ಕೊತ್ತಂಬರಿ ಸೊಪ್ಪು ಕಟಾವು ಮಾಡಿದ ತಕ್ಷಣ ಮತ್ತೆ ಬೆಳೆ ಬೆಳೆಯಬಹುದು. ತರಕಾರಿ ಮಾರುವವರು ನಿಮ್ಮ ಹತ್ರ ಬಂದು ಕೊತ್ತಂಬರಿ ಸೊಪ್ಪು ಕೊಂಡುಕೊಳ್ಳುತ್ತಾರೆ. ಇಲ್ಲ ಅಂದ್ರೆ ನೀವೇ ಮಾರ್ಕೆಟ್ ಗೆ ಹೋಗಿ ಮಾರಿಕೊಳ್ಳಬಹುದು. ಕೆಲವೊಮ್ಮೆ ಒಂದು ಕೊತ್ತಂಬರಿ ಸೊಪ್ಪು ಕಟ್ಟು 5 ರೂಪಾಯಿಗೆ ಮಾರಾಟ ಆಗಿರುವ ನಿದರ್ಶನಗಳಿವೆ. ಬೇಸಿಗೆಯಲ್ಲಿ ಕೊತ್ತಂಬರಿ ಸೊಪ್ಪು ಬೆಲೆ ತುಂಬ ಜಾಸ್ತಿ ಇರುತ್ತೆ. ಹಾಗಾಗಿ ಬೇಸಿಗೆಗೆ ಬೆಳೆ ಕೈ ಸೇರೋ ಹಾಗೆ ಪ್ಲಾನ್ ಮಾಡ್ಕೊಂಡ್ರೆ ಒಳ್ಳೆಯ ಲಾಭ ಪಡೆಯಬಹುದು.
ಗಮನಿಸಿ: ಈ ಮಾಹಿತಿ ಕೇವಲ ಪ್ರಾಥಮಿಕ ಮಾಹಿತಿ. ವ್ಯಾಪಾರ ಶುರು ಮಾಡುವ ಮುನ್ನ ಈ ಕ್ಷೇತ್ರದಲ್ಲಿ ಅನುಭವ ಇರುವವರ ಜೊತೆ ಮಾತನಾಡಿ, ಬಂಡವಾಳ ಹೂಡಿ.