ಭಾರತದಲ್ಲಿ ಹೊಚ್ಚ ಹೊಸ BMW 5 ಸೀರೀಸ್ ಕಾರು ಬಿಡುಗಡೆ!

First Published | Jun 25, 2021, 8:19 PM IST
  • ಬೆಸ್ಟ್-ಇನ್-ಕ್ಲಾಸ್ ಪರ್ಫಾರ್ಮೆನ್ಸ್ , ಅತ್ಯಂತ ಸುಧಾರಿತ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್, ಸ್ಪೋರ್ಟಿಯರ್ ಡಿಸೈನ್, ಉನ್ನತಗೊಳಿಸಿದ ಐಷಾರಾಮ, ಅತ್ಯಾಧುನಿಕ ತಂತ್ರಜ್ಞಾನ ಸೇರಿದಂತೆ ಹತ್ತು ಹಲವು ವಿಶೇಷತೆ ಹೊಂದಿರುವ ನೂತನ BMW 5 ಸೀರೀಸ್ ಕಾರು ಬಿಡುಗಡೆಯಾಗಿದೆ. ನೂತನ ಕಾರಿನ ಬೆಲೆ ಹಾಗೂ ಇತರ ಮಾಹಿತಿ ಇಲ್ಲಿದೆ.
ಹೊಚ್ಚ ಹೊಸ BMW 5 ಸೀರೀಸ್ ಭಾರತದಲ್ಲಿ ಬಿಡುಗಡೆಯಾಗಿದೆ. BMW ಗ್ರೂಪ್ ಪ್ಲಾಂಟ್ ಚೆನ್ನೈನಲ್ಲಿ ಉತ್ಪಾದನೆಯಾದ ಈ ಕಾರು ಒಂದು ಪೆಟ್ರೋಲ್(BMW 530i M ಸ್ಪೋರ್ಟ್) ಮತ್ತು ಎರಡು ಡೀಸೆಲ್ ವೇರಿಯೆಂಟ್ಸ್(BMW 530ಜ M ಸ್ಪೋರ್ಟ್ ಮತ್ತು BMW 520d ಲಕ್ಷುರಿ ಲೈನ್) ಲಭ್ಯವಿದೆ. ಹೊಸ BMW 5 ಸೀರೀಸ್ ತನ್ನ ಅಪಾರ ಸ್ಟೈಲ್ ಮತ್ತು ಅಸಂಖ್ಯ ಅಪ್‍ಡೇಟ್‍ಗಳೊಂದಿಗೆ ತನ್ನ ಮುಂಚೂಣಿಯ ಸ್ಥಾನವನ್ನು ಸದೃಢಗೊಳಿಸಿಕೊಳ್ಳಲು ಸನ್ನದ್ಧವಾಗಿದೆ. ತನ್ನ ಸ್ಪೋರ್ಟಿಂಗ್ ಅಪೀಲ್ ಹೆಚ್ಚಿಸುವುದು ಈ ವರ್ಗದಲ್ಲಿ ಅತ್ಯಂತ ಶಕ್ತಿಯುತ ಕಾರ್ಯಕ್ಷಮತೆಯಾಗಿದೆ. ಕಟಿಂಗ್-ಎಡ್ಜ್ ತಂತ್ರಜ್ಞಾನವು ರಿಮೋಟ್-ಕಂಟ್ರೋಲ್ ಪಾರ್ಕಿಂಗ್, BMW ಹೆಡ್-ಅಪ್ ಡಿಸ್ಪ್ಲೇ, ರಿವರ್ಸಿಂಗ್ ಅಸಿಸ್ಟೆಂಟ್, ಪಾರ್ಕಿಂಗ್ ಅಸಿಸ್ಟೆಂಟ್, BMW ಗೆಸ್ಚರ್ ಕಂಟ್ರೋಲ್‍ನಂತಹ ಹಲವು ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್‍ನೊಂದಿಗೆ ಬಂದಿದೆ. ಇಂಟೀರಿಯರ್ ಐಷಾರಾಮಿ ರಿಫೈನ್‍ಮೆಂಟ್‍ಗಳೊಂದಿಗೆ ಒಳಾಂಗಣ ತುಂಬಿದ್ದು ಪ್ರಯಾಣವನ್ನು ಶುದ್ಧ ಆನಂದವಾಗಿಸುತ್ತದೆ.
