ಹ್ಯುಂಡೈನಿಂದ ಮಿನಿ ಕ್ರೇಟಾ ಕಾರು ಲಾಂಚ್, ಕೇವಲ 7.9 ಲಕ್ಷ ರೂಗೆ ಲಭ್ಯ, ಅತ್ಯಾಧುನಿಕ ತಂತ್ರಜ್ಞಾನ, ಕೈಗೆಟುಕುವ ದರದಲ್ಲಿ ಕಾರು ಲಭ್ಯವಿದೆ. ಹೊಸ ಕಾರು 8 ಬಣ್ಣ ಹಾಗೂ 8 ವೇರಿಯೆಂಟ್‌ನಲ್ಲಿ ಲಭ್ಯವಿದೆ.
ಹ್ಯುಂಡೈ ಭಾರತದಲ್ಲಿ ನಂಬಿಕಸ್ಥ ಕಾರು ಮೇಕರ್ ಆಗಿ ಹೊರಹೊಮ್ಮಿದೆ. ಮಾರುತಿ ಸುಜುಕಿ ಬಳಿಕ ಅತೀ ಹೆಚ್ಚು ಮಾರುಕಟ್ಟೆ ಪಾಲು ಹೊಂದಿರುವ ಹ್ಯುಂಡೈ ಇಂಡಿಯಾಗೆ ಇದೀಗ ಟಾಟಾ, ಮಹೀಂದ್ರ ಸೇರಿದಂತೆ ಇತರ ಬ್ರ್ಯಾಂಡ್ ಪೈಪೋಟಿ ನೀಡುತ್ತಿದೆ. ಈ ಪೈಪೋಟಿ ಮೆಟ್ಟಿ ನಿಲ್ಲಲು ಇದೀಗ ಹ್ಯುಂಡೈ ಮಿನಿ ಕ್ರೇಟಾ ಅಂದರೆ ಹ್ಯುಂಡೈ ವೆನ್ಯೂ ಹೊಸ ವಿನ್ಯಾಸದಲ್ಲಿ ಬಿಡುಗಡೆ ಮಾಡಿದೆ.
25
ಬೆಲೆ 7.90 ಲಕ್ಷ ರೂಪಾಯಿಯಿಂದ ಆರಂಭ
ಹೊಚ್ಚ ಹೊಸ ಹ್ಯುಂಡೈ ವೆನ್ಯೂ ಕಾರಿನ ಬೆಲೆ ಕೇವಲ 7.90 ಲಕ್ಷ ರೂಪಾಯಿಂದ ಆರಂಭಗೊಳ್ಳುತ್ತಿದೆ. ಈ ಸೆಗ್ಮೆಂಟ್‌ನಲ್ಲಿ ಇದು ಅತ್ಯಾಕರ್ಷಕ ಬೆಲೆಯಾಗಿದೆ. ಟಾಪ್ ವೇರಿಯೆಂಟ್ ಬೆಲೆ 15.51 ಲಕ್ಷ ರೂಪಾಯಿ. ಎಲ್ಲಾ ಬೆಲೆಗಳು ಎಕ್ಸ್ ಶೋ ರೂಂ ಬೆಲೆ ಆಗಿವೆ.
