ಇರಾನ್ ಸಂಘರ್ಷದಿಂದಾಗಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಪೂರೈಕೆ ಅಸ್ತವ್ಯಸ್ತಗೊಂಡಿರುವ ಹಿನ್ನೆಲೆಯಲ್ಲಿ, ಅಮೆರಿಕವು ಭಾರತೀಯ ರಿಫೈನರಿಗಳಿಗೆ ರಷ್ಯಾದಿಂದ ತೈಲ ಖರೀದಿಸಲು 30 ದಿನಗಳ ತಾತ್ಕಾಲಿಕ ಅನುಮತಿ ನೀಡಿದೆ.
ನ್ಯೂಯಾರ್ಕ್/ವಾಷಿಂಗ್ಟನ್: ಇರಾನ್ ಸಂಘರ್ಷದಿಂದಾಗಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಪೂರೈಕೆ ಅಸ್ತವ್ಯಸ್ತಗೊಂಡಿರುವ ಬೆನ್ನಲ್ಲೇ ರಷ್ಯಾದಿಂದ ತೈಲ ಖರೀದಿಗೆ ಅಮೆರಿಕವು ಭಾರತೀಯ ರಿಫೈನರಿಗಳಿಗೆ 30 ದಿನಗಳ ತಾತ್ಕಾಲಿಕ ಅನುಮತಿ ನೀಡಿದೆ. ಈ ಮೂಲಕ ಭಾರತದಲ್ಲಿ ಸೃಷ್ಟಿಯಾಗಿದ್ದ ತೈಲಾತಂಕ ತಗ್ಗಿದಂತಾಗಿದೆ.
25
15 ದಶಲಕ್ಷ ಬ್ಯಾರೆಲ್ ತೈಲ ಖರೀದಿ
ಇದೇ ವೇಳೆ ಅಮೆರಿಕದಿಂದ ಗ್ರೀನ್ ಸಿಗ್ನಲ್ ಸಿಗುತ್ತಿದ್ದಂತೆಯೇ ಯುದ್ಧದ ಹಿನ್ನೆಲೆಯಲ್ಲಿ ಹಿಂದೂ ಮಹಾಸಾಗರದಲ್ಲಿ ಸಿಕ್ಕಿಹಾಕಿಕೊಂಡಿರುವ ರಷ್ಯಾದ ತೈಲ ಟ್ಯಾಂಕರ್‌ಗಳಿಂದ ಭಾರತವು 15 ದಶಲಕ್ಷ ಬ್ಯಾರೆಲ್ ತೈಲ ಖರೀದಿಗೆ ಮುಂದಾಗಿದೆ ಎನ್ನಲಾಗಿದೆ.
35
ರಷ್ಯಾದಿಂದ ತೈಲ ಖರೀದಿ
ಉಕ್ರೇನ್ ಯುದ್ಧ ಆರಂಭವಾದ ಬಳಿಕ ಭಾರತವು ರಷ್ಯಾದಿಂದ ಕಡಿಮೆ ದರದಲ್ಲಿ ಕಚ್ಚಾ ತೈಲ ಆಮದು ಮಾಡಿಕೊಳ್ಳುತ್ತಿತ್ತು. ಆದರೆ, ಇದಕ್ಕಾಗಿ ಭಾರತದ ಮೇಲೆ ಅಮೆರಿಕವು ಶೇ.25ರಷ್ಟು ತೆರಿಗೆ ವಿಧಿಸಿತ್ತು. ಇತ್ತೀಚೆಗೆ ರಷ್ಯಾದಿಂದ ತೈಲ ಖರೀದಿ ಬಹುತೇಕ ಸ್ಥಗಿತಗೊಳಿಸಿದ ಹಿನ್ನೆಲೆಯಲ್ಲಿ ಆ ತೆರಿಗೆ ರದ್ದು ಮಾಡಿತ್ತು.
ರಷ್ಯಾದಿಂದ ತೈಲ ಖರೀದಿಗೆ ಅಮೆರಿಕ ಅನುಮತಿ ನೀಡಿದ ವಿಚಾರವನ್ನು ಬಿಜೆಪಿ ಸ್ವಾಗತಿಸಿದರೆ, ಕಾಂಗ್ರೆಸ್ ತೀವ್ರವಾಗಿ ಖಂಡಿಸಿದೆ. ಟ್ರಂಪ್ ಈಗ ಹೊಸ ಆಟ ಶುರುಮಾಡಿದ್ದಾರೆ. ಅಮೆರಿಕದ ಈ ಬ್ಲ್ಯಾಕ್‌ಮೇಲ್ ಎಲ್ಲಿಯವರೆಗೆ ಮುಂದುವರಿಯಲಿದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಪ್ರಶ್ನಿಸಿದ್ದಾರೆ.
ಆದರೆ, ಟ್ರಂಪ್ ಅವರ ನಡೆಯನ್ನು ಮೋದಿ ಅವರ ವ್ಯೂಹಾತ್ಮಕ ತೈಲ ರಾಜತಾಂತ್ರಿಕತೆಗೆ ಸಿಕ್ಕ ಜಯ ಎಂದು ಬಿಜೆಪಿ ಹೇಳಿದೆ. ಇದರಿಂದ ಭಾರತ ವಿರೋಧಿ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಮುಖಕ್ಕೆ ದೊಡ್ಡ ಮೊಟ್ಟೆ ಎಸೆದಂತಾಗಿದೆ ಎಂದು ವ್ಯಂಗ್ಯವಾಡಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.