧವನ್ನು ಸೃಷ್ಟಿಸಬೇಕು ಎಂಬ ಮೂಲ ಸಿದ್ಧಾಂತದ ಮೇಲೆ ಇವು ನಿರ್ಮಾಣಗೊಂಡಿದ್ದು, ಈ ಕ್ಷೇತ್ರದಲ್ಲಿನ ಭವಿಷ್ಯವನ್ನು ರೂಪಿಸಲು ಇದನ್ನು ಮರುಪರಿಕಲ್ಪನೆ ಮಾಡಲಾಗಿದೆ. ‘ಅಪೊಸಿಟ್ಸ್ ಅಟ್ರಾಕ್ಟ್’ ಎಂಬ ಥೀಮ್‌ ನ ಆಧಾರದ ಮೇಲೆ, ವಿರೋಧಾತ್ಮಕ ಅಂಶಗಳ ಸಂಯೋಜನೆಯು ಭಾವಾಭಿವ್ಯಕ್ತಿಯ ಹೊಸ ವಿನ್ಯಾಸ ಭಾಷೆಯನ್ನು ಸೃಷ್ಟಿಸಲಾಗಿದ್ದು, ಈ ಪರಿಕಲ್ಪನೆಗಳು ವಿಶ್ವದ ಯಾವುದೇ ಭೂಪ್ರದೇಶದಲ್ಲಿ ಅಡ್ವೆಂಚರ್, ಆತ್ಮವಿಶ್ವಾಸ ಮತ್ತು ಸಂಪರ್ಕವನ್ನು ಹೆಚ್ಚಿಸುವ ಅನುಭವಗಳನ್ನು ರೂಪಿಸುವ ಭರವಸೆ ನೀಡುತ್ತವೆ” ಎಂದು ಹೇಳಿದರು.

Read more Photos on
click me!

Recommended Stories