ಬರೋಬ್ಬರಿ 700 KM ಮೈಲೇಜ್, ಹೊಸ ಹ್ಯುಂಡೈ ನೆಕ್ಸೋ ಹೈಡ್ರೋಜನ್ ಕಾರು ಖರೀದಿಗೆ ಮುಗಿಬಿದ್ದ ಜನ

Published : Apr 17, 2025, 02:33 PM ISTUpdated : Apr 17, 2025, 02:40 PM IST

ಎಲೆಕ್ಟ್ರಿಕ್ ಕಾರುಗಳು ಪ್ರಯಾಣದ ನಡುವೆ ಚಾರ್ಜ್ ಮಾಡುವುದು ಕಿರಿಕಿರಿ. ಹೀಗಾಗಿ ಇದೀಗ ಹೆಚ್ಚು ಮೈಲೇಜ್ ಅಂದರೆ ಇಡೀ ದಿನ ಪ್ರಯಾಣಿಸಲು ಬೇಕಾಗುವ ಇವಿ ಕಾರುಗಳಿಗೆ ಬೇಡಿಕೆ ಹೆಚ್ಚು. ಇದೀಗ ಹ್ಯುಂಡೈ ಹೊಚ್ಚ ಹೊಸ ನೆಕ್ಸೋ ಹೈಡ್ರೋಜನ್ ಕಾರು ಬಿಡುಗಡೆ ಮಾಡಿದೆ. ಇದು 700 ಕಿ.ಮೀ ಮೈಲೇಜ್ ನೀಡುತ್ತಿದೆ. ಈ ಕಾರು ಭಾರತದಲ್ಲಿ ಬಿಡುಗಡೆಯಾಗಿದ್ದು, ಹಲವರು ಖರೀದಿಗೆ ಆಸಕ್ತಿ ತೋರಿದ್ದಾರೆ. 

PREV
15
ಬರೋಬ್ಬರಿ 700 KM ಮೈಲೇಜ್, ಹೊಸ ಹ್ಯುಂಡೈ ನೆಕ್ಸೋ ಹೈಡ್ರೋಜನ್ ಕಾರು ಖರೀದಿಗೆ ಮುಗಿಬಿದ್ದ ಜನ
ಹ್ಯುಂಡೈ ನೆಕ್ಸೊ ಹೈಡ್ರೋಜನ್ SUV

ಸೂಪರ್ ಫೀಚರ್ಸ್‌ಗಳಿಂದ ಹೊಸ ಎಲೆಕ್ಟ್ರಿಕ್ ವಾಹನ ಮಾರುಕಟ್ಟೆಗೆ ಬಂದಿದೆ. ಹ್ಯುಂಡೈ ಹೊಸ ಹೈಡ್ರೋಜನ್ ಫ್ಯೂಯಲ್ ಸೆಲ್ ಎಲೆಕ್ಟ್ರಿಕ್ ವಾಹನವನ್ನ (FCEV) ಅನಾವರಣ ಮಾಡಿದೆ. ಇದು ಆಟೋಮೊಬೈಲ್ ಕ್ಷೇತ್ರದಲ್ಲಿ ಸಂಚಲನ ಸೃಷ್ಟಿಸಿದೆ. ಒಂದೇ ಚಾರ್ಜ್‌ಗೆ 700 ಕಿ.ಮೀ. ʼಟ್ರಾವೆಲ್ʼ ಮಾಡಬಹುದು.  ವಿಶೇಷ ಅಂದರೆ ಪ್ರಾಯೋಗಿಕವಾಗಿ ಉತ್ತಮ ಮೈಲೇಜ್ ರೇಂಜ್ ಹೊಂದಿರುವ ಕಾರು ಇದು. ಹೀಗಾಗಿ ಪ್ರಯಾಣದ ನಡುವೆ ಚಾರ್ಜಿಂಗ್ ಮಾಡುವ ಕಿರಿ ಕಿರಿ ಇಲ್ಲದಾಗುತ್ತದೆ. 

