ಒಂದು ಕಾಲದಲ್ಲಿ ಬಿಲಿಯನೇರ್‌ ಶ್ರೀಮಂತರಾಗಿ ಈಗ ದಿವಾಳಿಯಾಗಿರುವ ಭಾರತದ ಟಾಪ್‌ ಉದ್ಯಮಿಗಳ ಲಿಸ್ಟ್

First Published | Apr 9, 2024, 4:24 PM IST

ಭಾರತದಲ್ಲಿ ಅನೇಕ ಉದ್ಯಮಿಗಳು ಬಿಲಿಯನೇರ್ ಫೋರ್ಬ್ಸ್ ಪಟ್ಟಿಯಲ್ಲಿ ಸ್ಥಾನ ಪಡೆದು ವಿವಿಧ ಕಾರಣಗಳಿಗೆ ಸಾಲಗಾರರಾಗಿ ದಿವಾಳಿಯಾದರು. ಕರ್ನಾಟಕ ಮೂಲದ ಇಬ್ಬರು ಉದ್ಯಮಿಗಳು ಇದಕ್ಕೆ ಹೊರತಾಗಿಲ್ಲ. ಭಾರತದ ಮಾಜಿ ಬಿಲಿಯನೇರ್ ಉದ್ಯಮಿಗಳ ಪಟ್ಟಿ ಇಲ್ಲಿದೆ. 

ಉದ್ಯಮಿ ಐಪಿಎಲ್ ಫ್ರಾಂಚೈಸಿಯ ಮಾಜಿ ಮಾಲೀಕ ವಿಜಯ್ ಮಲ್ಯ 17 ಭಾರತೀಯ ಬ್ಯಾಂಕ್‌ ಗಳಲ್ಲಿ 9,000 ಕೋಟಿ  ಸಾಲದಲ್ಲಿ ಮುಳುಗಿದ್ದು, ದಿವಾಳಿಯಾದ ಬಳಿಕ ಭಾರತದಿಂದ ಪರಾರಿಯಾಗಿ ಯುಕೆಯಲ್ಲಿ ನೆಲೆಸಿದ್ದಾರೆ.  ಆದಾಯ ತೆರಿಗೆ ಇಲಾಖೆ ಮತ್ತು ಕೇಂದ್ರೀಯ ತನಿಖಾ ದಳ ಸೇರಿದಂತೆ ಹಲವು ಏಜೆನ್ಸಿಗಳು ಹಣಕಾಸು ವಂಚನೆ ಮತ್ತು ಅಕ್ರಮ ಹಣ ವರ್ಗಾವಣೆ ಸೇರಿದಂತೆ  ಹಲವು ಪ್ರಕರಣಗಳ ತನಿಖೆ ನಡೆಸುತ್ತಿವೆ. ಯುಕೆ ಹೈಕೋರ್ಟ್‌ನಲ್ಲಿ ಮಲ್ಯ ಹಸ್ತಾಂತರಕ್ಕೆ ಭಾರತ ಮನವಿ ಮಾಡಿದ್ದು, ಪ್ರಕರಣ ವಿಚಾರಣೆಯಲ್ಲಿದೆ. ಮಂಗಳೂರಿನ ಬಂಟ್ವಾಳ ಮೂಲದವರಾಗಿದ್ದಾರೆ.

