ಫೋರ್ಡ್ ಇಕೋಸ್ಪೋರ್ಟ್ ಹೊಸ SE ವೇರಿಯೆಂಟ್ ಬಿಡುಗಡೆಗೆ ಸಜ್ಜಾಗಿದೆ. ನೂತನ ಇಕೋಸ್ಪೋರ್ಟ್ ಹೊಸ ವಿನ್ಯಾಸ ಹಾಗೂ ಹೆಚ್ಚುವರಿ ಫೀಚರ್ಸ್ ಹೊಂದಿದೆ.
undefined
ಹೊಸ ಇಕೋಸ್ಪೋರ್ಟ್ ಮಾಡೆಲ್ ಕಾರಿನಲ್ಲಿ ಹಿಂಭಾಗದ ಡೋರ್‌ನಲ್ಲಿ ಅಂಟಿಕೊಂಡಿದ್ದ ಸ್ಪೇರ್ ವೀಲ್ ಇರುವುದಿಲ್ಲ. ಹೀಗಾಗಿ ಹಿಂಭಾಗದ ವಿನ್ಯಾಸದಲ್ಲಿ ಬದಲಾವಣೆ ಮಾಡಲಾಗಿದೆ.
undefined
ಟೈಲ್‌ಗೇಟ್ ಮಧ್ಯಬಾಗದಲ್ಲಿ ನಂಬರ್ ಪ್ಲೇಟ್ ಅಳವಡಿಸಲು ಅವಕಾಶ ನೀಡಲಾಗಿದೆ. ಈ ಹಿಂದೆ ಕೆಲಭಾಗದಲ್ಲಿ ನಂಬರ್ ಪ್ಲೇಟ್ ಅವಕಾಶವಿತ್ತು. ಹಿಂಭಾಗದಲ್ಲಿ ಸೈಡ್ ಡೋರ್ ನಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ
undefined
ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಹೊಸ ಇಕೋಸ್ಪೋರ್ಟ್ ವಿನ್ಯಾಸ ಮಾಡಲಾಗಿದೆ. ಹಿಂಭಾಗದ ಸ್ಪೇರ್ ಮೌಂಟೆಟ್ ವೀಲ್ ಬದಲು ಮತ್ತೊಂದು ಸ್ಪೇರ್ ವೀಲ್ ಕೂಡ ಈ ಕಾರಿನಲ್ಲಿರುವುದಿಲ್ಲ. ಇದು ಗ್ರಾಹಕರ ಆಯ್ಕೆಗೆ ಬಿಡಲಾಗಿದೆ.
undefined
ಆದರೆ ಕಾರಿನ ಟೈಯರ್‌ಗಳು ಟ್ಯೂಬ್ಲೆಸ್ ಆಗಿದ್ದು, ಟೈಯರ್ ಪ್ರೆಶರ್ ಮಾನಿಟರ್, ಪಂಚರ್ ಟೂಲ್ ಕಿಟ್, ಈ ಕಾರಿನಲ್ಲಿದೆ. ಇದು ಫ್ಯಾಕ್ಟರಿ ಫಿಟೆಡ್ ಆಗಿದೆ.
undefined
ಕಾರಿನ ಬೆಲೆ ಕೂಡ ಕಡಿಮೆಯಾಗಲಿದೆ ಎಂದು ಫೋರ್ಡ್ ಇಂಡಿಯಾ ಹೇಳಿದೆ. ಸದ್ಯ ಫೋರ್ಡ್ ಇಕೋಸ್ಪೋರ್ಟ್ ಕಾರಿನ ಬೆಲೆ 7.99 ಲಕ್ಷ ರೂಪಾಯಿಯಿಂದ 11.49 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ).
undefined
ಇಕೋಸ್ಪೋರ್ಟ್ ಕಾರು 1.5 ಲೀಟರ್ ಪೆಟ್ರೋಲ್ ಎಂಜಿನ್ ಹಾಗೂ 1.5 ಲೀಟರ್ ಡೀಸೆಲ್ ಎಂಜಿನ್ ವೇರಿಯೆಂಟ್ ಲಭ್ಯವಿದೆ. 5 ಸ್ಪೀಡ್ ಮ್ಯಾನ್ಯುಯೆಲ್ ಹಾಗೂ 6 ಸ್ಪೀಡ್ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಶನ್ ಲಭ್ಯವಿದೆ.
undefined
ಫೋರ್ಡ್ ಇಕೋಸ್ಪೋರ್ಟ್ ಕಾರು, ಮಾರುತಿ ಬ್ರೆಜಾ, ಟಾಟಾ ನೆಕ್ಸಾನ್, ಮಹೀಂದ್ರ XUV300, ಕಿಯಾ ಸೊನೆಟ್, ನಿಸಾನ್ ಮ್ಯಾಗ್ನೈಟ್, ರೆನಾಲ್ಟ್ ಕೈಗರ್ ಸೇರಿದಂತೆ ಹಲವು ಸಬ್ ಕಾಂಪಾಕ್ಟ್ SUV ಕಾರುಗಳಿಗೆ ಪ್ರತಿಸ್ಪರ್ಧಿಯಾಗಿದೆ.
undefined