ನಿಸ್ಸಾನ್ ಸಿ, ಬೊಲೆರೋ ಸೇರಿ ಈ ತಿಂಗಳು ಕಡಿಮೆ ಬೆಲೆಯಲ್ಲಿ ಬಿಡುಗಡೆಯಾಗುತ್ತಿದೆ 6 ಕಾರು

Published : Oct 05, 2025, 07:36 PM IST

ಮಹೀಂದ್ರ ಬೊಲೆರೋ, ನಿಸ್ಸಾನ್ ಸಿ ಸೇರಿ ಈ ತಿಂಗಳಲ್ಲಿ 6 ಹೊಸ ಕಾರು ಬಿಡುಗಡೆ, GSTಯಿಂದ ಬೆಲೆ ಅಗ್ಗವಾಗಿದೆ. ನವರಾತ್ರಿ ವೇಳೆ ದಾಖಲೆಯ ಕಾರು ಮಾರಾಟವಾಗಿದೆ. ದೀಪಾವಳಿಗೂ ಮೊದಲೇ 6 ಹೊಸ ಕಾರು ಬಿಡುಗಡೆಯಾಗುತ್ತಿದೆ. ಈ ಹೊಸ ಕಾರು ಯಾವುದು?

PREV
17
ಕಡಿಮೆ ಬೆಲೆಯಲ್ಲಿ ಹೊಸ ವರ್ಶನ್ ಕಾರು

ಕಡಿಮೆ ಬೆಲೆಯಲ್ಲಿ ಹೊಸ ವರ್ಶನ್ ಕಾರು

ಜಿಎಸ್‌ಟಿ ಕಡಿತ, ನವರಾತ್ರಿ ಕಾರಣದಿಂದ ಭಾರತದಲ್ಲಿ ಕಾರು ಮಾರಾಟದಲ್ಲಿ ದಾಖಲೆ ಸೃಷ್ಟಿಯಾಗಿದೆ. ಹಬ್ಬದ ಆಫರ್ ಸೇರಿ ಕಾರುಗಳ ಬೆಲೆ ಭಾರಿ ಕಡಿಮೆಯಾಗಿತ್ತು. ಹೀಗಾಗಿ ಹಲವರು ಕಾರು ಖರೀದಿಸಿದ್ದಾರೆ. ಇದೀಗ ದೀಪಾವಳಿ ಹಬ್ಬ ಆಗಮಿಸುತ್ತಿದೆ. ಇದರ ಜೊತೆಗೆ 6 ಹೊಸ ಕಾರುಗಳು ಭಾರತದಲ್ಲಿ ಬಿಡುಗಡೆಯಾಗುತ್ತಿದೆ. ಹೊಸ ಕಾರುಗಳು ಹೊಸ ಜಿಎಸ್‌ಟಿ ಕಡಿತಕ್ಕೆ ಅನುಗುಣವಾಗಿರುತ್ತದೆ. ಹೀಗಾಗಿ ಕಡಿಮೆ ಬೆಲೆಯಲ್ಲಿ ಹೊಸ ವರ್ಶನ್ ಕಾರು ಲಭ್ಯವಾಗುತ್ತಿದೆ.

