ಒಂದೇ ದಿನದಲ್ಲಿ 2,366 ಕೋಟಿ ಹಣ ಕಳೆದುಕೊಂಡ ಗೌತಮ್ ಅದಾನಿ; ಯಾಕೆ ಇಷ್ಟೊಂದು ನಷ್ಟ?

Published : Feb 16, 2025, 07:06 PM ISTUpdated : Feb 16, 2025, 07:29 PM IST

Gautam Adani, chairman of the country’s third-largest industrial conglomerate Adani Group: ಗೌತಮ್ ಅದಾನಿ ಒಂದೇ ದಿನದಲ್ಲಿ ₹23,660 ಕೋಟಿ ನಷ್ಟ ಅನುಭವಿಸಿ ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ 23ನೇ ಸ್ಥಾನಕ್ಕೆ ಕುಸಿದಿದ್ದಾರೆ. ಅವರ ಒಟ್ಟು ಆಸ್ತಿ $2.3 ಶತಕೋಟಿಗೆ ಇಳಿಕೆಯಾಗಿದೆ. ಭಾರತದ ಇತರ ಉದ್ಯಮಿಗಳ ಆಸ್ತಿಯಲ್ಲೂ ಇಳಿಕೆ ಕಂಡುಬಂದಿದೆ.

PREV
17
ಒಂದೇ ದಿನದಲ್ಲಿ 2,366 ಕೋಟಿ ಹಣ ಕಳೆದುಕೊಂಡ ಗೌತಮ್ ಅದಾನಿ; ಯಾಕೆ ಇಷ್ಟೊಂದು ನಷ್ಟ?

ಭಾರತದ ಎರಡನೇ ಶ್ರೀಮಂತ ಉದ್ಯಮಿ ಗೌತಮ್ ಅದಾನಿ ಒಂದೇ ದಿನದಲ್ಲಿ 23,660,495,500 ರೂಪಾಯಿ ನಷ್ಟ ಅನುಭವಿಸಿದ್ದಾರೆ. ಈ ನಷ್ಟದಿಂದಾಗಿ ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ 23ನೇ ಸ್ಥಾನಕ್ಕೆ ಕುಸಿದಿದ್ದಾರೆ.

27

ಈ ನಷ್ಟದಿಂದಾಗಿ ಗೌತಮ್ ಅದಾನಿ ಅವರ ಒಟ್ಟು ಆಸ್ತಿ 2.3 ಬಿಲಿಯನ್ ಡಾಲರ್‌ಗೆ ಇಳಿಕೆಯಾಗಿದೆ. ಶುಕ್ರವಾರ (ಫೆಬ್ರವರಿ 14) 2.366 ಕೋಟಿ ರೂಪಾಯಿ ಹಣವನ್ನು ಕಳೆದುಕೊಂಡಿದ್ದಾರೆ. ಇತ್ತ ಏಷಿಯಾದ ಶ್ರೀಮಂತರ ಪಟ್ಟಿಯಲ್ಲಿ ಗೌತಮ್ ಅದಾನಿಯವರ ಸ್ಥಾನ ಮೂರಕ್ಕೆ ಇಳಿದಿದೆ.

37

ಭಾರತದ ನಂಬರ್ ಶ್ರೀಮಂತ ವ್ಯಕ್ತಿ, ರಿಲಯನ್ಸ್ ಇಂಡಸ್ಟ್ರಿಯ ಮುಖ್ಯಸ್ಥ ಮುಕೇಶ್ ಅಂಬಾನಿ ಆಸ್ತಿಯಲ್ಲಿಯೂ ಈ ವರ್ಷ 4.55 ಬಿಲಿಯನ್ ಡಾಲರ್ ಇಳಿಕೆಯಾಗಿದೆ. ಇಷ್ಟು ಪ್ರಮಾಣದಲ್ಲಿ ಆಸ್ತಿ ಇಳಿಕೆಯಾದ್ರೂ ಮುಕೇಶ್ ಅಂಬಾನಿ ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ 17ನೇ ಸ್ಥಾನದಲ್ಲಿದ್ದಾರೆ.  ಮುಕೇಶ್ ಅಂಬಾನಿ ಒಟ್ಟು  ಆಸ್ತಿ 86.1 ಬಿಲಿಯನ್ ಡಾಲರ್ ಆಗಿದೆ.

47

ಎಚ್‌ಸಿಎಲ್‌ನ ಶಿವ ನಾಡರ್ ಈ ವರ್ಷ 4.14 ಬಿಲಿಯನ್ ಡಾಲರ್, ಶಪೂರ್ಜಿ ಮಿಸ್ತ್ರಿ 2.18 ಬಿಲಿಯನ್ ಡಾಲರ್, ಅಜೀಂ ಪ್ರೇಮ್‌ಜಿ 188 ಮಿಲಿಯನ್ ಡಾಲರ್, ಸಾವಿತ್ರಿ ಜಿಂದಾಲ್ 5.20 ಬಿಲಿಯನ್ ಡಾಲರ್ ಮತ್ತು ಸನ್ ಫಾರ್ಮಾದ ದಿಲೀಪ್ ಸಾಂಘ್ವಿ 3.40 ಬಿಲಿಯನ್ ಡಾಲರ್ ಹಣ ಕಳೆದುಕೊಂಡಿದ್ದಾರೆ.

57
Elon Musk (File Photo/Reuters)

ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ಎಲಾನ್ ಮಸ್ಕ್ ಈ ವರ್ಷ $34.1 ಶತಕೋಟಿ ನಿವ್ವಳ ಮೌಲ್ಯ  ಕಳೆದುಕೊಂಡಿದ್ದಾರೆ. ಎಲಾನ್ ಮಸ್ಕ್ ಒಟ್ಟು ಆಸ್ತಿ 398 ಶತಕೋಟಿ ಡಾಲರ್ ಆಗಿದೆ. 

67

ಫೇಸ್‌ಬುಕ್‌ನ ಮೂಲ ಕಂಪನಿ ಮೆಟಾ ಪ್ಲಾಟ್‌ಫಾರ್ಮ್‌ಗಳ ಸಿಇಒ ಮಾರ್ಕ್ ಜುಕರ್‌ಬರ್ಗ್ ಈ ವರ್ಷ ತನ್ನ ನಿವ್ವಳ ಮೌಲ್ಯದಲ್ಲಿ $ 52 ಶತಕೋಟಿ ಹೆಚ್ಚಳವನ್ನು ಕಂಡಿದ್ದಾರೆ. ಅವರು $ 259 ಶತಕೋಟಿ ನಿವ್ವಳ ಮೌಲ್ಯದೊಂದಿಗೆ ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ.

77

ಕಳೆದ  ಎಂಟು ಸೆಷನ್‌ಗಳಿಂದ ದೇಶಿಯ ಮಾರುಕಟ್ಟೆ ಕುಸಿತ ಕಾಣುತ್ತಿರೋದರಿಂದ ಭಾರತದ  ಉದ್ಯಮಿಗಳ ಆಸ್ತಿಯ ಮೌಲ್ಯ ಇಳಿಕೆಯಾಗುತ್ತಿದೆ. 

Read more Photos on
click me!

Recommended Stories