ಎಲ್ಲರಿಗೂ ದುಡ್ಡಿನ ಅವಶ್ಯಕತೆ ಇರುತ್ತೆ. ಆದರೆ ಬಹಳಷ್ಟು ಜನ ಜಾಸ್ತಿ ಬಡ್ಡಿಗೆ ಸಾಲ ಮಾಡ್ಕೊಂಡು ಅವಶ್ಯಕತೆಗಳನ್ನ ಪೂರೈಸ್ಕೊಳ್ತಾರೆ. ಕೆಲವೊಮ್ಮೆ ಬಡ್ಡಿ ಕಟ್ಟೋಕೆ ಆಗದೆ ಸಂಕಷ್ಟಕ್ಕೆ ಸಿಲುಕ್ತಾರೆ. ಜಾಸ್ತಿ ಬಡ್ಡಿ ಕಟ್ಟೋಕೆ ಆಗದೆ ಆತ್ಮಹತ್ಯೆ ಮಾಡ್ಕೊಂಡಂತಹ ಸುದ್ದಿಗಳನ್ನೂ ನಾವು ಕೇಳುತ್ತಲೇ ಇರುತ್ತೇವೆ. ಆದರೆ, ಬಹಳಷ್ಟು ಜನರಿಗೆ ಗೊತ್ತಿರದ ವಿಷಯ ಏನಂದರೆ.., ಯಾವುದೇ ಬಡ್ಡಿ ಇಲ್ಲದೆ ಸಾಲ ಪಡೆಯಬಹುದು ಅಂತ. ಬ್ಯಾಂಕುಗಳು, ಕಂಪನಿಗಳು ಕೆಲವು ನಿಯಮಗಳನ್ನ ಹಾಕುತ್ತೀವಿ ಎನ್ನುತ್ತವೆ. ಅವುಗಳಿಗೆ ತಕ್ಕಂತೆ ದಾಖಲೆಗಳನ್ನ ಕೊಟ್ಟರೆ ಯಾವುದೇ ಬಡ್ಡಿ ಇಲ್ಲದೆ ಸಾಲ ಪಡೆಯಬಹುದು.
1. ಚಿಲ್ಲರೆ ವ್ಯಾಪಾರದಲ್ಲಿ ನೀವು ಬಡ್ಡಿ ಇಲ್ಲದ ಸಾಲ ಪಡೆಯಬಹುದು. ಅಂದರೆ ಬಡ್ಡಿ ಇಲ್ಲದ ಇಎಂಐ ಯೋಜನೆಗಳ ಮೂಲಕ ಎಲೆಕ್ಟ್ರಾನಿಕ್ಸ್, ಪೀಠೋಪಕರಣಗಳು ಮುಂತಾದ ಮನೆಗೆ ಬೇಕಾದ ವಸ್ತುಗಳನ್ನ ಕೊಳ್ಳೋಕೆ ಬಡ್ಡಿ ಇಲ್ಲದ ಸಾಲಗಳು ತುಂಬಾ ಉಪಯುಕ್ತ. ಇದರ ಮೂಲಕ ಹೆಚ್ಚುವರಿ ಬಡ್ಡಿ ಇಲ್ಲದೆ ತಯಾರಿಕಾ ವೆಚ್ಚವನ್ನೇ ಕಂತುಗಳಲ್ಲಿ ಕಟ್ಟಬಹುದು. ಉದಾಹರಣೆಗೆ ನೀವು 60,000 ರೂ. ಮೌಲ್ಯದ ಸ್ಮಾರ್ಟ್‌ಫೋನ್ ಅನ್ನು 12 ತಿಂಗಳಲ್ಲಿ 5,000 ರೂ. ಕಂತುಗಳಲ್ಲಿ ಕೊಳ್ಳಬಹುದು.
2. ರೈತರು ವಿವಿಧ ಸರ್ಕಾರಿ ಯೋಜನೆಗಳ ಅಡಿಯಲ್ಲಿ ಬಡ್ಡಿ ಇಲ್ಲದ ಸಾಲ ಪಡೆಯಬಹುದು. ಈ ಸಾಲಗಳ ಮೂಲಕ ರೈತರು ಬೀಜ, ಗೊಬ್ಬರ ಕೊಳ್ಳಬಹುದು. ವ್ಯವಸಾಯದ ಉಪಕರಣಗಳನ್ನು ಖರೀದಿಸಲು ಈ ಹಣವನ್ನು ಬಳಸಬಹುದು. ಸಕಾಲಕ್ಕೆ ಹಣ ವಾಪಸ್ ಕೊಟ್ಟರೆ ಯಾವುದೇ ದಂಡ ಇರಲ್ಲ. ರೈತರಿಗೆ ಇದು ತುಂಬಾ ಸಹಾಯ ಆಗುತ್ತದೆ. ಅನೇಕ ರಾಜ್ಯ ಸರ್ಕಾರಗಳು ಈಗಾಗಲೇ ಇದನ್ನ ಜಾರಿಗೆ ತಂದಿವೆ.
