ಪ್ರತಿ ದಿನ 2 ಜಿಬಿ ಡೇಟಾ,ಒಟಿಟಿ,ಅನ್‌ಲಿಮಿಟೆಡ್ ಕಾಲ್ ಸೇರಿ ಭರ್ಜರಿ ಆಫರ್ ಕೊಟ್ಟ ಏರ್‌ಟೆಲ್!

Published : Dec 15, 2024, 07:11 PM IST

ಏರ್‌ಟೆಲ್ ಇದೀಗ ಆಲ್ ಇನ್ ಒನ್ ಆಫರ್ ನೀಡಿದೆ. ಇದರಲ್ಲಿ ಅನ್‌ಲಿಮಿಟೆಡ್ ಕಾಲ್, ಹೈಸ್ಪೀಡ್ ಡೇಟಾ, ಒಟಿಟಿ ಸಬ್‌ಸ್ಕ್ರಿಪ್ಶನ್ ಸೇರಿದಂತೆ ಹಲವು ಸೌಲಭ್ಯ ನೀಡುತ್ತಿದೆ. 28 ದಿನದ ವ್ಯಾಲಿಡಿಟಿಯ ಈ ಪ್ಲಾನ್ ಕೈಗೆಟುಕುವ ದರದಲ್ಲಿ ಲಭ್ಯವಿದೆ.

PREV
15
ಪ್ರತಿ ದಿನ 2 ಜಿಬಿ ಡೇಟಾ,ಒಟಿಟಿ,ಅನ್‌ಲಿಮಿಟೆಡ್ ಕಾಲ್ ಸೇರಿ ಭರ್ಜರಿ ಆಫರ್ ಕೊಟ್ಟ ಏರ್‌ಟೆಲ್!

ಭಾರತದ ಟೆಲಿಕಾಂ ಕ್ಷೇತ್ರದಲ್ಲಿ ಪ್ರತಿ ದಿನ ಹೊಸ ಹೊಸ ಆಫರ್ ಲಾಂಚ್ ಆಗುತ್ತಿದೆ. ಪೈಪೋಟಿಯೂ ಹೆಚ್ಚಾಗುತ್ತಿದೆ. ರಿಲಯನ್ಸ್ ಜಿಯೋ, ಬಿಎಸ್‌ಎನ್‌ಎಲ್, ವಿಐ ಸೇರಿದಂತೆ ಇತರ ಟೆಲಿಕಾಂಗಳಿಗೆ ಪ್ರತಿಸ್ಪರ್ಧಿಯಾಗಿ ಏರ್‌ಟೆಲ್ ಇದೀಗ ಹೊಸ ರೀಚಾರ್ಜ್ ಪ್ಲಾನ್ ಘೋಷಿಸಿದೆ. ಕೈಗೆಟುಕುವ ದರದಲ್ಲಿ ಎಲ್ಲಾ ಸೌಲಭ್ಯಗಳು ಒಂದರಲ್ಲೇ ಸಿಗುವಂತೆ ಮಾಡಿದ್ದರೆ.

25

ಏರ್‌ಟೆಲ್ ಹೊಸ ರೀಚಾರ್ಜ್ ಪ್ಲಾನ್ 28 ದಿನ ವ್ಯಾಲಿಟಿಡಿ ಹೊಂದಿದೆ. ಜೊತೆಗೆ ಹಾಟ್‌ಸ್ಟಾರ್ ಸೇರಿದಂತೆ ಒಟಿಟಿ ಉಚಿತ ಸಬ್‌ಸ್ಕ್ರಪ್ಶನ್, ಕರೆ, ಎಸ್ಎಂಎಸ್ ಸೇರಿದಂತೆ ಹಲವು ಸೌಲಭ್ಯಗಳು ಈ ಪ್ಲಾನ್‌ನಲ್ಲಿ ಲಭ್ಯವಿದೆ. ಇದರ ಬೆಲೆ 398 ರೂಪಾಯಿ. ಈ ಮೂಲಕ ಜಿಯೋ ಸೇರಿದಂತೆ ಇತರ ಟೆಲಿಕಾಂ ಸಂಸ್ಥೆಗಳಿಗೆ ಏರ್‌ಟೆಲ್ ನಡುಕ ಹುಟ್ಟಿಸಿದೆ.

