ITR ಇನ್ನು ಸಲ್ಲಿಕೆ ಮಾಡಿಲ್ಲವೇ? ತೆರಿಗೆದಾರರಿಗೆ ರಿಲೀಫ್ ಕೊಟ್ಟ ಸರ್ಕಾರ, ದಿನಾಂಕ ವಿಸ್ತರಣೆ

Published : May 27, 2025, 06:55 PM IST

ಇನ್‌ಕಮ್ ಟ್ಯಾಕ್ಸ್ ರಿಟರ್ನ್ ಸಲ್ಲಿಕೆ ಮಾಡಿಲ್ಲವೇ? ಆತಂಕ ಬೇಡ, ಕಾರಣ ಇದೀಗ ಕೇಂದ್ರ ಸರ್ಕಾರ ಐಟಿಐರ್ ಸಲ್ಲಿಕೆ ದಿನಾಂಕ ವಿಸ್ತರಿಸಿದೆ. ಈ ಮೂಲಕ ತೆರಿಗೆದಾರರಿಗೆ ರಿಲೀಫ್ ಕೊಟ್ಟಿದೆ. ಸದ್ಯ ಲಾಸ್ಟ್ ಡೇಟ್ ಯಾವಾಗ?

PREV
15

ತೆರಿಗೆದಾರರಿಗೆ ಕೇಂದ್ರ ಸರ್ಕಾರ ಗುಡ್ ನ್ಯೂಸ್ ನೀಡಿದೆ. ವಾರ್ಷಿಕ ಆದಾಯ ತೆರಿಗೆ ರಿಟರ್ನ್ಸ್ (ಐಟಿಐರ್ ಸಲ್ಲಿಕೆ ದಿನಾಂಕ ಗಡುವನ್ನು ವಿಸ್ತರಿಸಲಾಗಿದೆ. ಕೇಂದ್ರೀಯ ನೇರ ತೆರಿಗೆ ಮಂಡಳಿ (ಸಿಬಿಡಿಟಿ) 2025-26ರ ಮೌಲ್ಯಮಾಪನ ವರ್ಷದ ಐಟಿಆರ್ ಸಲ್ಲಿಕೆ ಗಡುವನ್ನು ಜುಲೈ 31, 2025ರ ಬದಲು ಇದೀಗ ಸೆಪ್ಟೆಂಬರ್ 15, 2025ಕ್ಕೆ ವಿಸ್ತರಿಸಿದೆ. ಐಟಿಆರ್ ನಮೂನೆಗಳಲ್ಲಿನ ಬದಲಾವಣೆಗಳು, ವ್ಯವಸ್ಥೆಯ ಸುಧಾರಣೆಗಳು ಮತ್ತು ಟಿಡಿಎಸ್ ಕ್ರೆಡಿಟ್ ಸಮಸ್ಯೆಗಳಿಂದಾಗಿ ಗಡುವು ವಿಸ್ತರಿಸಲಾಗಿದೆ.

25

ಆದಾಯ ತೆರಿಗೆ ಇಲಾಖೆಯು ತನ್ನ ಅಧಿಕೃತ X ಹ್ಯಾಂಡಲ್ ಮೂಲಕ ವಿಸ್ತರಣೆಯನ್ನು ಘೋಷಿಸಿದೆ, ವಿಳಂಬಕ್ಕೆ ಹಲವಾರು ಕಾರಣಗಳನ್ನು ಉಲ್ಲೇಖಿಸಿದೆ. ಇವುಗಳಲ್ಲಿ ಐಟಿಆರ್ ನಮೂನೆಗಳಲ್ಲಿನ ಪ್ರಮುಖ ಬದಲಾವಣೆಗಳು, ನಡೆಯುತ್ತಿರುವ ವ್ಯವಸ್ಥೆಯ ಅಭಿವೃದ್ಧಿ ಮತ್ತು ಆನ್‌ಲೈನ್ ವ್ಯವಸ್ಥೆಯಲ್ಲಿ ಮೂಲದಲ್ಲಿ ಕಡಿತಗೊಳಿಸಿದ ತೆರಿಗೆ (ಟಿಡಿಎಸ್) ಕ್ರೆಡಿಟ್‌ಗಳ ನಿಖರ ಪ್ರತಿಬಿಂಬದ ಅಗತ್ಯತೆ ಸೇರಿವೆ.

