ಅಗ್ಗದ ಬೆಲೆಯ ಎಸ್‌ಯುವಿ ಕಾರು, 5.99 ಲಕ್ಷ ರೂಗೆ ನಿಸಾನ್ ಮ್ಯಾಗ್ನೈಟ್ ಫೇಸ್‌ಲಿಫ್ಟ್ ಲಾಂಚ್!

First Published | Oct 4, 2024, 4:10 PM IST

ಭಾರತದ ಎಸ್‌ಯುವಿ ಕಾರುಗಳ ಪೈಕಿ ಅತೀ ಕಡಿಮೆ ಬೆಲೆಯ ಕಾರು ಬಿಡುಗಡೆಯಾಗಿದೆ. ನಿಸಾನ್ ಮ್ಯಾಗ್ನೈಟ್ ಫೇಸ್‌ಲಿಫ್ಟ್ ವೇರಿಯೆಂಟ್ ಕಾರು ಬಿಡುಗಡೆಯಾಗಿದ್ದು, ಬೆಲೆ ಕೇವಲ 5.99 ಲಕ್ಷ ರೂಪಾಯಿ. 

ಎಸ್‌ಯುವಿ ಕಾರು ಖರೀದಿಸಬೇಕೆಂಬ ಹಲವರ ಕನಸು ನನಸು ಮಾಡಲು ಇದೀಗ ನಿಸಾನ್ ನಿಮಗೆ ಅತ್ಯುತ್ತಮ ಆಯ್ಕೆ ನೀಡುತ್ತಿದೆ. ಮಾರುಕಟ್ಟೆಯಲ್ಲಿರುವ ನಿಸಾನ್ ಮ್ಯಾಗ್ನೈಟ್ ಕಾರು ಇದೀಗ ಹೊಸತನ, ಹೊಸ ವಿನ್ಯಾಸ, ಹೆಚ್ಚುವರಿ ಫೀಚರ್ ಜೊತೆ ಫೇಸ್‌ಲಿಫ್ಟ್ ಅವತಾರದಲ್ಲಿ ಬಿಡುಗಡೆಯಾಗಿದೆ. ಇದರ ಆರಂಭಿಕ ಬೆಲೆ ಕೇವಲ 5.99 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ) ಮಾತ್ರ.  ಭಾರತದಲ್ಲಿನ ಅತೀ ಅಗ್ಗದ ಬೆಲೆಯ ಎಸ್‌ಯುವಿ ಅನ್ನೋ ಹೆಗ್ಗಳಿಕೆಗೆ ಈ ಕಾರು ಪಾತ್ರವಾಗಿದೆ.

2020ರಲ್ಲಿ ನಿಸಾನ್ ಮ್ಯಾಗ್ನೈಟ್ ಕಾರು ಬಿಡುಗಡೆಯಾಗಿತ್ತು. ಬಳಿಕ ಹಲವು ಅಪ್‌ಡೇಟ್ ಕಂಡಿದೆ. ಇದೀಗ ನಿಸಾನ್ ಫೇಸ್‌ಲಿಫ್ಟ್ ಕಾರು ಬಿಡುಗಡೆಯಾಗಿದೆ. ಇದು ಸಬ್‌ಕಾಂಪಾಕ್ಟ್ ಎಸ್‌ಯುವಿ ಕಾರು. ನೀವು ಮಾರುತಿ ಸ್ವಿಫ್ಟ್ ಕಾರಿಗೆ ಹೋಲಿಸಿದರೆ ಮ್ಯಾಗ್ನೈಟ್ ಫೇಸ್‌ಲಫ್ಟ್ ಕಾರಿನ ಬೆಲೆಯಲ್ಲಿ ಭಾರಿ ವ್ಯತ್ಯಸವಿದೆ. ಇಷ್ಟೇ ಅಲ್ಲ ಕಡಿಮೆ ಬೆಲೆಯಲ್ಲೂ ಲಭ್ಯವಿದೆ.

