ಲಕ್ಷಾಧಿಪತಿ ಅಲ್ಲ, ಕೋಟ್ಯಧಿಪತಿ; ದುಡ್ಡು ಹರಿದು ಬರುವಂತೆ ಮಾಡುವ ಸುವರ್ಣ ನಿಯಮಗಳು!

Published : Jul 28, 2025, 04:12 PM IST

Golden Rules for Money: ಬದಲಾಗುತ್ತಿರುವ ಟೆಕ್ ಜಗತ್ತಿನಲ್ಲಿ, ಬಿಲಿಯನೇರ್‌ಗಳು ಸವಾಲುಗಳನ್ನು ಅವಕಾಶಗಳನ್ನಾಗಿ ಪರಿವರ್ತಿಸುವ ಕಲೆ ಕರಗತ ಮಾಡಿಕೊಂಡಿದ್ದಾರೆ. ದುಡ್ಡು ನಿಮ್ಮನ್ನು ಹುಡುಕಿಕೊಂಡು ಬರುವಂತೆ  ಮಾಡುವ  ಐದು ಸೂಪರ್ ಅವಕಾಶಗಳು ಇಲ್ಲಿವೆ.

PREV
15
ಹೊಸ ಪ್ರಯತ್ನಗಳು

ಇಂದಿನ ಟೆಕ್ ಜಗತ್ತಿನಲ್ಲಿ ಬದಲಾವಣೆ ನಿರಂತರ. ಕಾನೂನು, ಗ್ರಾಹಕರ ಮನಸ್ಥಿತಿ, ಮಾರ್ಕೆಟ್ ಟ್ರೆಂಡ್ ಎಲ್ಲವೂ ಬದಲಾಗುತ್ತಾ ಇರುತ್ತೆ. ಹೊಸ ಪ್ರಯತ್ನಗಳಿಗೆ ಇದು ತಡೆಯಾಗುತ್ತೆ. ಆದರೆ ಬಿಲಿಯನೇರ್‌ಗಳು ಸವಾಲುಗಳನ್ನ ಅವಕಾಶಗಳನ್ನಾಗಿ ಮಾಡ್ಕೊಂಡವರು. ಭವಿಷ್ಯದ ದೃಷ್ಟಿಯಿಂದ ಮುನ್ನಡೆಯುತ್ತಾರೆ.

25
ಗ್ರಾಹಕರ ಬೇಡಿಕೆಗೆ ಸ್ಪಂದನೆ
ಗ್ರಾಹಕರ ಮನಸ್ಸು ಅರಿಯುವುದು ಮುಖ್ಯ. ಹೆಚ್ಚಿನ ಯಶಸ್ವಿಗಳು ಮಾರುಕಟ್ಟೆ ಮತ್ತು ಗ್ರಾಹಕರ ಅಗತ್ಯಗಳನ್ನು ಅರಿತು ವ್ಯಾಪಾರ ಆರಂಭಿಸಿದ್ದಾರೆ. ಗ್ರಾಹಕರಾಗಿ ತಾವೇ ಯೋಚಿಸಿ, ನಿಜವಾದ ಬೇಡಿಕೆಗಳನ್ನು ಕಂಡುಕೊಂಡು ಪರಿಹಾರ ನೀಡಿದ್ದಾರೆ. ಸರಿಯಾದ ಸಮಯಕ್ಕೆ ಸ್ಪಂದಿಸುವುದು ಮುಖ್ಯ.
35
ರಿಸ್ಕ್ ತೆಗೆದುಕೊಳ್ಳುವ ಧೈರ್ಯ ಮುಖ್ಯ
ಸಾಮಾನ್ಯವಾಗಿ ಹೊಸತನ ಮತ್ತು ಉತ್ಪಾದನೆಗೆ ಬೇರೆ ಬೇರೆ ತಂಡಗಳು ಬೇಕು. ಆದರೆ ಬಿಲಿಯನೇರ್‌ಗಳು ಕೆಲಸದ ಜೊತೆಗೆ ಹೊಸ ಐಡಿಯಾಗಳನ್ನು ಹುಟ್ಟುಹಾಕುತ್ತಾರೆ. ರಿಸ್ಕ್ ತೆಗೆದುಕೊಳ್ಳುವ ಧೈರ್ಯ ಮುಖ್ಯ. ಗೆಲುವಿಗೆ ಸೋಲಿನ ಭಯ ದಾಟಬೇಕು. ಬಿಲಿಯನೇರ್‌ಗಳು ಕೈಯಲ್ಲಿರುವುದನ್ನು ಕಳೆದುಕೊಳ್ಳುವ ಭಯ ಇಲ್ಲದೆ ಹೊಸ ಹಾದಿಯಲ್ಲಿ ಸಾಗುತ್ತಾರೆ.
45
ಕೆಲಸ ಮಾಡುವ ಗುಣ, ಬಲಿಷ್ಠ ತಂಡದ ರಚನೆ
ವ್ಯಾಪಾರ ಬೆಳವಣಿಗೆಗೆ ಇತರರನ್ನು ಮುನ್ನಡೆಸುವುದು ಮಾತ್ರವಲ್ಲ, ಅವರ ಜೊತೆ ಕೆಲಸ ಮಾಡುವ ಗುಣ ಇರಬೇಕು. ಇದು ನಂಬಿಕೆ ಹುಟ್ಟಿಸಿ, ಸ್ಟ್ರಾಂಗ್ ಟೀಮ್ ಕಟ್ಟಲು ಸಹಾಯ ಮಾಡುತ್ತದೆ.
55
ಬಿಲಿಯೇನರ್ ಆಗಬೇಕೆಂದ್ರೆ!

ಮಿಲಿಯನ್ ಡಾಲರ್ ಗಳಿಸಲು ಅನೇಕ ಮಾರ್ಗಗಳಿವೆ. ಆದರೆ ಬಿಲಿಯನ್ ಆಗಬೇಕೆಂದರೆ, ಮನಸ್ಥಿತಿ, ನಿರ್ಧಾರ ತೆಗೆದುಕೊಳ್ಳುವ ಶಕ್ತಿ, ಭವಿಷ್ಯದ ಕಲ್ಪನೆ ಮೂರೂ ಬೇಕು. ಇವು ಎಲ್ಲರಿಗೂ ಸಿಗುವುದಿಲ್ಲ. ಕೆಲವರು ಪ್ರಯತ್ನದಿಂದ ಗಳಿಸುತ್ತಾರೆ. ಕೆಲವರಿಗೆ ಸ್ವಾಭಾವಿಕವಾಗಿ ಇರುತ್ತದೆ. 

ಯಾರೇ ಆಗಲಿ, ಈ ಗುಟ್ಟುಗಳನ್ನು ಅರಿತು ಪ್ರಯತ್ನ ಮಾಡಿದವರೇ ಬಿಲಿಯನೇರ್ ಆಗೋದು. ದುಡ್ಡು ಮಾತ್ರವಲ್ಲ, ದೃಷ್ಟಿ ಬೆಳೆಸಿದರೆ ದೊಡ್ಡ ಗೆಲುವು ನಿಮ್ಮದೇ!

Read more Photos on
click me!

Recommended Stories