27
ಅಪ್‌ಡೇಟೆಡ್ 3 ಡೋರ್ ಮಹೀಂದ್ರ ಥಾರ್

ಅಪ್‌ಡೇಟೆಡ್ 3 ಡೋರ್ ಮಹೀಂದ್ರ ಥಾರ್

ಮಹೀಂದ್ರ ಥಾರ್ ಭಾರತದಲ್ಲಿ ಅತೀ ಹೆಚ್ಚು ಮೋಡಿ ಮಾಡಿದ ಕಾರು. ಯುವ ಸಮೂಹದಿಂದ ಹಿಡಿದು ಎಲ್ಲಾ ವರ್ಗದವರೂ ಥಾರ್ ಕಾರು ಇಷ್ಟಪಟ್ಟಿದ್ದಾರೆ. ಇದೀಗ 3 ಡೋರ್ ಥಾರ್ ಕಾರು ಅಪ್‌ಡೇಟ್ ಆಗಿ ಬಿಡುಗಡೆಯಾಗುತ್ತಿದೆ. ಇದೇ ತಿಂಗಳಲ್ಲಿ ಹೊಸ ಥಾರ್ ಮಾರುಕಟ್ಟೆಗೆ ಲಗ್ಗೆ ಇಡುತ್ತಿದೆ. ಇನ್ಫೋಟೈನ್‌ಮೆಂಟ್ ಸಿಸ್ಟಮ್, ಎಸಿ ಸ್ವಿಚ್ ಸೇರಿದಂತೆ ಕೆಲ ಬದಲಾವಣೆ, ವಿನ್ಯಾಸದಲ್ಲಿ ಮತ್ತಷ್ಟು ಸ್ಪೋರ್ಟೀವ್ ಲುಕ್‌ನೊಂದಿಗೆ ಬಿಡುಗಡೆಯಾಗುತ್ತಿದೆ.

37
ಹೊಸ ಮಹೀಂದ್ರ ಬೊಲೆರೋ ಹಾಗೂ ನಿಯೋ ಫೇಸ್‌ಲಿಫ್

ಹೊಸ ಮಹೀಂದ್ರ ಬೊಲೆರೋ ಹಾಗೂ ನಿಯೋ ಫೇಸ್‌ಲಿಫ್

ಮಹೀಂದ್ರ ಬೊಲೆರೋ ಫೇಸ್‌ಲಿಫ್ಟ್ ಹಾಗೂ ನಿಯೋ ಫೇಸ್‌ಲಿಫ್ಟ್ ಕಾರು ನಾಳೆ (ಅ.06) ಬಿಡುಗಡೆಯಾಗುತ್ತಿದೆ. ಎರಡು ಕಾರುಗಳ ಮೇಲ ಭಾರಿ ಕುತೂಹಲ ಮೂಡಿದೆ. ಕಾರಣ ವಿನ್ಯಾಸದಲ್ಲೂ ಮಹತ್ತರ ಬದಲಾವಣೆಯೊಂದಿಗೆ ಈ ಎರಡು ಕಾರುಗಳು ಬಿಡುಗಡೆಯಾಗುತ್ತಿದೆ. ಜೀಪ್ ವಿನ್ಯಾಸದಿಂದ ಎಸ್‌ಯುವಿ ವಿನ್ಯಾಸ ಮೈಗೂಡಿಸಿಕೊಳ್ಳಲಿರುವ ಎರಡೂ ಕಾರುಗಳು ಭಾರಿ ಕುತೂಹಲ ಹೆಚ್ಚಿಸಿದೆ.

47
ನಿಸ್ಸಾನ್ ಸಿ ಸೆಗ್ಮೆಂಟ್ ಎಸ್‌ಯುವಿ

ನಿಸ್ಸಾನ್ ಸಿ ಸೆಗ್ಮೆಂಟ್ ಎಸ್‌ಯುವಿ

ಭಾರತದಲ್ಲಿ ನಿಸ್ಸಾನ್‌ಗೆ ಮ್ಯಾಗ್ನೈಟ್ ಕಾರು ಕೈಹಿಡಿದಿದೆ. ಇತ್ತ ಟ್ರೈಬರ್ ಕಾರು ಸರಾಸರಿ ದಾಖಲೆ ಬೆರೆದಿದೆ. ಇದೀಗ ಇತರ ಎಸ್‌ಯುವಿ ಕಾರುಗಳಿಗೆ ಪೈಪೋಟಿ ನೀಡಲು ನಿಸ್ಸಾನ್ ಸಿ ಸೆಗ್ಮೆಂಟ್ ಕಾರು ಬಿಡುಗಡೆ ಮಾಡುತ್ತಿದೆ. ಅಕ್ಟೋಬರ್ 7ರಂದು ನಿಸ್ಸಾನ್ ಸಿ ಸೆಗ್ಮೆಂಟ್ ಕಾರು ಬಿಡುಗಡೆ ಮಾಡುತ್ತಿದೆ.

