7.99 ಲಕ್ಷ ರೂಪಾಯಿಗೆ ಹೊಸ ಮಹೀಂದ್ರ ಬೊಲೆರೋ ಕಾರು ಲಾಂಚ್, 3 ಬದಲಾವಣೆ

Published : Oct 07, 2025, 03:37 PM IST

7.99 ಲಕ್ಷ ರೂಪಾಯಿಗೆ ಹೊಸ ಮಹೀಂದ್ರ ಬೊಲೆರೋ ಕಾರು ಲಾಂಚ್, 3 ಬದಲಾವಣೆ ಮಾಡಲಾಗಿದೆ. ಮಹೀಂದ್ರ ಬೊಲೆರೋ ಹಾಗೂ ಮಹೀಂದ್ರ ಬೊಲೆರೋ ನಿಯೋ ಎರಡು ಕಾರುಗಳು ಬಿಡುಗಡೆಯಾಗಿದೆ. ಜಿಎಸ್‌ಟಿ ಕಡಿತದಿಂದ ಕೇವಲ7.99 ಲಕ್ಷ ರೂಪಾಯಿಗೆ ಲಭ್ಯವಿದೆ.

PREV
15
ಹೊಸ ಸಂಚಲನ ಸೃಷ್ಟಿಸಿದ ಬೊಲೆರೋ

ಹೊಸ ಸಂಚಲನ ಸೃಷ್ಟಿಸಿದ ಬೊಲೆರೋ

ಮಹೀಂದ್ರ ಕಾರುಗಳು ಭಾರತದಲ್ಲಿ ಭಾರಿ ಮೋಡಿ ಮಾಡುತ್ತಿದೆ. ಗರಿಷ್ಠ ಸುರಕ್ಷತೆ, ಅತ್ಯಾಕರ್ಷಕ ವಿನ್ಯಾಸ, ಉತ್ತಮ ಪ್ರಾಯಣ ಅನುಭವಗಳ ಮೂಲಕ ಮಹೀಂದ್ರ ಕಾರುಗಳು ಮಾರಾಟದಲ್ಲೂ ದಾಖಲೆ ಬರೆದಿದೆ. ಇದೀಗ ಮಹೀಂದ್ರ ಎರಡು ಹೊಸ ಕಾರುಗಳ ಬಿಡುಗಡೆ ಮಾಡಿದೆ.ಕಳೆದ 25 ವರ್ಷಗಳಿಂದ ಭಾರತೀಯ ರಸ್ತೆಯಲ್ಲಿ ರಾಜನಂತೆ ಮೆರೆಯುತ್ತಿರುವ ಮಹೀಂದ್ರ ಬೊಲೆರೋ ಹಾಗೂ ಅಪ್‌ಡೇಟೆಟ್ ಮಹೀಂದ್ರ ಬೊಲೆರೋ ನಿಯೋ ಕಾರುಗಳು ಬಿಡುಗಡೆಯಾಗಿದೆ.

25
ಮಹೀಂದ್ರ ಬೊಲೆರೊ ಬೆಲೆ

ಮಹೀಂದ್ರ ಬೊಲೆರೊ ಬೆಲೆ

ಮಹೀಂದ್ರ ಬೊಲೆರೋ ಕಾರಿನ ಬೆಲೆ ಎಲ್ಲರನ್ನು ಆಕರ್ಷಿಸುತ್ತಿದೆ. ಕಾರಣ ದೊಡ್ಡ ಕಾರು, ಆಕರ್ಷಕ ವಿನ್ಯಾಸದ ಕಾರು ಕೇವಲ 7.99 ಲಕ್ಷ ರೂಪಾಯಿಗೆ(ಎಕ್ಸ್ ಶೋ ರೂಂ) ಲಭ್ಯವಾಗುತ್ತಿದೆ. ಜಿಎಸ್‌ಟಿ ಕಡಿತದಿಂದ ಮಹೀಂದ್ರ ಬೊಲೆರೋ ಕಾರು ಇದೀಗ ಹ್ಯಾಚ್‌ಬ್ಯಾಕ್ ಕಾರಿನ ಬೆಲೆಯಲ್ಲಿ ಲಭ್ಯವಿದೆ.

