ಮಹೀಂದ್ರ XUV700 ಕಾರಿಗೆ ಡಿಸ್ಕೌಂಟ್ ಆಫರ್, 75 ಸಾವಿರ ರೂ ಕಡಿತ
ಮಹೀಂದ್ರಾ XUV700 ಆಯ್ದ ಮಾಡೆಲ್ ಕಾರುಗಳ ಮೇಲೆ ಭರ್ಜರಿ ಡಿಸ್ಕೌಂಟ್ ಘೋಷಿಸಲಾಗಿದೆ. ಎಬೋನಿ ಹೊಸ ಡಾರ್ಕ್ ಎಡಿಶನ್ ಬಿಡುಗಡೆಯಾದ ಬೆನ್ನಲ್ಲೇ ಕೆಲ ಕಾರುಗಳ ಮೇಲೆ ಡಿಸ್ಕೌಂಟ್ ನೀಡಲಾಗಿದೆ.
ಮಹೀಂದ್ರಾ XUV700 ಆಯ್ದ ಮಾಡೆಲ್ ಕಾರುಗಳ ಮೇಲೆ ಭರ್ಜರಿ ಡಿಸ್ಕೌಂಟ್ ಘೋಷಿಸಲಾಗಿದೆ. ಎಬೋನಿ ಹೊಸ ಡಾರ್ಕ್ ಎಡಿಶನ್ ಬಿಡುಗಡೆಯಾದ ಬೆನ್ನಲ್ಲೇ ಕೆಲ ಕಾರುಗಳ ಮೇಲೆ ಡಿಸ್ಕೌಂಟ್ ನೀಡಲಾಗಿದೆ.
ಎಪ್ರಿಲ್ ತಿಂಗಳಿನಿಂದ ಹಲವು ಕಾರುಗಳ ಬೆಲೆ ಏರಿಕೆಯಾಗುತ್ತಿದೆ. ಕಚ್ಚಾ ವಸ್ತುಗಳ ಆಮದು ಹೆಚ್ಚಳ, ಬಿಡಿ ಭಾಗ ಬೆಲೆ ಏರಿಕೆ, ಉತ್ಪಾನೆ ವೆಚ್ಚ ಏರಿಕೆ ಕಾರಣದಿಂದ ಈಗಾಗಲೇ ವಾಹನಗಳ ಬೆಲೆ ಏರಿಕೆಯಾಗಿದೆ. ಇದರ ನಡುವೆ ಮಹೀಂದ್ರಾ XUV700 ಬೆಲೆ ಇಳಿಕೆ ಮಾಡಿದೆ. ಈ ಮೂಲಕ ಜನಸಾಮಾನ್ಯರಿಗೂ ಮಹೀಂದ್ರಾ XUV700 ಕೈಗೆಟುಕುವಂತೆ ಮಾಡಿದೆ.
ಮಹೀಂದ್ರ ಎಕ್ಸ್‌ಯುವಿ 700 ವೇರಿಯೆಂಟ್ ಕಾರುಗಳಲ್ಲಿ AX7 S ವೆರಿಯೆಂಟ್ಗೆ 75,000 ರೂಪಾಯಿ ದೊಡ್ಡ ಡಿಸ್ಕೌಂಟ್ ನೀಡಲಾಗಿದೆ. ಮಹೀಂದ್ರಾ XUV700 ಎರಡು ಎಂಜಿನ್ ಆಯ್ಕೆಗಳಲ್ಲಿ ಸಿಗುತ್ತದೆ. ಇದರಿಂದ ಮಹೀಂದ್ರ ಎಕ್ಸ್‌ಯುವಿ 700 ಕಾರು ಖರೀದಿಸಲು ಬಯಸುವವರಿಗೆ ಕಡಿಮೆ ಬೆಲೆಯಲ್ಲಿ ಕಾರು ಲಭ್ಯವಾಗಲಿದೆ.
XUV700ನಲ್ಲಿ 26.03 ಸೆಂ.ಮೀ ಇನ್ಫೋಟೈನ್ಮೆಂಟ್ ಸಿಸ್ಟಮ್, ವೈರ್ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ಪ್ಲೇ, ಸೋನಿ 12-ಸ್ಪೀಕರ್ ಸಿಸ್ಟಮ್ ಇದೆ. ಮಹೀಂದ್ರ ಪರ್ಫಾಮೆನ್ಸ್ ಬಗ್ಗೆ ಹೆಚ್ಚು ಹೇಳಬೇಕಿಲ್ಲ. ಕಾರಣ ಉತ್ತಮ ಎಂಜಿನ್ ಹಾಗೂ ಸಾಮರ್ಥ್ಯ ಹೊಂದಿದೆ. ಇನ್ನು 5 ಸ್ಟಾರ್ ಸೇಫ್ಟಿ ಸೇರಿದಂತೆ ಗರಿಷ್ಠ ಸುರಕ್ಷತಾ ಫೀಚರ್ಸ್ ಹೊಂದಿದೆ.
XUV700 AX7 ವೆರಿಯೆಂಟ್ ಈಗ 19.49 ಲಕ್ಷ ರೂಪಾಯಿಯಿಂದ ಶುರುವಾಗುತ್ತದೆ. ಇದರ ಮೇಲೆ ಆಯ್ದ ಮಹೀಂದ್ರ XUV700 ಕಾರುಗಳ ಮೇಲೆ ಡಿಸ್ಕೌಂಟ್ ಸಿಗಲಿದೆ. ಹೀಗಾಗಿ ಎಕ್ಸ್ ಶೋ ರೂಂ ಬೆಲೆ ಮತ್ತಷ್ಟು ಇಳಿಕೆಯಾಗಲಿದೆ.
ವಿಶೇಷ ಸೂಚನೆ:
ಮಹೀಂದ್ರ XUV700 ಕಾರಿನ ಡಿಸ್ಕೌಂಟ್ ರಾಜ್ಯದಿಂದ ರಾಜ್ಯಕ್ಕೆ, ಡೀಲರ್‌ನಿಂದ ಡೀಲರ್‌ಗೆ ವ್ಯತ್ಯಾಸವಾಗಲಿದೆ. ಹೀಗಾಗಿ ಹತ್ತಿರದ ಡೀಲರ್ ಸಂಪರ್ಕಿಸಿ ಆಫರ್ ಖಚಿತಪಡಿಸಿಕೊಳ್ಳಿ.
ಇತ್ತೀಚೆಗೆ ಮಹೀಂದ್ರಾ XUV700 ಎಬೊನಿ ಎಡಿಷನ್ ಕೂಡಾ ಲಾಂಚ್ ಮಾಡಿದೆ. ಇದು ಡಾರ್ಕ್ ಎಡಿಶನ್ ಕಾರಾಗಿದೆ. ಇದರಲ್ಲಿ ಕಂಪ್ಲೀಟ್ ಬ್ಲಾಕ್ ಡಿಸೈನ್, 18-ಇಂಚ್ ಬ್ಲಾಕ್ ಅಲಾಯ್ ವೀಲ್, ಬ್ಲಾಕ್ ಕಲರ್ ORVM, ಬ್ಲಾಕ್ ಲೆದರ್ ಅಪ್ಹೋಲ್ಸ್ಟರಿ ಇದೆ. ಇದು ಲಿಮಿಟೆಡ್ ಏಡಿಶನ್ ಕಾರಾಗಿದೆ. ಈ ಕಾರಿನ ವಿಡಿಯೋವನ್ನು ಖುದ್ದು ಆನಂದ್ ಮಹೀಂದ್ರ ಹಂಚಿಕೊಂಡಿದ್ದರು.