ಪ್ರಸ್ತುತ ದ್ವೀಪ ರಾಷ್ಟ್ರವಾದ ಆಂಟಿಗುವಾ ಮತ್ತು ಬಾರ್ಬುಡಾದಲ್ಲಿ ವಾಸಿಸುತ್ತಿರುವ ಪರಾರಿಯಾಗಿರುವ ಉದ್ಯಮಿ ಮೆಹುಲ್ ಚೋಕ್ಸಿ, ಕ್ರಿಮಿನಲ್ ಪಿತೂರಿಗಳು, ನಂಬಿಕೆ ದ್ರೋಹ ಮತ್ತು ಮನಿ ಲಾಂಡರಿಂಗ್‌ಗಾಗಿ ಕೇಸ್‌ ನಲ್ಲಿ ಭಾರತಕ್ಕೆ ಬೇಕಾದ ದಿವಾಳಿಯಾಗಿರುವ ಉದ್ಯಮಿ. ಚೋಕ್ಸಿ ಭಾರತದಲ್ಲಿ 4,000 ಮಳಿಗೆಗಳನ್ನು ಹೊಂದಿರುವ ಚಿಲ್ಲರೆ ಆಭರಣ ಕಂಪನಿಯಾದ ಗೀತಾಂಜಲಿ ಗ್ರೂಪ್‌ನ ಮಾಲೀಕರಾಗಿದ್ದರು. ಪಂಜಾಬ್ ನ್ಯಾಷನಲ್ ಬ್ಯಾಂಕ್ ವಂಚನೆ ಪ್ರಕರಣದಲ್ಲಿ ಅವರ ವಿರುದ್ಧ ಬಂಧನ ವಾರಂಟ್ ಜಾರಿಯಾಗಿದೆ. 1.8 ಬಿಲಿಯನ್ ಡಾಲರ್ ವಂಚನೆಯಲ್ಲಿ ದೇಶದ ಎರಡನೇ ಅತಿದೊಡ್ಡ ಸರ್ಕಾರಿ ಸ್ವಾಮ್ಯದ ಸಾಲದಾತ ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್‌ಬಿ) ಯ ಇಬ್ಬರು ಉದ್ಯೋಗಿಗಳೊಂದಿಗೆ ಚೋಕ್ಸಿ ಸಹಕರಿಸಿದ್ದಾರೆ ಎಂದು ಶಂಕಿಸಲಾಗಿದೆ. 

Tap to resize

ಸತ್ಯಂ ಕಂಪ್ಯೂಟರ್ಸ್, 90 ರ ದಶಕದಲ್ಲಿ ಅತ್ಯಂತ ಯಶಸ್ವಿ ಐಟಿ ಸಂಸ್ಥೆಯಾಗಿತ್ತು. 2015 ರಲ್ಲಿ ಕಂಪೆನಿ ಕುಸಿದು ಮುಚ್ಚಲ್ಪಟ್ಟಿತು. ಸತ್ಯಂ ಕಂಪ್ಯೂಟರ್ ಸರ್ವಿಸಸ್‌ನ ಮಾಜಿ ಅಧ್ಯಕ್ಷ ಮತ್ತು ಸಿಇಒ ರಾಮಲಿಂಗ ರಾಜು ಅವರು ತಮ್ಮ ಹುದ್ದೆಯಿಂದ ಕೆಳಗಿಳಿದರು. ಕಂಪನಿಗೆ 7,140 ಕೋಟಿ ರೂಪಾಯಿ ವಂಚನೆ ಮಾಡಿದ್ದರು. ಸತ್ಯಂ ಹಗರಣದ ನಂತರ ರಾಜು ಅವರು ಸತ್ಯಂ ಮಂಡಳಿಗೆ ರಾಜೀನಾಮೆ ನೀಡಿದರು, ಕಂಪನಿಯ ಆದಾಯ, ಮಾರ್ಜಿನ್ ಮತ್ತು 5,000 ಕೋಟಿ ರೂಪಾಯಿಗೂ ಹೆಚ್ಚು ನಗದು ಬಾಕಿ ಎಂದು ನಕಲಿ ಮಾಡಿದ್ದರು.  7,000 ಕೋಟಿ  ವಂಚನೆಯನ್ನು ಒಪ್ಪಿಕೊಂಡರು. ಏಪ್ರಿಲ್ 2009 ರಲ್ಲಿ ಟೆಕ್ ಮಹೀಂದ್ರಾದಿಂದ ಸತ್ಯಂ ಅನ್ನು ಖರೀದಿಸಲಾಯಿತು ಮತ್ತು ಮಹೀಂದ್ರಾ ಸತ್ಯಂ ಎಂದು ಮರುನಾಮಕರಣ ಮಾಡಲಾಯಿತು.

