ಅಂಬಾನಿ ಮನೆ ಕೆಲಸದವರಿಗೆ 2 ಲಕ್ಷ ಸಂಬಳ; ನೀತಾ ಈ ಬಂಗಲೆಯ 27ನೇ ಮಹಡಿಯಲ್ಲಿರುವುದೇಕೆ?

First Published Jan 2, 2023, 4:58 PM IST

ಭಾರತದ ಎರಡನೇ ಶ್ರೀಮಂತ ವ್ಯಕ್ತಿ ಮುಕೇಶ್ ಅಂಬಾನಿ (Mukesh Ambani) ಅವರ ಕಿರಿಯ ಪುತ್ರ ಅನಂತ್ ಅಂಬಾನಿ ಅವರ ನಿಶ್ಚಿತಾರ್ಥ ಇತ್ತೀಚೆಗೆ  ಬಾರೀ ಅದ್ಧೂರಿಯಾಗಿ ನಡೆಯಿತು ಅನಂತ್ ಅವರು ತಮ್ಮ ಬಾಲ್ಯದ ಗೆಳತಿ ರಾಧಿಕಾ ಮರ್ಚೆಂಟ್ ಅವರೊಂದಿಗೆ ರಾಜಾಸ್ಥಾನದಲ್ಲಿ ನಿಶ್ಚಿತಾರ್ಥ ಮಾಡಿಕೊಂಡರು. ರಾಧಿಕಾ ಅವರು ಎನ್‌ಕೋರ್ ಹೆಲ್ತ್‌ಕೇರ್‌ನ ಸಿಇಒ ವೀರೇನ್ ಮರ್ಚೆಂಟ್ ಅವರ ಪುತ್ರಿ. ರಾಧಿಕಾ ಮರ್ಚೆಂಟ್ 2023 ರಲ್ಲಿ ಅಂಬಾನಿ ಕುಟುಂಬದ ಸೊಸೆಯಾಗಿ ಮುಂಬೈನಲ್ಲಿರುವ ಅಂಬಾನಿ ಕುಟುಂಬದ ಐಷಾರಾಮಿ ಮನೆ 'ಆಂಟಿಲಿಯಾ'ದ ಭಾಗವಾಗಲಿದ್ದಾರೆ.  ಮುಂಬೈನ ಅಲ್ಟಾಮೌಂಟ್ ರಸ್ತೆಯಲ್ಲಿರುವ ಆಂಟಿಲಿಯಾ (Antilia) 27 ಅಂತಸ್ತಿನ ಐಷಾರಾಮಿ ಮನೆಯಲ್ಲಿ, ಮುಖೇಶ್ ಅಂಬಾನಿ ಅವರ ತಾಯಿ ಕೋಕಿಲಾ ಬೆನ್, ಪತ್ನಿ ನೀತಾ, ಇಬ್ಬರು ಪುತ್ರರಾದ ಆಕಾಶ್-ಅನಂತ್, ಸೊಸೆ ಶ್ಲೋಕಾ ಮತ್ತು ಮೊಮ್ಮಗ ಪೃಥ್ವಿ ಅಂಬಾನಿ ಅವರೊಂದಿಗೆ ವಾಸಿಸುತ್ತಿದ್ದಾರೆ.
 

ಆಂಟಿಲಿಯಾ 27 ಅಂತಸ್ತಿನ ಐಷಾರಾಮಿ ಬಂಗಲೆ. ಆದರೆ ಅಂಬಾನಿ ಕುಟುಂಬವು ಅದರ 27ನೇ ಮಹಡಿಯಲ್ಲಿಯೇ ವಾಸಿಸುತ್ತಿದೆ. ಇದರ ಹಿಂದಿನ ಕಾರಣವೇನು? ಸ್ವತಃ ಮುಖೇಶ್ ಅಂಬಾನಿ ಪತ್ನಿ ನೀತಾ ಅಂಬಾನಿ ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದಾರೆ ಈ ಗುಟ್ಟನ್ನು ಬಹಿರಂಗಪಡಿಸಿದ್ದಾರೆ.
 