35

“ಸಿಬಿಡಿಟಿ ಜುಲೈ 31, 2025 ರೊಳಗೆ ಸಲ್ಲಿಸಬೇಕಾದ ಐಟಿಆರ್‌ಗಳ ಸಲ್ಲಿಕೆ ದಿನಾಂಕವನ್ನು ಸೆಪ್ಟೆಂಬರ್ 15, 2025 ರವರೆಗೆ ವಿಸ್ತರಿಸಲು ನಿರ್ಧರಿಸಿದೆ. ಐಟಿಆರ್ ನಮೂನೆಗಳಲ್ಲಿನ ಗಮನಾರ್ಹ ಪರಿಷ್ಕರಣೆಗಳು, ವ್ಯವಸ್ಥೆಯ ಅಭಿವೃದ್ಧಿ ಅಗತ್ಯಗಳು ಮತ್ತು ಟಿಡಿಎಸ್ ಕ್ರೆಡಿಟ್ ಪ್ರತಿಬಿಂಬಗಳಿಂದಾಗಿ ಈ ವಿಸ್ತರಣೆಯು ಹೆಚ್ಚಿನ ಸಮಯವನ್ನು ಒದಗಿಸುತ್ತದೆ. ಇದು ಎಲ್ಲರಿಗೂ ಸುಗಮ ಮತ್ತು ಹೆಚ್ಚು ನಿಖರವಾದ ಫೈಲಿಂಗ್ ಅನುಭವವನ್ನು ಖಚಿತಪಡಿಸುತ್ತದೆ,” ಎಂದು ಇಲಾಖೆಯು X ನಲ್ಲಿ ಪೋಸ್ಟ್ ಮಾಡಿದೆ.

45

ಈ ಕ್ರಮವು ವೈಯಕ್ತಿಕ ತೆರಿಗೆದಾರರು ಮತ್ತು ಚಾರ್ಟರ್ಡ್ ಅಕೌಂಟೆಂಟ್‌ಗಳ ಮೇಲಿನ ಒತ್ತಡವನ್ನು ಕಡಿಮೆ ಮಾಡುತ್ತದೆ ಎಂದು ನಿರೀಕ್ಷಿಸಲಾಗಿದೆ. ಕಾರಣ ಪೋರ್ಟಲ್‌ನಲ್ಲಿ ಮಾಡಿದ್ದ ಬದಲಾವಣೆಗಳಿಂದ ಸಲ್ಲಿಕೆಯಲ್ಲಿ ಕೆಲ ಸಮಸ್ಸೆಗಳು ತಲೆದೋರಿತ್ತು. ನವೀಕರಿಸಿದ ತೆರಿಗೆ ಸಲ್ಲಿಕೆ ಮೂಲಸೌಕರ್ಯದ ಸಿದ್ಧತೆ ಮತ್ತು ಪೋರ್ಟಲ್‌ನಲ್ಲಿ ಟಿಡಿಎಸ್ ಕ್ರೆಡಿಟ್‌ಗಳ ಗೋಚರತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು.

55

ಐಟಿಎರ್ ಸಲ್ಲಿಕೆಯಲ್ಲಿ ಮಾಡಿರುವ ಬದಲಾವಣೆ, ಜೊತೆಗೆ ತೆರೆಗೆದಾರರಿಗೆ ಅಡೆ ತಡೆ ಇಲ್ಲದೆ ಐಟಿಆರ್ ಸಲ್ಲಿಕೆಗೆ ಮಾಡಿರುವ ಬದಲಾವಣೆಗಳು ಸುಲಭವಾಗಿ ಐಟಿಆರ್ ಸಲ್ಲಿಕೆಗೆ ಅವಕಾಶ ನೀಡಲಿದೆ ಎಂದು ಇಲಾಖೆ ಹೇಳಿದೆ. ಐಟಿಆರ್ ಸಲ್ಲಿಕೆ ವಿಸ್ತರಣೆ ಮೂಲಕ ಮಹತ್ವದ ನಿರ್ಧಾರ ಘೋಷಿಸಲಾಗಿದೆ.

Read more Photos on
click me!

Recommended Stories