ಈ ಕಾರು ಆಕರ್ಷಕ ಬೆಲೆಗಳಲಿ (ಎಕ್ಸ್-ಶೋರೂಂ) ಈ ಕೆಳಕಂಡಂತೆ ಲಭ್ಯ-BMW 530i M ಸ್ಪೋರ್ಟ್: 62,90,000 ರೂಪಾಯಿBMW 520d ಲಕ್ಷುರಿ ಲೈನ್ : 63,90,000 ರೂಪಾಯಿBMW 530d M ಸ್ಪೋರ್ಟ್: 71,90,000 ರೂಪಾಯಿಸೀಮಿತ ಯೂನಿಟ್‍ಗಳ M ಸ್ಪೋರ್ಟ್ ವೇರಿಯೆಂಟ್ ಆನ್‍ಲೈನ್ ಬುಕಿಂಗ್ಸ್ ಅನ್ನು 24 ಜುಲೈ 2021 ರವರೆಗೆ ಮಾಡುವವರು ಆಕರ್ಷಕ ಕೊಡುಗೆ ಆನಂದಿಸಬಹುದು. ಈ ಕಾರುಗಳು BMW 5 ಸೀರೀಸ್‍ಗಾಗಿ ರೂಪಿಸಲಾದ ಆಯ್ದ ಶ್ರೇಣಿಯ ಎಕ್ಸ್‍ಕ್ಲೂಸಿವ್ M ಪರ್ಫಾರ್ಮೆನ್ಸ್ ಅಕ್ಸೆಸರೀಸ್‍ಗಳೊಂದಿಗೆ ಬರುತ್ತವೆ. ಗ್ರಾಹಕರು ಈಗ ವಿಸ್ತಾರ ಶ್ರೇಣಿಯ ಆಯ್ಕೆಗಳಿಂದ ಆಯ್ಕೆ ಮಾಡಿಕೊಳ್ಳಬಹುದು ಮತ್ತು ಕಾರಿನ ಸ್ಪೋರ್ಟಿ ಏಸ್ಥಟೆಕ್ಸ್ ಹೆಚ್ಚಿಸಬಹುದು ಮತ್ತು ಅವರ ಇಷ್ಟವನ್ನು ಅತ್ಯಂತ ಆಕರ್ಷಕ ಬೆಲೆಯಲ್ಲಿ ಕಸ್ಟಮೈಸ್ ಮಾಡಿಕೊಳ್ಳಬಹುದು.
Tap to resize

ಹೊಸ BMW 5 ಸೀರೀಸ್ಹೊಸ BMW 5 ಸೀರೀಸ್ ಹೊರಾಂಗಣ ಡಿಸೈನ್ ದೊಡ್ಡ, ಸ್ವಚ್ಛ ಮತ್ತು ಬಿಗಿಯಾಗಿ ರೂಪಿಸಿದ ಮೇಲ್ಮೈಗಳ ಮೂಲಕ ಅಪಾರ ಅಸ್ತಿತ್ವ ಮತ್ತು ವಿಶೇಷ ಸ್ಪೋರ್ಟಿಂಗ್ ಸ್ಟೈಲ್‍ನಿಂದ ಎದ್ದು ಕಾಣುತ್ತದೆ. ಹೊಸ ದಿಟ್ಟ BMW ಕಿಡ್ನಿ ಗ್ರಿಲ್ ಮತ್ತು ಹೊಸ ತೆಳುವಾದ ಫುಲ್-ಐಇಆ ಅಡಾಪ್ಟಿವ್ ಹೆಡ್‍ಲೈಟ್ಸ್ ಮುಂಬದಿಯಿಂದ ಗಮನಾರ್ಹವಾದ ದೃಶ್ಯ ಪರಿಣಾಮ ದೃಢಪಡಿಸುತ್ತದೆ. ಹೊಸದಾಗಿ ಸೇರಿಸಿದ BMW ಲೇಸರ್‍ಲೈಟ್ (M ಸ್ಪೋರ್ಟ್ ವೇರಿಯೆಂಟ್ಸ್‍ನಲ್ಲಿ) ಬೆಳಕನ್ನು ಪರಿಪೂರ್ಣವಾಗಿ 650 ಮೀಟರ್‍ಗಳವರೆಗೆ ವಿತರಿಸುತ್ತದೆ ಮತ್ತು