ಎಕ್ಸ್‌ಯುವಿ 300 to ಫ್ರಾಂಕ್ಸ್; ಭಾರತದಲ್ಲಿ ಲಭ್ಯವಿದೆ ಕಡಿಮೆ ಬೆಲೆಯ ಟರ್ಬೋ ಪೆಟ್ರೋಲ್ ಕಾರು!

First Published | Sep 27, 2023, 5:11 PM IST

ನಾರ್ಮಲ್ ಪೆಟ್ರೋಲ್ ಕಾರಿಗಿಂತ ಟರ್ಬೋ ಪೆಟ್ರೋಲ್ ಎಂಜಿನ್ ಕಾರಿನ ಪರ್ಫಾಮೆನ್ಸ್, ಸುಲಭ ಡ್ರೈವಿಂಗ್, ಅಡ್ವಾನ್ಸ್ ಟೆಕ್ನಾಲಜಿ ಸೇರಿದಂತೆ ಕೆಲ ವಿಶೇಷತೆಗಳನ್ನು ಹೊಂದಿದೆ.ಆದರೆ ಟರ್ಬೋ ಪೆಟ್ರೋಲ್ ಎಂಜಿನ್ ಕಾರಿನ ಬೆಲೆ ಕೊಂಚ ದುಬಾರಿ. ಹಾಗಂತ ಭಾರತದಲ್ಲಿ ಟರ್ಬೋ ಪೆಟ್ರೋಲ್ ಕಾರು ಕೂಡ ಕೈಗೆಟುಕುವ ದರದಲ್ಲಿ ಲಭ್ಯವಿದೆ. 

ಟರ್ಬೋ ಪೆಟ್ರೋಲ್ ಎಂಜಿನ್ ಕಾರಿನ ಪರ್ಫಾಮೆನ್ಸ್ ಹಾಗೂ ಮೈಲೇಜ್ ಹೆಚ್ಚು. ಎಲ್ಲಾ ಕಾರುಗಳಲ್ಲಿರುವಂತೆ ಇಂಟರ್ನಲ್ ಕಂಬಶನ್ ಎಂಜಿನ್ ಕೂಡ ಟರ್ಬೋ ಕಾರಿನಲ್ಲಿದೆ. ಆದರೆ ಹೆಚ್ಚುವರಿ ಕಂಪ್ರೆಸ್ಸೆಡ್ ಗಾಳಿಯನ್ನು ಟರ್ಬೋಚಾರ್ಜರ್ ಮೂಲಕ ಎಂಜಿನ್ ಸಿಲಿಂಡರ್‌ಗೆ ನೀಡಲಾಗುತ್ತದೆ. ಇದರಿಂದ ಹೆಚ್ಚು ಮೈಲೇಜ್ ಹಾಗೂ ಪರ್ಫಾಮೆನ್ಸ್ ಕೂಡ ಉತ್ತಮವಾಗಿರುತ್ತದೆ.

ಭಾರತದಲ್ಲಿ ಕೈಗೆಟುಕುವ ದರದಲ್ಲಿನ ಟರ್ಬೋ ಚಾರ್ಜ್ ಪೆಟ್ರೋಲ್ ಎಂಜಿನ್ ಕಾರಿನಲ್ಲಿ ಮಹೀಂದ್ರ XUV 300ಗೆ ಮೊದಲ ಸ್ಥಾನ. ಕಾರಣ 7.99 ಲಕ್ಷ ರೂಪಾಯಿಯಲ್ಲಿ(ಎಕ್ಸ್ ಶೋ ರೂಂ0 ಮಹೀಂದ್ರ XUV 300 ಟರ್ಬೋ ಚಾರ್ಜ್ ಪೆಟ್ರೋಲ್ ಎಂಜಿನ್ ಕಾರು ಲಭ್ಯವಿದೆ. 

