ಭಾರತದಲ್ಲಿ ಹಲವು SUV ಕಾರುಗಳಿದೆ. ಆದರೆ ಇತ್ತೀಚೆಗೆ ಬಿಡುಗಡೆಯಾದ ನಿಸಾನ್ ಮ್ಯಾಗ್ನೈಟ್ ಕಾರಿಗೆ ಬಾರಿ ಬೇಡಿಕೆ ವ್ಯಕ್ತವಾಗುತ್ತಿದೆ. ಇದಕ್ಕೆ ಹಲವು ಕಾರಣಗಳಿವೆ.
ಈ ಬೇಡಿಕೆ ನಡುವೆ ನಿಸಾನ್ ಮ್ಯಾಗ್ನೈಟ್ ಕಾರಿನ ಕ್ರಾಶ್ಟ್ ಟೆಸ್ಟ್ ರಿಸಲ್ಟ್ ಬಹಿರಂಗವಾಗಿದೆ. ಸುರಕ್ಷತಾ ಫಲಿತಾಂಶದಲ್ಲಿ ಮ್ಯಾಗ್ನೈಟ್ ಕಾರು 4 ಸ್ಟಾರ್ ರೇಟಿಂಗ್ ಪಡೆದುಕೊಂಡಿದೆ.
ಸುರಕ್ಷತಾ ಫಲಿತಾಂಶದಲ್ಲಿ ಗರಿಷ್ಠ ರೇಟಿಂಗ್ 5 ಸ್ಟಾರ್. ಇದೀಗ 4 ಸ್ಟಾರ್ ರೇಟಿಂಗ್ ಪಡೆಯೋ ಮೂಲಕ ನಿಸಾನ್ ಮ್ಯಾಗ್ನೈಟ್ ಭಾರತದ ಸುರಕ್ಷತೆಯ ಕಾರು ಅನ್ನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ.
ವಯಸ್ಕರ ಪ್ರಯಾಣ ಹಾಗೂ ಮಕ್ಕಳ ಪ್ರಯಾಣದಲ್ಲಿ ಒಟ್ಟು 4 ಸ್ಟಾರ್ ರೇಟಿಂಗ್ ಪಡೆದಿದೆ. ಭಾರತದಲ್ಲಿ ಮಾರಾಟವಾಗೋ ವಾಹನಗಳಿಗೆ ಕನಿಷ್ಠ ಸುರಕ್ಷತೆ ನೀಡಬೇಕಾದ ಜವಾಬ್ದಾರಿ ಎಲ್ಲಾ ಆಟೋಮೊಬೈಲ್ ಕಂಪನಿಗಳಿಗಿದೆ.
4 ಸ್ಟಾರ್ ರೇಟಿಂಗ್ ಜೊತೆಗೆ ನಿಸಾನ್ ಮ್ಯಾಗ್ನೈಟ್ ಕಾರಿನಲ್ಲಿ ABS ಬ್ರೇಕಿಂಗ್, EBD, ಡ್ಯುಯೆಲ್ ಫ್ರಂಟ್ ಏರ್‌ಬ್ಯಾಗ್ಸ್, ರೇರ್ ಪಾರ್ಕಿಂಗ್ ಸೆನ್ಸಾರ್, ಸೀಟ್‌ಬೆಲ್ಟ್ ರಿಮೈಂಡರ್ ಸೇರಿದಂತೆ ಹಲವು ಸುರಕ್ಷತಾ ಫೀಚರ್ಸ್ ಈ ಕಾರಿನಲ್ಲಿದೆ.
ನಿಸಾನ್ ಮ್ಯಾಗ್ನೈಟ್ 1.0 ಲೀಟರ್ ಪೆಟ್ರೋಲ್ ಎಂಜಿನ್ ಹಾಗೂ 1.0 ಲೀಟರ್ ಟರ್ಬೋ ಪೆಟ್ರೋಲ್ ಎಂಜಿನ್ ಹೊಂದಿದೆ. 5 ಸ್ಪೀಡ್ ಟ್ರಾನ್ಸ್‌ಮಿಶನ್ ಹಾಗೂ ಸಿವಿಟಿ ಆಟೋಮ್ಯಾಟಿಕ್ ಟ್ರಾನ್ಸ್‌ಮಿಶನ್ ಹೊಂದಿದೆ.
ನಿಸಾನ್ ಮ್ಯಾಗ್ನೈಟ್ ಕಾರಿನ ಬೆಲೆ 5.49 ಲಕ್ಷ ರೂಪಾಯಿ (ಎಕ್ಸ್ ಶೋ ರೂಂ)ನಿಂದ ಆರಂಭಗೊಳ್ಳುತ್ತಿದ್ದು, 9.45 ಲಕ್ಷ ರೂಪಾಯಿ (ಎಕ್ಸ್ ಶೋರೂಂ ) ಗರಿಷ್ಠ ಬೆಲೆಯಾಗಿದೆ.