ಫೋರ್ಡ್ ಅತೀ ಕಡಿಮೆ ನಿರ್ವಹಣಾ ವೆಚ್ಚದ ಕಾರು; ಅಧ್ಯಯನ ವರದಿ ಬಹಿರಂಗ!

First Published | Apr 5, 2021, 8:18 PM IST

ಕಾರು ಖರೀದಿಸಿದ ಬಳಿಕ ಎದುರಾಗುವುಗು ನಿರ್ವಹಣೆ ಚಿಂತೆ. ಹೀಗಾಗಿ ಖರೀದಿಗೂ ಮೊದಲೇ ಅಂದಾಜು ನಿರ್ವಹಣೆ ವೆಚ್ಚ ಸೇರಿದಂತೆ ಎಲ್ಲಾ ಮಾಹಿತಿಗಳನ್ನು ಕಲೆಹಾಕಿ ಗ್ರಾಹಕರು ಕಾರು ಖರೀದಿಗೆ ಮುಂದಾಗುತ್ತಾರೆ. ಹೀಗೆ ಭಾರತದಲ್ಲಿ ಅತೀ ಕಡಿಮೆ ವೆಚ್ಚದಲ್ಲಿ ನಿರ್ವಣಹೆ ಮಾಡುವ ಕಾರು ಅನ್ನೋ ಹೆಗ್ಗಳಿಗೆ ಫೋರ್ಡ್ ಕಾರು ಪಾತ್ರವಾಗಿದೆ.  ಈ ಕುರಿತ ಅಧ್ಯಯನ ವರದಿ ಇಲ್ಲಿದೆ.
 

ಕಾರು ಖರೀದಿ ಒಂದು ಸವಾಲಾಗಿದ್ದರೆ, ಕಾರು ನಿರ್ವಹಣೆ ಮಾಡುವುದು ಮತ್ತೊಂದು ದೊಡ್ಡ ಸವಾಲು. ನಿರ್ವಹಣೆಗೆ ಅತೀ ಹೆಚ್ಚು ಹಣ ಸುರಿಯುವ ಪ್ರಮೇಯಗಳು ಇವೆ. ಭಾರತದಲ್ಲಿ ಕಡಿಮೆ ಬೆಲೆಗೆ ನಿರ್ವಹಣೆ ಮಾಡಬಲ್ಲ ಕಾರು ಅನ್ನೋ ಹೆಗ್ಗಳಿಕೆಗೆ ಫೋರ್ಡ್ ಪಾತ್ರವಾಗಿದೆ. 2020ರ ಆವೃತ್ತಿಯ ಆಟೊಕಾರ್ ಇಂಡಿಯಾದ ವೆಹಿಕಲ್ ಮೇಂಟೆನೆನ್ಸ್ ಅಧ್ಯಯನದಲ್ಲಿ ಇದು ಬಹಿರಂಗವಾಗಿದೆ.
ಆಟೊಕಾರ್ ವರದಿಯ ಪ್ರಕಾರ ಫೋರ್ಡ್ ಉತ್ಪನ್ನಗಳು ಫೋರ್ಡ್ ಫಿಗೊಗೆ ರೂ.20,682 ಅಥವಾ ಪ್ರತಿ ಕಿಲೋಮೀಟರ್‍ಗೆ 34 ಪೈಸೆಯಿಂದ ಫೋರ್ಡ್ ಎಂಡೀವರ್ ರೂ.42,548 ಅಥವಾ ಪ್ರತಿ ಕಿಲೋಮೀಟರ್‍ಗೆ 71 ಪೈಸೆ ನಿರ್ವಹಣೆ ಹೊಂದಿದ್ದು ಇದು ಈ ವರ್ಗದಲ್ಲಿ 60,000 ಕಿಲೋಮೀಟರ್ ಅಥವಾ ಐದು ವರ್ಷ ಮಾಲೀಕತ್ವದ ಆವರ್ತದಲ್ಲಿ ಹೊಂದಿದೆ.
Tap to resize