35
ಮಹೀಂದ್ರ ಬೊಲೆರೋ ಕಾರು ವೇರಿಯೆಂಟ್

ಮಹೀಂದ್ರ ಬೊಲೆರೋ ಕಾರು ವೇರಿಯೆಂಟ್

  • ಮಹೀಂದ್ರ ಬೊಲೆರೋ ಬಿ4: 7.99 ಲಕ್ಷ ರೂಪಾಯಿ (ಎಕ್ಸ್ ಶೋ ರೂಂ)
  • ಮಹೀಂದ್ರ ಬೊಲೆರೋ ಬಿ6: 8.69 ಲಕ್ಷ ರೂಪಾಯಿ (ಎಕ್ಸ್ ಶೋ ರೂಂ)
  • ಮಹೀಂದ್ರ ಬೊಲೆರೋ ಬಿ6(ಒ):9.09 ಲಕ್ಷ ರೂಪಾಯಿ (ಎಕ್ಸ್ ಶೋ ರೂಂ)
  • ಮಹೀಂದ್ರ ಬೊಲೆರೋ ಬಿ8: 9.69 ಲಕ್ಷ ರೂಪಾಯಿ (ಎಕ್ಸ್ ಶೋ ರೂಂ)
45
ಹೊಸ ಮಹೀಂದ್ರ ಬೊಲೆರೋದಲ್ಲಿನ ಬದಲಾವಣೆ

ಹೊಸ ಮಹೀಂದ್ರ ಬೊಲೆರೋದಲ್ಲಿನ ಬದಲಾವಣೆ

ಹೊಸ ಮಹೀಂದ್ರ ಬೊಲೆರೋದಲ್ಲಿ ಕೆಲ ಪ್ರಮುಖ ಬದಲಾವಣೆ ಮಾಡಲಾಗಿದೆ. ಮುಂಭಾಗದ ಗ್ರಿಲ್ ಬದಲಾಗಿದೆ. ಹೊಸ ಹಾಗೂ ಅತ್ಯಾಕರ್ಷಕ ವಿನ್ಯಾಸ ನೀಡಲಾಗಿದೆ. ಇದರ ಜೊತೆಗೆ ಹೊಸ ಬಣ್ಣ ಸ್ಟೆಲ್ತ್ ಬ್ಲಾಕ್, ಡೈಮಂಡ್ ವೈಟ್ ಸೇರಿದಂತೆ ಹೊಸ ಬಣ್ಣಗಳಲ್ಲಿ ಕಾರು ಲಭ್ಯವಿದೆ. ಡೀಪ್ ಸಿಲ್ವರ್ ವ್ಹೀಲ್ ಕ್ಯಾಪ್, ಹೊಸ ಟಾಂಪ್ ವೇರಿಯೆಂಟ್ ಕೂಡ ಪರಿಚಯಿಸಾಗಿದ್ದು, ಡೈಮಂಡ್ ಕಟ್ ಅಲೋಯ್ ವ್ಹೀಲ್ಸ್ ನೀಡಲಾಗಿದೆ.

55
ಮಹೀಂದ್ರ ಬೊಲೆರೋ ಎಂಜಿನ್

ಮಹೀಂದ್ರ ಬೊಲೆರೋ ಎಂಜಿನ್

ಮಹೀಂದ್ರ ಬೊಲೆರೋ ಹೊಸ ಕಾರು 1.5 ಲೀಟರ್ mHawk75 ಡೀಸೆಲ್ ಎಂಜಿನ್ ಹೊಂದಿದೆ. 75bhp ಪವರ್ ಹಾಗೂ 210Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. ಫಾಗ್ ಲ್ಯಾಂಪ್ಸ್ ಸೇರಿದಂತೆ ಹಲವು ಬದಲಾವಣೆಯೊಂದಿಗೆ ಕಾರು ಮತ್ತಷ್ಟು ಅಗ್ರೆಸ್ಸೀವ್ ಲುಕ್ ಹೊಂದಿದೆ.

Read more Photos on
click me!

Recommended Stories