ಡೌನ್‌ ಪೇಮೆಂಟ್ ಇಲ್ಲ, 17ಸಾವಿರ ಪಾವತಿಸಿ ಲೀಸ್ ಮೂಲಕ ಪಡೆಯಿರಿ ಮಾರುತಿ ಸಿಫ್ಟ್!

First Published Aug 28, 2020, 7:20 PM IST

ಕೊರೋನಾ ವೈರಸ್ ಕಾರಣ ವಾಹನ ಮಾರಾಟ ನಿರೀಕ್ಷಿತ ಮಟ್ಟ ತಲುಪಿಲ್ಲ. ಹೀಗಾಗಿ ಮಾರುತಿ ಸುಜುಕಿ ಲೀಸ್ ಮೂಲಕ ಗ್ರಾಹಕರಿಗೆ ಕಾರು ಪಡೆದುಕೊಳ್ಳವ ಯೋಜನೆ ಆರಂಭಿಸಿ ಆರಂಭಿಕ ಯಶಸ್ಸು ಸಾಧಿಸಿದೆ. ಬೆಂಗಳೂರಿನಲ್ಲಿ ಸಿಕ್ಕ ಅಭೂತಪೂರ್ವ ಯಶಸ್ಸಿನಿಂದ ಇದೀದ ಮಾರುತಿ ಸುಜುಕಿ ಮತ್ತೆರೆಡು ನಗರಕ್ಕೆ ಮಾರುತಿ ಸುಜುಕಿ ಕಾರುಗಳ ಲೀಸ್ ಯೋಜನೆ ವಿಸ್ತರಿಸಿದೆ. ಲೀಸ್ ಮೂಲಕ ಕಾರು ಪಡೆದುಕೊಳ್ಳುವುದು ಹೇಗೆ? ಇಲ್ಲಿದೆ

