ಅತ್ಯಾಕರ್ಷಕ ಟಾಟಾ ಸಿಯೆರಾ ಕಾರಿನ ಬೆಲೆ ಎಷ್ಟು? 11 ಸಾವಿರಕ್ಕೆ ಅನ್‌ಅಫೀಶಿಯಲ್ ಬುಕಿಂಗ್ ಆರಂಭ

Published : Nov 17, 2025, 04:21 PM IST

ಅತ್ಯಾಕರ್ಷಕ ಟಾಟಾ ಸಿಯೆರಾ ಕಾರಿನ ಬೆಲೆ ಎಷ್ಟು? 11 ಸಾವಿರಕ್ಕೆ ಅನ್‌ಅಫೀಶಿಯಲ್ ಬುಕಿಂಗ್ ಆರಂಭ , ಜನ ಕಾರು ಬುಕಿಂಗ್ ಮಾಡಲು ಮುಗಿ ಬೀಳುತ್ತಿದ್ದಾರೆ. ಇದರ ಫೀಚರ್, ಅತ್ಯಾಧುನಿಕ ತಂತ್ರಜ್ಞಾನ, ಸುರಕ್ಷತೆ ಜೊತೆಗೆ ಇದರ ಬೆಲೆ ಪ್ರಮುಖ ಆಕರ್ಷಕಣೆಯಾಗಿದೆ. 

PREV
15
ಟಾಟಾ ಸಿಯೆರಾ ಕಾರು

ಟಾಟಾ ಮೋಟಾರ್ಸ್ ಭಾರತದ ಕಾರು ಮಾರುಕಟ್ಟೆ ಆಳಲು ಸಜ್ಜಾಗಿದೆ. ಟಾಟಾ ಮೋಟಾರ್ಸ್ ಪ್ರತಿ ಕಾರಿಗೆ ಬಾರಿ ಬೇಡಿಕೆ ವ್ಯಕ್ತವಾಗುತ್ತಿದೆ. ಪ್ರಮುಖವಾಗಿ ಗರಿಷ್ಠ ಸುರಕ್ಷತೆ, ಆಕರ್ಷಕ ವಿನ್ಯಾಸ, ಅತ್ಯಾಧುನಿಕ ಫೀಚರ್ಸ್ ಜೊತೆಗೆ ಭಾರತದ ಹೆಮ್ಮೆಯ ಸಂಸ್ಥೆ. ಹೀಗೆ ಹಲವು ಕಾರಣಗಳಿಂದ ಟಾಟಾ ಕಾರುಗಳು ಭಾರಿ ಬೇಡಿಕೆ ಪಡೆದುಕೊಂಡಿದೆ. ಇದೀಗ ಟಾಟಾ ಬಹುನಿರೀಕ್ಷಿತ ಟಾಟಾ ಸಿಯೆರಾ ಕಾರು ಲಾಂಚ್ ಮಾಡಲು ಸಜ್ಜಾಗಿದೆ. ಈಗಾಗಲೇ ಈ ಕಾರು ಅನಾವರಣಗೊಂಡಿದೆ.

25
ಡೀಲರ್ ಬಳಿ ಬುಕಿಂಗ್ ಆರಂಭ

ಟಾಟಾ ಸಿಯೆರಾ ಕಾರಿನ ಅಧಿಕೃತ ಬುಕಿಂಗ್ ಆರಂಭಗೊಂಡಿಲ್ಲ. ಆದರೆ ಡೀಲರ್ ಬಳಿ ಈಗಾಗಲೇ ಬುಕಿಂಗ್ ಆರಂಭಗೊಂಡಿದೆ. ಕೇವಲ 11,000 ರೂಪಾಯಿ ನೀಡಿ ಕಾರು ಬುಕ್ ಮಾಡಿಕೊಳ್ಳಬಹುದು. ಬುಕಿಂಗ್ ಮಾಡಿದ ಗ್ರಾಹಕರಿಗೆ ಕಾರು ಲಾಂಚ್ ಬೆನ್ನಲ್ಲೇ ಡೆಲಿವರಿ ನೀಡಲು ತಯಾರಿಗಳು ನಡೆಯುತ್ತಿದೆ.