3. ಕೆಲವು ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ತುರ್ತು ವೈದ್ಯಕೀಯ ಖರ್ಚುಗಳು, ವಿದ್ಯಾಭ್ಯಾಸ ಮುಂತಾದ ತುರ್ತು ವೈಯಕ್ತಿಕ ಅವಶ್ಯಕತೆಗಳಿಗೆ ಬಡ್ಡಿ ಇಲ್ಲದ ಸಾಲಗಳನ್ನು ನೀಡುತ್ತಿವೆ. ಕಷ್ಟದ ಸಮಯದಲ್ಲಿ ಉದ್ಯೋಗಿಗಳಿಗೆ ಇದು ಆರ್ಥಿಕ ನೆರವು ನೀಡುತ್ತದೆ. ಸಾಮಾಜಿಕ ಅಭಿವೃದ್ಧಿಗಾಗಿ ಬಡ್ಡಿ ಇಲ್ಲದ ಸಾಲಗಳನ್ನು ನೀಡುವಲ್ಲಿ ಕೆಲವು ಸೂಕ್ಷ್ಮ ಹಣಕಾಸು ಸಂಸ್ಥೆಗಳು, ಸ್ವಯಂಸೇವಾ ಸಂಸ್ಥೆಗಳು ಪ್ರಮುಖ ಪಾತ್ರ ವಹಿಸುತ್ತವೆ. ಈ ಸಾಲಗಳು ಸಣ್ಣ ಉದ್ಯಮಿಗಳು, ಹೊಸದಾಗಿ ವ್ಯಾಪಾರ ಶುರು ಮಾಡಲು ಬಯಸುವ ಮಹಿಳೆಯರಿಗೆ ಉಪಯುಕ್ತವಾಗುವಂತೆ ಜಾರಿಗೊಳಿಸಲಾಗಿದೆ.
4. ಹಿಂದುಳಿದ ವರ್ಗದವರು ಆರ್ಥಿಕವಾಗಿ ಸಬಲರಾಗಬೇಕೆಂಬ ಉದ್ದೇಶದಿಂದ ಸರ್ಕಾರಗಳು ಬಡ್ಡಿ ಇಲ್ಲದ ಸಾಲಗಳನ್ನು ನೀಡುತ್ತಿವೆ. ನೀವು ಅರ್ಹರಿದ್ದರೆ ಪಡೆಯಬಹುದು.
5. ಇದಲ್ಲದೆ, ಕ್ರೆಡಿಟ್ ಕಾರ್ಡ್‌ಗಳು ಸಹ ಆಗಾಗ್ಗೆ ಶೂನ್ಯ ಬಡ್ಡಿದರದ ಇಎಂಐ ಆಯ್ಕೆಗಳೊಂದಿಗೆ ಸಾಲಗಳನ್ನು ನೀಡುತ್ತವೆ. ಈ ಕೊಡುಗೆಗಳು ಕಾರ್ಡ್ ಹೊಂದಿರುವವರು ನಿಯಮಗಳಿಗೆ ಅನುಗುಣವಾಗಿದ್ದರೆ, ನೀವು ಇಷ್ಟಪಡುವ ವಸ್ತುಗಳನ್ನು ಬಡ್ಡಿ ಇಲ್ಲದೆ ಖರೀದಿಸಬಹುದು. ಹಾಗಾಗಿ ನಿಮಗೆ ಬಡ್ಡಿ ಇಲ್ಲದ ಸಾಲ ಬೇಕು ಅಂದ್ರೆ ಈ ವಿಭಾಗಗಳಲ್ಲಿ ಯಾವುದಕ್ಕೆ ನೀವು ಅರ್ಹರಿದ್ದೀರಿ ಅಂತ ನೋಡಿ ಅರ್ಜಿ ಹಾಕಿ ಪಡೆಯಬಹುದು.