ಕೊರೋನಾ ವೈರಸ್ ಕಾರಣ ವಾಹನ ಮಾರಾಟ ಪಾತಾಳಕ್ಕೆ ಕುಸಿದಿದೆ. ಕಾರು ಮಾರಾಟ ಉತ್ತೇಜಿಸಲು ಬಹುತೇಕ ಆಟೋಮೊಬೈಲ್ ಕಂಪನಿಗಳು ಕಾರುಗಳ ಲೀಸ್ ನೀಡುವ ಯೋಜನೆ ಜಾರಿಗೆ ತಂದಿದೆ. ಇದೀಗ ಮಾರುತಿ ಸುಜುಕಿ ಕೂಡ ತನ್ನ ಕಾರು ಲೀಸ್ ಯೋಜನೆಯನ್ನು ವಿಸ್ತರಿಸುತ್ತಿದೆ.
undefined
ಮೊದಲ ಹಂತದಲ್ಲಿ ಬೆಂಗಳೂರು ಹಾಗೂ ಗುರಂಗಾಂವ್‌ನಲ್ಲಿ ಈ ಯೋಜನೆಯನ್ನ ಮಾರುತಿ ಸುಜುಕಿ ಜಾರಿ ಮಾಡಿತ್ತು. ಇದೀಗ ಪುಣೆ ಹಾಗೂ ಹೈದರಾಬಾದ್‌ಗೂ ಕಾರು ಲೀಸ್ ಯೋಜನೆ ಜಾರಿ ಮಾಡಿದೆ. ಈ ಮೂಲಕ ಗ್ರಾಹಕರು ಸುಲಭವಾಗಿ ಕಾರು ಪಡೆದುಕೊಳ್ಳಬಹುದು.
undefined
ಜುಲೈ 2020ರಿಂದ ಮಾರುತಿ ಸುಜುಕಿ ಲೀಸ್ ಯೋಜನೆ ಜಾರಿ ಮಾಡಿದೆ. ಈ ಯೋಜನೆ ಮೂಲಕ ಯಾವುದೇ ಡೌನ್‌ ಪೇಮೆಂಟ್ ಇಲ್ಲದೆ ತಿಂಗಳ ಹಣ ಪಾವತಿಸಿ ಕಾರು ಲೀಸ್ ಪಡೆದುಕೊಳ್ಳಬಹುದು.
undefined
ಗ್ರಾಹಕರು ಮಾರುತಿ ಸುಜುಕಿಯ ಸ್ವಿಫ್ಟ್, ಡಿಸೈರ್, ಬ್ರೆಜಾ ಸೇರಿದಂತೆ ಯಾವುದೇ ಕಾರುಗಳನ್ನು ಮಾರುತಿ ಅರೇನಾ ಅಥಲಾ ನೆಕ್ಸಾ ಡೀಲರ್ ಬಳಿ ಬುಕ್ ಮಾಡಿಕೊಳ್ಳಬೇಕು. ಇದೇ ವೇಳೆ ಲೀಸ್ ಅವಧಿಯ 12, 18, 24, 30, 36, 42 ಹಾಗೂ 48 ತಿಂಗಳ ಅವಧಿ ಆಯ್ಕೆಗಳಲ್ಲಿ ಗ್ರಾಹಕರಿಗೆ ಸರರಿಹೊಂದು ತಿಂಗಳ ಆಯ್ಕೆ ಮಾಡಬಹುದು.
undefined
ಮಾರುತಿ ಸುಜುಕಿ ಲೀಸ್ ಯೋಜನೆ 17,600 ರೂಪಾಯಿಯಿಂದ ಆರಂಭಗೊಳ್ಳಲಿದೆ. ಇದು ಸ್ವಿಫ್ಟ್ ಕಾರು ಲೀಸ್ ಹಣವಾಗಿದೆ. ಯಾವುದೇ ಡೌನ್ ಪೇಮೆಂಟ್ ಮಾಡದೇ ಪ್ರತಿ ತಿಂಗಳು ಆಯ್ಕೆ ಮಾಡುವ ಕಾರಿನ ಲೀಸ್ ಮೊತ್ತ ಪಾವತಿಸಿದರೆ ಗ್ರಾಹಕರಿಗೆ ಕಾರು ಸಿಗಲಿದೆ.
undefined
ಈ ಯೋಜನೆಯಲ್ಲಿ ಕಾರಿನ ವಿಮೆ, ನಿರ್ವಹಣೆ, 24 ಗಂಟೆ ರೋಡ್ ಅಸಿಸ್ಟೆಂಟ್ ಸೇರಿದಂತೆ ಎಲ್ಲವೂ ಕೂಡ ಲೀಸ್ ಮೊತ್ತದಲ್ಲಿ ಸೇರಲಿದೆ. ಇದಕ್ಕಾಗಿ ಗ್ರಾಹಕರು ಯಾವುದೇ ಹಣ ಖರ್ಚು ಮಾಡಬೇಕಿಲ್ಲ.
undefined
ಮಾರುತಿ ಸುಜಕಿ ಲೀಸ್ ಪಡೆಯಲು ಕೆಲ ಮಾನದಂಡಗಳಿವೆ. ಗ್ರಾಹಕರು ಭಾರತೀಯ ನಾಗರೀಕರಾಗಿರಬೇಕು. ಕನಿಷ್ಠ 25 ವರ್ಷ ವಯಸ್ಸಾಗಿರಬೇಕು. ಇನ್ನು ಡ್ರೈವಿಂಗ್ ಲೈಸೆನ್ಸ್ ಹೊಂದಿರಬೇಕು. ಇಷ್ಟೇ ಅಲ್ಲ ಬ್ಯಾಕಿಂಗ್ ಸಿಬಿಲ್ ಸ್ಕೋರ್ ಕನಿಷ್ಠ 700 ಇರಬೇಕು.
undefined
ಹ್ಯುಂಡೈ ಮೋಟಾರ್ಸ್ ಕಾರು ಲೀಸ್ ಕಳೆದ ವರ್ಷ ಆರಂಭಿಸಿದೆ. ಭಾರತದ 6 ನಗರಗಳಲ್ಲಿ ಈ ಸೇವೆಯನ್ನು ಹ್ಯುಂಡೈ ನೀಡುತ್ತಿದೆ. ಎಂಜಿ ಮೋಟಾರ್ಸ್ ಹಾಗೂ ವೋಕ್ಸ್‌ವ್ಯಾಗನ್ಸ್ ಕೂಡ ಕಾರು ಲೀಸ್ ಯೋಜನೆ ಜಾರಿ ಮಾಡಿದೆ.
undefined
click me!