ಮಾರುತಿ ಸ್ವಿಫ್ಟ್:
ಮಾರುತಿ ಸ್ವಿಫ್ಟ್ ಬೆಲೆ ರೂ.9.20 ಲಕ್ಷದಿಂದ ಪ್ರಾರಂಭವಾಗುತ್ತದೆ. ಈ ಕಾರು 69.75 ಬಿಹೆಚ್‌ಪಿ ಪವರ್ ಅನ್ನು, 101.8 ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ 1.2 ಲೀಟರ್ ಪೆಟ್ರೋಲ್ ಇಂಜಿನ್‌ನೊಂದಿಗೆ ಕಾರ್ಯನಿರ್ವಹಿಸುತ್ತದೆ. ಈ ಇಂಜಿನ್ 5 ಸ್ಪೀಡ್ ಮ್ಯಾನ್ಯುವಲ್ ಟ್ರಾನ್ಸ್‌ಮಿಷನ್‌ನೊಂದಿಗೆ ಸಿಎನ್‌ಜಿ ತಂತ್ರಜ್ಞಾನದಲ್ಲಿ 32.35 ಕಿ.ಮೀ. ವ್ಯಾಪ್ತಿಯನ್ನು ಹೊಂದಿದೆ.
ಫೀಚರ್‌ಗಳ ವಿಷಯಕ್ಕೆ ಬಂದರೆ ವೈರ್‌ಲೆಸ್ ಆಂಡ್ರಾಯ್ಡ್ ಆಟೋ, ಆಪಲ್ ಕಾರ್ ಪ್ಲೇ ಕನೆಕ್ಟಿವಿಟಿಯೊಂದಿಗೆ 7 ಇಂಚಿನ ಟಚ್‌ಸ್ಕ್ರೀನ್, ಇನ್ಫೋಟೈನ್‌ಮೆಂಟ್ ಸಿಸ್ಟಮ್ ಇದರಲ್ಲಿವೆ. ಇವುಗಳಲ್ಲದೆ ಲೇಟೆಸ್ಟ್ ಅಪ್ಡೇಟೆಡ್ ಫೀಚರ್‌ಗಳು ಇನ್ನೂ ಬಹಳಷ್ಟು ಇವೆ.