ಇಪಿಎಫ್‌ಒ, ಪಿಎಫ್ ಖಾತೆದಾರರಿಗೆ ಶೀಘ್ರದಲ್ಲೇ ಶೇ. 8.25ರಷ್ಟು ಬಡ್ಡಿ ಹಣವನ್ನು ಜಮೆ ಮಾಡುವುದಾಗಿ ಘೋಷಿಸಿದೆ. ಜುಲೈ 15ರೊಳಗೆ ಸುಮಾರು 34 ಕೋಟಿ ಖಾತೆಗಳಿಗೆ ಈ ಹಣ ವರ್ಗಾವಣೆಯಾಗಲಿದ್ದು, ಜೊತೆಗೆ ವೇಗದ ಸೇವೆಗಾಗಿ ಹೊಸ ಕೇಂದ್ರೀಕೃತ ಐಟಿ ವ್ಯವಸ್ಥೆಯನ್ನು ಜಾರಿಗೆ ತರಲಾಗುತ್ತಿದೆ.
ಇಪಿಎಫ್‌ಒ (EPFO) ಪಿಎಫ್ ಖಾತೆದಾರರಿಗೆ ಪ್ರಮುಖ ಮಾಹಿತಿಯೊಂದನ್ನು ಪ್ರಕಟಿಸಿದೆ. ವಿಶೇಷವೆಂದರೆ, ಪ್ರತಿಯೊಬ್ಬರೂ ಯಾವ ವಿಷಯಕ್ಕಾಗಿ ಕಾಯುತ್ತಿದ್ದರೋ, ಕೊನೆಗೂ ಆ ಬಗ್ಗೆ ದೊಡ್ಡ ಘೋಷಣೆಯಾಗಿದೆ. ಶೀಘ್ರದಲ್ಲೇ ಪಿಎಫ್ ಖಾತೆದಾರರ ಖಾತೆಗೆ ಬಡ್ಡಿ ಹಣ ಜಮೆಯಾಗಲಿದೆ.
25
ಜು.15ರ ಒಳಗೆ 34 ಕೋಟಿ ಖಾತೆಗಳಿಗೆ ಬಡ್ಡಿ ಜಮೆ
ಹೊಸ ವ್ಯವಸ್ಥೆಯಡಿ ಜುಲೈ 15 ರೊಳಗೆ 34 ಕೋಟಿ ಖಾತೆಗಳಿಗೆ ಬರೋಬ್ಬರಿ ಶೇಕಡಾ 8.25 ರಷ್ಟು ಬಡ್ಡಿಯನ್ನು ಜಮೆ ಮಾಡಲಾಗುವುದು ಎಂದು ಇಪಿಎಫ್‌ಒ ಪ್ರಕಟಿಸಿದೆ. ಇದು ಸದ್ಯದ ದಿನಗಳಲ್ಲಿ ಉದ್ಯೋಗಿಗಳ ಪಾಲಿನ ದೊಡ್ಡ ಘೋಷಣೆ ಎನಿಸಿದೆ.
35
1.44 ಲಕ್ಷ ಕೋಟಿ ರೂಪಾಯಿಗಳ ಬೃಹತ್ ಮೊತ್ತ ವರ್ಗಾವಣೆ
ಈ ಒಟ್ಟು ಬಡ್ಡಿಯ ಮೊತ್ತ ಸುಮಾರು 1.44 ಲಕ್ಷ ಕೋಟಿ ರೂಪಾಯಿಗಳಷ್ಟಾಗಿದೆ. ಇದರಿಂದ ಗ್ರಾಹಕರಿಗೆ ನೇರ ಲಾಭ ಸಿಗಲಿದೆ. ಜುಲೈ 15 ರೊಳಗೆ ಈ ಮೊತ್ತ ಖಾತೆಗಳಿಗೆ ಜಮೆಯಾಗಲಿದ್ದು, ಕಳೆದ ಹಲವು ದಿನಗಳಿಂದ ಇದೇ ಘೋಷಣೆಗಾಗಿ ಎಲ್ಲರೂ ಕಾಯುತ್ತಿದ್ದರು.
ಇದರೊಂದಿಗೆ, ಪಿಎಫ್‌ಗೆ ಸಂಬಂಧಿಸಿದ ಸೇವೆಗಳು ಇನ್ಮುಂದೆ ಇನ್ನಷ್ಟು ವೇಗವಾಗಿ ಮತ್ತು ಸುಲಭವಾಗಿ ಲಭ್ಯವಾಗಲಿವೆ. ಹೊಸ ಕೇಂದ್ರೀಕೃತ ಐಟಿ ವ್ಯವಸ್ಥೆಯನ್ನು (Centralized IT System) ಜಾರಿಗೆ ತರುತ್ತಿರುವುದು ಒಂದು ಪ್ರಮುಖ ಬದಲಾವಣೆಯಾಗಿದೆ. ಇದು ಅತ್ಯಂತ ವೇಗದ ಸೇವೆಯನ್ನು ಒದಗಿಸುತ್ತದೆ.
55
ದೇಶಾದ್ಯಂತ ಒಂದೇ ಕೇಂದ್ರೀಕೃತ ಡೇಟಾಬೇಸ್ ವ್ಯವಸ್ಥೆ
ಈ ಹೊಸ ವ್ಯವಸ್ಥೆಯಿಂದಾಗಿ ದೇಶಾದ್ಯಂತ ಇರುವ ಎಲ್ಲಾ ಪಿಎಫ್ ಖಾತೆಗಳ ಮಾಹಿತಿಯನ್ನು ಒಂದೇ ಕೇಂದ್ರೀಕೃತ ಡೇಟಾಬೇಸ್‌ನಲ್ಲಿ ಸಂಗ್ರಹಿಸಲಾಗುತ್ತದೆ. ಇದರಿಂದಾಗಿ ಪಿಎಫ್ ಸದಸ್ಯರು ದೇಶದ ಯಾವುದೇ ಇಪಿಎಫ್‌ಒ ಕಚೇರಿಯಿಂದಲಾದರೂ ಸೇವೆಗಳ ಲಾಭವನ್ನು ಪಡೆದುಕೊಳ್ಳಬಹುದಾಗಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.