ಈ ವಾಹನದ ಸೆಗ್ಮೆಂಟ್‍ನಲ್ಲಿ ವಿಶಿಷ್ಟವಾಗಿದೆ. ವಿಶಿಷ್ಟ ವ್ಹೀಲ್‍ಆರ್ಚಸ್ ಕಾರಿನ ಬದಿಯ ಪ್ರೊಫೈಲ್‍ಗೆ ಐಷಾರಾಮಿ ಮತ್ತು ಚಲನಶೀಲ ನೋಟ ನೀಡುತ್ತದೆ. ಹಿಂಬದಿಯಲ್ಲಿ ನಿಜಕ್ಕೂ ಕಣ್ಸೆಳೆಯುವುದು ಹೊಚ್ಚಹೊಸ ಐ ಶೇಪ್‍ಲೈಟ್ ಗ್ರಾಫಿಕ್ ಅದು ಥ್ರೀ-ಡೈಮೆನ್ಷನಲ್ ಫಾರ್ಮ್‍ನಲ್ಲಿ ಹಿಂಬದಿ ಲೈಟ್‍ನಿಂದ ಹೊರಹೊಮ್ಮುತ್ತದೆ. ಅಗಲವಾದ ಹಿಂಬದಿಯು ಸ್ವಚ್ಛ ಸಮಾನಾಂತರ ಗೆರೆಗಳೊಂದಿಗೆ ವಿಸ್ತೀರ್ಣಕ್ಕೆ ಒತ್ತು ನೀಡುತ್ತದೆ.
ಸರಿಸಾಟಿ ಇರದ BMW ಟ್ವಿನ್ ಪವರ್ ಟರ್ಬೊ ಟೆಕ್ನಾಲಜಿಯಿಂದ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್‍ಗಳು ಅಸಾಧಾರಣ ದಕ್ಷತೆಹೊಂದಿಗೆ ಗರಿಷ್ಠ ಶಕ್ತಿಯನ್ನು ಸಂಯೋಜಿಸುತ್ತವೆ ಮತ್ತು ತಕ್ಷಣದ ಪ್ರತಿಕ್ರಿಯಾತ್ಮಕತೆಯನ್ನು ಕಡಿಮೆ ಎಂಜಿನ್ ಸ್ಪೀಡ್ಸ್‍ನಲ್ಲಿ ಬೆಸ್ಟ್-ಇನ್-ಕ್ಲಾಸ್ ಆಕ್ಸಲರೇಷನ್ ಅಂಕಿಗಳೊಂದಿಗೆ ನೀಡುತ್ತದೆ. BMW 530i ನ 2-ಲೀಟರ್ 4-ಸಿಲಿಂಡರ್ ಪೆಟ್ರೋಲ್ ಎಂಜಿನ್ 252 hp ಗರಿಷ್ಠ ಔಟ್‍ಪುಟ್ ಉತ್ಪಾದಿಸುತ್ತದೆ ಹಾಗೂ ಕೇವಲ 6.1 ಸೆಕೆಂಡುಗಳಲ್ಲಿ 350 Nmಪೀಕ್ ಟಾರ್ಕ್ ಅನ್ನು 0-100 Kmph ಆಕ್ಸಲರೇಷನ್‍ನೊಂದಿಗೆ ನೀಡುತ್ತದೆ. BMW 520d ರ 2-ಲೀಟರ್ 4-ಸಿಲಿಂಡರ್ ಡೀಸೆಲ್ ಎಂಜಿನ್ 190 hp ಎಚ್‍ಪಿ ಗರಿಷ್ಠ ಔಟ್‍ಪುಟ್ ಅಭಿವೃದ್ಧಿಪಡಿಸುತ್ತದೆ ಮತ್ತು 7.3 ಸೆಕೆಂಡುಗಳಲ್ಲಿ 400 Nm ಪೀಕ್ ಟಾರ್ಕ್ ಅನ್ನು 0-100 Kmph ಆಕ್ಸಲರೇಷನ್‍ನೊಂದಿಗೆ ನೀಡುತ್ತದೆ. BMW 530dರ 3-ಲೀಟರ್ 6-ಸಿಲಿಂಡರ್ ಇನ್-ಲೈನ್ ಡೀಸೆಲ್ ಎಂಜಿನ್ ಗರಿಷ್ಠ ಔಟ್‍ಪುಟ್ 265 hp ಮತ್ತು 5.7 ಸೆಕೆಂಡುಗಳಲ್ಲಿ ಪೀಕ್ ಟಾರ್ಕ್ 620 Nm ಅನ್ನು 0-100 Kmph ಆಕ್ಸಲರೇಷನ್‍ನೊಂದಿಗೆ ನೀಡುವ ಮೂಲಕ ಇದನ್ನು ಎಕ್ಸಿಕ್ಯೂಟಿವ್ ಸೆಡಾನ್ ಸೆಗ್ಮೆಂಟ್‍ನಲ್ಲಿ ಅತ್ಯಂತ ತ್ವರಿತವಾದ ಕಾರು ಆಗಿಸಿದೆ.
ಎಯ್ಟ್-ಸ್ಪೀಡ್ ಸ್ಟೆಪ್ಟ್ರಾನಿಕ್ ಸ್ಪೋರ್ಟ್ ಆಟೊಮ್ಯಾಟಿಕ್ ಟ್ರಾನ್ಸ್‍ಮಿಷನ್ ಮೃದುವಾದ ಬಹುತೇಕ ಅಗ್ರಾಹ್ಯ ಗೇರ್‍ಶಿಫ್ಟ್‍ಗಳನ್ನು ನೀಡುತ್ತದೆ. ಮತ್ತಷ್ಟು ಉತ್ತಮ ಡ್ರೈವಿಂಗ್ ಪ್ಲೆಷರ್‍ಗೆ ಇದು ಸ್ಟೀರಿಂಗ್ ವ್ಹೀಲ್ ಪ್ಯಾಡಲ್ ಶಿಫ್ಟರ್‍ಗಳೊಂದಿಗೆ ಮತ್ತು ಬ್ರೇಕಿಂಗ್ ಫಂಕ್ಷನ್‍ನ ಕ್ರೂಸ್ ಕಂಟ್ರೋಲ್‍ನೊಂದಿಗೆ ಬಂದಿದೆ. ಅಡಾಪ್ಟಿವ್ ಸಸ್ಪೆನ್ಷನ್ ತನ್ನ ವೈಯಕ್ತಿಕ ಎಲೆಕ್ಟ್ರಾನಿಕಲಿ ಕಂಟ್ರೋಲ್ಡ್ ಡ್ಯಾಂಪರ್ಸ್ ಅಸಾಧಾರಣ ನಿಖರತೆ ನೀಡುತ್ತವೆ ಮತ್ತು ಡ್ರೈವ್ ಮತ್ತು ಹ್ಯಾಂಡ್ಲಿಂಗ್ ಡೈನಮಿಕ್ಸ್ ಸುಧಾರಿಸುತ್ತವೆ. ಡ್ಯಾಂಪರ್ ರೆಸ್ಪಾನ್ಸ್ ಸೆಟ್ಟಿಂಗ್ಸ್ ಡ್ರೈವಿಂಗ್ ಎಕ್ಸ್‍ಪೀರಿಯೆನ್ಸ್ ಕಂಟ್ರೋಲ್ ಸ್ವಿಚ್‍ನೊಂದಿಗೆ ಆಯ್ಕೆ ಮಾಡಿಕೊಂಡ ಮೋಡ್ ಆಧರಿಸಿ ವ್ಯತ್ಯಾಸಗೊಳ್ಳುತ್ತದೆ, ಅದು ಚಾಲಕನಿಗೆ ಚಾಲನೆಯ ಪರಿಸ್ಥಿತಿಗಳು- ಕಂಫರ್ಟ್, ಸ್ಪೋರ್ಟ್, ECO PRO ಹೊಂದಿಕೊಳ್ಳುವಂತೆ ವಿಭಿನ್ನ ಮೋಡ್‍ಗಳಿಗೆ ಅನುಗುಣವಾಗಿ ಆಯ್ಕೆ ಮಾಡಿಕೊಳ್ಳಲು ಅವಕಾಶ ನೀಡುತ್ತದೆ ಮತ್ತು ಅಡಾಪ್ಟಿವ್ Mಸ್ಪೋರ್ಟ್ ವೇರಿಯೆಂಟ್ಸ್ ಪೋರ್ಟಿಯರ್ ಡ್ರೈವಿಂಗ್ ಎಕ್ಸ್‍ಪೀರಿಯೆನ್ಸ್‍ಗೆ ಹೆಚ್ಚುವರಿ ಸ್ಪೋರ್ಟ್+ಮೋಡ್ ನೀಡುತ್ತದೆ.
