ಅಂಬಾನಿ, ಟಾಟಾ, ಪೆಪ್ಸಿಕೋ, ಕೋಕಾಕೋಲಾಗೆ ಎದುರಾಳಿ 7000 ಕೋಟಿ ರೂ. ಕಂಪನಿಗೆ ವಾರಸುದಾರೆ ಈಕೆ

Published : Oct 09, 2023, 04:13 PM IST

ಇದು ಭಾರತದ ಅತ್ಯಂತ ಟಾಪ್‌ ಪಾನೀಯ ಕಂಪೆನಿ. ಕಂಪೆನಿಯನ್ನು ಇನ್ನೇನು ಟಾಟಾ ಗ್ರೂಪ್‌ಗೆ ಮಾರಾಟ ಮಾಡಬೇಕು ಅನ್ನುವಷ್ಟರಲ್ಲಿ ಕಂಪೆನಿಯ ಸಂಪೂರ್ಣ ಜವಾಬ್ದಾರಿಯನ್ನು ಹೊತ್ತುಕೊಂಡು ಮುಖ್ಯಸ್ಥೆಯಾದರು.  7000 ಕೋಟಿ ರೂ. ಕಂಪನಿಯ ವಾರಸುದಾರೆಯಾದರು. ಯಾರು ಈಕೆ? ಯಾವುದು ಆ ಕಂಪೆನಿ ಇಲ್ಲಿದೆ ಮಾಹಿತಿ.

PREV
19
ಅಂಬಾನಿ, ಟಾಟಾ, ಪೆಪ್ಸಿಕೋ, ಕೋಕಾಕೋಲಾಗೆ ಎದುರಾಳಿ 7000 ಕೋಟಿ ರೂ. ಕಂಪನಿಗೆ ವಾರಸುದಾರೆ ಈಕೆ

ಭಾರತದ ಅತ್ಯಂತ ಜನಪ್ರಿಯ ಪ್ಯಾಕೇಜ್ಡ್ ಕುಡಿಯುವ ನೀರಿನ ಕಂಪನಿ ಬಿಸ್ಲೆರಿ ಇಂಟರ್ನ್ಯಾಷನಲ್ ಮೇ 30 ರಂದು ಕೆಲವು ಹೊಸ ಕಾರ್ಬೊನೇಟೆಡ್ ಪಾನೀಯಗಳನ್ನು ಬಿಡುಗಡೆ ಮಾಡಿದರ ಬಗ್ಗೆ ಘೋಷಿಸಿತು. 

29

ಪ್ರಸ್ತುತ ಜಯಂತಿ ಚೌಹಾಣ್ ನೇತೃತ್ವದ ಬಿಸ್ಲೆರಿ, ವೇಗವಾಗಿ ವಿಸ್ತರಿಸುತ್ತಿರುವ ಕೋಲಾ, ಕಿತ್ತಳೆ ಮತ್ತು ಜೀರಾ ವಿಭಾಗಗಳಲ್ಲಿ ತನ್ನ ಅಸ್ತಿತ್ವವನ್ನು ಗುರುತಿಸಲು ರೆವ್, ಪಾಪ್ ಮತ್ತು ಸ್ಪೈಸಿ ಜೀರಾ ಉಪ-ಬ್ರಾಂಡ್‌ಗಳನ್ನು ಪ್ರಾರಂಭಿಸಿದೆ. 

39

ಗಮನಾರ್ಹವಾಗಿ, Bisleri ಈಗಾಗಲೇ ತನ್ನ Bisleri Limonata ಬ್ರ್ಯಾಂಡ್ ಅಡಿಯಲ್ಲಿ ಕಾರ್ಬೊನೇಟೆಡ್ ಪಾನೀಯಗಳನ್ನು ಮಾರಾಟ ಮಾಡುತ್ತಿದೆ ಮತ್ತು ಹೊಸ ಉತ್ಪನ್ನಗಳ ಬಿಡುಗಡೆಯು ಕಂಪನಿಯ ವ್ಯಾಪ್ತಿಯನ್ನು ವಿಸ್ತರಿಸಲು ಇದು ಜಯಂತಿ ಚೌಹಾಣ್ ಅವರ ಪ್ರಯತ್ನವಾಗಿದೆ. 

49

ಹೊಸ ಉತ್ಪನ್ನಗಳ ಬಿಡುಗಡೆಯನ್ನು ಬೆಂಬಲಿಸಲು ಬಿಸ್ಲೆರಿ ಕಂಪೆನಿಯು ಡಿಜಿಟಲ್ ಮತ್ತು ಸಾಮಾಜಿಕ ಮಾಧ್ಯಮಗಳ ವೇದಿಕೆಗಳಲ್ಲಿ ಮಾರ್ಕೆಟಿಂಗ್ ಪ್ರಚಾರಗಳನ್ನು ಪ್ರಾರಂಭಿಸಿದೆ.

