ಕಡಿಮೆ ಬೆಲೆಗೆ ಹಳೇ ಕಾರು -ಬೈಕ್ ಖರೀದಿಸುತ್ತೀರಾ? ನೆನಪಲ್ಲಿರಲಿ ಈ ಪಾಲಿಸಿ

Published : Jan 13, 2025, 06:35 PM ISTUpdated : Jan 13, 2025, 06:42 PM IST

ಇತ್ತೀಚಿನ ದಿನಗಳಲ್ಲಿ ಸ್ಥಗಿತಗೊಂಡಿರುವ ಹಳೇ ಕಾರುಗಳು ಮತ್ತು ಬೈಕುಗಳನ್ನು ಖರೀದಿಸುವುದು ಒಂದು ಟ್ರೆಂಡ್ ಆಗಿದೆ. ಹಳೆಯ ಮಾದರಿಗಳು ಮಾರುಕಟ್ಟೆಯಲ್ಲಿ ಲಭ್ಯವಿಲ್ಲದ ಕಾರಣ ಜನರು ವಿಂಟೇಜ್ ವಾಹನಗಳ ಫೀಲ್ ಮೇಲೆ ಖರೀದಿಸುತ್ತಿದ್ದಾರೆ. ಈ ವಾಹನಗಳ ಖರೀದಿ ನಿಮ್ಮ ಸಂಕಷ್ಟ ಹೆಚ್ಚಿಸಬಹುದು. 

PREV
15
ಕಡಿಮೆ ಬೆಲೆಗೆ ಹಳೇ ಕಾರು -ಬೈಕ್ ಖರೀದಿಸುತ್ತೀರಾ? ನೆನಪಲ್ಲಿರಲಿ ಈ ಪಾಲಿಸಿ

ಭಾರತದಲ್ಲಿ ಹಲವು ಕುಟುಂಬಗಳ ಕಾರು ಕನಸು ನನಸು ಮಾಡಿದ್ದು, ಬಳಸಿದ ಕಾರು ಮಾರುಕಟ್ಟೆ. ಕೈಗೆಟುಕುವ ಬೆಲೆಯಲ್ಲಿ ಕಾರು ಖರೀದಿಸಿ ಖುಷಿ ಪಡುತ್ತಾರೆ. ಇದು ಆರ್ಥಿಕವಾಗಿಯೂ ಹಲವರ ಹೊರೆ ಕಡಿಮೆ ಮಾಡುತ್ತದೆ.  ಕಡಿಮೆ ಬಂಡವಾಳದಲ್ಲಿ ಉತ್ತಮ ಕಾರನ್ನು ಖರೀದಿಸಬೇಕೆಂದರೆ, ಬಳಸಿದ ಕಾರುಗಳನ್ನು ಖರೀದಿಸುವುದು ಒಳ್ಳೆಯದು. ಆದರೆ ಹಳೆಯ ಕಾರುಗಳನ್ನು ಖರೀದಿಸುವ ಮೊದಲು ಎಚ್ಚರಿಕೆಯಿಂದಿರಿ.

25

ಹಳೆಯ ವಾಹನಗಳನ್ನು ತೆಗೆದುಹಾಕಲು ಕೇಂದ್ರ ಸರ್ಕಾರ ಚಿಂತನೆ ನಡೆಸುತ್ತಿದೆ. 15 ವರ್ಷಗಳ ಜೀವಿತಾವಧಿ ಪೂರ್ಣಗೊಳಿಸಿದ ಕಾರುಗಳನ್ನು ಶೀಘ್ರದಲ್ಲೇ ನಿಲ್ಲಿಸಲು ಕ್ರಮ ಕೈಗೊಳ್ಳಲಾಗುತ್ತದೆ. ಈಗದಾಗಲೇ ವಾಹನ ಗುಜುರಿ ನೀತಿ ತರಲಾಗಿದೆ. ಆದರೆ ಪರಿಣಾಮಕಾರಿಯಾಗಿ ಈ ನಿಯಮ ಜಾರಿಗೆ ಬರುತ್ತಿದೆ. ಹಲವು ರಾಜ್ಯಗಳು ಹಂತ ಹಂತವಾಗಿ ಗುಜುರಿ ನಿಯಮ ಜಾರಿಗೆ ತರುತ್ತಿದೆ. ಮೊದಲು ಸರ್ಕಾರಿ ವಾಹನಗಳನ್ನು ಗುಜುರಿ ನೀತಿಗೆ ಒಳಪಡಿಸಲಾಗುತ್ತದೆ. ಬಳಿಕ ಖಾಸಗಿ ವಾಹನಗಳು ಒಳಪಡಲಿದೆ.