Tap to resize

ಟಾಟಾ ನೆಕ್ಸಾನ್ ಟರ್ಬೋ ಚಾರ್ಜ್ ಕಾರಿನ ಆರಂಭಿಕ ಬೆಲೆ 8.21 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ). ಈ ಕಾರು 1.2 ಲೀಟರ್ 3 ಸಿಲಿಂಡರ್ ಟರ್ಬೋ ಪೆಟ್ರೋಲ್ ಎಂಜಿನ್ ಹೊಂದಿದೆ. 6 ಏರ್‌ಬ್ಯಾಗ್, 5 ಸ್ಟಾರ್ ಸೇಫ್ಟಿ ಸೇರಿದಂತೆ ಹಲವು ಸುರಕ್ಷತಾ ಫೀಚರ್ಸ್ ಇವೆ.
 

ನಿಸಾನ್ ಮ್ಯಾಗ್ನೈಟ್ 1.0 ಲೀಟರ್ ಟರ್ಬೋ ಪೆಟ್ರೋಲ್ ಎಂಜಿನ್ ಕಾರಿನ ಬೆಲೆ 8.25 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ). 4 ಸ್ಟಾರ್ ಕ್ರಾಶ್ ರೇಟಿಂಗ್, 5 ಸ್ಪೀಡ್ ಮ್ಯಾನ್ಯುಯೆಲ್ ಟ್ರಾನ್ಸ್‌ಮಿಶನ್ ಹೊಂದಿದೆ.
 

109 bhp ಪವರ್ ಹಾಗೂ 200 Nm ಪೀಕ್ ಟಾರ್ಕ್ ಸಾಮರ್ಥ್ಯದ ಸಿಟ್ರೊಯೆನ್ ಸಿ3 ಕಾರು 8.28 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ) ಆರಂಭಿಕ ಬೆಲೆಯಲ್ಲಿ ಲಭ್ಯವಿದೆ. 1.2 ಲೀಟರ್, 3 ಸಿಲಿಂಡರ್ ಟರ್ಬೋ ಪೆಟ್ರೋಲ್ ಎಂಜಿನ್ ಹೊಂದಿದೆ.

ಟಾಟಾ ಅಲ್ಟ್ರೋಜ್ ಪ್ರಿಮಿಯಂ ಹ್ಯಾಚ್‌ಬ್ಯಾಕ್ ಕಾರು ಸಿಎನ್‌ಜಿ ವೇರಿಯೆಂಟ್‌ನಲ್ಲೂ ಲಭ್ಯವಿದೆ. ಇದರ ಟರ್ಬೋ ಪೆಟ್ರೋಲ್ ಎಂಜಿನ್ ಕಾರಿನ ಬೆಲೆ 9.21 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ) ಆರಂಭಿಕ ಬೆಲೆಯಲ್ಲಿ ಲಭ್ಯವಿದೆ.

ಮಾರುತಿ ಸುಜುಕಿ ಫ್ರಾಂಕ್ಸ್ 1.0 ಲೀಟರ್ ಟರ್ಬೋ ಎಂಟಿ ಎಂಜಿನ್ ಕಾರಿನ ಆರಂಭಿಕ ಬೆಲೆ 9.73 ಲಕ್ಷ ರೂಪಾಯಿ(ಎಕ್ಸ್  ಶೋ ರೂಂ). 6 ಸ್ಪೀಡ್ ಎಂಟಿ ಟ್ರಾನ್ಸ್‌ಮಿಶನ್ ಹೊಂದಿದೆ.

ಹ್ಯುಂಡೈ ಐ20 ಎನ್ ಲೈನ್ ಎನ್6 1.0 ಲೀಟರ್ ಟರ್ಬೋ ಎಂಜಿನ್ ಕಾರಿನ ಆರಂಭಿಕ ಬೆಲೆ 9.99 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ). ಇದರಲ್ಲಿ ಸನ್‌ರೂಫ್ ಆಯ್ಕೆಯೂ ಲಭ್ಯವಿದೆ.
 

Latest Videos

click me!