ಐಕಾನಿಕ್ ಟಾಟಾ ಸಫಾರಿ ಹೊಚ್ಚ ಹೊಸ ರೂಪದಲ್ಲಿ ಅತ್ಯಾಧುನಿಕ ತಂತ್ರಜ್ಞಾನದಲ್ಲಿ ಬಿಡುಗಡೆಗೆ ಸಜ್ಜಾಗಿದೆ. ಇದೀಗ ಅಧೀಕೃತ ಬುಕಿಂಗ್ ಆರಂಭಗೊಂಡಿದೆ.
undefined
ಟಾಟಾ ಸಫಾರಿ ಕಾರನ್ನು 30,000 ರೂಪಾಯಿ ನೀಡಿ ಬುಕ್ ಮಾಡಿಕೊಳ್ಳಬಹುದು. ಆಕರ್ಷಕ ಹಾಗೂ ದಕ್ಷ ಸಫಾರಿ ಕಾರು ಇದೆ ಫೆಬ್ರವರಿ 22ರಂದು ಬಿಡುಗಡೆಯಾಗಲಿದೆ
undefined
ಟಾಟಾ ಸಫಾರಿ ಕಾರು XE, XM, XT ಹಾಗೂ XZ ವೇರಿಯೆಂಟ್‌ಗಳಲ್ಲಿ ಲಭ್ಯವಿದೆ. ಹೊಸ ಸಫಾರಿ ಕಾರಿನ ಕಾತರ ಇದೀಗ ಇಮ್ಮಡಿಗೊಂಡಿದೆ
undefined
ಟಾಟಾ ಹ್ಯಾರಿಯರ್ ಕಾರಿನ ಎಲ್ಲಾ ಫೀಚರ್ಸ್ ನೂತನ ಸಫಾರಿ ಕಾರಿನಲ್ಲಿದೆ. ಟ್ರೈ ಏರೋ ಪ್ಯಾಟರ್ನ್ ಬೋಲ್ಡ್ ಗ್ರಿಲ್ ಸೇರಿದಂತೆ ಕೆಲ ಬದಲಾವಣೆಗಳು ಸಫಾರಿ ಕಾರಿನಲ್ಲಿದೆ.
undefined
ಎಲೆಕ್ಟ್ರಿಕ್ ಪಾರ್ಕಿಂಗ್ ಬ್ರೇಕಿಂಗ್ ಹೊಂದಿದ ಟಾಟಾದ ಮೊದಲ ಕಾರು ಅನ್ನೋ ಹೆಗ್ಗಳಿಕೆಗೆ ಸಫಾರಿ ಪಾತ್ರವಾಗಿದೆ. ಇಷ್ಟೇ ಅಲ್ಲ ಹೊಸ ಸೀಟ್ ಕಲರಿಂಗ್ ಕೂಡ ಸಫಾರಿ ಕಾರಿನಲ್ಲಿದೆ.
undefined
ಸಫಾರಿ ಕಾರು 2.0 ಟರ್ಬೋಚಾರ್ಜ್ ಡೀಸೆಲ್ ಎಂಜಿನ್ ಹೊಂದಿದ್ದು, 170 PS ಪವರ್ ಹಾಗೂ 350 Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ.
undefined
R18 ಅಲೋಯ್ ವೀಲ್, ಪನೋರಮಿಕ್ ಸನ್‌ರೂಫ್, 8.8 ಇಂಚಿನ ಟಚ್‌ಸ್ಕ್ರೀನ್ ಸೇರಿದಂತೆ ಹಲವು ಫೀಚರ್ಸ್ ನೂತನ ಸಫಾರಿ ಕಾರಿನಲ್ಲಿದೆ
undefined
ಟಾಟಾ ಸಫಾರಿ ಕಾರಿನ ಬೆಲೆ 15 ಲಕ್ಷ ರೂಪಾಯಿಯಿಂದ 20 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ) ಒಳಗಿರಲಿದೆ ಎಂದು ಅಂದಾಜಿಸಲಾಗಿದೆ. ಅಧೀಕೃತ ಬೆಲೆ ಬಿಡುಗಡೆ ದಿನ ಬಹಿರಂಗವಾಗಲಿದೆ.
undefined