IPL 2021 ಟೂರ್ನಿಗೆ ಅಧಿಕೃತ ಪಾಲುದಾರರಾದ ಟಾಟಾ ಸಫಾರಿ!

First Published | Mar 23, 2021, 8:46 PM IST

ಐಪಿಎಲ್ ಟೂರ್ನಿಗೆ ಕೌಂಟ್‌ಡೌನ್ ಆರಂಭಗೊಂಡಿದೆ. ಇದೀಗ ಐಪಿಎಲ್ ಅಧೀಕೃತ ಪಾಲುದಾರಿಕೆಯನ್ನು ಬಿಸಿಸಿಐ ಘೋಷಿಸಿದೆ. ಸತತ ನಾಲ್ಕನೇ ವರ್ಷ ಟಾಟಾ ಮೋಟಾರ್ಸ್ ಐಪಿಲ್ ಒಪ್ಪಂದ ಮುಂದುವರಿಸಿದೆ. ಟಾಟಾ ಸಫಾರಿ ಈ ಆವೃತ್ತಿಯಲ್ಲಿ ಐಪಿಎಲ್ ಪಾರ್ಟ್ನರ್‌ಶಿಪ್ ಒಪ್ಪಂದ ಮಾಡಿಕೊಂಡಿದೆ. ಈ ಕುರಿತ ಹೆಚ್ಚಿನ ವಿವರ ಇಲ್ಲಿದೆ.

ಭಾರತದ ಕ್ರಿಕೆಟ್ ನಿಯಂತ್ರಣ ಮಂಡಳಿಯೊಂದಿಗೆ (ಬಿಸಿಸಿಐ) ಸತತ ನಾಲ್ಕನೇ ವರ್ಷವೂ ಟಾಟಾ ಮೋಟಾರ್ಸ್ ತನ್ನ ಸಹಯೋಗವನ್ನು ಮುಂದುವರೆಸಿದೆ. ಭಾರತದ ಪ್ರಮುಖ ಆಟೋಮೋಟಿವ್ ಬ್ರಾಂಡ್ ಟಾಟಾ ಮೋಟಾರ್ಸ್, ತನ್ನ ಅಪ್ರತಿಮ ಕೊಡುಗೆ SUVಯ ಅತ್ಯಾಧುನಿಕ ಟಾಟಾ ಸಫಾರಿಯು ಇದೀಗ ಇಂಡಿಯನ್ ಪ್ರೀಮಿಯರ್ ಲೀಗ್‌ 2021 ರ ಅಧಿಕೃತ ಪಾಲುದಾರಾಗಿದೆ ಎಂದು ಟಾಟಾ ಮೋಟಾರ್ಸ್ ಘೋಷಿಸಿದೆ. ಪಂದ್ಯಾವಳಿಯು ಈ ವರ್ಷ ಭಾರತಕ್ಕೆ ಮರಳುತ್ತಿರುವುದರಿಂದ, ಕಂಪನಿಯು ಇತ್ತೀಚೆಗೆ ಪ್ರಾರಂಭಿಸಿದ ಐಕಾನಿಕ್ ಬ್ರಾಂಡ್-ಹೊಸ ಟಾಟಾ ಸಫಾರಿಗಾಗಿ ಬದ್ಧತೆಯನ್ನು ಪ್ರದರ್ಶಿಸಲು ಮತ್ತು ಚಾಲನೆ ಮಾಡಲು ಈ ಪ್ರತಿಷ್ಠಿತ ವೇದಿಕೆಯನ್ನು ಸದುಪಯೋಗಪಡಿಸಿಕೊಳ್ಳಲು ಎದುರು ನೋಡುತ್ತಿದೆ.