ಬಿಸಿನೆಸ್ ಇನ್‌ಸೈಡರ್‌ ವರದಿಯ ಪ್ರಕಾರ, ನೀತಾ ಅಂಬಾನಿ ಎಲ್ಲಾ ಕೊಠಡಿಗಳಲ್ಲಿಯೂ ಸಾಕಷ್ಟು ಸೂರ್ಯನ ಬೆಳಕು ಧಾರಳವಾಗಿ ಬೀಳಬೇಕೆಂದು ಆಶಿಸಿದ್ದರು. ಆದ್ದರಿಂದ ಅವರು ಮೇಲಿನ ಭಾಗದಲ್ಲಿ ಉಳಿಯಲು ನಿರ್ಧರಿಸಿದ್ದಾರಂತೆ. ವಿಶೇಷ ವ್ಯಕ್ತಿಗಳಿಗೆ ಮಾತ್ರ ಈ ಮಹಡಿಗೆ ಹೋಗಲು ಅನುಮತಿ ಇದೆ. 

ವರದಿಗಳ ಪ್ರಕಾರ, 24 ಗಂಟೆಗಳ ಕಾಲ ಆಂಟಿಲಿಯಾದಲ್ಲಿ 600 ಜನರ ಸಿಬ್ಬಂದಿ ಇದ್ದಾರೆ. ಇದು ತೋಟಗಾರರು, ಎಲೆಕ್ಟ್ರಿಷಿಯನ್‌ಗಳು, ಸೆಕ್ಯುರಿಟಿ ಗಾರ್ಡ್‌ಗಳು, ಪ್ಲಂಬರ್‌ಗಳು, ಚಾಲಕರು ಮತ್ತು ಸೇವಕರಿಗೆ ಅಡುಗೆ ಮಾಡುವವರು ಒಳಗೊಂಡಿರುತ್ತದೆ. ನೀತಾ ಅಂಬಾನಿ ಪ್ರಕಾರ, ಅವರ ಮನೆಯಲ್ಲಿರುವ ಪ್ರತಿಯೊಬ್ಬ ಉದ್ಯೋಗಿಯೂ ಕುಟುಂಬದ ಸದಸ್ಯರಂತೆಯೇ ಇರುತ್ತಾರೆ.

ಸುಮಾರು 4 ಲಕ್ಷ ಚದರ ಅಡಿಗಳಲ್ಲಿ 'ಆಂಟಿಲಿಯಾ' ನಿರ್ಮಿಸಲಾಗಿದೆ. ಮುಖೇಶ್ ಅಂಬಾನಿ ಅವರ ಮನೆಯನ್ನು 200 ಮಿಲಿಯನ್ ಡಾಲರ್ ಅಂದರೆ ಸುಮಾರು 11 ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಆಂಟಿಲಿಯಾ ತೆರೆದ ಆಕಾಶ ಮತ್ತು ಅರೇಬಿಯನ್ ಸಮುದ್ರದ ಅತ್ಯಂತ ಸುಂದರವಾದ ನೋಟವನ್ನು ಹೊಂದಿದೆ.

ಎಲ್ಲಾ ಸಿಬ್ಬಂದಿಗೆ ಅವರ ಸಾಮರ್ಥ್ಯಕ್ಕೆ ಅನುಗುಣವಾಗಿ ಸಂಬಳ ನೀಡಲಾಗುತ್ತದೆ ಎಂದು ನೀತಾ ಅಂಬಾನಿ ಸಂದರ್ಶನದಲ್ಲಿ ಹೇಳಿದ್ದರು. ಆದರೆ, ಇಲ್ಲಿನ ಹಲವರ ಸಂಬಳ ತಿಂಗಳಿಗೆ 2 ಲಕ್ಷ ರೂ.ವರೆಗೆ ಇದೆ.