ಮಾಡ್ರನ್ ಕಾಕ್‍ಪಿಟ್ ಕಾನ್ಸೆಪ್ಟ್ BMW ಲೈವ್ ಕಾಕ್‍ಪಿಟ್ ಪ್ರೊಫೆಷನಲ್‍ಃMWಆಪರೇಟಿಂಗ್ ಸಿಸ್ಟಂ 7.0 ನೊಂದಿಗೆ 3D ನ್ಯಾವಿಗೇಷನ್, 12.3-ಇಂಚು ಫುಲ್ಲಿ ಡಿಜಿಟಲ್ ಇನ್ಸ್‍ಟ್ರುಮೆಂಟ್ ಡಿಸ್ಪ್ಲೇಯನ್ನು ಸ್ಟೀರಿಂಗ್ ವ್ಹೀಲ್ ಹಿಂಬದಿ ಹೊಂದಿದೆ ಮತ್ತು ದೊಡ್ಡ 12.3-ಇಂಚು ಕಂಟ್ರೋಲ್ ಡಿಸ್ಪ್ಲೇ ಹೊಂದಿದೆ. ಒಳಗಿನವರು ಅವರ BMW ವರ್ಚುಯಲ್ ಅಸಿಸ್ಟೆಂಟ್‍ಗೆ ಸರಳವಾಗಿ ಮಾತನಾಡುವ ಮೂಲಕ ಹಲವು ಕಾರ್ಯಗಳನ್ನು ನಿರ್ವಹಿಸಬಹುದು. BMW ಗೆಸ್ಚರ್ ಕಂಟ್ರೋಲ್ ಹಲವಾರು ಕಾರ್ಯಗಳನ್ನು ನಿಯಂತ್ರಿಸಲು ಆರು ಪ್ರಿ-ಡಿಫೈನ್ಡ್ ಕೈ ಚಲನೆಗಳನ್ನು ಗುರುತಿಸುತ್ತದೆ ಇದರಿಂದ ಕೈಗಳು ಮಾತನಾಡುತ್ತವೆ. ಸ್ಮಾರ್ಟ್‍ಫೋನ್ ಹೋಲ್ಡರ್ ಸೆಂಟರ್ ಕನ್ಸೋಲ್‍ಗೆ ಜೋಡಣೆಯಾಗಿದ್ದು ಅದು ಇಂಡಕ್ಟಿವ್, ವೈರ್‍ಲೆಸ್ ಚಾರ್ಜಿಂಗ್ ಅನ್ನು ಮೊಬೈಲ್ ಫೋನ್‍ಗಳಿಗೆ ನೀಡುತ್ತದೆ. ವೈರ್‍ಲೆಸ್ ಆಪಲ್ ಕಾರ್‍ಪ್ಲೇಲಆಂಡ್ರಾಯಿಡ್ ಆಟೊ ಸರಿಸಾಟಿ ಇರದ ಸ್ಮಾರ್ಟ್‍ಫೋನ್ ಕನೆಕ್ಷನ್ ಅನ್ನು ಹಲವಾರು ಕಾರಿಗೆ ಕಾರ್ಯಗಳ ಬಳಕೆಯೊಂದಿಗೆ ನೀಡುತ್ತದೆ. ಹರ್ಮನ್ ಕಾರ್ಡನ್ ಸರೌಂಡ್ ಸೌಂಡ್‍ಸಿಸ್ಟಂ ಕಿವಿಗಳಿಗೆ ಆನಂದ ನೀಡುತ್ತದೆ. ಹೈ-ಎಂಡ್ 16 ಸ್ಪೀಕರ್ ಸಿಸ್ಟಂ ವೂಫರ್ಸ್ ನೊಂದಿಗೆ ಪರಿಣಾಮಕಾರಿ ಆಡಿಯೊ ಅನುಭವವನ್ನು ಎಲ್ಲ ಸೀಟುಗಳಿಗೆ ನೀಡುತ್ತದೆ ಮತ್ತು ವಾಹನ ವಲಯದಲ್ಲಿ ವಿಶಿಷ್ಟ ವಿಶ್ವವ್ಯಾಪಿಯಾಗಿದೆ.
