ಕೈಗೆಟುಕುವ ದರ, 30 ಕಿ.ಮೀಗೂ ಅಧಿಕ ಮೈಲೇಜ್, ಇಲ್ಲಿದೆ ಬಜೆಟ್ ಫ್ರೆಂಡ್ಲಿ ಕಾರು ಲಿಸ್ಟ್!

First Published | Oct 3, 2024, 3:51 PM IST

ಅತೀ ಕಡಿಮೆ ಬೆಲೆ ಹಾಗೂ ಗರಿಷ್ಠ ಮೈಲೇಜ್ ನೀಡಬಲ್ಲ ಕಾರುಗಳು ಭಾರತದಲ್ಲಿ ಲಭ್ಯವಿದೆ. ಈ ಕಾರುಗಳು ಖರೀದಿಗೆ ಹೆಚ್ಚಿನ ಡೌನ್‌ಪೇಮೆಂಟ್ ಬೇಕಿಲ್ಲ, ಜೊತೆಗೆ ಇದರ ನಿರ್ವಹಣೆ ಕೂಡ ಸುಲಭ. ಈ ರೀತಿ ಕೈಗೆಟುಕುವ ದರದಲ್ಲಿ, ಗರಿಷ್ಠ ಮೈಲೇಜ್ ನೀಡುವ ಕಾರಿನ ಪಟ್ಟಿ ಇಲ್ಲಿದೆ.
 

ಎಲ್ಲಾ ವಸ್ತುಗಳ ಬೆಲೆ ದುಬಾರಿಯಾಗಿದೆ. ಇದಕ್ಕೆ ಕಾರುಗಳು ಹೊರತಾಗಿಲ್ಲ. ಆದರೆ ಭಾರತದಲ್ಲಿ ಈಗಲೂ ಕೈಗೆಟುಕುವ ದರದಲ್ಲಿ ಕಾರುಗಳು ಲಭ್ಯವಿದೆ. ಭಾರತದ ಮಧ್ಯಮ ವರ್ಗದ ಕಾರು ಕನಸು ನನಸಾಗಿಸಲು ಈ ಕಾರುಗಳು ನೆರವಾಗುತ್ತದೆ. ಈ ಕಾರುಗಳ ಖರೀದಿ ಮಾತ್ರವಲ್ಲ ನಿರ್ವಹಣೆ ಕೂಡ ಸುಲಭ. ಕಾರಣ ಅತೀ ಹೆಚ್ಚಿನ ಮೈಲೇಜ್ ಕೂಡ ಈ ಕಾರುಗಳು ನೀಡುತ್ತಿದೆ. ಈ ರೀತಿ ಅತೀ ಕಡಿಮೆ ಬೆಲೆ, ಗರಿಷ್ಠ ಮೈಲೇಜ್ ನೀಡಬಲ್ಲ ಕಾರುಗಳ ಮಾಹಿತಿ ಇಲ್ಲಿದೆ.

ಮಾರುತಿ ಸುಜುಕಿ ಅಲ್ಟೋ ಕೆ10 ಕಾರು 3.99 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ) ಬೆಲೆಯಿಂದ ಆರಂಭಗೊಳ್ಳುತ್ತಿದೆ. ಭಾರತದಲ್ಲಿ ಅತೀ ಹೆಚ್ಚು ಮಾರಾಟವಾಗುತ್ತಿರುವ ಸಣ್ಣ ಕಾರು ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿರುವ ಅಲ್ಕೋ ಕೆ10 ಕಾರಿನ ಸಿಎನ್‌ಜಿ ಮಾಡೆಲ್ 33.85 ಕಿ.ಮೀ ಮೈಲೇಜ್ ನೀಡಲಿದೆ. ಇದರ ನಿರ್ವಹಣೆ ಸರ್ವೀಸ್ ಕೂಡ ಅಷ್ಟೇ ಸುಲಭವಾಗಿ ನಿರ್ವಹಿಸಲು ಸಾಧ್ಯವಿದೆ.