ಪಂದ್ಯಾವಳಿಯು ಏಪ್ರಿಲ್ 9 ರಂದು ಚೆನ್ನೈನಲ್ಲಿ ಪ್ರಾರಂಭವಾಗಲಿದ್ದು, ದೆಹಲಿ, ಮುಂಬೈ, ಬೆಂಗಳೂರು, ಕೋಲ್ಕತಾ ಸೇರಿದಂತೆ 6 ಪ್ರಮುಖ ನಗರಗಳಲ್ಲಿ ನಡೆಯಲಿದ್ದು, ನಂತರ ಫೈನಲ್ ಪಂದ್ಯಗಳು ಅಹಮದಾಬಾದ್‍ನಲ್ಲಿ ನಡೆಯಲಿವೆ.
Tap to resize

ಅಧಿಕೃತ ಪಾಲುದಾರರಾಗಿ, ಟಾಟಾ ಮೋಟಾರ್ಸ್ ಚೆನ್ನೈ, ಮುಂಬೈ, ದೆಹಲಿ, ಬೆಂಗಳೂರು, ಕೋಲ್ಕತಾ ಮತ್ತು ಅಹಮದಾಬಾದ್‍ನಲ್ಲಿ ಆತಿಥೇಯ ಕ್ರೀಡಾಂಗಣದಾದ್ಯಂತ ಹೊಸ ಸಫಾರಿಗಳನ್ನು ಪ್ರದರ್ಶಿಸಲಿದೆ. ಕಳೆದ ವರ್ಷಗಳಂತೆಯೇ, ಐಪಿಎಲ್ ಪಂದ್ಯಗಳು ಅತ್ಯಾಕರ್ಷಕ ಸೂಪರ್ ಸ್ಟ್ರೈಕರ್ ಪ್ರಶಸ್ತಿಗಳಿಗೆ ಆತಿಥ್ಯ ವಹಿಸಲಿವೆ - ಪಂದ್ಯದ ಹೆಚ್ಚಿನ ಸ್ಟ್ರೈಕ್ ದರವನ್ನು ಹೊಂದಿರುವ ಆಟಗಾರನು 1,00,000 ರೂ ಬಹುಮಾನದ ಹಣದೊಂದಿಗೆ ಅತ್ಯಂತ ಅಪೇಕ್ಷಿತ ಸೂಪರ್ ಸ್ಟ್ರೈಕರ್ ಟ್ರೋಫಿಯನ್ನು ಪಡೆಯಲಿದ್ದಾನೆ.
ಲ್ಯಾಂಡ್ ರೋವರ್‌ನಿಂದ ಹೆಸರಾಂತ ಪ್ಲಾಟ್‍ಫಾರ್ಮ್‍ನಿಂದ ಪಡೆದ ವಾಸ್ತುಶಿಲ್ಪವಾದ ಒಮೆಗಾರ್ಕ್‍ನ ಸಾಬೀತಾದ ಸಾಮಥ್ರ್ಯದೊಂದಿಗೆ ಇಂಪ್ಯಾಕ್ಟ್ 2.0 ವಿನ್ಯಾಸ ಲುಕ್ ಸಂಯೋಜಿಸುವ ಮೂಲಕ ತನ್ನ ಹೊಸ ಅವತಾರದಲ್ಲಿ ಸಫಾರಿಯು ಬ್ರಾಂಡ್‍ನ ಶ್ರೀಮಂತ ಪರಂಪರೆಯನ್ನು ಮುಂದಿಡುತ್ತದೆ. ಆಕರ್ಷಕ ವಿನ್ಯಾಸ, ಸಾಟಿಯಿಲ್ಲದ ಬಹುಮುಖತೆ, ಬೆಲೆಬಾಳುವ ಮತ್ತು ಆರಾಮದಾಯಕ ಒಳಾಂಗಣಗಳು ಮತ್ತು ಆಧುನಿಕ, ಬಹುಮುಖಿ ಜೀವನಶೈಲಿಗಾಗಿ ಅತ್ಯುತ್ತಮ ಕಾರ್ಯಕ್ಷಮತೆಯನ್ನು ಬಯಸುವ ಹೊಸ ಯುಗದ ಎಸ್‍ಯುವಿ ಗ್ರಾಹಕರ ಅವಶ್ಯಕತೆಗಳನ್ನು ಪೂರೈಸಲು ಇದು ಅಭಿವೃದ್ಧಿಯಾಗಿದೆ.
