ಪ್ರತಿ ವರ್ಷ ICOTY ಕಾರಿನ ಡಿಸೈನ್, ಪರ್ಫಾಮೆನ್ಸ್, ಫೀಚರ್ಸ್ ಸೇರಿದಂತೆ ಹಲವು ಮಾನದಂಡಗಳನ್ನು ಆಧರಿಸಿ ವರ್ಷದ ಅತ್ಯುತ್ತಮ ಕಾರು ಪ್ರಶಸ್ತಿ ಘೋಷಿಸುತ್ತದೆ. ಈ ಬಾರಿ 2025ರ ಪ್ರತಿಷ್ಠಿತ ಇಂಡಿಯನ್ ಕಾರ್ ಆಫ್ ದಿ ಇಯರ್ (ICOTY) ಪ್ರಶಸ್ತಿಯನ್ನು ಥಾರ್ ರಾಕ್ಸ್ ಗೆದ್ದಿದೆ. ಮಾರುತಿ ಸುಜುಕಿ ಡಿಸೈರ್ ಎರಡನೇ ಸ್ಥಾನ ಪಡೆದಿದೆ. ಮಾರುತಿ ಸುಜುಕಿ ಸ್ವಿಫ್ಟ್ ಮೂರನೇ ಸ್ಥಾನ ಪಡೆದಿದೆ.
ICOTY ತೀರ್ಪುಗಾರರ ಮಂಡಳಿಯಲ್ಲಿ ವಿವಿಧ ಪತ್ರಿಕೆಗಳು ಮತ್ತು ಮಾಧ್ಯಮ ಸಂಸ್ಥೆಗಳ ವಾಹನ ಪತ್ರಕರ್ತರಿದ್ದಾರೆ. 2024ರ ICOTY ತೀರ್ಪುಗಾರರಲ್ಲಿ 21 ಪತ್ರಕರ್ತರಿದ್ದರು. ಪ್ರತಿ ತೀರ್ಪುಗಾರರು ಕಾರುಗಳನ್ನು ಮೌಲ್ಯಮಾಪನ ಮಾಡುತ್ತಾರೆ ಮತ್ತು ಒಟ್ಟು 25 ಅಂಕಗಳನ್ನು ನೀಡುತ್ತಾರೆ.
ಯಾವುದೇ ಕಾರಿಗೆ ಒಬ್ಬ ತೀರ್ಪುಗಾರರಿಂದ 10 ಕ್ಕಿಂತ ಹೆಚ್ಚು ಅಂಕಗಳನ್ನು ಪಡೆಯಲು ಸಾಧ್ಯವಿಲ್ಲ. 25 ಅಂಕಗಳನ್ನು ಐದು ಸ್ಪರ್ಧಿಗಳ ನಡುವೆ ವಿಂಗಡಿಸಬೇಕು.
ಆಗಸ್ಟ್ 2024ರಲ್ಲಿ ಬಿಡುಗಡೆಯಾದ ಮಹೀಂದ್ರಾ ಥಾರ್ ರಾಕ್ಸ್, ಥಾರ್ SUVಯ 5 ಡೋರ್ ಆವೃತ್ತಿಯಾಗಿದೆ. ಥಾರ್ ರಾಕ್ಸ್ ಒಟ್ಟು 139 ಅಂಕಗಳನ್ನು ಗಳಿಸಿತು. ಎರಡನೇ ಸ್ಥಾನದಲ್ಲಿದ್ದ ಮಾರುತಿ ಸುಜುಕಿ ಡಿಸೈರ್ 137 ಅಂಕಗಳನ್ನು ಮತ್ತು ಮಾರುತಿ ಸುಜುಕಿ ಸ್ವಿಫ್ಟ್ 83 ಅಂಕಗಳನ್ನು ಗಳಿಸಿತು.
ಮಹೀಂದ್ರಾ ಥಾರ್ ರಾಕ್ಸ್ ₹12.99 ಲಕ್ಷ (ಎಕ್ಸ್-ಶೋರೂಂ) ಆರಂಭಿಕ ಬೆಲೆಯಲ್ಲಿ ಲಭ್ಯವಿದೆ. ಇದು 2.0-ಲೀಟರ್ ಟರ್ಬೊ-ಪೆಟ್ರೋಲ್ ಮತ್ತು 2.0-ಲೀಟರ್ ಡೀಸೆಲ್ ಎಂಜಿನ್ ಆಯ್ಕೆಗಳೊಂದಿಗೆ ಬರುತ್ತದೆ. ಒಳಭಾಗದ ವೈಶಿಷ್ಟ್ಯಗಳಲ್ಲಿ 10.25-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಮತ್ತು ಆರು ಏರ್‌ಬ್ಯಾಗ್‌ಗಳು ಸೇರಿವೆ.
ಮಹೀಂದ್ರ ಥಾರ್ ಕಾರು 3 ಡೋರ್ ಮಾಡೆಲ್ ಆಗಿದೆ. ಇದಕ್ಕೆ ಪ್ರತಿಯಾಗಿ ಮಾರುತಿ ಜಿಮ್ಮಿ ಕಾರನ್ನು ಹೊರತಂದಿದ್ದು. ಭಾರತದಲ್ಲಿ 5 ಡೋರ್ ಕಾರಿಗೆ ಹೆಚ್ಚು ಬೇಡಿಕೆ ಇದೆ. ಆದರೂ ಮಹೀಂದ್ರ ಥಾರ್ ಭಾರಿ ಬೇಡಿಕೆ ಪಡೆದುಕೊಂಡಿತ್ತು. ಹೀಗಾಗಿ 2024ರಲ್ಲಿ ಮಹೀಂಧ್ರ 5 ಡೋರ್ ಆಯ್ಕೆಯ ಮಹೀಂದ್ರ ಥಾರ್ ರಾಕ್ಸ್ ಕಾರನ್ನು ಬಿಡುಗಡೆ ಮಾಡಿದೆ. ಈ ಮೂಲಕ ಮಹೀಂದ್ರ ಭಾರತದಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ. ಮಹೀಂದ್ರ ಕಾರುಗಳಿಗೆ ಭಾರತದಲ್ಲಿ ಬೇಡಿಕೆ ಹೆಚ್ಚಾಗಿದೆ. ಇತ್ತೀಚೆಗೆ ಎರಡು ಎಲೆಕ್ಟ್ರಿಕ್ ಕಾರು ಬಿಡುಗಡೆ ಮಾಡುವ ಮೂಲಕ ಇದೀಗ ಎಲೆಕ್ಟ್ರಿಕ್ ಕಾರು ಕ್ಷೇತ್ರದಲ್ಲೂ ಅಧಿಪತ್ಯ ಸಾಧಿಸಲು ಮಹೀಂದ್ರ ಮುಂದಾಗಿದೆ.