Tap to resize

ಭಾರತದಲ್ಲಿ ಮಧ್ಯಮ ವರ್ಗದ ಕಟುಂಬ ಹಾಗೂ ಯುವಕರ ನೆಚ್ಚಿನ ಕಾರಾಗಿ ಹೊರಹೊಮ್ಮಿರುವ ಮಾರುತಿ ಸುಜುಕಿ ಸ್ವಿಫ್ ಕಾರು ಮಾರಾಟದಲ್ಲೂ ದಾಖಲೆ ಬರೆದಿದೆ. ಮಾರುತಿ ಸಿಫ್ಟ್ ಕಾರಿನ ಬೆಲೆ 6.49 ಲಕ್ಷ ರೂಪಾಯಿಯಿಂದ ಆರಂಭಗೊಂಡು ಗರಿಷ್ಠ 9.60ಲಕ್ಷ ರೂಪಾಯಿ(ಎಕ್ಸ್ ಶೋ ರೂಂ)ಬೆಲೆಯಲ್ಲಿ ಲಭ್ಯವಿದೆ. ಸ್ವಿಫ್ಟ್ ಸಿಎನ್‌ಜಿ ವೇರಿಯೆಂಟ್ ಕಾರು 32.85 ಕಿ.ಮೀ ಮೈಲೇಜ್ ನೀಡಲಿದೆ.

ಮಾರುತಿ ಸುಜುಕಿ ವ್ಯಾಗನ್ ಆರ್ ಕಾರು ಭಾರತದಲ್ಲಿ ಅತೀ ಹೆಚ್ಚು ಮಾರಾಟವಾಗುತ್ತಿರುವ ಕಾರು ಅನ್ನೋ ದಾಖಲೆ ಬರೆದಿದೆ. ಕುಟುಂಬಕ್ಕೆ ಹೇಳಿ ಮಾಡಿಸಿದ ಕಾರು ಇದಾಗಿದೆ. ಬೆಲೆ 5.55 ಲಕ್ಷ ರೂಪಾಯಿಯಿಂದ ಆರಂಭಗೊಳ್ಳುತ್ತಿದ್ದು, ಟಾಪ್ ಮಾಡೆಲ್ ಬೆಲೆ 7.33 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ)ಬೆಲೆಯಲ್ಲಿ ಲಭ್ಯವಿದೆ. ವ್ಯಾಗನ್ಆರ್ ಸಿಎನ್‌ಜಿ ವೆರಿಯೆಂಟ್ ಕಾರಿನ ಮೈಲೇಜ್ 33.48 ಕಿ.ಮಿ. 

ಹೊಸ ರೂಪದಲ್ಲಿ ಬಿಡುಗಡೆಯಾಗಿರುವ ಮಾರುತಿ ಸುಜುಕಿ ಸೆಲೆರಿಯೋ ಕಾರು ಸಣ್ಣ ಕಾರಾಗದೂರ ಹೆಚ್ಚಿನ ಸ್ಥಳವಕಾಶ ನೀಡಲಾಗಿದೆ. ಆಕರ್ಷಕ ವಿನ್ಯಾಸ, ಪರ್ಫಾಮೆನ್ಸ್ ಕೂಡ ಉತ್ತಮವಾಗಿದೆ. ಈ ಕಾರಿನ ಬೆಲೆ 5.37 ಲಕ್ಷ ರೂಪಾಯಿಯಿಂದ 7.05 ಲಕ್ಷ ರೂಪಾಯಿ (ಎಕ್ಸ್ ಶೋ ರೂಂ). ಇದರ ಸಿಎನ್‌ಜಿ ಕಾರಿನ ಮೈಲೇಜ್ 34.43 ಕಿ.ಮೀ. ಮಾರುತಿ ಕಾರುಗಳ ಪೈಕಿ ಸೆಲೆರಿಯೋ ಸಿಎನ್‌ಜಿ ಗರಿಷ್ಠ ಮೈಲೇಜ್ ನೀಡುತ್ತಿದೆ.

ಮಾರುತಿ ಬೆಲೆನೋ ಕಾರಿನ ಬೆಲೆ 6.66 ಲಕ್ಷ ರೂಪಾಯಿಯಿಂದ 8.83 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ) ಬೆಲೆಯಲ್ಲಿ ಲಭ್ಯವಿದೆ. ಸಿಎನ್‌ಜಿ ವೇರಿಯೆಟ್ ಕಾರಿನ ಮೈಲೇಜ್ 30.61 ಕಿ.ಮಿ. ಇನ್ನು ಮಾರುತಿ ಸ್ವಿಫ್ಟ್ ಡಿಸೈರ್ ಕಾರಿನ ಬೆಲೆ 6.57 ಲಕ್ಷ ರೂಪಾಯಿಯಿಂದ 9.34 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ) ಬೆಲೆಯಲ್ಲಿ ಲಭ್ಯವಿದೆ. ಇದರ ಸಿಎನ್‌ಡಿ ವೇರಯೆಂಟ್ ಕಾರಿನ ಮೈಲೇಜ್ 32.12 ಕಿ.ಮಿ. 
 

Latest Videos

click me!