ಭಾರತದಂತಹ ಸೂಕ್ಷ್ಮ ಮಾರುಕಟ್ಟೆಯಲ್ಲಿ, ಕಾರ್ ಖರೀದಿದಾರರು ಬೆಸ್ಟ್ ಡೀಲ್ ಅಥವಾ ಹಣಕ್ಕೆ ಯಾವುದು ಬೆಸ್ಟ್ ಅನ್ನೋದನ್ನ ನೋಡ್ತಾರೆ. ಎರಡನೇ ಸಾಲಿನಲ್ಲಿ ಎರಡು ಸಪರೇಟ್ ಸೀಟುಗಳನ್ನು ನೀಡುವ ಎಂಪಿವಿಗಳು ಮತ್ತು ಎಸ್‌ಯುವಿಗಳನ್ನು ನೋಡೋಣ.
ಮಾರುತಿ ಸುಜುಕಿ XL6
ಮಾರುತಿ ಸುಜುಕಿ ಸ್ಟೇಬಲ್‌ನಲ್ಲಿರುವ ಹೆಚ್ಚಿನ ವಾಹನಗಳಂತೆ ಆರು ಸೀಟುಗಳ XL6 ಅಷ್ಟೊಂದು ಸಕ್ಸಸ್ ಆಗಿಲ್ಲ, ಆದರೂ ಎರಡನೇ ಸಾಲಿನಲ್ಲಿ ಕ್ಯಾಪ್ಟನ್ ಸೀಟುಗಳನ್ನು ನೀಡುತ್ತದೆ. XL6 1.5 ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್‌ನಿಂದ ಚಾಲಿತವಾಗಿದ್ದು, 6000 ಆರ್‌ಪಿಎಂನಲ್ಲಿ 101.6 ಬಿಎಚ್‌ಪಿ ಮತ್ತು 4400 ಆರ್‌ಪಿಎಂನಲ್ಲಿ 136.8 ಎನ್ಎಂ ಔಟ್‌ಪುಟ್ ಹೊಂದಿದೆ. ಇದು ಎರಡು ಟ್ರಾನ್ಸ್‌ಮಿಷನ್ ಆಯ್ಕೆಗಳನ್ನು ನೀಡುತ್ತದೆ - 5-ಸ್ಪೀಡ್ ಮ್ಯಾನುಯಲ್ ಅಥವಾ 6-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್. XL6 ಸಿಎನ್‌ಜಿಯಲ್ಲೂ ಲಭ್ಯವಿದೆ. ಪೆಟ್ರೋಲ್ ಬೆಲೆ 11.71 ಲಕ್ಷದಿಂದ 14.71 ಲಕ್ಷದವರೆಗೆ ಇದೆ, ಸಿಎನ್‌ಜಿ ಬೆಲೆ 12.66 ಲಕ್ಷ, ಎಲ್ಲವೂ ಎಕ್ಸ್-ಶೋರೂಂ.