ಇವರೆಲ್ಲಾ ವಯಸ್ಸು 20 ಆಗೋಷ್ಟರಲ್ಲಿ CEOಗಳಾದ ಭಾರತದ ಕೋಟ್ಯಧಿಪತಿ ಯುವಕರು

Published : Aug 05, 2025, 08:05 AM ISTUpdated : Aug 05, 2025, 07:46 PM IST

8 Inspiring Young CEOs: ಕೆಲವರು 20ನೇ ವಯಸ್ಸಿನಲ್ಲಿ ಪದವಿ ಮುಗಿಸಿ ಉದ್ಯೋಗ ಅರಸುತ್ತಿರುವಾಗ, ಇಲ್ಲಿ ಕೆಲ ಯುವಕರು ಕೋಟ್ಯಧಿಪತಿಗಳಾಗಿದ್ದಾರೆ. ಟೆಕ್ನಾಲಜಿ, ಔಷಧಿ, ಲಾಜಿಸ್ಟಿಕ್ಸ್ ಮುಂತಾದ ವಲಯಗಳಲ್ಲಿ ಈ ಯುವ ಉದ್ಯಮಿಗಳು ಯಶಸ್ಸು ಕಂಡಿದ್ದಾರೆ.

PREV
19
ಭಾರತದ ಕಿರಿಯ ಕೋಟ್ಯಧಿಪತಿಗಳು

ವಯಸ್ಸು 20 ಅಂದ್ರೆ ಬಹುತೇಕರು ಆಗತಾನೇ ಪದವಿ ಪಡೆದುಕೊಂಡು ಕಾಲೇಜಿನಿಂದ ಹೊರಗೆ ಬಂದಿರುತ್ತಾರೆ. ಪದವಿ ಮುಗಿಯುತ್ತಿದ್ದಂತೆ ಬಹುತೇಕರು ಸರ್ಕಾರಿ ಹುದ್ದೆಗಳ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಾರೆ. ಇಂದು ನಾವು ಹೇಳುತ್ತಿರುವ 8 ಯುವಕರು ತಮ್ಮ 20ನೇ ವಯಸ್ಸಿನಲ್ಲಿಯೇ ಕೋಟ್ಯಧಿಪತಿಗಳಾಗಿದ್ದಾರೆ.

29
ತಿಲಕ್ ಮೆಹ್ತಾ (TILAK MEHTA)

13ನೇ ವಯಸ್ಸಿನಲ್ಲಿಯೇ ತಿಲಕ್ ಮೆಹ್ತಾ ಮುಂಬೈನಲ್ಲಿ Papers N Parcels ಡಿಜಿಟಲ್ ಕೊರಿಯರ್ ಸ್ಟಾರ್ಟ್‌ಪ್ (digital courier startup) ಆರಂಭಿಸುತ್ತಾರೆ. ಮುಂಬೈನ ಜನಪ್ರಿಯ ಡಬ್ಬಾವಾಲಾ (Dabbawala network) ಮೂಲಕ ಈ ಸೇವೆಯನ್ನು ಆರಂಭಿಸಲಾಗುತ್ತದೆ. ಕೆಲವೇ ದಿನಗಳಲ್ಲಿ ನಗರಾದ್ಯಂತ ಈ ಸೇವೆ ಲಾಜಿಸ್ಟಿಕ್ಸ್ ಸರ್ವಿಸ್ (logistics solution) ಆಗಿ ಬದಲಾಯ್ತು. ಈ ಕಂಪನಿಯ ಮೌಲ್ಯ 100 ಕೋಟಿ ರೂ.ಗಳಿಗೂ ಅಧಿಕವಾಗಿದೆ.

39
ಶ್ರವಣ್‌ ಕುಮಾರನ್ ಮತ್ತು ಸಂಜಯ್ ಕುಮಾರನ್ (SHRAVAN KUMARAN & SANJAY KUMARAN)

ಚೆನ್ನೈ ಮೂಲದ ಶ್ರವಣ್‌ ಕುಮಾರನ್ ಮತ್ತು ಸಂಜಯ್ ಕುಮಾರನ್ ಸೋದರರು 10 ಮತ್ತು 12ನೇ ವಯಸ್ಸಿನಲ್ಲಿ ಗೋ ಡೈಮೆನ್ಷನ್ಸ್ (GoDimension) ಹೆಸರಿನ ಅಪ್ಲಿಕೇಷನ್ ಆರಂಭಿಸುತ್ತಾರೆ. ನಂತರ ಇಬ್ಬರು ಜೊತೆಯಾಗಿ 10ಕ್ಕೂ ಹೆಚ್ಚು ಅಪ್ಲಿಕೇಶನ್ ಶುರು ಮಾಡಿದ್ದಾರೆ. ಚಿಕ್ಕ ವಯಸ್ಸಿನಲ್ಲಿಯೇ ಕಿರಿಯ ಉದ್ಯಮಿಗಳಾಗಿದ್ದಾರೆ.