Latest Videos


ನಿಸಾನ್ ಮ್ಯಾಗ್ನೈಟ್ ಫೇಸ್‌ಲಫ್ಟ್ ಕಾರಿನಲ್ಲಿ ಕೆಲ ಬದಲಾವಣೆ ಮಾಡಲಾಗಿದೆ. ಪ್ರಮುಖವಾಗಿ ಮುಂಭಾಗದ ಬಂಪರ್ ಹಾಗೂ ಗ್ರಿಲ್ ವಿನ್ಯಾಸ ಬದಲಿಸಲಾಗಿದೆ. ಇದು ಮತ್ತಷ್ಟು ಆಕರ್ಷಕವಾಗಿದೆ. ಜೊತೆಗೆ ಅಗ್ರೀಸ್ಸೀವ್ ಲುಕ್ ನೀಡಿದೆ. ಬೂಮರಾಂಗ್ ಶೈಲಿಯಲ್ಲಿ ಡಿಆರ್‌ಎಲ್ ಬಳಸಲಾಗಿದೆ. ಆಟೋಮ್ಯಾಟಿಕ್ ಎಲ್ಇಡಿ ಹೆಡ್‌ಲೈಟ್ಸ್ ಹಾಗೂ ಬೈ ಫಂಕ್ಷನಲ್ ಪ್ರೊಜೆಕ್ಟರ್ ಬಳಸಲಾಗಿದೆ.
 

16 ಇಂಚಿನ್ ಅಲೋಯ್ ವ್ಹೀಲ್, ರೇರ್ ಬಂಪರ್ ವಿನ್ಯಾಸದಲ್ಲೂ ಬದಲಾವಣೆ ಮಾಡಲಾಗಿದೆ. ಒಳಗಿನ ಕ್ಯಾಬಿನ್ ಕೆಲ ಬದಲಾವಣೆ ಇದೆ. ಆದರೆ ಪ್ರಸಕ್ತ ಮಾರುಕಟ್ಟೆಯಲ್ಲಿರುವ ಮ್ಯಾಗ್ನೈಟ್ ಕಾರಿಗೂ ಫೇಸ್‌ಲಿಫ್ಟ್ ಕಾರಿಗೂ ಹೆಚ್ಚಿನ ವ್ಯತ್ಯಾಸವಿಲ್ಲ. ಆದರೆ ಮೊದಲ ನೋಟಕ್ಕೆ ರೀಫ್ರೇಶನ್ ಅನುಭವ ನೀಡಲಿದೆ. ನೂತನ ಆರ್‌ವಿಎಂ, ವೈಯರ್‌ಲೆಸ್ ಚಾರ್ಜರ್ ಸೇರಿ ಕೆಲ ಫೀಚರ್ಸ್ ಇದರಲ್ಲಿದೆ.
 

ಆ್ಯಪಲ್ ಕಾರ್‌ಪ್ಲೇ ಹಾಗೂ ಆ್ಯಂಡ್ರಾಯ್ಡ್ ಆಟೋ ಪ್ಲೇ ಇನ್‌ಫೋಟೈನ್ಮೆಂಟ್ ಸಿಸ್ಟಮ್, 7 ಇಂಚಿನ ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್, ಸಿಂಗಲ್ ಪ್ಯಾನ್ ಎಲೆಕ್ಟ್ರಿಕ್ ಸನ್‌ರೂಫ್ ಹೊಂದಿದೆ. ಭಾರತದಲ್ಲೇ ಉತ್ಪಾದನೆಯಾಗುವ ನಿಸಾನ್ ಮ್ಯಾಗ್ನೈಟ್ ಫೇಸ್‌ಲಿಫ್ಟ್ 4 ಸ್ಟಾರ್ ಸೇಫ್ಟಿ ಹೊಂದಿದೆ. 5.99 ಲಕ್ಷ ರೂಪಾಯಿಯಿಂದ ಆರಂಭಗೊಂಡ ಟಾಪ್ ಮಾಡೆಲ್ ಬೆಲೆ 11.50 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ)ವರೆಗಿದೆ. 
 

6 ಏರ್‌ಬ್ಯಾಗ್, ಹೈಸ್ಪೀಡ್ ಅಲರ್ಟ್ ಸಿಸ್ಟಮ್, ಎಮರ್ಜೆನ್ಸಿ ಸ್ಟಾಪ್ ಸಿಗ್ನಲ್, ಎಬಿಎಸ್, ಇಬಿಡಿ, ಟ್ರಾಕ್ಷನ್ ಕಂಟ್ರೋಲ್, ಹಿಲ್ ಅಸಿಸ್ಟ್ ಸೇರಿದಂತೆ ಹಲವು ಸುರಕ್ಷತಾ ಫೀಚರ್ಸ್ ಲಭ್ಯವಿದೆ. ಟರ್ಬೋ ಪೆಟ್ರೋಲ್ 3 ಸಿಲಿಂಡರ್ ಎಂಜಿನ್ ಕಾರು 98bhp ಪವರ್ ಹಾಗೂ 160ಎನ್‌ಎಂ ಟಾರ್ಕ್ ಉತ್ಪಾದಿಸಲಿದೆ.
 

click me!