ಈ ಅಧ್ಯಯನದ ಪ್ರಕಾರ ಫೋರ್ಡ್ ಫಿಗೊ ಪೆಟ್ರೋಲ್ ಮಧ್ಯಮ ಶ್ರೇಣಿಯ ಹ್ಯಾಚ್‍ಬ್ಯಾಕ್‍ನಲ್ಲಿ ಅತ್ಯಂತ ಕೈಗೆಟುಕುವಂಥದ್ದಾಗಿದ್ದು ಪ್ರತಿ ಕಿ.ಮೀ.ಗೆ ಕೇವಲ 34 ಪೈಸೆ, ಈ ವರ್ಗದ ವಾಲ್ಯೂಮ್ ಲೀಡರ್‍ಗಿಂತ ಶೇ.28ರಷ್ಟು ಕಡಿಮೆಯಾಗಿದೆ. ಫಿಗೊ ಡೀಸೆಲ್ ತನ್ನ ಅತ್ಯಂತ ಶಕ್ತಿಯುತ ಮತ್ತು ದೊಡ್ಡ ಎಂಜಿನ್‍ನಿಂದ ಅತ್ಯಂತ ಸೋವಿಯದ್ದಾಗಿದ್ದು ಪ್ರತಿ ಕಿಲೋಮೀಟರ್‍ಗೆ ಕೇವಲ 45 ಪೈಸೆ ವೆಚ್ಚವಾಗುತ್ತದೆ
ಕಾಂಪ್ಯಾಕ್ಟ್ ಎಸ್‍ಯುವಿಗಳಲ್ಲಿ ಫೋರ್ಡ್ ಫ್ರೀಸ್ಟೈಲ್ ಪೆಟ್ರೋಲ್ ಮತ್ತು ಡೀಸೆಲ್ ವೇರಿಯೆಂಟ್‍ಗಳು ನಿರ್ವಹಣೆಗೆ ಅತ್ಯಂತ ಕಡಿಮೆ ವೆಚ್ಚದವಾಗಿದ್ದು ಕ್ರಮವಾಗಿ ಶೇ.35 ಮತ್ತು ಶೇ.38ರಷ್ಟು ಕಡಿಮೆ ವೆಚ್ಚ ಹೊಂದಿದ್ದು ಪ್ರತಿ ಕಿ.ಮೀ.ಗೆ 34 ಪೈಸೆ ಮತ್ತು 45 ಪೈಸೆ ಮಾತ್ರ ಖರ್ಚಾಗುತ್ತದೆ. ಫೋರ್ಡ್ ಇಕೊಸ್ಪೋರ್ಟ್ ಪೆಟ್ರೋಲ್‍ಗೆ ರೂ.21,754 ಮತ್ತು ಡೀಸೆಲ್‍ಗೆ ರೂ.27,882 ಅನ್ನು 60,000-ಕಿ.ಮೀ. ಮಾಲೀಕತ್ವ ಆವರ್ತಕ್ಕೆ ವ್ಯಯಿಸುತ್ತಿದ್ದು ಮತ್ತೊಮ್ಮೆ ಈ ವರ್ಗದಲ್ಲಿ ಮೈಲಿಗಲ್ಲು ನಿರ್ಮಿಸಿದೆ.
ಪ್ರೀಮಿಯಂ ಎಸ್‍ಯುವಿ ವರ್ಗದಲ್ಲಿ ಈ ಅಧ್ಯಯನವು 2020 ಎಂಡೀವರ್ ತೋರಿಸಿದ್ದು ಮಾರುಕಟ್ಟೆಯ ನಾಯಕನಿಗೆ ಹೋಲಿಸಿದರೆ ಶೇ.12ರಷ್ಟು ವೆಚ್ಚ ಉಳಿಸುತ್ತದೆ. ಫೋರ್ಡ್ ಎಂಡೀವರ್ ಮಾಲೀಕರು ನಿರ್ವಹಣೆಗೆ ಪ್ರತಿ ಕಿಲೋಮೀಟರ್‍ಗೆ 71 ಪೈಸೆ ಮಾತ್ರ ಖರ್ಚು ಮಾಡುತ್ತಿದ್ದು ಅದರ ಸ್ಪರ್ಧಿಸುವ ಮಾದರಿಯು ಪ್ರತಿ ಕಿಲೋಮೀಟರ್‍ಗೆ 81 ಪೈಸೆ ಖರ್ಚು ಮಾಡುವ ಮೂಲಕ ಎಸ್‍ಯುವಿಯನ್ನು ಸುಸ್ಥಿತಿಯಲ್ಲಿರಿಸಿಕೊಳ್ಳುತ್ತಾರೆ.