ಇದಲ್ಲದೇ ಆಂಟಿಲಿಯ 6ನೇ ಮಹಡಿಯಲ್ಲಿ ಗ್ಯಾರೇಜ್ ಇದ್ದು, ಇದರಲ್ಲಿ ಸುಮಾರು 168 ಕಾರುಗಳನ್ನು ಏಕಕಾಲದಲ್ಲಿ ನಿಲ್ಲಿಸಬಹುದಾಗಿದೆ. ಈ ಕಾರುಗಳನ್ನು ಸರ್ವೀಸ್ ಮಾಡಲು 7ನೇ ಮಹಡಿಯಲ್ಲಿ ಸರ್ವೀಸ್ ಸ್ಟೇಷನ್ ಕೂಡ ಸ್ಥಾಪಿಸಲಾಗಿದೆ. ಮುಖೇಶ್ ಅಂಬಾನಿ ಮನೆಯಲ್ಲಿ 9 ಲಿಫ್ಟ್‌ಗಳನ್ನು ಹೊಂದಿದೆ

ಆಂಟಿಲಿಯಾ 27 ಮಹಡಿಗಳನ್ನು ಹೊಂದಿದ್ದರೂ, ಅದರ ಎತ್ತರವು ಸುಮಾರು 40  ಮಹಡಿಗಳಷ್ಟಿದೆ. ಅನೇಕ ಮಹಡಿಗಳಲ್ಲಿನ ಸೀಲಿಂಗ್‌ಗಳು ಸುಮಾರು ಎರಡು ಪಟ್ಟು ಹೆಚ್ಚು, ಆದ್ದರಿಂದ ಆಂಟಿಲಿಯಾ 27 ಅಂತಸ್ತಿನ ಕಟ್ಟಡಕ್ಕಿಂತ ಹೆಚ್ಚು ಎತ್ತರವಾಗಿ ಕಾಣುತ್ತದೆ. ಅಂಬಾನಿ ಕುಟುಂಬದಲ್ಲಿ ನಡೆಯುವ ಎಲ್ಲಾ ಕಾರ್ಯಕ್ರಮಗಳನ್ನು ಈ ಮನೆಯಲ್ಲಿಯೇ ಆಯೋಜಿಸಲಾಗುತ್ತದೆ. ಅನಂತ್ ನಿಶ್ಚಿತಾರ್ಥ ರಾಜಸ್ಥಾನದಲ್ಲದಾರೂ, ಇದೇ ಮನೆಯಲ್ಲಿ ಸಿನ ಸೇರಿ ಹಲವು ಗಣ್ಯರಿಗೆ ಪಾರ್ಟಿ ಆಯೋಜಿಸಲಾಗಿತ್ತು.
 

ಅಂಬಾನಿ ಅವರ ಐಷಾರಾಮಿ ಮನೆ ಆಂಟಿಲಿಯಾ ಒಳಗೆ ಭವ್ಯವಾದ ದೇವಾಲಯವಿದೆ. ಈ ದೇವಾಲಯವನ್ನು ಆಂಟಿಲಿಯಾದ ಸಂಪೂರ್ಣ ಮಹಡಿಯಲ್ಲಿ ನಿರ್ಮಿಸಲಾಗಿದೆ ಮತ್ತು ದೊಡ್ಡ ಜಾಗವನ್ನು ನೀಡಲಾಗಿದೆ. ಆಂಟಿಲಿಯಾದಲ್ಲಿರುವ ದೇವಾಲಯದ ವಿಗ್ರಹಗಳಿಂದ ಬಾಗಿಲುಗಳು ಮತ್ತು ಎಲ್ಲವೂ ಚಿನ್ನ ಮತ್ತು ಬೆಳ್ಳಿಯಿಂದ ಮಾಡಲ್ಪಟ್ಟಿದೆ. ಇದರೊಂದಿಗೆ ದೇವರ ವಿಗ್ರಹಗಳಿಗೂ ವಜ್ರಾಭರಣಗಳಿಂದ ಅಲಂಕರಿಸಲಾಗಿದೆ

ವಜ್ರಗಳನ್ನು ಇಷ್ಟಪಡುವ ನೀತಾ ಅಂಬಾನಿ ದೇವಾಲಯವನ್ನು ವಿಶೇಷವಾಗಿಸಲು ಅಮೂಲ್ಯ ರತ್ನಗಳಿಂದ ಅಲಂಕರಿಸಿದ್ದಾರೆ. ನೀತಾ ಅಂಬಾನಿಯವರ ಐಪಿಎಲ್ ತಂಡ ಮುಂಬೈ ಇಂಡಿಯನ್ಸ್ ಟ್ರೋಫಿಯನ್ನು ಗೆದ್ದಾಗ, ನೀತಾ ಮೊದಲು ಅದನ್ನು ಮನೆಯ ದೇವಾಲಯದಲ್ಲಿ ದೇವರ ಪಾದಕ್ಕೆ ಅರ್ಪಿಸುತ್ತಾರೆ.