35
ಹೊಸ ವೆನ್ಯೂ ಕಾರಿನಲ್ಲಿ ಅತ್ಯಾಕರ್ಷಕ ಬದಲಾವಣೆ
ಹೊಸ ವೆನ್ಯೂ ಕಾರು ಹಲವು ಮಹತ್ತರ ಬದಲಾವಣೆ ಮಾಡಲಾಗಿದೆ. ಗ್ರಿಲ್, ಎಲ್‌ಇಡಿ ಬಾರ್, ಸಿ ಶೇಪ್ ಎಲ್‌ಇಡಿ ಡಿಆರ್‌ಎಲ್, ಕ್ವಾಡ್‌ಬೀಮ್ ಹೆಡ್‌ಲ್ಯಾಂಪ್ಸ್ ಸೇರಿದಂತೆ ಹಲವು ಆಕರ್ಷಕ ಬದಲಾವಣೆ ಈ ಕಾರಿನಲ್ಲಿದೆ. ಶಾರ್ಕ್ ಫಿನ್ ಆ್ಯಂಟೀನಾ, ಸಿಲ್ವರ್ ರೂಫ್ ರೈಲ್ಸ್, ಕನೆಕ್ಟೆಡ್ ಎಲ್ಇಡಿ ಟೈಲ್ಸ್ ಲೈಟ್, ಸಿಲ್ವರ್ ಸ್ಕಿಡ್ ಪ್ಲೇಟ್ ಸೇರಿದಂತೆ ಹಲವು ವಿಶೇಷತೆ ಹಾಗೂ ಬದಲಾವಣೆ ಈ ಕಾರಿನಲ್ಲಿದೆ.
ಹ್ಯುಂಡೈ ವೆನ್ಯೂ ಕಾರಿನ ಸ್ಟೀರಿಂಗ್ ಲೋಗೋದಲ್ಲಿ ವಿಶೇಷತೆ ಇದೆ. ಎಲ್ಲಾ ಕಾರಿನಲ್ಲಿ ತಮ್ಮ ಬ್ರ್ಯಾಂಡ್ ಲೋಗೋ ಕಾರಿನ ಸ್ಟೀರಿಂಗ್‌ನಲ್ಲಿ ಇರಲಿದೆ. ಆದರೆ ಹೊಸ ಹ್ಯುಂಡೈ ವೆನ್ಯೂ ಕಾರಿನ ಸ್ಟೀರಿಂಗ್ ಲೋಗೋ ಮೋರ್ಸ್ ಕೋಡ್ ನೀಡಿದೆ. ವೆಂಟಿಲೇಟೆಡ್ ಫ್ರಂಟ್ ಸೀಟ್, 12.3 ಇಂಚಿನ ಡಿಜಿಟಲ್ ಡ್ರೈವ್ ಡಿಸ್‌ಪ್ಲೇ, 12.3 ಇಂಚಿನ ಟಚ್ ಸ್ಕ್ರೀನ್ ಇನ್ಫೊಟೈನ್ಮೆಂಟ್ ಸಿಸ್ಟಮ್ ಸೇರಿದಂತೆ ಹಲವು ಹೊಸತನಗಳು ಈ ಕಾರಿನಲ್ಲಿದೆ.
ಹೊಸ ಸ್ಟೀರಿಂಗ್ ಲೋಗೋ
55
ಅಡಾಸ್ ಲೆವೆಲ್ 2
ಲೆವೆಲ್ 2 ಅಡಾಸ್ ಸಿಸ್ಟಮ್, ಎಲೆಕ್ಟ್ರಿಕ್ ಸನ್‌ರೂಫ್, 6 ಏರ್‌ಬ್ಯಾಗ್, 360 ಡಿಗ್ರಿ ಕ್ಯಾಮೆರಾ, ಬ್ಲೈಂಡ್ ಸ್ಪಾಟ್ ಮಾನಿಟರ್, ಬ್ಲೂ ಲಿಂಕ್ ಕನೆಕ್ಟಿವಿಟಿ, ವೈಯರ್‌ಲೆಸ್ ಆ್ಯಪಲ್ ಕಾರ್‌ಪ್ಲೇ, ಆ್ಯಂಡ್ರಾಯ್ಡ್ ಆಟೋ ಆಯ್ಕೆ ಹೊಂದಿದೆ. ಇನ್ನು 1.2 ಲೀಟರ್ ಪಟ್ರೋಲ್ ಎಂಜಿನ್ ಹಾಗೂ 1.0 ಲೀಟರ್ ಟರ್ಬೋ ಎಂಜಿನ್ ಆಯ್ಕೆ ಲಭ್ಯವಿದೆ.