ನಮ್ಮ ಉತ್ಪನ್ನಗಳು ಅವರ ಇಡೀ ಮಾಲೀಕತ್ವದ ಆವರ್ತದಲ್ಲಿ ಅದ್ಭುತ ಮಾಲೀಕತ್ವದ ಮೌಲ್ಯ ಪೂರೈಕೆ ಮಾಡುವುದನ್ನು ಮುಂದುವರಿಸಲು ಶ್ರಮಿಸುತ್ತಿವೆ ಮತ್ತು ತಪ್ಪು ಗ್ರಹಿಕೆಗಳನ್ನು ನಿವಾರಿಸುತ್ತಿವೆ. ಆಟೊಕಾರ್‍ನ ನಿರ್ವಹಣಾ ವರದಿಯು ಮಹತ್ತರ ಉತ್ತೇಜನವಾಗಿದೆ ಮತ್ತು ನಮ್ಮ ದಣಿವಿರದ ಪ್ರಯತ್ನಗಳಿಗೆ ಬೆಂಬಲಿಸಿದಂತಾಗಿದೆ” ಎಂದು ಫೋರ್ಡ್ ಇಂಡಿಯಾದ ಮಾರ್ಕೆಟಿಂಗ್, ಸೇಲ್ಸ್ ಅಂಡ್ ಸರ್ವೀಸ್‍ನ ಎಕ್ಸಿಕ್ಯೂಟಿವ್ ಡೈರೆಕ್ಟರ್ ವಿನಯ್ ರೈನಾ ಹೇಳಿದರು.
ಆಟೊಕಾರ್ ಇಂಡಿಯಾದ ವಾರ್ಷಿಕ ಅಧ್ಯಯನವು ತಮ್ಮ ಕಾರುಗಳನ್ನು ಸುಸ್ಥಿತಿಯಲ್ಲಿರಿಸಿಕೊಳ್ಳಲು ಮಾಲೀಕರು ಮಾಡಬೇಕಾದ ನಿರೀಕ್ಷಿತ ಖರ್ಚು ಹಾಗೂ ಕಾಲಕಾಲಿಕ ಸರ್ವೀಸ್, ಲೇಬರ್, ಸ್ಪಾರ್ಕ್ ಪ್ಲಗ್‍ಗಳು, ಫಿಲ್ಟರ್‍ಗಳು(ಆಯಿಲ್, ಏರ್, ಫ್ಯೂಯೆಲ್, ಏರ್-ಕಂಡೀಷನರ್) ಮುಂತಾದ ನಿಯಮಿತ ಬಿಡಿಭಾಗಗಳ ಮತ್ತು ಅಗತ್ಯ ಫ್ಲೂಯಿಡ್‍ಗಳ(ಎಂಜಿನ್ ಆಯಿಲ್, ಬ್ರೇಕ್ ಆಯಿಲ್, ಕೂಲೆಂಟ್) ಬದಲಾವಣೆ ವಿಶ್ಲೇಷಿಸುತ್ತದೆ.
“ಆಟೊಕಾರ್ ಇಂಡಿಯಾ ಸ್ಟಡಿ 2020 ಕಾರನ್ನು ಅದರ ಸರ್ವೀಸ್ ಭಾಗಗಳು, ಅವುಗಳ ಸರ್ವೀಸ್ ಅವಧಿ, ಕಾರ್ಮಿಕರ ದರಗಳು ಅಲ್ಲದೆ ಸರ್ವೀಸ್ ಇಂಟರ್‍ವಲ್‍ಗಳ ಖರ್ಚಿನ ಕುರಿತು ಒಂದು ಸ್ಪಷ್ಟ ಚಿತ್ರಣ ನೀಡುತ್ತದೆ” ಎಂದು ಆಟೊಕಾರ್ ಇಂಡಿಯಾದ ಸಂಪಾದಕ ಹೊರ್ಮದ್ ಸೊರಾಬ್ಜಿ ಹೇಳಿದರು. “ನಮ್ಮ ವಾರ್ಷಿಕ ಸಮೀಕ್ಷೆಯ ಅಧಿಕೃತ, ಉತ್ತಮ ಸಂಶೋಧನೆಯ ದತ್ತಾಂಶದಿಂದ ನಾವು ಗ್ರಾಹಕರಿಗೆ ಮಾಹಿತಿಪೂರ್ಣ ಕೊಳ್ಳುವ ನಿರ್ಧಾರಗಳನ್ನು ಕೈಗೊಳ್ಳಲು ಸನ್ನದ್ಧರಾಗಿಸುವಲ್ಲಿ ಸಣ್ಣ ಪಾತ್ರ ವಹಿಸಲು ಬಹಳ ಸಂತೋಷಗೊಂಡಿದ್ದೇನೆ” ಎಂದರು.

Latest Videos

click me!