ಈ ವರ್ಷದ ಐಪಿಎಲ್ ನಮಗೆ ವಿಶೇಷವಾದದ್ದು, ಏಕೆಂದರೆ ಕಷ್ಟಕರವಾದ ಒಂದು ವರ್ಷದ ನಂತರ ಪಂದ್ಯಾವಳಿಯು ತನ್ನ ಭಾರತೀಯ ಕ್ರೀಡಾಂಗಣಗಳಿಗೆ ಮರಳಿದೆ. ಭಾರತದ ಕ್ರಿಕೆಟ್ ಪ್ರಿಯರು ಲೀಗ್ ಅನ್ನು ತಮ್ಮ ತವರು ಕ್ರೀಡಾಂಗಣಗಳಿಗೆ ಸ್ವಾಗತಿಸಲು ಎದುರು ನೋಡುತ್ತಿರುವುದರಿಂದ 2021 ರ ಪಂದ್ಯಾವಳಿಯ ಉತ್ಸಾಹವು ಒಂದು ಮಟ್ಟಕ್ಕೆ ಹೆಚ್ಚಾಗುತ್ತದೆ. ಬಿಸಿಸಿಐನೊಂದಿಗಿನ ನಮ್ಮ ಫಲಪ್ರದ ಒಡನಾಟವನ್ನು ಸತತ ನಾಲ್ಕನೇ ವರ್ಷವೂ ನವೀಕರಿಸುವ ಮೂಲಕ ಈ ಸಂಭ್ರಮಕ್ಕೆ ನಾವು ಕೊಡುಗೆ ನೀಡುತ್ತಿರುವುದಕ್ಕೆ ನಮಗೆ ಬಹಳ ರೋಮಾಂಚನವಾಗಿದೆ ಎಂದು ಟಾಟಾ ಮೋಟಾರ್ಸ್‍ನ ಪ್ಯಾಸೆಂಜರ್ ವೆಹಿಕಲ್ ಬಿಸಿನೆಸ್ ಯುನಿಟ್ ಮಾರ್ಕೆಟಿಂಗ್ ಮುಖ್ಯಸ್ಥ ವಿವೇಕ್ ಶ್ರೀವತ್ಸ ಹೇಳಿದರು.
ಹೊಸ ಸಫಾರಿಯು ಅದರ ಪ್ರೀಮಿಯಂ ವಿನ್ಯಾಸ, ಅತ್ಯುತ್ತಮ ವೈಶಿಷ್ಟ್ಯಗಳು ಮತ್ತು ಮಹೋನ್ನತ ಆರಾಮಗಳಿಗೆ ಸಂಬಂಧಿಸಿದಂತೆ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆಯನ್ನು ಪಡೆದುಕೊಂಡಿದ್ದು, ಈ ಹೊಸ ಅವತಾರದಲ್ಲಿ ತನ್ನ ಐಪಿಎಲ್ ಚೊಚ್ಚಲ ಪ್ರವೇಶವನ್ನು ಮಾಡುತ್ತಿದೆ. ವೀಕ್ಷಕರ ಗಮನವನ್ನು ಸೆಳೆಯಲು ನಾವು ನವೀನ ಯೋಜನೆಗಳ ಮೇಲೆ ಕೆಲಸ ಮಾಡುತ್ತಿದ್ದೇವೆ, ಏಕೆಂದರೆ ಅವರು ತಮ್ಮ ತಂಡಗಳನ್ನು ಬೆಂಬಲಿಸಲು ದೇಶದ ವಿವಿಧ ಭಾಗಗಳಿಂದ ಬರುತ್ತಿದ್ದಾರೆ. ಈ ಸಹಯೋಗದಿಂದ ಅಪಾರ ಲಾಭವನ್ನು ಪಡೆಯುವ ಕುರಿತು ನಾವು ಸಕಾರಾತ್ಮಕವಾಗಿದ್ದೇವೆ ಮತ್ತು ನಮ್ಮ ನೆಚ್ಚಿನ ಕ್ರೀಡೆ ಮತ್ತು ಕ್ರಿಕೆಟ್ ಲೀಗ್ ಅನ್ನು ಮತ್ತೊಮ್ಮೆ ಅಭಿಮಾನಿಗಳೊಂದಿಗೆ ಆಚರಿಸುವ ಸಂತೋಷವನ್ನು ಹಂಚಿಕೊಳ್ಳಲು ಆಶಿಸುತ್ತೇವೆ ಎಂದು ಶ್ರೀವತ್ಸ ಹೇಳಿದರು.