35

ಒಮ್ಮೆ 398 ರೂಪಾಯಿ ರೀಚಾರ್ಜ್ ಮಾಡಿದರೆ 28 ದಿನ ಎಲ್ಲಾ ಸೌಲಭ್ಯ ಬಳಕೆ ಮಾಡಲು ಸಾಧ್ಯವಿದೆ. ಪ್ರತಿ ದಿನ ಹೈಸ್ಪೀಡ್ ಇಂಟರ್ನೆಟ್ ಲಭ್ಯವಿದೆ. 2 ಜಿಬಿ ಪ್ರತಿ ದಿನ ಡೇಟಾ, ಅನ್‌ಲಿಮಿಟೆಡ್ ಕಾಲ್, ಪ್ರತಿ ದಿನ 100 ಎಸ್ಎಂಎಸ್ ಸಿಗಲಿದೆ. ಇನ್ನು ಹಾಟ್‌ಸ್ಟಾರ್ ಸಬ್‌ಸ್ಕ್ರಿಪ್ಶನ್ ಸಿಗಲಿದೆ. ಇದರಲ್ಲಿ ಸ್ಪೋರ್ಟ್ಸ್ ಲೈವ್, ಸಿನಿಮಾ ಸೇರಿದಂತೆ ಹಲವು ಮನೋರಂಜನಾ ಕಾರ್ಯಕ್ರಮಗಳ ವೀಕ್ಷಣೆ ಸಾಧ್ಯವಾಗಲಿದೆ.

45

ಏರ್‌ಟೆಲ್ ಹೊಸ ಪ್ಲಾನ್ ಗ್ರಾಹಕರಿಗೆ ಎಲ್ಲಾ ರೀತಿಯಲ್ಲಿ ನೆರವಾಗಲಿದೆ. ಕಾರಣ ಇಲ್ಲಿ 2ಜಿಬಿ ಡೇಟಾ ಸಿಗಲಿದೆ. ಇತ್ತ ಒಟಿಟಿ ಪ್ಲಾಟ್‌ಫಾರ್ಮ್ ಸೌಲಭ್ಯ ಕೂಡ ಸಿಗಲಿದೆ. ಹೀಗಾಗಿ ಒಂದೇ ಪ್ಲಾನ್‌ನಲ್ಲಿ ಎಲ್ಲಾ ಸೌಲಭ್ಯ ಅನುಭವಿಸಲು ಸಾಧ್ಯವಿದೆ. ಇದು ಕೇವಲ 398 ರೂಪಾಯಿ ಪ್ಲಾನ್‌ನಲ್ಲಿ ಲಭ್ಯವಿದೆ.

55
jio airtel

ಜಿಯೋ ಇತ್ತಿಚೆಗೆ ಹೊಸ ವರ್ಷದ ಪ್ಲಾನ್ ಘೋಷಿಸಿತ್ತು. ಇದು ಗ್ರಾಹಕರನ್ನು ಸೆಳೆದಿತ್ತು. 200 ದಿನದ ವ್ಯಾಲಿಟಿಡಿ ಸೇರಿದಂತೆ ಹಲವು ಸೌಲಭ್ಯಗಳನ್ನು ಜಿಯೋ ನೀಡಿತ್ತು. ಇದಕ್ಕೆ ಪ್ರತಿಯಾಗಿ ಏರ್‌ಟೆಲ್ ಮಾಸಿಕ ಪ್ಲಾನ್ ಘೋಷಿಸಿದೆ. ಈ ಮೂಲಕ ಎಲ್ಲಾ ಒಂದರಲ್ಲೇ ಸಿಗುವಂತೆ ಮಾಡಿದೆ.
 

Read more Photos on
click me!

Recommended Stories