ಭಾರತದಿಂದ ಪರಾರಿಯಾಗಿರುವ ಉದ್ಯಮಿ, ನೀರವ್ ಮೋದಿ, ಕ್ರಿಮಿನಲ್ ಪಿತೂರಿ, ಭ್ರಷ್ಟಾಚಾರ, ಮನಿ ಲಾಂಡರಿಂಗ್, ವಂಚನೆ ಮತ್ತು ಒಪ್ಪಂದದ ಉಲ್ಲಂಘನೆಗಾಗಿ ಆಗಸ್ಟ್ 2018 ರಿಂದ ಭಾರತಕ್ಕೆ ಬೇಕಾಗಿದ್ದಾರೆ. ಪಂಜಾಬ್ ನ್ಯಾಷನಲ್ ಬ್ಯಾಂಕ್‌ನ  28,000 ಕೋಟಿ ವಂಚನೆ ಪ್ರಕರಣದಲ್ಲಿ ಸಿಲುಕಿದ್ದಾರೆ. ಭಾರತ ಅಲ್ಲದೆ ಕ್ಯಾಲಿಫೋರ್ನಿಯಾ ಮೂಲದ ಉದ್ಯಮಿಯೊಬ್ಬರು ಎರಡು ಕಸ್ಟಮ್ ಡೈಮಂಡ್ ಎಂಗೇಜ್‌ಮೆಂಟ್ ರಿಂಗ್‌ಗಳ ಮೇಲೆ 4.2 ಮಿಲಿಯನ್‌ಗೆ ಡಾಲರ್‌ ಮೋದಿ ವಿರುದ್ಧ ಮೊಕದ್ದಮೆ ಹೂಡಿದ್ದಾರೆ. ಸದ್ಯ ನೀರವ್ ಯುಕೆಯಲ್ಲಿ ವಾಸಿಸುತ್ತಿದ್ದು, ಬ್ರಿಟನ್‌ನಲ್ಲಿ  ಆಶ್ರಯಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ   2020ರಲ್ಲಿ ನ್ಯಾಯಾಲಯವು ಮೋದಿಯ ಸುಮಾರು 1,400 ಕೋಟಿ ರೂ ಮೌಲ್ಯದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವಂತೆ ಆದೇಶಿಸಿತು.

ಸಹಾರಾ ಇಂಡಿಯಾ ಪರಿವಾರ್‌ನ ವ್ಯವಸ್ಥಾಪಕ  ಮತ್ತು ಅಧ್ಯಕ್ಷ ಸುಬ್ರತಾ ರಾಯ್ ಅವರು 2014 ರಲ್ಲಿ ಕಾನೂನು ಜಾರಿ ಏಜೆನ್ಸಿಗಳೊಂದಿಗೆ ರನ್-ಇನ್ ಮಾಡಿದ್ದರು. 26 ಫೆಬ್ರವರಿ 2014 ರಂದು, ಭಾರತದ ಸರ್ವೋಚ್ಚ ನ್ಯಾಯಾಲಯವು ತನ್ನ ಮುಂದೆ ಹಾಜರಾಗಲು ವಿಫಲರಾದ ರಾಯ್  ದೆಹಲಿಯ ತಿಹಾರ್ ಜೈಲಿನಲ್ಲಿ ಬಂಧನದಲ್ಲಿದ್ದರು ಮತ್ತು ಮೇ 2016ರಲ್ಲಿ ಪೆರೋಲ್ ಮೇಲೆ ಹೊರಗಿದ್ದರು. 2019 ರಲ್ಲಿ ಸಹಾರಾ 10,621 ಕೋಟಿ ರೂ.  ಸಾಲ ಘೋಷಿಸಿ ಕಂಪೆನಿಯನ್ನು ಮುಚ್ಚಬೇಕಾಯ್ತು. ಬಿಲಿಯನೇರ್ ಪಟ್ಟಿಯಿಂದ ಹೊರಗುಳಿದರು. 2023 ನವೆಂಬರ್‌ ನಲ್ಲಿ ಸುಬ್ರತಾ ರಾಯ್ ನಿಧನರಾದರು.

ಭಾರತದ ಅತಿದೊಡ್ಡ ಕಾಫಿ ಉದ್ಯಮಿ ಕೆಫೆ ಕಾಫಿ ಡೇ ಸಂಸ್ಥಾಪಕ ಸಿದ್ದಾರ್ಥ್ ಹೆಗ್ಡೆ ಕೂಡ ಸಾಲಗಾರರಾದರು. 2015ರಲ್ಲಿ ಫೋರ್ಬ್ಸ್ ಬಿಲಿಯನೇರ್ ಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದರು. ಸಾವಿಗೂ ಮುನ್ನ ಖಾಸಗಿ ಇಕ್ವಿಟಿ ಸಂಸ್ಥೆ ಮತ್ತು ತೆರಿಗೆ ಅಧಿಕಾರಿಗಳ ಕಿರುಕುಳದ ಒತ್ತಡದ ಕುರಿತು ಪತ್ರವೊಂದನ್ನು ಬರೆದಿದ್ದರು. 21 ಸೆಪ್ಟೆಂಬರ್ 2017 ರಂದು, ಕರ್ನಾಟಕ ಮತ್ತು ಗೋವಾ ಪ್ರದೇಶಗಳ ಆದಾಯ ತೆರಿಗೆ ಇಲಾಖೆಯ ಹಿರಿಯ ಅಧಿಕಾರಿಗಳು ಮುಂಬೈ, ಬೆಂಗಳೂರು, ಚೆನ್ನೈ ಮತ್ತು ಚಿಕ್ಕಮಗಳೂರಿನಲ್ಲಿ ವಿ.ಜಿ.ಸಿದ್ಧಾರ್ಥ ಅವರ 20 ಕ್ಕೂ ಹೆಚ್ಚು ಸ್ಥಳಗಳಲ್ಲಿ ದಾಳಿ ನಡೆಸಿದರು. 2019ರಲ್ಲಿ ಆತ್ಮಹತ್ಯೆ ಮಾಡಿಕೊಂಡರು. 