57
ಸ್ಕೋಡಾ ಒಕ್ಟಾವಿಯಾ ಆರ್‌ಎಸ್

ಸ್ಕೋಡಾ ಒಕ್ಟಾವಿಯಾ ಆರ್‌ಎಸ್

ಸ್ಕೋಡಾ ಭಾರತದಲ್ಲಿ ಕಾರು ಮಾರುಕಟ್ಟೆಯಲ್ಲಿ ಉತ್ತಮ ಪ್ರಗತಿ ಕಂಡಿದೆ. ಇದೀಗ ಒಕ್ಟಾವಿಯಾ ಸೆಡಾನ್ ಕಾರಿನ ಆರ್‌ಎಸ್ ವರ್ಶನ್ ಬಿಡುಗಡೆ ಮಾಡುತ್ತಿದೆ. ಅಕ್ಟೋಬರ್ 17ರಂದು ಒಕ್ಟಾವಿಯಾ ಆರ್‌ಎಸ್ ಕಾರು ಭಾರತದಲ್ಲಿ ಬಿಡುಗಡೆಯಾಗುತ್ತಿದೆ. 2025ರ ಭಾರತ್ ಗ್ಲೋಬಲ್ ಮೊಬಿಲಿಟಿ ಆಟೋ ಎಕ್ಸ್‌ಪೋದಲ್ಲಿ ಅನಾವರಣ ಮಾಡಿದ್ದ ಈ ಕಾರು ಇದೀಗ ಬಿಡುಗಡೆಗೆ ಸಜ್ಜಾಗಿದೆ.

67
ಮಿನಿ ಕಂಟ್ರಿಮ್ಯಾನ್ JCW All4:

ಮಿನಿ ಕಂಟ್ರಿಮ್ಯಾನ್ JCW All4:

ಅಕ್ಟೋಬರ್ 14ರಂದು ಬಿಎಂಡಬ್ಲ್ಯೂ ಗ್ರೂಪ್‌ನ ಮಿನಿ ಕೂಪರ್ ಕಂಟ್ರಮ್ಯಾನ್ JCW All4 ಕಾರು ಬಿಡುಗಡೆಯಾಗುತ್ತಿದೆ. 2.0 ಲೀಟರ್ ಟರ್ಬೋ ಪೆಟ್ರೋಲ್ ಎಂಜಿನ್ ಕಾರು ಇದಾಗಿದೆ. ಹೆಚ್ಚು ಶಕ್ತಿಶಾಲಿ ಎಂಜಿನ್ ಹೊಂದಿರುವ ಈ ಕಂಟ್ರಿಮ್ಯಾನ್ ಕಾರು 5.4 ಸೆಕೆಂಡ್‌ನಲ್ಲಿ 100 ಕಿಲೋಮೀಟ್ ವೇಗ ಪಡೆದುಕೊಳ್ಳಲಿದೆ.

77
ಸಿಟ್ರೋಯೆನ್ ಏರ್‌ಕ್ರಾಸ್ ಎಕ್ಸ್

ಸಿಟ್ರೋಯೆನ್ ಏರ್‌ಕ್ರಾಸ್ ಎಕ್ಸ್

ಭಾರತದಲ್ಲಿ ಸಿಟ್ರೊಯೆನ್ ಕಾರು ಭಾರಿ ಮೋಡಿ ಮಾಡುತ್ತಿದೆ. ಫ್ಯುಯೆಲ್ ಹಾಗೂ ಎಲೆಕ್ಟ್ರಿಕ್ ಕಾರುಗಳಿಂದ ಮಾರುಕಟ್ಟೆ ಆಕ್ರಮಿಸಿಕೊಳ್ಳುತ್ತಿರುವ ಸಿಟ್ರೊಯೆನ್ ಏರ್‌ಕ್ರಾಸ್ ಎಕ್ಸ್ ಮೂಲಕ ಮತ್ತೆ ಸಂಚಲನ ಮೂಡಿಸಲು ಸಜ್ಜಾಗಿದೆ. ಕೆಲ ಹೊಸ ಫೀಚರ್ಸ್‌ನೊಂದಿಗೆ ಈ ಕಾರು ಬಿಡುಡೆಯಾಗಲಿದೆ.

Read more Photos on
click me!

Recommended Stories