ಮಾರುತಿ ಸುಜುಕಿ ಕ್ಲಿಯರೆನ್ಸ್ ಸೇಲ್, 3.15 ಲಕ್ಷ ರೂಪಾಯಿವರೆಗೆ ಡಿಸ್ಕೌಂಟ್ ಘೋಷಣೆ

ಮಾರುತಿ ಸುಜುಕಿ ಮಹತ್ವದ ಘೋಷಣೆ ಮಾಡಿದೆ. ಸ್ಟಾಕ್ ಕ್ಲಿಯರೆನ್ಸ್ ಮಾಡಲು ಇದೀಗ ಮಾರುತಿ ಸುಜುಕಿ 3.15 ಲಕ್ಷ ರೂಪಾಯಿ ಡಿಸ್ಕೌಂಟ್ ಘೋಷಿಸಿದೆ.  

Maruti Suzuki invicto stock clearance sale announces upt to rs 3 5 lakh discounts

ಈ ತಿಂಗಳು ಮಾರುತಿ ಸುಜುಕಿಯ ಪ್ರೀಮಿಯಂ 7/8 ಸೀಟರ್ MPV ಇನ್ವಿಕ್ಟೊ ಖರೀದಿಸಲು ಉತ್ತಮ ಅವಕಾಶವಿದೆ. MY2025 ಮಾಡೆಲ್‌ನ ಆಲ್ಫಾ ವೇರಿಯಂಟ್ ಮೇಲೆ 2.15 ಲಕ್ಷ ರೂ. ವರೆಗೆ ಡಿಸ್ಕೌಂಟ್ ಇದೆ, ಇದರಲ್ಲಿ 1 ಲಕ್ಷ ರೂ. ಎಕ್ಸ್‌ಚೇಂಜ್ ಬೋನಸ್ ಸೇರಿದೆ. ಇದಲ್ಲದೆ, 1.15 ಲಕ್ಷ ರೂ. ಸ್ಕ್ರ್ಯಾಪಿಂಗ್ ಬೋನಸ್ ಕೂಡ ಇದೆ. 

Maruti Suzuki invicto stock clearance sale announces upt to rs 3 5 lakh discounts

ಇದಲ್ಲದೆ, MY2024 ಇನ್ವಿಕ್ಟೊ (ಆಲ್ಫಾ ವೇರಿಯಂಟ್) ಸ್ಟಾಕ್ ಮೇಲೆ 3.15 ಲಕ್ಷ ರೂ. ಡಿಸ್ಕೌಂಟ್ ಇದೆ. ಜೀಟಾ ವೇರಿಯಂಟ್ ಮೇಲೆ 2.65 ಲಕ್ಷ ರೂ. ಡಿಸ್ಕೌಂಟ್ ಸಿಗುತ್ತೆ. ಮಾರುತಿ ಸುಜುಕಿ ಇನ್ವಿಕ್ಟೊದ ಎಕ್ಸ್‌ಶೋರೂಮ್ ಬೆಲೆ 25.21 ಲಕ್ಷ ರೂ. ನಿಂದ 29.22 ಲಕ್ಷ ರೂ. ವರೆಗೆ ಇದೆ. ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಡೀಲರ್‌ಗೆ ಭೇಟಿ ನೀಡಿ. ಇನ್ವಿಕ್ಟೊದ ಫೀಚರ್ಸ್‌ಗಳ ಬಗ್ಗೆ ತಿಳಿದುಕೊಳ್ಳೋಣ.


ಎಂಜಿನ್ ಮತ್ತು ಪವರ್

ಮಾರುತಿ ಇನ್ವಿಕ್ಟೊದಲ್ಲಿ 2.0 ಲೀಟರ್ ಪೆಟ್ರೋಲ್ ಎಂಜಿನ್ ಇದೆ, ಇದು ಎಲೆಕ್ಟ್ರಿಕ್ ಮೋಟರ್‌ ಜೊತೆಗೆ ಕೆಲಸ ಮಾಡುತ್ತೆ. ಈ ಎಂಜಿನ್ 186 bhp ಪವರ್ ಮತ್ತು 206 Nm ಟಾರ್ಕ್ ಉತ್ಪಾದಿಸುತ್ತೆ. ಇನ್ವಿಕ್ಟೊ 9.5 ಸೆಕೆಂಡ್‌ಗಳಲ್ಲಿ 0 ರಿಂದ 100 kmph ವೇಗ ಪಡೆಯುತ್ತೆ. ಇದು ಒಂದು ಲೀಟರ್‌ಗೆ 23.24 kmpl ಮೈಲೇಜ್ ಕೊಡುತ್ತೆ. 7-ಸೀಟರ್ ಮತ್ತು 8-ಸೀಟರ್ ಆಯ್ಕೆಗಳಲ್ಲಿ ಲಭ್ಯವಿದೆ.

ಚೆನ್ನಾಗಿರೋ ಸ್ಪೇಸ್, ಅಡ್ವಾನ್ಸ್ಡ್ ಫೀಚರ್ಸ್

ಈ ಕಾರಿನಲ್ಲಿ ಜಾಗದ ಕೊರತೆ ಇಲ್ಲ. ಲಾಂಗ್ ಡ್ರೈವ್‌ಗೆ ಪರ್ಫೆಕ್ಟ್ ಕಾರ್. 10.1 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 7 ಇಂಚಿನ ಫುಲ್ ಡಿಜಿಟಲ್ ಡ್ರೈವರ್ ಡಿಸ್ಪ್ಲೇ, ವೆಂಟಿಲೇಟೆಡ್ ಫ್ರಂಟ್ ಸೀಟ್ ಮತ್ತು ಆ್ಯಂಬಿಯೆಂಟ್ ಲೈಟಿಂಗ್ ಇದೆ.

ಸೇಫ್ಟಿಗಾಗಿ, 6-ಏರ್‌ಬ್ಯಾಗ್‌ಗಳು, ವೆಹಿಕಲ್ ಸ್ಟೆಬಿಲಿಟಿ ಕಂಟ್ರೋಲ್, ಟೈರ್ ಪ್ರೆಷರ್ ಮಾನಿಟರಿಂಗ್ ಸಿಸ್ಟಮ್, 360 ಡಿಗ್ರಿ ಕ್ಯಾಮೆರಾ ಮತ್ತು ಫ್ರಂಟ್ ಮತ್ತು ರಿಯರ್ ಪಾರ್ಕಿಂಗ್ ಸೆನ್ಸಾರ್‌ಗಳಿವೆ. ಇದು ಫ್ಯಾಮಿಲಿಗೆ ಸೂಕ್ತವಾದ ಕಾರ್. ಆದರೆ ಖರೀದಿಸುವ ಮೊದಲು ಟೆಸ್ಟ್ ಡ್ರೈವ್ ಮಾಡಿ.

Latest Videos

click me!