ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ದ್ವಾರಕಾ ಎಕ್ಸ್‌ಪ್ರೆಸ್‌ವೇ ಸೌಂದರ್ಯವನ್ನು ತೋರಿಸುವ ವಿಡಿಯೋವನ್ನು ಭಾನುವಾರ ಹಂಚಿಕೊಂಡಿದ್ದಾರೆ, ಇದನ್ನು ಉತ್ತರ ಪೆರಿಫೆರಲ್ ರಸ್ತೆ ಅಥವಾ NH 248-BB ಎಂದೂ ಕರೆಯಲಾಗುತ್ತದೆ. 27.6 ಕಿಮೀ ಉದ್ದದ ಯೋಜನೆಯು ಪ್ರಸ್ತುತ ನಿರ್ಮಾಣ ಹಂತದಲ್ಲಿದೆ ಮತ್ತು ದೆಹಲಿಯ ದ್ವಾರಕಾವನ್ನು ಗುರುಗ್ರಾಮ್‌ನ ಖೇರ್ಕಿ ದೌಲಾ ಟೋಲ್ ಪ್ಲಾಜಾದೊಂದಿಗೆ ಇದು ಸಂಪರ್ಕಿಸುತ್ತದೆ.
ಈ ಯೋಜನೆಯನ್ನು 3 - 4 ತಿಂಗಳಲ್ಲಿ ಸಾರ್ವಜನಿಕರಿಗೆ ತೆರೆಯಲಾಗುವುದು ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಹೇಳಿದ್ದು, ಇದನ್ನು "ಎಂಜಿನಿಯರಿಂಗ್ ಅದ್ಭುತ" ಎಂದು ಕರೆದಿದ್ದಾರೆ. ಅಲ್ಲದೆ, ದ್ವಾರಕಾ ಎಕ್ಸ್‌ಪ್ರೆಸ್‌ವೇಯಲ್ಲಿ ಪ್ರಯಾಣಿಸುವ ಜನರು 100 ವರ್ಷಗಳ ಅನುಭವವನ್ನು ನೆನಪಿಸಿಕೊಳ್ಳುತ್ತಾರೆ ಎಂದೂ ಸಾರಿಗೆ ಸಚಿವರು ಹೇಳಿದ್ದಾರೆ.
ಐದು ಅಂಶಗಳಲ್ಲಿ ದ್ವಾರಕಾ ಎಕ್ಸ್‌ಪ್ರೆಸ್‌ವೇ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಮಾಹಿತಿ ಹೀಗಿದೆ..
1) ಎಕ್ಸ್‌ಪ್ರೆಸ್‌ವೇ ದ್ವಾರಕಾದಿಂದ ಮನೇಸರ್ ನಡುವಿನ ಪ್ರಯಾಣದ ಸಮಯವನ್ನು 15 ನಿಮಿಷಗಳಿಗೆ ಇಳಿಸುತ್ತದೆ. ಮನೇಸರ್ ಮತ್ತು ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ನಡುವಿನ ಅಂತರವನ್ನು ಈಗ ಕೇವಲ 20 ನಿಮಿಷಗಳಲ್ಲಿ ಕ್ರಮಿಸಬಹುದು ಮತ್ತು ಮನೇಸರ್ ಹಾಗೂ ಸಿಂಘು ಗಡಿಯ ನಡುವಿನ ಪ್ರಯಾಣದ ಸಮಯವು ಕೇವಲ 45 ನಿಮಿಷಗಳಿಗೆ ಕಡಿಮೆಯಾಗುತ್ತದೆ.