35

ಮಾಲಿನ್ಯ ನಿಯಂತ್ರಣ ಮಂಡಳಿ ನಿಯಮಗಳು ಕಠಿಣವಾಗುತ್ತಿದೆ. ಹಳೇ ವಾಹನಗಳು ಹೆಚ್ಚು ಕಾರ್ಬನ್ ಹೊರ ಸೂಸುುತ್ತದೆ. ಜೊತೆಗೆ ಇಂಧನ ಪ್ರಮಾಣವ ಹೆಚ್ಚು ಬೇಕಿದೆ. ಹೀಗಾಗಿ ಮಾಲಿನ್ಯ ನಿಯಂತ್ರಣ ಮಂಡಳಿಗಳ ನಿಯಮಗಳು ಈ ಹಳೇ ವಾಹನಗಳ ವಿರುದ್ದಾಗಿದೆ. ಹೀಗಾಗಿ ಖರೀದಿಸಿದ ಬಳಿಕ ಅತ್ತ ಉಪಯೋಗಿಸಲು ಆಗದೆ ಇತ್ತ ಮಾರಾಟ ಮಾಡಲು ಆಗದೆ ಸಂಕಷ್ಟ ಸಿಲುಕುವ ಸಂದರ್ಭ ಹೆಚ್ಚು. 

45

ವಾಹನಗಳಿಗೆ ಹೊಗೆ ಪರೀಕ್ಷೆಯನ್ನು ಇತ್ತೀಚೆಗೆ ಕಟ್ಟುನಿಟ್ಟಾಗಿ ನಡೆಸಲಾಗುತ್ತಿದೆ. ಹಳೆಯ ವಾಹನಗಳ ಸಂಖ್ಯೆ ಎಷ್ಟು ಹೆಚ್ಚಾಗುತ್ತಿದೆ ಎಂಬುದನ್ನು ಪರಿಶೀಲಿಸಿ ಕೆಲವು ಹಳೆಯ ವಾಹನಗಳನ್ನು ನಿಲ್ಲಿಸಲು ಕೇಂದ್ರ ಸರ್ಕಾರ ಚಿಂತಿಸುತ್ತಿದೆ. ನಿಗದಿತ ವರ್ಷದ ಬಳಿಕ ವಾಹನ ಫಿಟ್ನೆಸ್ ಸರ್ಟಿಫಿಕೇಟ್ ಸೇರಿದಂತೆ ಹಲವು ಸರ್ಟಿಫೀಕೇಟ್ ಮಾಡಿಸಿಕೊಳ್ಳಬೇಕು. ಇದು ದುಬಾರಿಯಾಗಲಿದೆ. ಇದಕ್ಕಿಂಚ ಕೊಂಚ  ದುಡ್ಡು ಹೆಚ್ಚು ನೀಡಿದರೆ ಹೊಸ ವಾಹನ ಕೈಸೇರಲಿದೆ. 

55

ಮಾಲಿನ್ಯ ನಿಯಮಗಳಿಗೆ ಅನುಗುಣವಾಗಿ ಹಳೆಯ ವಾಹನಗಳ ಎಂಜಿನ್ ದುರಸ್ತಿ ಮಾಡಿಸಿಕೊಳ್ಳಲು ನೀವು ಯೋಚಿಸುತ್ತಿದ್ದರೆ, ಹೆಚ್ಚು ಹಣ ಖರ್ಚಾಗುತ್ತದೆ. ಹಾಗಾಗಿ ಹೊಸ ವಾಹನ ಖರೀದಿಸುವುದು ಉತ್ತಮ. ಹೊಸ ವಾಹನ ಸರ್ಕಾರದ ಎಲ್ಲಾ ನಿಯಮಗಳಿಗೆ ಒಳಪಟ್ಟಿರುತ್ತದೆ. ಹೀಗಾಗಿ ಹೊಸ ವಾಹನ ಕನಿಷ್ಠ ಮುಂದಿನ 15 ವರ್ಷದ ವರೆಗೆ ಅಥವಾ ಅದಕ್ಕಿಂತ ಹೆಚ್ಚು ಯಾವುದೇ ಸಮಸ್ಯೆಯಾಗದು. 

click me!

Recommended Stories