49
ಹರ್ಷವರ್ಧನಸಿನ್ಹಾ ಝಾಲಾ (HARSHWARDHANSINH ZALA)

14ನೇ ವಯಸ್ಸಿನಲ್ಲಿಯೇ ಹರ್ಷವರ್ಧನಸಿಂಹ ಝಾಲಾ Aerobotics7 ಹೆಸರಿನ ಕಂಪನಿ ಆರಂಭಿಸುತ್ತಾರೆ. ನೆಲಬಾಂಬ್‌ಗಳನ್ನು ಪತ್ತೆಹಚ್ಚಲು ಮತ್ತು ನಿಷ್ಕ್ರಿಯಗೊಳಿಸಲು ಡ್ರೋನ್‌ ರಚಿಸುವಲ್ಲಿ ಮಗ್ನರಾದ ಝಾಲಾ, ಗುಜರಾತ್ ಸರ್ಕಾರದೊಂದಿಗೆ (MoU with the Gujarat government) 5 ಕೋಟಿ ರೂ.ಒಪ್ಪಂದ ಮಾಡಿಕೊಂಡಿದ್ದಾರೆ.

59
ಅದ್ವೈತ್ ಠಾಕೂರ್ (ADVAIT THAKUR)

12ನೇ ವಯಸ್ಸಿನಲ್ಲಿ ಅದ್ವೈತ್ ಠಾಕೂರ್, ಅಪೆಕ್ಸ್ ಇನ್ಪೋಸಿಸ್ ಇಂಡಿಯಾ ( Apex Infosys India) ಹೆಸರಿನ ಕಂಪನಿ ಆರಂಭಿಸುತ್ತಾರೆ. AIಗೆ ಸಂಬಂಧಿಸಿದ ಸಮಸ್ಯೆಗಳಿಗೆ ಪರಿಹಾರ ನೀಡುವ ವೆಬ್ ಸರ್ವಿಸ್ (AI-powered solutions and web services) ಆಗಿದೆ. 12ನೇ ವಯಸ್ಸಿನಲ್ಲಿಯೇ ಪ್ರಮಾಣೀಕೃತ ಗೂಗಲ್ ಡೆವಲಪರ್ (certified Google developer) ಆಗಿರುವ ಅದ್ವೈತ್ ಕಂಪನಿ ಆಟೊಮೇಷನ್, ಡಿಜಿಟಲ್ ಮಾರ್ಕೆಟಿಂಗ್ ಮತ್ತು ಸ್ಮಾರ್ಟ್ ತಂತ್ರಜ್ಞಾನ ವಲಯದಲ್ಲಿ ವ್ಯಾಪಿಸಿಕೊಂಡಿದೆ. ಜಾಗತೀಕವಾಗಿಯೂ ಗುರುತಿಸಿಕೊಂಡಿರುವ ಅದ್ವೈತ್ ಠಾಕೂರ್ ಕಂಪನಿಯ ಮೌಲ್ಯ 1 ಮಿಲಿಯನ್ ಡಾಲರ್ ಆಗಿದೆ.

69
ಶ್ರೀಲಕ್ಷ್ಮೀ ಸುರೇಶ್ (SREELAKSHMI SURESH)

ತಮ್ಮ 6ನೇ ವಯಸ್ಸಿನಲ್ಲಿಯೇ ಶ್ರೀಲಕ್ಷ್ಮೀ ಸುರೇಶ್, ವೆಬ್‌ಸೈಟ್ ಡಿಸೈನ್ ಮಾಡಲು ಆರಂಭಿಸುತ್ತಾರೆ. ಶ್ರೀಲಕ್ಷ್ಮೀ 10ನೇ ವಯಸ್ಸಿನಲ್ಲಿ ಇ-ಡಿಸೈನ್ ಕಂಪನಿ (E-Design) ಆರಂಭಿಸುತ್ತಾರೆ. ನಂತರ ಡಿಜಿಟಲ್ ಬ್ರ್ಯಾಂಡಿಂಗ್ ಸೇವೆಗಳನ್ನು ನೀಡುವ ಟೈನಿಲೋಗೊ ಎಂಬ ಸಂಸ್ಥೆಯನ್ನು ಸ್ಥಾಪಿಸಿದರು. ಇದೀಗ ಶಾಲೆಗಳು ಸೇರಿದಂತೆ ಕಾರ್ಪೋರೇಟ್ ಕಂಪನಿಗಳು ಶ್ರೀಲಕ್ಷ್ಮೀ ಅವರ ಕ್ಲೈಂಟ್‌ಗಳಾಗಿದ್ದಾರೆ. ಅಧ್ಯಯನ ಮಾಡುವ ಹವ್ಯಾಸ ಹೊಂದಿರುವ ಶ್ರೀಲಕ್ಷ್ಮೀ ಕಂಪನಿ ಮೌಲ್ಯ ನೂರಾರು ಕೋಟಿ ರೂಪಾಯಿ ಆಗಿದೆ.