ಹೊಸ BMW 5 ಸೀರೀಸ್ ಬೆಸ್ಟ್-ಇನ್-ಕ್ಲಾಸ್ ಕಟಿಂಗ್-ಎಡ್ಜ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್ ಪ್ರಸ್ತುತಪಡಿಸುತ್ತದೆ. ಪಾರ್ಕಿಂಗ್ ಅಸಿಸ್ಟೆಂಟ್ ಪ್ಲಸ್ ಸರೌಂಡ್ ವ್ಯೂ ಕ್ಯಾಮರಾದೊಂದಿಗೆ ಬಿಗಿಯಾದ ಸ್ಥಳಗಳಲ್ಲಿ ಪಾರ್ಕಿಂಗ್ ಅತ್ಯಂತ ಸುಲಭಗೊಳಿಸುತ್ತದೆ. ಹೊಸದಾಗಿ ಪರಿಚಯಿಸಲಾದ ರಿವರ್ಸಿಂಗ್ ಅಸಿಸ್ಟೆಂಟ್ ಪಾರ್ಕಿಂಗ್ ತಾಣದಿಂದ ರಿವರ್ಸ್ ಮಾಡುವಾಗ ಅಥವಾ ಕಿರಿದಾದ ಚಾಲನೆಯ ದಾರಿಗಳ ಮೂಲಕ ಚಲಿಸುವಾಗ ಸರಿಸಾಟಿ ಇರದ ಬೆಂಬಲ ನೀಡುತ್ತದೆ. ಇದು ಚಾಲಿಸಲಾದ 50 ಮೀಟರ್‍ಗಳ ದಾಖಲೆ ಇರಿಸಿಕೊಳ್ಳುತ್ತದೆ ಮತ್ತು ಸ್ಟೀರಿಂಗ್ ತೆಗೆದುಕೊಳ್ಳುವಾಗ ನೆರವಾಗುತ್ತದೆ. ರಿಮೋಟ್-ಕಂಟ್ರೋಲ್ ಪಾರ್ಕಿಂಗ್ ಫಂಕ್ಷನ್‍ನೊಂದಿಗೆ ಚಾಲಕರು ಕಿರಿದಾದ ಪಾರ್ಕಿಂಗ್ ತಾಣದಲ್ಲಿ ವಾಹನ ತಿರುಗಿಸಲು ಹೊರಗಿನಿಂದಲೇ BMW ಡಿಸ್ಪ್ಲೇ ಕೀ ಮೂಲಕ ಅವಕಾಶ ನೀಡುತ್ತದೆ. ಕಂಫರ್ಟ್ ಅಕ್ಸೆಸ್ ಸಿಸ್ಟಂ ಕೀ ಇಲ್ಲದೆ ಎಲ್ಲ ನಾಲ್ಕು ಬಾಗಿಲುಗಳನ್ನೂ ಕೀ ಬಳಸದೆ ತೆರೆಯಲು ಸಾಧ್ಯವಾಗಿಸುತ್ತದೆ. ಹೊಸ ಇಂಟೆಲಿಜೆಂಟ್ ಟೈರ್ ಪ್ರೆಷರ್ ಮಾನಿಟರಿಂಗ್ ಸಿಸ್ಟಂ ಏರ್ ಪ್ರೆಷರ್ ಕುಸಿದಿರುವುದರ ಕುರಿತು ಎಚ್ಚರಿಸುತ್ತದೆ.BMW