25
ಹೊಸ SUV ಹ್ಯುಂಡೈ ನೆಕ್ಸೊ

ಹೊಸ SUVಗೆ ʼನೆಕ್ಸೊʼ ಅಂತ ಹೆಸರಿಟ್ಟಿದೆ ಹ್ಯುಂಡೈ. ಇದು ನೆಕ್ಸೊದ ಎರಡನೇ ಆವೃತ್ತಿ. ಲೇಟೆಸ್ಟ್ ತಂತ್ರಜ್ಞಾನದ SUVಯನ್ನ ಮೊದಲ ಬಾರಿಗೆ 2025ರ ಸಿಯೋಲ್ ಮೊಬಿಲಿಟಿ ಶೋನಲ್ಲಿ ಪ್ರದರ್ಶಿಸಲಾಗಿತ್ತು. ಇದರಲ್ಲಿ ಅನೇಕ ಸ್ಮಾರ್ಟ್ ಫೀಚರ್ಸ್‌ಗಳಿವೆ. ಹೊಸ ನೆಕ್ಸೋ ಹೈಡ್ರೋಜನ್ ಸೆಲ್ ಕಾರಾಗಿದೆ. ಅತ್ಯಾಧುನಿಕ ತಂತ್ರಜ್ಞಾನ ಬಳಸಿಕೊಂಡು ಅತ್ಯಾಕರ್ಷಕ ಕಾರನ್ನು ಹ್ಯುಂಡೈ ಬಿಡುಗಡೆ ಮಾಡಿದೆ. 

35

7.8 ಸೆಕೆಂಡ್‌ಗಳಲ್ಲಿ 100 ಕಿ.ಮೀ. ವೇಗ. ಎರಡನೇ ತಲೆಮಾರಿನ ನೆಕ್ಸೊ SUV 150 kW ಎಲೆಕ್ಟ್ರಿಕ್ ಮೋಟಾರ್‌ನಿಂದ ಚಾಲಿತವಾಗಿದೆ. ಇದು 110 kW ಪವರ್ ಸೆಲ್ ಸ್ಟಾಕ್, 2.64 kWh ಲಿಥಿಯಂ-ಅಯಾನ್ ಬ್ಯಾಟರಿಯಿಂದ ಚಾಲಿತವಾಗಿದೆ. SUVಯ ಗರಿಷ್ಠ ವೇಗ ಗಂಟೆಗೆ 179 ಕಿ.ಮೀ.

45

ಸೂಪರ್ ಸೇಫ್ಟಿ, ಲಕ್ಷುರಿ ಫೀಚರ್ಸ್. ಸೇಫ್ಟಿಗೆ ಪ್ರಾಮುಖ್ಯತೆ ನೀಡಿ, ಹ್ಯುಂಡೈ ನೆಕ್ಸೊದಲ್ಲಿ 9 ಏರ್‌ಬ್ಯಾಗ್‌ಗಳು, ಅಡ್ವಾನ್ಸ್‌ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ (ADAS) ಇವೆ. ಎಮರ್ಜೆನ್ಸಿ ಬ್ರೇಕಿಂಗ್, ಸರೌಂಡ್ ವ್ಯೂ ಕ್ಯಾಮೆರಾ, ಕ್ರೂಸ್ ಕಂಟ್ರೋಲ್ ಫೀಚರ್ಸ್‌ಗಳು ಲಭ್ಯ.

55
ಹ್ಯುಂಡೈ ನೆಕ್ಸೊ

ಇಂಟೀರಿಯರ್ಸ್ ವಿಷಯಕ್ಕೆ ಬಂದರೆ.. ಟ್ವಿನ್ ಡೆಕ್ ಸೆಂಟರ್ ಕನ್ಸೋಲ್, ಆ್ಯಂಬಿಯೆಂಟ್ ಲೈಟಿಂಗ್, ವೈರ್‌ಲೆಸ್ ಆ್ಯಪಲ್ ಕಾರ್‌ಪ್ಲೇ, ಆ್ಯಂಡ್ರಾಯ್ಡ್ ಆಟೋ ಸಪೋರ್ಟ್, ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 14 ಸ್ಪೀಕರ್‌ಗಳ ಪ್ರೀಮಿಯಂ ಬ್ಯಾಂಗ್ & ಓಲುಫ್ಸೇನ್ ಸೌಂಡ್ ಸಿಸ್ಟಮ್ ಇದೆ.

ಬೆಲೆ:

ಅಮೆರಿಕದಲ್ಲಿ ಇದರ ಬೆಲೆ 60,000 ಅಮೆರಿಕನ್ ಡಾಲರ್, ಭಾರತೀ  ರೂಪಾಯಿಗಳಲ್ಲಿ 50 ಲಕ್ಷ ರೂಪಾಯಿ. ಭಾರತದಲ್ಲಿ ಹ್ಯುಂಡೈ ನೆಕ್ಸೋ ಕಾರು ಅನಾವರಣಗೊಂಡಿದೆ. ಆದರೆ ಬೆಲೆ ಬಹಿರಂಗವಾಗಿಲ್ಲ. 

Read more Photos on
click me!

Recommended Stories