79
ಅಖಿಲೇಂದ್ರ ಸಾಹು (AKHILENDRA SAHU)

ಮಧ್ಯಪ್ರದೇಶ ಮೂಲದ ಅಖಿಲೇಂದ್ರ ಸಾಹು, 16ನೇ ವಯಸ್ಸಿನಲ್ಲಿ ASTNT ಟೆಕ್ನಾಲಜೀಸ್ ಕಂಪನಿ (ASTNT Technologies Company) ಆರಂಭಿಸುತ್ತಾರೆ. ಈ ಕಂಪನಿ ವೆಬ್ ಹೋಸ್ಟಿಂಗ್, ಡಿಜಿಟಲ್ ಮಾರ್ಕೆಟಿಂಗ್ ಮತ್ತು ಸುದ್ದಿ ಸೇವೆಯನ್ನು ಒದಗಿಸುತ್ತದೆ. ಫ್ರೀಲ್ಯಾನ್ಸಿಂಗ್ ಮತ್ತು ಯೂಟ್ಯೂಬ್ ಟ್ಯುಟೋರಿಯಲ್‌ಗಳ ಮೂಲಕ ತಮ್ಮ ವೃತ್ತಿ ಜೀವನದಲ್ಲಿ ಯಶಸ್ಸು ಕಂಡಿದ್ದಾರೆ.

89
ರಿತೇಶ್ ಅಗರ್ವಾಲ್ (RITESH AGARWAL)

ಜನಪ್ರಿಯ ಉದ್ಯಮಿಯಾಗಿ ಗುರುತಿಸಿಕೊಂಡಿರುವ ರಿತೇಶ್ ಅಗರ್ವಾಲ್, 17ನೇ ವಯಸ್ಸಿನಲ್ಲಿಯೇ OYO ಕಲ್ಪನೆಯ ರೂಮ್‌ (OYO Rooms) ಪ್ರಾರಂಭಿಸುತ್ತಾರೆ. ಸದ್ಯ OYO ಕಂಪನಿಯ ಮೌಲ್ಯ $9 ಶತಕೋಟಿಗಿಂತ ಅಧಿಕವಾಗಿದೆ. ರಿತೇಶ್ ಅವರ ಕಂಪನಿ ವಿದೇಶದಲ್ಲಿಯೂ ವಿಸ್ತರಣೆಯಾಗಿರೋದು ವಿಶೇಷ.

99
ಅರ್ಜುನ್ ದೇಶಪಾಂಡೆ (ARJUN DESHPANDE)

2002ರಲ್ಲಿ ಜನರಿಸಿರುವ ಅರ್ಜುನ್ ದೇಶಪಾಂಡೆ Gen Z ಕಿಡ್ ಆಗಿದ್ದಾರೆ. ಕಡಿಮೆ ಬೆಲೆಗೆ ಲಭ್ಯವಾಗುತ್ತಿರುವ ಜೆನರಿಕ್ ಔಷಧಿ (low-cost generic medicines) ನೀಡುವ ಜೆನೆರಿಕ್ ಆಧಾರ್ (Generic Aadhaar) ಕಂಪನಿ ಆರಂಭಿಸಿದ್ದಾರೆ. ಟಾಟಾ ಟ್ರಸ್ಟ್ ಸಪೋರ್ಟ್ ನ್ನು ಅರ್ಜುನ್ ದೇಶಪಾಂಡೆ ಹೊಂದಿದ್ದಾರೆ. ಸುಮಾರು 2,000 ಚಿಲ್ಲರೆ ಮಾರಾಟ ಮಳಿಗೆ ಮತ್ತು ಸುಮಾರು 10,000 ಉದ್ಯೋಗಿಗಳನ್ನು ಹೊಂದಿರುವ ಅರ್ಜುನ್ ದೇಶಪಾಂಡೆ ಕಂಪನಿಯ ಮೌಲ್ಯ 500 ಕೋಟಿ ರೂಪಾಯಿ ಆಗಿದೆ.

Read more Photos on
click me!

Recommended Stories