ರಾಜ ಮನೆತನವದವರು ಹಾಗೂ ಸಿರಿವಂತರ ಮಕ್ಕಳೆಂದರೆ ಶ್ರೀ ಸಾಮಾನ್ಯನಿಗೆ ಎಲ್ಲಿಲ್ಲದ ಕುತೂಹಲವಿರುತ್ತೆ. ಅಂಥದ್ರಲ್ಲಿ ದೇಶದ ಸಿರಿವಂತ ಮುಖೇಶ್ ಅಂಬಾನಿ ಮಗಳು ಹೇಗೆ ಅನ್ನೋ ಕುತೂಹಲ ಇಲ್ಲದೇ ಇರುತ್ತಾ? ಇಲ್ಲಿದೆ ಸಿಂಪಲ್ ಲೈಫ್ ನೀಡ್ ಮಾಡೋ ಇಶಾ ಬಗ್ಗೆ ನಿಮಗೆ ಗೊತ್ತಿರದ ವಿಷಯಗಳು.
ದೇಶದ ಸಿರಿವಂತ ಮುಖೇಶ್ ಅಂಬಾನಿ ಮಗಳು. ಫ್ಯಾಷನ್ ಐಕಾನ್ ನೀತಾ ಅಂಬಾನಿ ಪುತ್ರಿ ಅಂದ ಮೇಲೆ ಕೇಳಬೇಕಾ, ಇಶಾ ಅಂಬಾನಿಯ ಲೈಫ್ ಸ್ಟೈಲ್ ಬೇರೆ ರೀತಿಯೇ ಇರುತ್ತೆ.
214
ಸಿರಿವಂತರ ಮಕ್ಕಳು, ಜೀವನಶೈಲಿ ಬಗ್ಗೆ ತಿಳಿಯುವ ಕುತೂಹಲ ಪ್ರತಿಯೊಬ್ಬರಿಗೂ ಇರುತ್ತೆ. ಹಾಗೆ ಮುಖೇಶ್ ಹಾಗೂ ನೀತಾ ಮಗಳು ಇಶಾ ಅಂಬಾನಿ ಬಗ್ಗೆ ನಿಮಗೆ ಗೊತ್ತಿರದ ವಿಷ್ಯಗಳನ್ನು ನಾವು ಹೇಳುತ್ತೇವೆ ಕೇಳಿ.
314
ಮನಃಶಾಸ್ತ್ರ ಮತ್ತು ಸೌತ್ ಏಷಿಯನ್ ಸ್ಟಡೀಸ್‌ನಲ್ಲಿ ಪದವಿ ಹೊಂದಿರುವ ಇಶಾ ಅಂಬಾನಿ ಪ್ರತಿಷ್ಠಿತ ಐವಿ ಲೀಗ್ ಶಿಕ್ಷಣ ಸಂಸ್ಥೆಯಲ್ಲಿ ಓದಿದ್ದಾರೆ.
414
ಇಂಟಿರೀಯರ್ ಡಿಸೈನಿಂಗ್‌ನಲ್ಲಿ ಸಿಕ್ಕಾಪಟ್ಟೆ ಆಸಕ್ತಿ ಹೊಂದಿರೋ ಇಶಾ ಅಂಬಾನಿಯ ಟೇಸ್ಟ್ ಏನು ಅಂತ ಅವರ ಕುಟುಂಬ ಹಮ್ಮಿಕೊಳ್ಳುವ ಅನೇಕ ಕಾರ್ಯಕ್ರಮಗಳಲ್ಲಿ ಕಾಣಬಹುದು.
514
ಫುಡ್ ವೇಸ್ಟ್ ಮಾಡೋರ ಕಂಡ್ರೆ ಆಗೋಲ್ವಂತೆ ಇಶಾಗೆ. ಸಿರಿವಂತರ ಮಗಳಾಗಿ, ತಿಂದು, ಉಣ್ಣಲು ಕೊರತೆ ಕಂಡಿದ್ದೇ ಇಲ್ಲ. ಆದರೂ ಇವರಿಗೆ ಅಪೌಷ್ಟಿಕತೆ ಹೊಂದಿರುವ ಮಕ್ಕಳ ಹೊಟ್ಟೆ ತುಂಬಿಸಲು ಏನೇನು ಮಾಡಲು ಸಾಧ್ಯವೋ ಎಲ್ಲವನ್ನೂ ಮಾಡುವ ಯೋಜನೆಗಳಿವೆ.