2) ದ್ವಾರಕಾ ಎಕ್ಸ್‌ಪ್ರೆಸ್‌ವೇಯನ್ನು ಎರಡು ಲಕ್ಷ ಟನ್ ಉಕ್ಕನ್ನು ಬಳಸಿ ನಿರ್ಮಿಸಲಾಗಿದೆ - ಇದು ಪ್ಯಾರಿಸ್‌ನಲ್ಲಿ ಐಫೆಲ್ ಟವರ್ ನಿರ್ಮಿಸಲು ತೆಗೆದುಕೊಂಡಿದ್ದಕ್ಕಿಂತ 30 ಪಟ್ಟು ಹೆಚ್ಚು. ಉಕ್ಕಿನ ಜೊತೆಗೆ, ಸುಮಾರು 20 ಲಕ್ಷ ಕ್ಯೂಬಿಕ್ ಮೀಟರ್ ಸಿಮೆಂಟ್ ಕಾಂಕ್ರೀಟ್ ಅನ್ನು ನಿರ್ಮಾಣಕ್ಕೆ ಬಲಸಲಾಗಿದೆ. ಅಂದರೆ, ದುಬೈನ ಬುರ್ಜ್ ಖಲೀಫಾವನ್ನು ನಿರ್ಮಿಸಲು ಬಳಸಿದ್ದಕ್ಕಿಂತ 6 ಪಟ್ಟು ಹೆಚ್ಚು.
3) ಈ ಎಕ್ಸ್‌ಪ್ರೆಸ್‌ವೇ ದೆಹಲಿಯ ಮಹಿಪಾಲ್‌ಪುರದ ಶಿವ ಮೂರ್ತಿಯಲ್ಲಿ NH 48 (ಹಳೆಯ NH 8) ನ 20-ಕಿಮೀ ಮಾರ್ಕ್‌ನಲ್ಲಿ ಪ್ರಾರಂಭವಾಗುತ್ತದೆ ಮತ್ತು ಗುರುಗ್ರಾಮ್‌ನ ಖೇರ್ಕಿ ದೌಲಾ ಟೋಲ್ ಪ್ಲಾಜಾ ಬಳಿ 40-ಕಿಮೀ ಮಾರ್ಕ್‌ನಲ್ಲಿ ಕೊನೆಗೊಳ್ಳುತ್ತದೆ. ದೆಹಲಿ - ಗುರುಗ್ರಾಮ್ ಎಕ್ಸ್‌ಪ್ರೆಸ್‌ವೇಯಲ್ಲಿ ದಟ್ಟಣೆಯನ್ನು ಸರಾಗಗೊಳಿಸುವ ಸಲುವಾಗಿ ಇದನ್ನು ರಾಷ್ಟ್ರ ರಾಜಧಾನಿ ಮತ್ತು ಗುರುಗ್ರಾಮ್ ನಡುವೆ ಪರ್ಯಾಯ ರಸ್ತೆ ಸಂಪರ್ಕವಾಗಿ ಯೋಜಿಸಲಾಗಿದೆ.
4) ಒಮ್ಮೆ ಕಾರ್ಯರೂಪಕ್ಕೆ ಬಂದರೆ, ಇದು ಭಾರತದ ಮೊದಲ ಎಂಟು ಲೇನ್ ಎಲಿವೇಟೆಡ್ ಎಕ್ಸ್‌ಪ್ರೆಸ್‌ವೇ ಆಗಿರುತ್ತದೆ. ನಾಲ್ಕು ಪ್ಯಾಕ್ ಮೋಟಾರುಮಾರ್ಗದ ಒಟ್ಟು ಉದ್ದ 563 ಕಿಲೋಮೀಟರ್.
5) ದ್ವಾರಕಾ ಎಕ್ಸ್‌ಪ್ರೆಸ್‌ವೇ ನಿರ್ಮಾಣದ ಸಮಯದಲ್ಲಿ, ಕನಿಷ್ಠ 1,200 ಮರಗಳನ್ನು ಒಂದು ಕಡೆಯಿಂದ ಇನ್ನೊಂದು ಕಡೆಗೆ ಸ್ಥಳಾಂತರಿಸಲಾಗಿದೆ. ಇದು ಸಹ ಭಾರತಕ್ಕೆ ಮೊದಲನೆಯದು. ಅದಲ್ಲದೆ, ದೇಶದ ಮೊದಲ 8-ಲೇನ್ 3.6 ಕಿಮೀ ಉದ್ದದ ನಗರ ಸುರಂಗ ಕೂಡ ದ್ವಾರಕಾ ಎಕ್ಸ್‌ಪ್ರೆಸ್‌ವೇ ಭಾಗವಾಗಿದೆ.