ಎಫಿಷಿಯೆಂಟ್ ಡೈನಮಿಕ್ಸ್‍ನಲ್ಲಿ 8-ಸ್ಪೀಡ್ ಸ್ಟೆಪ್ಟ್ರಾನಿಕ್ ಸ್ಪೋರ್ಟ್ ಆಟೊಮ್ಯಾಟಿಕ್ ಟ್ರಾನ್ಸ್‍ಮಿಷನ್, ಆಟೊ ಸ್ಟಾರ್ಟ್-ಸ್ಟಾಪ್, ಬ್ರೇಕ್-ಎನರ್ಜಿ ರೀಜನರೇಷನ್ ಎಲೆಕ್ಟ್ರಾನಿಕ್ ಪವರ್ ಸ್ಟೀರಿಂಗ್, 50:50 ವೆಯ್ಟ್ ಡಿಸ್ಟ್ರಿಬ್ಯೂಷನ್ ಮತ್ತು ಡ್ರೈವಿಂಗ್ ಎಕ್ಸ್‍ಪೀರಿಯೆನ್ಸ್ ಕಂಟ್ರೋಲ್‍ನಲ್ಲಿ ಇಅಔ Pಖಔ ಮೋಡ್ ಮುಂತಾದ ವಿಶೇಷತೆಗಳನ್ನು ಹೊಂದಿದೆ. BMW ಸೇಫ್ಟಿ ಟೆಕ್ನಾಲಜೀಸ್‍ನಲ್ಲಿ ಆರು ಏರ್‍ಬ್ಯಾಗ್ಸ್, ಅಟೆಂಟಿವ್‍ನೆಸ್ ಅಸಿಸ್ಟೆನ್ಸ್, ಆ್ಯಂಟಿ-ಲಾಕ್ ಬ್ರೇಕಿಂಗ್ ಸಿಸ್ಟಂ(ABS) ಬ್ರೇಕ್ ಅಸಿಸ್ಟ್‍ನೊಂದಿಗೆ, ಡೈನಮಿಕ್ ಸ್ಟೆಬಿಲಿಟಿ ಕಂಟ್ರೋಲ್ (DSC) ಡೈನಮಿಕ್ ಟ್ರಾಕ್ಷನ್ ಕಂಟ್ರೋಲ್ (DTC) ಮತ್ತು ಎಲೆಕ್ಟ್ರಾನಿಕ್ ಡಿಫರೆನ್ಷಿಯಲ್ ಲಾಕ್ ಕಂಟ್ರೋಲ್ (EDLC), ಕಾರ್ನರಿಂಗ್ ಬ್ರೇಕ್ ಕಂಟ್ರೋಲ್ (CBC), ಎಲೆಕ್ಟ್ರಿಕ್ ಪಾರ್ಕಿಂಗ್ ಬ್ರೇಕ್ ಆಟೊ ಹೋಲ್ಡ್‍ನೊಂದಿಗೆ, ಸೈಡ್-ಇಂಪ್ಯಾಕ್ಟ್ ಪ್ರೊಟೆಕ್ಷನ್, ಎಲೆಕ್ಟ್ರಾನಿಕ್ ವೆಹಿಕಲ್ ಇಮ್ಮೊಬಿಲೈಸರ್ ಮತ್ತು ಕ್ರಾಶ್ ಸೆನ್ಸರ್ಸ್, ISOFIX ಚೈಲ್ಡ್ ಸೀಟ್ ಮೌಂಟಿಂಗ್ ಮತ್ತು ಎಮರ್ಜೆನ್ಸಿ ಸ್ಪೇರ್ ವ್ಹೀಲ್ ಒಳಗೊಂಡಿವೆ.

Latest Videos

click me!