35
ಟಾಟಾ ಸಿಯೆರಾ ಕಾರಿನ ಬೆಲೆ ಎಷ್ಟು

ಟಾಟಾ ಸಿಯೆರಾ ಕಾರಿನ ಬೆಲೆ ಇದೀಗ ತೀವ್ರ ಕುತೂಹಲ ಕೆರಳಿಸಿದೆ. ಕಾರಣ ಇದು ರೇಂಜ್ ರೋವರ್ ಪ್ರೀಮಿಯಂ ಟಚ್ ಈ ಕಾರಿನಲ್ಲಿ ನೀಡಲಾಗಿದೆ. ಅಡಾಸ್ ಫೀಚರ್ ಸೇರಿದಂತೆ ಅತ್ಯಾಧುನಿಕ ಫೀಚರ್ಸ್ ಇದರಲ್ಲಿದೆ. ಹೀಗಾಗಿ ಇದರ ಬೆಲೆ ಕುರಿತು ಸಾಕಷ್ಟು ಚರ್ಚೆಯಾಗುತ್ತಿದೆ. ವಿಶೇಷ ಅಂದರೆ ಇದರ ಬೆಲೆ 12 ಲಕ್ಷ ರೂಪಾಯಿಯಿಂದ ಆರಂಭಗೊಳ್ಳುವ ಸಾಧ್ಯತೆ ಇದೆ. ಗರಿಷ್ಠ 20 ಲಕ್ಷ ರೂಪಾಯಿ ವರೆಗೆ ತಲುಪಲಿದೆ ಎಂದು ಅಂದಾಜಿಸಲಾಗಿದೆ.

45
ನವೆಂಬರ್ 25ಕ್ಕೆ ಟಾಟಾ ಸಿಯೆರಾ ರಸ್ತೆಗೆ

ನವೆಂಬರ್ 25ಕ್ಕೆ ಟಾಟಾ ಸಿಯೆರಾ ಕಾರಿನ ಬೆಲೆ ಸೇರದಂತೆ ಇತರ ಮಾಹಿತಿಗಳು ಬಯಲಾಗಿದೆ. ಇದೇ ವೇಳೆ ಅಫೀಶಿಯಲ್ ಬುಕಿಂಗ್ ತೆರೆದುಕೊಳ್ಳಲಿದೆ. ಆನ್‌ಲೈನ್ ಮೂಲಕ ಅಥವಾ ಡೀಲರ್ ಬಳಿ ಕಾರು ಬುಕಿಂಗ್ ಮಾಡಿಕೊಳ್ಳಬಹುದು. ಸದ್ಯ ಕೆಲ ಡೀಲರ್ಸ್ ಅನ್‌ಅಫೀಶಿಯಲ್ ಬುಕಿಂಗ್ ಆರಂಭಿಸಿದ್ದಾರೆ.

ನವೆಂಬರ್ 25ಕ್ಕೆ ಟಾಟಾ ಸಿಯೆರಾ ರಸ್ತೆಗೆ

55
ಟಾಟಾ ಸಿಯೆರಾದಲ್ಲಿ ಹಲವು ಆಯ್ಕೆ

ವಿಶೇಷ ಅಂದರೆ ಟಾಟಾ ಸಿಯೆರಾ ಪೆಟ್ರೋಲ್, ಡೀಸೆಲ್ ಹಾಗೂ ಎಲೆಕ್ಟ್ರಿಕ್ ಆಯ್ಕೆಗಳಲ್ಲಿ ಲಭ್ಯವಾಗಲಿದೆ. ಪೆಟ್ರೋಲ್ ಆಯ್ಕೆಯಲ್ಲಿ ಟರ್ಬೋ ಪೆಟ್ರೋಲ್ ಹಾಗೂ ನ್ಯಾಚ್ಯುರಲ್ ಆಸ್ಪೈರ್ಡ್ ಪೆಟ್ರೋಲ್ ಎಂಜಿನ್ ಲಭ್ಯವಾಗಲಿದೆ. ಎ1.5 ಲೀಟರ್ ಎಂಜಿನ್‌ನಲ್ಲಿ ಈ ಆಯ್ಕೆಗಳು ಲಭ್ಯವಾಗಲಿದೆ.

ಟಾಟಾ ಸಿಯೆರಾದಲ್ಲಿ ಹಲವು ಆಯ್ಕೆ

Read more Photos on
click me!

Recommended Stories