ಸಾಲು ಸಾಲು ಹಬ್ಬಕ್ಕೆ ಬಂಪರ್ ಕೊಡುಗೆ, ಸ್ಕೋಡಾದಿಂದ ಕೈಗೆಟುಕುವ ದರದಲ್ಲಿ ಎಲೆಕ್ಟ್ರಿಕ್ ಕಾರು!

Published : Oct 01, 2023, 07:15 PM IST

ಹಬ್ಬದ  ಸಂಭ್ರಮ ಆರಂಭಗೊಳ್ಳುತ್ತಿದೆ. ಇದೀಗ ಸ್ಕೋಡಾ ಇಂಡಿಯಾ ಕೈಗೆಟುಕುವ ದರದಲ್ಲಿ ಎಲೆಕ್ಟ್ರಿಕ್ ಕಾರು ಬಿಡುಗಡೆಗೆ ಸಜ್ಜಾಗಿದೆ. ಟಾಟಾ ಮೋಟಾರ್ಸ್, ಎಂಜಿ ಸೇರಿದಂತೆ ಹಲವು ಇವಿಗೆ ಪ್ರತಿಸ್ಪರ್ಧಿಯಾಗಿ ಕಡಿಮೆ ಬೆಲೆಯ ಇವಿ ಕಾರು ಮಾರುಕಟ್ಟೆಗೆ ಪರಿಚಸಲು ಮುಂದಾಗಿದೆ.

PREV
17
ಸಾಲು ಸಾಲು ಹಬ್ಬಕ್ಕೆ ಬಂಪರ್ ಕೊಡುಗೆ, ಸ್ಕೋಡಾದಿಂದ ಕೈಗೆಟುಕುವ ದರದಲ್ಲಿ ಎಲೆಕ್ಟ್ರಿಕ್ ಕಾರು!

ಭಾರತದಲ್ಲಿ ಸ್ಕೋಡಾ ಕಾರುಗಳ ಬೇಡಿಕೆ ಹೆಚ್ಚಾಗಿದೆ.  ಇದೀಗ ಸ್ಕೋಡಾ ಇಂಡಿಯಾ ತನ್ನ ಮಾರುಕಟ್ಟೆ ವಿಸ್ತರಿಸಲು ಮುಂದಾಗಿದೆ. ಇದಕ್ಕಾಗಿ ಸ್ಕೋಡಾ ಎಲೆಕ್ಟ್ರಿಕ್ ಕಾರು ಬಿಡುಗಡೆಗೆ ಮುಂದಾಗಿದೆ.
 

27

ಭಾರತದಲ್ಲಿ ಟಾಟಾ ನೆಕ್ಸಾನ್, ಮಹೀಂದ್ರ, ಎಂಜಿ ಸೇರಿದಂತೆ ಕೆಲ ಆಟೋ ಕಂಪನಿಗಳ ಎಲೆಕ್ಟ್ರಿಕ್ ಕಾರು ಲಭ್ಯವಿದೆ. ಇದೀಗ ಈ ಕಾರುಗಳಿಗೆ ಪ್ರತಿಸ್ಪರ್ಧಿಯಾಗಿ ಸ್ಕೋಡಾ ಎಲೆಕ್ಟ್ರಿಕ್ ಕಾರು ಬಿಡುಗಡೆ ಮಾಡುತ್ತಿದೆ.

37

ಮೂಲಗಳ ಪ್ರಕಾರ ಸ್ಕೋಡಾ ಕೈಗೆಟುಕವ ದರದಲ್ಲಿ ಕಾರು ಪರಿಚಯಿಸಲು ಮುಂದಾಗಿದೆ. ಸ್ಕೋಡಾದ ಎಲೆಕ್ಟ್ರಿಕ್ ಕಾರಿನ ಬೆಲೆ 20 ಲಕ್ಷ ರೂಪಾಯಿ ಒಳಗಿರಲಿದೆ ಎಂದು ವರದಿಗಳು ಹೇಳಿವೆ.

47

ಸ್ಕೋಡಾ ಭಾರತದಲ್ಲಿ 13 ಲಕ್ಷ ರೂಪಾಯಿ ಆರಂಭಿಕ ಬೆಲೆಯಲ್ಲಿ ಎಲೆಕ್ಟ್ರಿಕ್ ಕಾರು ಪರಿಚಿಯಲು ಸಜ್ಜಾಗಿದೆ. ಈ ಮೂಲಕ ಭಾರತದ ಎಲೆಕ್ಟ್ರಿಕ್ ಕಾರು ಮಾರುಕಟ್ಟೆಯಲ್ಲಿ ಅಧಿಪತ್ಯ ಸಾಧಿಸಲು ಮುಂದಾಗಿದೆ.

57

ಸ್ಕೋಡಾ ಅತ್ಯುತ್ತಮ ಕಾರುಗಳ ಮೂಲಕ ಈಗಾಗಲೇ ಭಾರತದಲ್ಲಿ ಹೆಚ್ಚಿನ ಗ್ರಾಹಕರನ್ನು ಹೊಂದಿದೆ. ಇದೇ ರೀತಿ ಎಲೆಕ್ಟ್ರಿಕ್ ಕಾರಿನಲ್ಲೂ ಗ್ರಾಹಕರನ್ನು ಸೆಳೆಯಲು ಗರಿಷ್ಠ ಮೈಲೇಜ್ ನೀಡಲು ಮುಂದಾಗಿದೆ.

67

ಭಾರತದಲ್ಲಿ ಸ್ಕೋಡಾ ಸೆಡಾನ್ ಹಾಗೂ ಎಸ್‌ಯುವಿ ಕಾರಗಳ ಮೂಲಕ ಜನಪ್ರಿಯವಾಗಿದೆ. ಸ್ಕೋಡಾ ರ್ಯಾಪಿಡ್, ಸ್ಕೋಡಾ ಸ್ಲಾವಿಯಾ, ಸ್ಕೋಡಾ ಒಕ್ಟಾವಿಯಾ, ಸ್ಕೋಡಾ ಕುಶಾಕ್ ಸೇರಿದಂತೆ ಹಲವು ಕಾರುಗಳು ಭಾರತದಲ್ಲಿ ಭಾರಿ ಮಾರಾಟ ದಾಖಲೆ ಹೊಂದಿದೆ

77

ಇತ್ತೀಚೆಗೆ ಸ್ಕೋಡಾ ತನ್ನು ಕುಶಾಕ್‌ ಹಾಗೂ ಸ್ಲೇವಿಯಾ ಕಾರುಗಳ ಸ್ಪೆಷಲ್‌ ಎಡಿಶನ್‌ ಬಿಡುಗಡೆ ಮಾಡಿತ್ತು. ಕುಶಾಕ್‌ ಸೀರೀಸ್‌ನಲ್ಲಿ ಓನಿಎಕ್ಸ್‌ ಪ್ಲಸ್‌ ವೇರಿಯೆಂಟ್‌ ಬಿಡುಗಡೆಯಾದರೆ ಸ್ಲೇವಿಯಾದಿಂದ ಆ್ಯಂಬಿಷನ್‌ ಪ್ಲಸ್‌ ಟ್ರಿಮ್‌ ಎಡಿಷನ್‌ ಬಿಡುಗಡೆಯಾಗಿತ್ತು.

Read more Photos on
click me!

Recommended Stories