ನೆಕ್ಸಾನ್, ಪಂಚ್, ಅಲ್ಟ್ರೋಜ್ ಸೇರಿ ಟಾಟಾ ಕಾರುಗಳಿಗೆ ಬರೋಬ್ಬರಿ 1.35 ಲಕ್ಷ ರೂ ಡಿಸ್ಕೌಂಟ್

ಟಾಟಾ ಮೋಟಾರ್ಸ್ ಇದೀಗ ಹೊಸ ಕಾರು ಖರೀದಿಸುವ ಗ್ರಾಹಕರಿಗೆ ಭರ್ಜರಿ ಆಫರ್ ಘೋಷಿಸಿದೆ. ನೆಕ್ಸಾನ್, ಪಂಚ್, ಅಲ್ಟ್ರೋಜ್ ಸೇರಿದಂತೆ ಟಾಟಾ ಕಾರುಗಳಿಗೆ ಬರೋಬ್ಬರಿ 1.5 ಲಕ್ಷ ರೂ ಡಿಸ್ಕೌಂಟ್ ಘೋಷಿಸಲಾಗಿದೆ. ಈ ಆಫರ್ ಸೀಮಿತ ಅವಧಿಗೆ ಮಾತ್ರ ಲಭ್ಯವಿದೆ.

Nexon Punch Altroz Tata motors offers massive discounts on april for selected cars

ಟಾಟಾ ಮೋಟಾರ್ಸ್ ಕಾರುಗಳು ಭಾರತದಲ್ಲಿ ಭಾರಿ ಬೇಡಿಕೆ ಪಡೆದುಕೊಂಡಿದೆ. 5 ಸ್ಟಾರ್ ಸೇಫ್ಟಿ ರೇಟಿಂಗ್, ಅತ್ಯಾಕರ್ಷಕ ವಿನ್ಯಾಸ ಸೇರಿದಂತೆ ಹಲವು ಕಾರಣಗಳಿಂದ ಟಾಟಾ ಕಾರುಗಳು ನೆಚ್ಚಿನ ಕಾರುಗಳಾಗಿ ಮಾರ್ಪಟ್ಟಿದೆ. ಇದೀಗ ಟಾಟಾ ಮೋಟಾರ್ಸ್ ಎಪ್ರಿಲ್ ತಿಂಗಳ ಡಿಸ್ಕೌಂಟ್ ಆಫರ್ ಘೋಷಿಸಿದೆ. ಟಾಟಾದ ಹಲವು ಕಾರುಗಳ ಮೇಲೆ ಬರೋಬ್ಬರಿ 1.5 ಲಕ್ಷ ರೂಪಾಯಿ ವರೆಗೆ ಡಿಸ್ಕೌಂಟ್ ನೀಡಲಾಗಿದೆ.
 

Nexon Punch Altroz Tata motors offers massive discounts on april for selected cars

ಟಾಟಾ ಕಾರು ಖರೀದಿಸುವ ಪ್ಲಾನ್ ನಿಮ್ಮಲ್ಲಿದ್ದರೆ ಈ ತಿಂಗಳು ಉತ್ತಮವಾಗಿದೆ. ಕಾರಣ ಟಾಟಾ ಮೋಟಾರ್ಸ್ ಎಪ್ರಿಲ್ ತಿಂಗಳ ಡಿಸ್ಕೌಂಟ್ ಆಫರ್ ಘೋಷಿಸಲಾಗಿದೆ. ಇದರಿಂದ ಗ್ರಾಹಕರು ಕಡಿಮೆ ಬೆಲೆಗೆ ಟಾಟಾ ಕಾರು ಖರೀದಿಸಲು ಸಾಧ್ಯವಿದೆ. ಎಪ್ರಿಲ್ ತಿಂಗಳಲ್ಲಿ ಟಾಟಾ ಕಾರು ಬುಕ್ ಮಾಡುವ ಗ್ರಾಹಕರಿಗೆ ಈ ಡಿಸ್ಕೌಂಟ್ ಆಫರ್ ಅನ್ವಯವಾಗಲಿದೆ. ಪ್ರಮುಖವಾಗಿ MY24 ಮಾಡೆಲ್ ಕಾರುಗಳ ಮೇಲೆ ಈ ಡಿಸ್ಕೌಂಟ್ ಆಫರ್ ನೀಡಲಾಗಿದೆ.
 


ಟಾಟಾ ಪಂಚ್-ಕರ್ವ್ ಡಿಸ್ಕೌಂಟ್
ಟಾಟಾ ಪಂಚ್ MY24 ಮಾಡೆಲ್ ಕಾರಿನ ಮೇಲೆ ಒಟ್ಟು 25,000 ರೂಪಾಯಿ ಆಫರ್ ನೀಡಲಾಗಿದೆ. ಟಾಟಾ ಘೋಷಿಸಿದ ಆಫರ್ ಪೈಕಿ ಅತೀ ಕಡಿಮೆ ಡಿಸ್ಕೌಂಟ್ ಆಫರ್ ಪಂಚ್ ಕಾರಿಗೆ ನೀಡಲಾಗಿದೆ. ಇನ್ನುಳಿದ ಕಾರುಗಳ ಡಿಸ್ಕೌಂಟ್ ಮೊತ್ತ ಹೆಚ್ಚಿದೆ. ಇನ್ನು ಟಾಟಾ ಕರ್ವ್  MY24 ಮಾಡೆಲ್ ಕಾರಿನ ಮೇಲೆ 30,000 ರೂಪಾಯಿ ಡಿಸ್ಕೌಂಟ್ ಘೋಷಿಸಲಾಗಿದೆ.
 