59

ಜಯಂತಿ ಚೌಹಾಣ್ ಅವರು ಬಿಸ್ಲೇರಿ ಲಿಮಿಟೆಡ್‌ನ ಹಿಡಿತವನ್ನು ತೆಗೆದುಕೊಳ್ಳುವ ನಿರ್ಧಾರ ಸ್ವಾಭಾವಿಕವಾಗಿ ಆದದ್ದಲ್ಲ ಏಕೆಂದರೆ ಕೆಲವೇ ತಿಂಗಳ ಹಿಂದೆ, ಜಯಂತಿ ಚೌಹಾಣ್ ಅವರ ತಂದೆ ರಮೇಶ್ ಚೌಹಾಣ್ ಅವರು ವಯಸ್ಸಾದ ಕಾರಣ ಕಂಪನಿಯನ್ನು ಅಂದಾಜು 7000 ಕೋಟಿ ರೂ.ಗೆ ಟಾಟಾ ಗ್ರೂಪ್‌ಗೆ ಮಾರಾಟ ಮಾಡಲು ಸಿದ್ಧರಾಗಿದ್ದರು. 

69

ಗಮನಾರ್ಹವಾಗಿ ಜಯಂತಿ ಚೌಹಾಣ್,  ರಮೇಶ್ ಚೌಹಾಣ್ ಅವರಿಗಿರುವ ಏಕೈಕ ಮಗು ಮತ್ತು ಅವರಿಗೆ ಕಂಪನಿಯ ಜವಾಬ್ದಾರಿಯನ್ನು ತೆಗೆದುಕೊಳ್ಳಲು ಇಷ್ಟವಿರಲಿಲ್ಲ. ಆದರೂ ಜಯಂತಿ ನಂತರ ತಮ್ಮ ಮನಸ್ಸನ್ನು ಬದಲಾಯಿಸಿದರು ಮತ್ತು ಬಿಸ್ಲೇರಿಯ ಜವಾಬ್ದಾರಿಯನ್ನು ವಹಿಸಿಕೊಂಡರು. ಹೀಗಾಗಿ ಟಾಟಾ ಜೊತೆಗಿನ ಒಪ್ಪಂದವು ಎಂದಿಗೂ ಸಂಭವಿಸಲಿಲ್ಲ. 
 

79

ತಜ್ಞರ ಪ್ರಕಾರ, ಕಂಪನಿಯು ಪೆಪ್ಸಿಕೋ ಮತ್ತು ಕೋಕಾಕೋಲಾದಿಂದ ಕಠಿಣ ಸವಾಲನ್ನು ಎದುರಿಸುವುದರಿಂದ ತಂಪು ಪಾನೀಯ ಮಾರುಕಟ್ಟೆಯಲ್ಲಿ ನೆಲೆ ಕಂಡುಕೊಳ್ಳಲು ಬಿಸ್ಲೆರಿಗೆ ಕಷ್ಟವಾಗುತ್ತಿದೆ.

89

ಇಷ್ಟು ಮಾತ್ರವಲ್ಲ ಬಿಲಿಯನೇರ್ ಉದ್ಯಮಿ ಮುಖೇಶ್ ಅಂಬಾನಿಯವರ ರಿಲಯನ್ಸ್ ಕೂಡ ಕ್ಯಾಂಪಾ ಕೋಲಾ ಬ್ರಾಂಡ್ ಹೆಸರಿನಲ್ಲಿ ತಂಪು ಪಾನೀಯಗಳ ಮಾರುಕಟ್ಟೆಗೆ ಬಿಟ್ಟಿದೆ. ಈ ಉದ್ದೇಶಕ್ಕಾಗಿ ಮುಕೇಶ್ ಅಂಬಾನಿ ಪ್ಯೂರ್ ಡ್ರಿಂಕ್ಸ್ ಗ್ರೂಪ್ ಅನ್ನು ಸ್ವಾಧೀನಪಡಿಸಿಕೊಂಡಿದ್ದಾರೆ. 

99

ಮತ್ತೊಂದೆಡೆ, ಟಾಟಾ ಗ್ರೂಪ್ ಈಗ ಟಾಟಾ ಕಾಪರ್ + ಮತ್ತು ಹಿಮಾಲಯನ್ ಸೇರಿದಂತೆ ತನ್ನದೇ ಆದ ಖನಿಜಯುಕ್ತ ನೀರಿನ ಬ್ರಾಂಡ್‌ಗಳ ಮೇಲೆ ದೊಡ್ಡ ಹೂಡಿಕೆ ಮಾಡಲು ನಿರ್ಧರಿಸಿದೆ. ಸಂಕ್ಷಿಪ್ತವಾಗಿ ಹೇಳುವುದಾದರೆ, 7000 ಕೋಟಿ ರೂಪಾಯಿಗಳ ವ್ಯಾಪಾರ ಸಾಮ್ರಾಜ್ಯದ ಏಕೈಕ ವಾರಸುದಾರರಾಗಿರುವ ಜಯಂತಿ ಚೌಹಾಣ್  ಅವರು ಮುಖೇಶ್ ಅಂಬಾನಿ ಮತ್ತು ರತನ್ ಟಾಟಾ ಅವರ ಗ್ರೂಪ್ ಕಂಪನಿಗೆ ಸವಾಲು ಹಾಕುತ್ತಾರೆ ಎಂದು ನಾವು ಹೇಳಬಹುದು. 

Read more Photos on
click me!

Recommended Stories