ಏಷ್ಯಾದ ಶ್ರೀಮಂತ ವ್ಯಕ್ತಿ ಮುಖೇಶ್  ಅಂಬಾನಿ ಅವರ ಸಹೋದರ ಅನಿಲ್ ಅಂಬಾನಿ ಒಂದು ಕಾಲದಲ್ಲಿ ವಿಶ್ವದ 6 ನೇ ಶ್ರೀಮಂತ ಎನಿಸಿಕೊಂಡಿದ್ದರು. ಈಗ  40 ಸಾವಿರ ಕೋಟಿ ಸಾಲದಲ್ಲಿ ಸಿಲುಕಿ ಕೊನೆ ತನ್ನ ಬಳಿಕ ಶೂನ್ಯ ಆಸ್ತಿ ಘೋಷಿಸಿಕೊಂಡರು. ಜೈಲಿಗೆ ಹೋಗಬೇಕಾಗಿದ್ದ ಅನಿಲ್‌ ಗೆ ಕೊನೆ ಘಳಿಗೆಯಲ್ಲಿ ಜಾಮೀನು ಸಿಕ್ಕಿತ್ತು.  ನ್ಯಾಯಾಲಯಗಳಲ್ಲಿ ಅನೇಕ ಪ್ರಕರಣಗಳನ್ನು ಎದುರಿಸುತ್ತಿರುವ ಅನಿಲ್‌ ಸದ್ಯ ಕೆಲವು ಸಾಲಗಳನ್ನು ಮರು ಪಾವತಿ ಮಾಡಿದ್ದಾರೆ. ಹೀಗಾಗಿ ರಿಲಯನ್ಸ್ ಕಮ್ಯುನಿಕೇಷನ್ಸ್ ಲಿಮಿಟೆಡ್ ಶೇರುಗಳು ಈಗ ಮಾರುಕಟ್ಟೆಯಲ್ಲಿ ಏರಿಕೆ ಕಂಡಿದೆ.

ಭಾರತದ ರಿಟೇಲ್ ಕಿಂಗ್ ಎಂದು ಕರೆಯಲ್ಪಡುತ್ತಿದ್ದ ಫ್ಯೂಚರ್ ಗ್ರೂಪ್‌ನ ಕಿಶೋರ್ ಬಿಯಾನಿ ಕೊರೋನಾ ಸಮಯದಲ್ಲಿ ದಿವಾಳಿಯಾದ್ರು ತದ ನಂತರದಿಂದ ಸಾಲದಿಂದ ಹೊರಬರಲು ಪ್ರಯತ್ನಿಸುತ್ತಿದ್ದು, ತನ್ನ ಶೇರುಗಳನ್ನು ಮಾರಾಟ ಮಾಡಿ ಸಾಲವನ್ನು ತೀರಿಸುತ್ತಿದೆ. ಕೋವಿಡ್‌ ಸಾಂಕ್ರಾಮಿಕ ಸಮಯದಲ್ಲಿ 3 ತಿಂಗಳಲ್ಲಿ 7000 ಕೋಟಿ ರೂಪಾಯಿಗಳ ವ್ಯವಹಾರ ನಷ್ಟವಾಯ್ತು. ಹೀಗಾಗಿ ಕಂಪೆನಿಯನ್ನು ಮಾರಾಟ ಮಾಡಲು ನಿರ್ಧರಿಸಲಾಯ್ತು. ಬಳಿಕ ಅಂಬಾನಿಗೆ ಕಂಪೆನಿಯನ್ನು ಮಾರಾಟ ಮಾಡಲಾಯ್ತು. ಮುಕ್ಕಾಲು ಪಾಲು ಸಾಲವನ್ನು ತೀರಿಸಲಾಗಿದೆ.

Latest Videos

click me!