ಟಾಟಾ ಟಿಯಾಗೋ ಟಿಗೋರ್ ಡಿಸ್ಕೌಂಟ್
ಟಾಟಾ ಟಿಯಾಗೋ  MY24 ಮಾಡೆಲ್ ಕಾರಿನ ಮೇಲೆ 35,000 ರೂಪಾಯಿ ಡಿಸ್ಕೌಂಟ್ ನೀಡಲಾಗಿದೆ. ಇನ್ನು ಟಾಟಾ ಟಿಗೋರ್  MY24 ಮಾಡೆಲ್ ಕಾರಿನ ಮೇಲೆ 45,000 ರೂಪಾಯಿ ಡಿಸ್ಕೌಂಟ್ ಘೋಷಿಸಲಾಗಿದೆ. ಇದರಲ್ಲಿ 30,000 ರೂಪಾಯಿ ಕನ್ಸೂಮರ್ ಡಿಸ್ಕೌಂಟ್ ಹಾಗೂ 15,000 ಎಕ್ಸ್‌ಚೇಂಜ್ ಬೋನಸ್ ನೀಡಲಾಗಿದೆ.
 

ಟಾಟಾ ನೆಕ್ಸಾನ್  MY24 ಮಾಡೆಲ್ ಕಾರಿನ ಮೇಲೆ 45,000 ರೂಪಾಯಿ ಡಿಸ್ಕೌಂಟ್ ನೀಡಲಾಗಿದೆ. ಇದರಲ್ಲಿ 35,000 ರೂಪಾಯಿ ಕನ್ಸೂಮರ್ ಡಿಸ್ಕೌಂಟ್ ಹಾಗೂ 10,000 ರೂಪಾಯಿ ಎಕ್ಸ್‌ಚೇಂಜ್ ಬೋನಸ್ ನೀಡಲಾಗಿದೆ.  MY25 ಮಾಡೆಲ್ ನೆಕ್ಸಾನ್ ಕಾರಿನ ಮೇಲೆ 15,000 ರೂಪಾಯಿ ಡಿಸ್ಕೌಂಟ್ ನೀಡಲಾಗಿದೆ. ಇದು ಪೆಟ್ರೋಲ್ ಮತ್ತು ಡೀಸೆಲ್ ಕಾರಿಗೆ ಮಾತ್ರ ಲಭ್ಯವಿದೆ.
 

ಅಲ್ಟ್ರೋಜ್ ಕಾರಿಗೆ 1.35 ಲಕ್ಷ ರೂ ಡಿಸ್ಕೌಂಟ್
ಪ್ರಿಮಿಯಂ ಹ್ಯಾಚ್‌ಬ್ಯಾಕ್ ಕಾರು ಟಾಟಾ ಅಲ್ಟ್ರೋಜ್ ರೇಸರ್ ಕಾರಿಗೆ ಬರೋಬ್ಬರಿ 1.35 ಲಕ್ಷ ರೂಪಾಯಿ ಡಿಸ್ಕೌಂಟ್ ನೀಡಲಾಗಿದೆ.  MY24 ಮಾಡೆಲ್ ಸ್ಟಾಕ್ ಕ್ಲೀಯರೆನ್ಸ್ ಆಫರ್ ಇದಾಗಿದೆ. ಹೀಗಾಗಿ ಭರ್ಜರಿ ಆಫರ್ ನೀಡಲಾಗಿದೆ. ಇನ್ನು ಅಲ್ಟ್ರೋಜ್ ನಾರ್ಮಲ್ ಕಾರಿಗೆ 1 ಲಕ್ಷ ರೂಪಾಯಿ ಡಿಸ್ಕೌಂಟ್ ಆಫರ್ ನೀಡಲಾಗಿದೆ.

ಸೂಚನೆ: ಕಾರುಗಳ ಮೇಲಿನ ಆಫರ್, ಡಿಸ್ಕೌಂಟ್ ಬೆಲೆಗಳು ರಾಜ್ಯದಿಂದ ರಾಜ್ಯಕ್ಕೆ, ಡೀಲರ್‍‌ನಿಂದ ಡೀಲರ್‌ಗೆ ಬದಲಾಗುವ ಸಾಧ್ಯತೆ ಇದೆ. ಹೀಗಾಗಿ ಸಮೀಪದ ಡೀಲರ್‌ ಬಳಿ ಸಂಪರ್ಕಿಸಿ ಆಫರ್ ಖಚಿತಪಡಿಸಿಕೊಳ್ಳಿ

Latest Videos

tags
vuukle one pixel image
click me!