ಆಂಟಿಲಿಯಾದಲ್ಲಿ ಭವ್ಯವಾದ ದೇವಾಲಯವನ್ನು ಹೊರತುಪಡಿಸಿ, ಬಾಲ್ ರೂಂ ಇದೆ. ಸೀಲಿಂಗ್ ಅನ್ನು ಹರಳುಗಳಿಂದ ಅಲಂಕರಿಸಲಾಗಿದೆ. ಥಿಯೇಟರ್, ಬಾರ್, ಮೂರು ಹೆಲಿಪ್ಯಾಡ್‌ಗಳಿವೆ. ಮುಖೇಶ್ ಅಂಬಾನಿಗೆ ಸಿನಿಮಾ ಎಂದರೆ ತುಂಬಾ ಇಷ್ಟ. ಮಧ್ಯರಾತ್ರಿ ಕಛೇರಿಯಿಂದ ಬಂದ ನಂತರವೂ ಮುಖೇಶ್ ಸಿನಿಮಾ ನೋಡದೆ ನಿದ್ದೆ ಮಾಡುವುದಿಲ್ಲ ಎಂದು ಸಂದರ್ಶನವೊಂದರಲ್ಲಿ ನೀತಾ ಅಂಬಾನಿ ಹೇಳಿದ್ದರು. ಇದೇ ಕಾರಣಕ್ಕೆ ಮನೆಯ 8ನೇ ಮಹಡಿಯಲ್ಲಿ 50 ಸೀಟುಗಳ ಮಿನಿ ಹೋಮ್ ಥಿಯೇಟರ್ ನಿರ್ಮಿಸಿದ್ದಾರೆ.

'ಆಂಟಿಲಿಯಾ' ಅನ್ನು ಚಿಕಾಗೋ ಮೂಲದ ವಾಸ್ತುಶಿಲ್ಪಿ 'ಪರ್ಕಿನ್ಸ್' ವಿನ್ಯಾಸಗೊಳಿಸಿದ್ದಾರೆ ಮತ್ತು ಇದನ್ನು ಆಸ್ಟ್ರೇಲಿಯಾದ ನಿರ್ಮಾಣ ಕಂಪನಿ 'ಲ್ಯಾಗ್ಟನ್ ಹೋಲ್ಡಿಂಗ್' ನಿರ್ಮಿಸಿದೆ .8 ರಿಕ್ಟರ್ ಮಾಪಕ ಭೂಕಂಪವನ್ನು ಆಂಟಿಲಿಯಾ ಸುಲಭವಾಗಿ ತಡೆದುಕೊಳ್ಳುತ್ತದೆ ಎಂದು ಹೇಳಲಾಗುತ್ತದೆ.
 

ಆಂಟಿಲಿಯಾಕ್ಕೆ ಸ್ಥಳಾಂತರಗೊಳ್ಳುವ ಮೊದಲು, ಮುಕೇಶ್ ಅಂಬಾನಿ ತಮ್ಮ ಸಹೋದರ ಅನಿಲ್ ಅಂಬಾನಿ ಮತ್ತು ಅವರ ಕುಟುಂಬದೊಂದಿಗೆ ಮುಂಬೈನ ಕಫ್ ಪರೇಡ್‌ನಲ್ಲಿರುವ 17 ಅಂತಸ್ತಿನ ಕಟ್ಟಡದ ಸೀ-ವಿಂಡ್‌ನಲ್ಲಿ ವಾಸಿಸುತ್ತಿದ್ದರು. 2011 ರಲ್ಲಿ, ಮುಖೇಶ್ ಅಂಬಾನಿ ತಮ್ಮ ಕುಟುಂಬದೊಂದಿಗೆ 'ಆಂಟಿಲಿಯಾ'ಕ್ಕೆ ಸ್ಥಳಾಂತರಗೊಂಡರು, ಅಂದಿನಿಂದ ಅವರು ಇಲ್ಲಿಯೇ ವಾಸಿಸುತ್ತಿದ್ದಾರೆ.

click me!