614
ಕಲಾ ರಸಿಕರಾಗಿರುವ ಇಶಾಗೆ ಆರ್ಟ್, ಸಂಗೀತವೆಂದರೆ ಎಲ್ಲಿಲ್ಲದ ಹುಚ್ಚು. ಕಲಾವಿದರನ್ನು ಬಹಳ ಗೌರವಿಸೋ ಅಂಬಾನಿ ಪುತ್ರಿ, ಅನೇಕ ಕಲಾ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವುದನ್ನು ತಪ್ಪಿಸುವುದಿಲ್ವಂತೆ.
714
ಹಿಂದಿ, ಗುಜರಾತಿ ಹಾಗೂ ಇಂಗ್ಲಿಷ್‌ನಲ್ಲಿ ನಿರರ್ಗಳವಾಗಿ ಮಾತನಾಡೋ ನೀತಾ ಮಗಳ ಫ್ಯಾಷನ್ ಸೆನ್ಸ್ ಸಹ ಯಾವ ಬಾಲಿವುಡ್ ಸೆಲೆಬ್ರಿಟಿಗೂ ಕಡಿಮೆ ಏನಿಲ್ಲ.
814
ಸಿಕ್ಕಾಪಟ್ಟೆ ಓದುವ ಹುಚ್ಚಿರೋ ಇಶಾ ತಮ್ಮ ಇನ್‌ಸ್ಟಾಗ್ರಾಮ್ ಅಕೌಂಟಲ್ಲಿ ಆಗಾಗ ಪುಸ್ತಕಗಳನ್ನು ಓದಲು ಪ್ರೇರೇಪಿಸುತ್ತಿರುತ್ತಾರೆ.
914
ಸ್ವಲ್ಪ ಅಂತರ್ಮುಖಿಯಾಗಿರೋ ಇಶಾ ಐಐಟಿ ಜೋಧ್‌ಪುರ್‌ನಲ್ಲಿ ಓದಿರುವುದಾಗಿ ವ್ಯಾಗ್ಯೂಗೆ ನೀಡಿರುವ ಸಂದರ್ಶದಲ್ಲಿ ಒಮ್ಮೆ ಹೇಳಿಕೊಂಡಿದ್ದರು.
1014
ತಿಂಗಳಿಗೆ ಸುಮಾರು 35 ಲಕ್ಷ ರೂ. ಸಂಬಳ ಪಡೆಯೋ ಈಕೆ ಒಟ್ಟಾರೆ ಆಸ್ತಿಯ ಮೌಲ್ಯ ಸುಮಾರು 800 ಕೋಟಿ ರೂ. ಎಂದು ಅಂದಾಜಿಸಲಾಗಿದೆ.
1114
ಅಮ್ಮನ ಜೊತೆ ಮಗಳು ಇಶಾ ಅಂಬಾನಿ. ನೀತಾ ಅಂಬಾನಿಯಷ್ಟು ಸ್ಟೈಲಿಶ್ ಅಲ್ಲದೇ ಹೋದರೂ, ತಾವೇನೂ ಹಿಂದಿಲ್ಲ ಎನ್ನುವಂತೆ ಚೆಂದ ಡ್ರೆಸ್ ತೊಡುತ್ತಾರೆ.
1214
ಅನೇಕ ಕಾರ್ಯಕ್ರಮಗಳಲ್ಲಿ ನೋಡಿದಂತೆ ಹಾಗೂ ಅವರು ಹಲವು ಪ್ರೋಗ್ರಾಮ್‌ಗಳಲ್ಲಿ ಹೇಳಿ ಕೊಂಡಂತೆ ಇಶಾಗೆ ಕಾಟನ್ ಡ್ರೆಸ್ ಅಂದ್ರೆ ಬಹಳ ಇಷ್ಟವಂತೆ.
1314
ಅಮ್ಮನ ತರಾನೇ ಇಶಾ ಸಹ ಕೆಲವು ವಿಶೇಷ ಆಭರಣಗಳನ್ನು ಧರಿಸುತ್ತಾರೆ. ಅದು ಎಲ್ಲರ ಕಣ್ಮನ ಸೆಳೆಯುವಂತಿರುತ್ತದೆ. ಬಾಲಿವುಡ್ ನಟಿಯರಿಂದ ಇವರೂ ಫ್ಯಾಷನ್ ಐಕಾನ್ ಎನಿಸಿಕೊಂಡಿದ್ದಾರೆ.
1414
ಮದುವೆಯಾಗಿ ಟ್ವಿನ್ಸ್ ಮಕ್ಕಳಿರೋ ಇವರು ವಿದೇಶದಲ್ಲಿದ್ದರು ಇತ್ತೀಚೆಗೆ ಭಾರತಕ್ಕೆ ಮರಳಿದ್ದು, ಅಲ್ಲಲ್ಲಿ ಕಾಣಿಸಿಕೊಳ್ಳುತ್ತಿರುತ್ತಾರೆ.