ಈ ವರ್ಷದ ವಿವೋ ಐಪಿಎಲ್‍ಗಾಗಿ ತಮ್ಮ ಇತ್ತೀಚಿನ-ಬಿಡುಗಡೆ ಯಾದ ಅತ್ಯಾಧುನಿಕ ಟಾಟಾ ಸಫಾರಿಯೊಂದಿಗೆ ಟಾಟಾ ಮೋಟಾರ್ಸ್‍ನ ಮುಂದುವರೆದ ಸಹಯೋಗವನ್ನು ನಾವು ಎದುರು ನೋಡುತ್ತಿದ್ದೇವೆ. ಟಾಟಾ ಮೋಟಾರ್ಸ್ 2018 ರಿಂದ ಪಂದ್ಯಾವಳಿಯ ಅಧಿಕೃತ ಪಾಲುದಾರರಾಗಿದ್ದು, ಕಳೆಯುತ್ತೊರುವ ಪ್ರತಿ ವರ್ಷದೊಂದಿಗೆ ಅವರೊಂದಿಗಿನ ನಮ್ಮ ಸಂಬಂಧವು ಬಲವಾಗಿ ಬೆಳೆಯುತ್ತಿದೆ. ಮೂರು ಸೀಸನ್‍ಗಳಲ್ಲಿ, ಪಂದ್ಯಾವಳಿಯಲ್ಲಿ ತಮ್ಮ ಗ್ರಾಹಕರಿಗೆ ಮತ್ತು ಅಭಿಮಾನಿಗಳಿಗೆ ಪಂದ್ಯಾವಳಿಯನ್ನು ಅತ್ಯಾಕರ್ಷಕಗೊಳಿಸುವ ಕಂಪನಿಯ ಪ್ರಯತ್ನಗಳಿಗೆ ನಾವು ಸಾಕ್ಷಿಯಾಗಿದ್ದೇವೆ. ಅಸ್ತಿತ್ವದಲ್ಲಿರುವ ಅಭೂತಪೂರ್ವ ವಾತಾವರಣದ ಹೊರತಾಗಿಯೂ, ಆಟದ ಬೆಂಬಲಿಗರಿಗೆ ಹೆಚ್ಚಿನ ಮೌಲ್ಯವನ್ನು ನೀಡುವ ಮೂಲಕ ಟಾಟಾ ಮೋಟಾರ್ಸ್ ಮತ್ತು ನಾವು ನಮ್ಮ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸಿಕೊಂಡು ಈ ಸಹಭಾಗಿತ್ವದ ಮತ್ತೊಂದು ಫಲಪ್ರದ ವರ್ಷವನ್ನು ನಾವು ಎದುರು ನೋಡುತ್ತಿದ್ದೇವೆ ಎಂದು ಐಪಿಎಲ್ ಮುಖ್ಯಸ್ಥ ಬ್ರಿಜೇಶ್ ಪಟೇಲ್ ಹೇಳಿದರು.

Latest Videos

click me!